Home
Apps

ಬೆಂಗಳೂರಿಗಿಂತ ಮೊದಲೇ ಮೈಸೂರಿನಲ್ಲಿ ಗೂಗಲ್ 'ನೈಬರ್‌ಲೀ' ಸೇವೆ ಆರಂಭ!!

ಕಳೆದ ವರ್ಷ ಭಾರತದ ಎರಡು ನಗರಗಳಲ್ಲಿ ಮಾತ್ರ ಪರಿಚಯಗೊಂಡಿದ್ದ ಗೂಗಲ್ ಸಂಸ್ಥೆಯ 'ಗೂಗಲ್‌ನೈಬರ್‌ಲೀ' ಸೇವೆ ಈಗ ಮೈಸೂರಿಗೂ ಸಿಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿಗೂ ಮೊದಲೇ ಮೈಸೂರಿನಲ್ಲಿ 'ಗೂಗಲ್‌ ನೈಬರ್‌ಲೀ' ಸೇವೆಯನ್ನು ನೀಡಲು ಗೂಗಲ್ ಸಂಸ್ಥೆ ಮುಂದಾಗಿದ್ದು, ಈ 'ಗೂಗಲ್‌ ನೈಬರ್‌ಲೀ' ಸೇವೆಯನ್ನು ಕಳೆದ ಬುಧವಾರದಿಂದ ಆರಂಭಿಸಲಾಗಿದೆ.

'ಗೂಗಲ್‌ ನೈಬರ್‌ಲೀ' ಸೇವೆಗೆ ಮುಂಬೈ ಮತ್ತು ಜೈಪುರದಲ್ಲಿ ದೊರೆತ ಜನಪ್ರಿಯತೆಯು ಗೂಗಲ್‌ ವಿಶ್ವಾಸವನ್ನು ಇಮ್ಮಡಿಗೊಳಿಸಿದ್ದು, ಮೈಸೂರು ಸೇರಿದಂತೆ ಕೊಯಮತ್ತೂರು, ಕೋಟ, ಅಹಮದಾಬಾದ್‌, ವಿಶಾಖಪಟ್ಟಣದಲ್ಲಿ 'ನೈಬರ್‌ಲೀ' ಸೇವೆ ಆರಂಭಗೊಂಡಿದೆ. ಕೇವಲ 5 ಎಂಬಿಯ ಗೂಗಲ್‌ ನೈಬರ್‌ ಕಿರು ತಂತ್ರಾಂಶವು ಸದ್ಯ ಆಂಡ್ರಾಯ್ಡ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ.

ಬೆಂಗಳೂರಿಗಿಂತ ಮೊದಲೇ ಮೈಸೂರಿನಲ್ಲಿ ಗೂಗಲ್ 'ನೈಬರ್‌ಲೀ' ಸೇವೆ ಆರಂಭ!!

ನಿಮ್ಮ ಏರಿಯಾದಲ್ಲಿ ಒಳ್ಳೆಯ ಹೋಟೆಲ್ ಎಲ್ಲಿದೆ? ಪ್ರಶಾಂತವಾದ ದೇವಸ್ಥಾನ ಯಾವುದು? ಎಂಬ ಯಾವುದೇ ಪ್ರಶ್ನೆಗಳಿಗೆ ನಿಖರವಾಗಿ ಉತ್ತರ ತಿಳಿಯಲು ಗೂಗಲ್‌ ನೈಬರ್‌ಲೀ ಆಪ್‌ ನಿಮಗೆ ನೆರವಾಗಬಲ್ಲದು. ಹಾಗಾದರೆ, ಏನಿದು ಗೂಗಲ್ ನೈಬರ್ ಆಪ್? 'ಗೂಗಲ್‌ ನೈಬರ್‌' ನಿಂದ ಏನೆಲ್ಲಾ ಉಪಯೋಗಗಳಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏನಿದು ನೈಬರ್‌ಲೀ ಆಪ್?

