ಗೂಗಲ್ ಲೈಟ್ ಆಪ್ ಸದ್ಯದಲ್ಲೇ ಬಿಡುಗಡೆ: ವಿಶೇಷತೆಗಳೇನು.!
ಗೂಗಲ್ ಸರ್ಚ್ ಲೈಟ್ ಆಪ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ವಿಷಯವನ್ನು ಆಂಡ್ರಾಯ್ಡ್ ಫೋಲಿಸ್ ವರದಿ ಮಾಡಿದ್ದು, ಈಗಾಗಲೇ ಲೈಟ್ ಆಪ್ ಟೆಸ್ಟಿಂಗ್ ಶುರುವಾಗಿದೆ ಎನ್ನಲಾಗಿದೆ.
ಗೂಗಲ್ ಈ ಬಾರಿ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ. ಇದಕ್ಕಾಗಿ ಗ್ರಾಹಕರ ಅಭಿಪ್ರಾಯವನ್ನು ಸಂಗ್ರಹಿಸಿ ಮತ್ತು ವಿವಿಧ ವೇಗದ ಇಂಟರ್ನೆಟ್ ಬಳಕೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಆಪ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಗೂಗಲ್ ಸರ್ಚ್ ಲೈಟ್ ಆಪ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ವಿಷಯವನ್ನು ಆಂಡ್ರಾಯ್ಡ್ ಫೋಲಿಸ್ ವರದಿ ಮಾಡಿದ್ದು, ಈಗಾಗಲೇ ಲೈಟ್ ಆಪ್ ಟೆಸ್ಟಿಂಗ್ ಶುರುವಾಗಿದೆ ಎನ್ನಲಾಗಿದೆ.
ಟೆಸ್ಟ್ ಪೂರ್ಣಗೊಂಡ ನಂತರದಲ್ಲಿ ಈ ಆಪ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದ್ದು, ಈಗಾಗಲೇ ಇಂಡೋನೇಷ್ಯಾದಲ್ಲಿ ಲಭ್ಯವಿದೆ ಎನ್ನಲಾಗಿದೆ. ಈಗಾಗಲೇ ಇಂಡೋನೇಷ್ಯಾದಲ್ಲಿ ಈ ಆಪ್ ಕುರಿತ ಜಾಹೀರಾತು ಸಹ ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡಿದೆ.

ಈ ಹೊಸ ಗೂಗಲ್ ಸರ್ಚ್ ಲೈಟ್ ಆಪ್ ಬಳಕೆದಾರರ ಡೇಟಾವನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಿದ್ದು, ಅಲ್ಲದೇ ಆಫ್ ಲೈನ್ ಆಯ್ಕೆಯನ್ನು ಒಳಗೊಂಡಿದೆ ಎನ್ನಲಾಗಿದೆ.
ಗೂಗಲ್ ಸರ್ಚ್ ಲೈಟ್ ಆಪ್ ನಲ್ಲಿ ಭಾಷೆಗಳನ್ನು ಬದಲಾವಣೆಯನ್ನು ಮಾಡಿಕೊಳ್ಳುವ ಅವಕಾಶವನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ಹವಮಾನ, ನ್ಯೂಸ್, ಇಮೇಜ್, ಆಫ್ ಲೈನ್ ಪೇಜ್, ಟ್ರಾನ್ಸ್ ಲೇಷನ್ ಮತ್ತು ಮುಂತಾದ ಎಲ್ಲಾ ಆಯ್ಕೆಗಳನ್ನು ಹೊಂದಿರಲಿದೆ.


Click it and Unblock the Notifications








