Just In
- 2 hrs ago
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- 5 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- 6 hrs ago
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- 8 hrs ago
Oppo Reno 8T 5G : ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
Don't Miss
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಅದೇನು ಕಷ್ಟದ ಸಿಕ್ಸರ್ ಅಲ್ಲ: ಹ್ಯಾರಿಸ್ ರೌಫ್ಗೆ ವಿರಾಟ್ ಕೊಹ್ಲಿ ಹೊಡೆದ ಸಿಕ್ಸರ್ ಬಗ್ಗೆ ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆ
- Movies
Ramachari Serial: ಚಾರುಲತಾಗೆ ಸತ್ಯ ಹೇಳಿದ ರಾಮಾಚಾರಿ
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಿವಿ ಕೇಳದವರಿಗೆ ಗೂಗಲ್‌ನಿಂದ ಹೊಸ ಆಪ್..!
ತನ್ನ ಬಳಕೆದಾರರಿಗೆ ಉತ್ತಮ ಸೇವೆ ಕೊಡಬೇಕೆಂದು ಬಯಸುವ ಸರ್ಚ್ ಇಂಜಿನ್ ದೈತ್ಯ ಗೂಗಲ್ ಮತ್ತೊಂದು ಆಪ್‌ನ ಮೂಲಕ ಬಳಕೆದಾರರಿಗೆ ನೆರವಾಗುತ್ತಿದೆ. ಹೌದು, ಹಳೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಶಬ್ಧದ ಸಾಮರ್ಥ್ಯ ಕಡಿಮೆ ಇರುವುದರಿಂದ ಬಳಕೆದಾರರಿಗೆ ಸಹಾಯ ಮಾಡಲು ಹೊಸ ಸೌಂಡ್ ಆಂಪ್ಲಿಫಯರ್ ಆಪ್‌ನ್ನು ಗೂಗಲ್ ಬಿಡುಗಡೆಗೊಳಿಸಿದೆ. ಈ ಆಪ್ ಆಂಡ್ರಾಯ್ಡ್ 6 ಮಾರ್ಷ್‌ಮಲ್ಲೋ ಒಎಸ್ ಹಾಗೂ ಅದರ ನಂತರದ ಒಎಸ್‌ಗಳಿಗೆ ಲಭ್ಯವಿದೆ. ಸೌಂಡ್ ಆಂಪ್ಲಿಫಯರ್ ಆಪ್ ಜೊತೆಗೆ ಲೈವ್ ಟ್ರಾನ್ಸ್‌ಸ್ಕ್ರೈಬ್ ಆಪ್‌ನ್ನು ಕೂಡ ಗೂಗಲ್ ಹೊರತಂದಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ..?
ಲೈವ್ ಟ್ರಾನ್ಸ್‌ಸ್ಕ್ರೈಬ್ ಆಪ್ ಶ್ರವಣ ದೋಷವುಳ್ಳ ಜನರಿಗೆ ಟ್ರಾನ್ಸ್‌ಕ್ರಿಪ್ಷನ್ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಮಾತಿನ ರೂಪದ ಪದಗಳು ಇಲ್ಲಿ ಅಕ್ಷರರೂಪ ಪಡೆದು ಡಿಸ್‌ಪ್ಲೇ ಮೇಲೆ ಕಾಣುತ್ತವೆ. ಇನ್ನು, ಸೌಂಡ್ ಆಂಪ್ಲಿಫಯರ್ ಆಪ್ ಭಾಗಶಃ ಶ್ರವಣ ದೋಷವುಳ್ಳ ಜನರಿಗೆ ಸ್ಪಷ್ಟ ಹಾಗೂ ಹೆಚ್ಚಿನ ಮಟ್ಟದ ಧ್ವನಿ ನೀಡುವ ಮೂಲಕ ಸಹಾಯ ಮಾಡುತ್ತದೆ.

ಕಸ್ಟಮೈಸ್ಡ್ ಶಬ್ಧವರ್ಧನೆ
ಸೌಂಡ್ ಆಂಪ್ಲಿಫಯರ್ ಆಪ್‌ನ್ನು ಗೂಗಲ್ I/O ಕಾರ್ಯಕ್ರಮದಲ್ಲಿ 2018ರಲ್ಲಿ ಘೋಷಣೆ ಮಾಡಲಾಯಿತು. ಸ್ಮಾರ್ಟ್‌ಫೋನ್ ಬಳಕೆದಾರರು ವೈಯರ್ ಹೆಡ್‌ಫೋನ್‌ಗಳೊಂದಿಗೆ ಶಬ್ಧಗಳನ್ನು ಫಿಲ್ಟರ್ ಮಾಡಲು, ಶಬ್ಧ ವರ್ಧಿಸಲು ಈ ಆಪ್‌ನ್ನು ಬಳಸಬಹುದು. ಈ ಆಪ್ ಸ್ತಬ್ಧ ಶಬ್ಧಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿಕೊಂಡಿದ್ದು, ದೊಡ್ಡ ಶಬ್ಧಗಳನ್ನು ಈ ಆಪ್ ಹೆಚ್ಚಿಸುವುದಿಲ್ಲ. ಧ್ವನಿವರ್ಧನೆಯ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಲು ಮತ್ತು ಗದ್ದಲವನ್ನು ತೆಗೆದುಹಾಕಲು ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ.

ಟ್ರಾನ್ಸ್‌ಸ್ಕ್ರೈಬ್ ಆಪ್
ಇನ್ನು, ಲೈವ್ ಟ್ರಾನ್‌ಸ್ಕ್ರೈಬ್ ಆಪ್ 70ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಈ ಆಪ್‌ನ ಮುಖ್ಯ ಉದ್ದೇಶ ನೈಜ ಸಮಯದಲ್ಲಿ ಮೈಕ್ರೋಫೋನ್‌ನಲ್ಲಿ ಬಂದ ಮಾತುಗಳನ್ನು ಅಕ್ಷರ ರೂಪದಲ್ಲಿ ನೀಡುವುದಾಗಿದೆ. ಮಾತನಾಡಲು ಇಷ್ಟಪಡದ ಬಳಕೆದಾರರಿಗೆ ಟೈಪ್ ಬ್ಯಾಕ್ ಕೀಬೋರ್ಡ್ ಮೂಲಕ ದ್ವಿಮುಖ ಸಂಭಾಷಣೆಗೆ ಅವಕಾಶ ನೀಡುತ್ತದೆ. ಮತ್ತು ಟ್ರಾನ್ಸ್‌ಸ್ಕ್ರೈಬ್‌ನ ನಿಖರತೆಯನ್ನು ಸುಧಾರಿಸಲು ಬಾಹ್ಯ ಮೈಕ್ರೊಫೋನ್‌ಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಬಳಕೆದಾರರು ಇದಕ್ಕೆ ಸೆಟ್ಟಿಂಗ್ಸ್‌ಗಳಲ್ಲಿ ಅಲ್ಪ ಬದಲಾವಣೆ ಮಾಡಬೇಕಾಗುತ್ತದೆ. ನಂತರ, ನ್ಯಾವಿಗೇಷನ್ ಬಾರ್‌ನಲ್ಲಿನ ಬಟನ್‌ನಿಂದ ಲೈವ್ ಲಿಪ್ಯಂತರವನ್ನು ಪ್ರಾರಂಭಿಸಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470