ಏನಿದು ನೈಬರ್‌ಲೀ ಆಪ್?

ಬೃಹತ್‌ಗರಗಳಲ್ಲಿ ಸ್ಥಳೀಯ ಸಂದೇಹಗಳಿಗೆ ಸೂಕ್ತ ಉತ್ತರ ಹುಡುಕುವುದು ಕಷ್ಟವಾಗುತ್ತಿದೆ ಎಂಬುದನ್ನು ಗೂಗಲ್ ಮನಗಂಡಿದೆ. ಹಾಗಾಗಿ, ಗೂಗಲ್ ನೈಬರ್‌ಲೀ ಆಪ್ ಮೂಲಕ ಅದೇ ಪ್ರದೇಶದ ಜನರಿಗೆ ಸ್ಥಳೀಯ ಪ್ರಶ್ನೆಗಳನ್ನು ಕೇಳಲು ಹಾಗೂ ಸಂಬಂಧಿತ ಉತ್ತರಗಳನ್ನು ಹುಡುಕಲು ಸುಲಭವಾಗಲಿರುವ ಆಪ್ ಅನ್ನು ಅಭಿವೃದ್ದಿಪಡಿಸಿದೆ.

ಹೇಗೆ ಕೆಲಸ ಮಾಡುತ್ತದೆ ಆಪ್?

ಹೇಗೆ ಕೆಲಸ ಮಾಡುತ್ತದೆ ಆಪ್?

ನೈಬರ್‌ಲೀ ಆಪ್ ಬಳಕೆದಾರರು ಯಾವುದೆ ಪ್ರಶ್ನೆಯನ್ನು ಕೇಳಿದಾಗ ಉತ್ತರ ಮಾಡುವಂತಹ ಪರಿಣಿತರಿಗೆ ಕಳುಹಿಸಲಾಗುತ್ತದೆ. ಗೂಗಲ್ ವಾಯ್ಸ್ ಗುರುತಿಸುವಿಕೆ ಮೂಲಕ ನಿಮ್ಮ ಪ್ರಶ್ನೆ ಕೇಳಬಹುದು ಅಥವಾ ಉತ್ತರವನ್ನು ನೀಡಬಹುದಾಗಿದೆ. ಈ ಆಪ್ ಕನ್ನಡ ಸೇರಿದಂತೆ ಭಾರತದ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಗೂಗಲ್ ನೇಬರ್ಲೀ ಆಪ್ ಬೆಂಬಲಿಸುತ್ತದೆ.

ಖಾಸಗಿ ಮಾಹಿತಿ ನೀಡಬೇಕಿಲ್ಲ.

ಖಾಸಗಿ ಮಾಹಿತಿ ನೀಡಬೇಕಿಲ್ಲ.

ಗೂಗಲ್ ನೈಬರ್‌ಲೀ ಆಪ್‌ನಲ್ಲಿ ಗರಿಷ್ಠ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗಿದ್ದು, ಖಾಸಗಿ ಮಾಹಿತಿಯನ್ನು ನೀಡದೆಯೇ ನೀವು ಪ್ರಶ್ನೆ ಕೇಳಬಹುದುವುದು, ಬ್ರೌಸ್ ಮಾಡಬಹುದು ಹಾಗೂ ಇದರಲ್ಲಿ ಉತ್ತರವನ್ನು ನೀಡಬಹುದು. ಇಲ್ಲಿ ಇತರೆ ಸಂಪರ್ಕ ಮಾಹಿತಿಯನ್ನು ಗೌಪ್ಯವಾಗಿ ಇಡಬಹುದಾದ ಆಯ್ಕೆಯನ್ನು ಗೂಗಲ್ ಒದಗಿಸಿದೆ.

ಹತ್ತು ಲಕ್ಷ ಬಳಕೆದಾರರು

ಹತ್ತು ಲಕ್ಷ ಬಳಕೆದಾರರು

ಕಳೆದ ವರ್ಷ ಮುಂಬಯಿ ಹಾಗೂ ಜೈಪುರದಲ್ಲಿ ಬಿಡುಗಡೆಯಾಗಿದ್ದ ಈ ಆಪ್ ಅನ್ನು ಹತ್ತು ಲಕ್ಷಕ್ಕೂ ಹೆಚ್ಚು ಜನರು ಬಳಸುತ್ತಿದ್ದಾರೆ. ಕನ್ನಡ ಸೇರಿದಂತೆ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಸೇವೆಯನ್ನು ನೀಡಲಾಗಿರುವುದು ಈ ಆಪ್‌ನ ವಿಶೇಷತೆಯಾಗಿದೆ. ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆ ಕೂಡ ಇದೆ.

ಮೊಬೈಲ್‌ ಸಂಖ್ಯೆ ಬೇಕಿಲ್ಲ

ಮೊಬೈಲ್‌ ಸಂಖ್ಯೆ ಬೇಕಿಲ್ಲ

ಈ ಆಪ್‌ ಅನ್ನು ಬಳಸುವವರು ಮೊಬೈಲ್‌ ಸಂಖ್ಯೆಯನ್ನೂ ಸಹ ದಾಖಲಿಸುವ ಅವಶ್ಯಕತೆ ಇಲ್ಲ. ಸದ್ಯ ಈ ಆಪ್‌ನಲ್ಲಿ ಪಠ್ಯವನ್ನು ದಾಖಲಿಸಲು ಮಾತ್ರ ಅವಕಾಶ ನೀಡಲಾಗಿದ್ದು, ನಿಮ್ಮ ಹೆಸರು ಮಾತ್ರ ಬೇರೆ ಬಳಕೆದಾರರಿಗೆ ತಿಳಿಯುತ್ತದೆ. ವೈರಸ್‌ ಲಿಂಕ್‌, ಸ್ಪ್ಯಾಮ್‌ ಪೋಸ್ಟ್‌ಗಳು ಶೇರ್‌ ಆಗುವ ಸಾಧ್ಯತೆ ಇದ್ದು, ಲಿಂಕ್‌ಗಳನ್ನು ಗೂಗಲ್‌ ಒಮ್ಮೆ ಪರಿಶೀಲಿಸಲಿದೆ

ಶೀಘ್ರದಲ್ಲೇ ಬೆಂಗಳೂರಿನಲ್ಲಿ!

ಶೀಘ್ರದಲ್ಲೇ ಬೆಂಗಳೂರಿನಲ್ಲಿ!

ಗೂಗಲ್‌ ಸಂಸ್ಥೆಯು ಈ ನೈಬರ್‌ಲೀ ಸೇವೆಯನ್ನು ಬೆಂಗಳೂರು ಸೇರಿದಂತೆ ರಾಜ್ಯದ ಇನ್ನಷ್ಟು ನಗರಗಳಿಗೆ ವಿಸ್ತರಿಸಲು ಚಿಂತಿಸಿದೆ. ಸ್ಥಳೀಯ ಪ್ರಶ್ನೆಗಳ ಬಗ್ಗೆ ಮಾಹಿತಿಯಿದ್ದರೆ ಉತ್ತರಿಸಬಹುದಾದ ಈ ಆಪ್‌ನಲ್ಲಿ ಕುತೂಹಲಕಾರಿಯೆಂಬಂತೆ ಸಹಾಯಕವಾದ ಮಾಹಿತಿ ನೀಡುವವರಿಗೆ ಬ್ಯಾಡ್ಜ್, ಕಮ್ಯೂನಿಟಿ ಪ್ರತಿಫಲವನ್ನು ನೀಡಲಾಗುತ್ತದೆ.

Best Mobiles in India

English summary
Google Neighbourly App Now Available in 5 More Indian Cities to Answer Users' Local Questions. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+