Home
Apps

ಬದಲಾಯಿತು ತೇಜ್: ಸಂಭ್ರಮದಲ್ಲಿ ಲಕ್ಷ ಗೆಲ್ಲುವ ಬೊಂಬಾಟ್ ಆಫರ್ ಕೊಟ್ಟ ಗೂಗಲ್..!

By Srinidhi
google tez pay is rewarding up rs 1 lakh on transacting - KANNADA

ಗೂಗಲ್ ಭಾರತೀಯ ಮಾರುಕಟ್ಟೆಯಲ್ಲಿ ಆರಂಭಿಸಿದ ಮೊಬೈಲ್ ಪೇಮೆಂಟ್ ಆಪ್ ಗೂಗಲ್ ತೇಜ್ ಬ್ರಾಂಡ್ ಅನ್ನು ಬದಲಾಯಿಸಿ ಗೂಗಲ್ ಪೇ ಎಂದು ಹೊಸದಾಗಿ ನಾಮಕರಣವನ್ನು ಮಾಡಿದೆ. ಇನ್ನು ಮುಂದೆ ಗೂಗಲ್ ತೇಜ್, ಗೂಗಲ್ ಪೇ ಎಂದು ಕಾಣಿಸಿಕೊಳ್ಳಲಿದ್ದು, ಬದಲಾದ ಸಂದರ್ಭದಲ್ಲಿ ಮತ್ತು ತೇಜ್ ಶುರುವಾಗಿ ವರ್ಷ ಕಳೆದ ಸಂಭ್ರಮದಲ್ಲಿ ತನ್ನ ಬಳಕೆದಾರರಿಗೆ ಬೊಂಬಾಟ್ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈ ಹಿಂದೆ ಲಾಂಚ್ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ಮಾದರಿಯ ಆಫರ್ ಅನ್ನು ನೀಡಿದೆ.

ಬದಲಾಯಿತು ತೇಜ್: ಸಂಭ್ರಮದಲ್ಲಿ ಲಕ್ಷ ಗೆಲ್ಲುವ ಬೊಂಬಾಟ್ ಆಫರ್ ಕೊಟ್ಟ ಗೂಗಲ್..!

ಈ ಹಿಂದೆ ನೀಡಿದ್ದ ಮಾದರಿಯ ಆಫರ್ ಕೊಂಚ ಬದಲಾಯಿಸಿದ್ದು, ಗೂಗಲ್ ಪೇ ಆಗಿ ಬದಲಾಗುವ ತೇಜ್ ಬಳಕೆದಾರರಿಗೆ ಹೊಸ ಮಾದರಿಯಲ್ಲಿ ಲಕ್ಷ ರೂಪಾಯಿ ಗೆಲ್ಲುವ ಅವಕಾಶವನ್ನು ಮಾಡಿಕೊಡಲಾಗಿದೆ. ಗೂಗಲ್ ತೇಜ್ ಬಳಕೆ ಮಾಡಿ ನಿಮ್ಮ ಸ್ನೇಹಿತರಿಗೆ ಹಣವನ್ನು ವರ್ಗಾವಣೆಯನ್ನು ಮಾಡಿದ ಸಂದರ್ಭದಲ್ಲಿ ರೂ.5 ರಿಂದ ರೂ.1 ಲಕ್ಷದ ವರೆಗೆ ಹಣವನ್ನು ಗೆಲ್ಲುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಹಾಯವನ್ನು ಮಾಡಲಿದೆ.

ಮಾಡಬೇಕಾದ್ದೇನು..?

ಮಾಡಬೇಕಾದ್ದೇನು..?

ಗೂಗಲ್ ಪೇ ಆಪ್ ಅನ್ನು ಬಳಕೆ ಮಾಡಿಕೊಂಡು ನೀವು ಐದಕ್ಕಿಂತಲೂ ಹೆಚ್ಚು ಬಾರಿ ಹಣವನ್ನು ವರ್ಗಾವಣೆ ಮಾಡಬೇಕಾಗಿದೆ. ಹೀಗೆ ಮಾಡಿದ ಸಂದರ್ಭದಲ್ಲಿ ಗೂಗಲ್ ನಿಮಗೆ ಹೊಸ ಮಾದರಿಯ ಗಿಫ್ಟ್ ಬಾಕ್ಸ್ ಅನ್ನು ನೀಡಲಿದೆ. ಇದರಲ್ಲಿ ಖಚಿತವಾಗಿ ಕ್ಯಾಷ್ ಬ್ಯಾಕ್ ಅನ್ನು ಕಾಣಬಹುದಾಹಗಿದೆ. ಇದರಲ್ಲಿ ನೀವು ರೂ.5 ರಿಂದ ಹಿಡಿದು ರೂ.1 ಲಕ್ಷದ ವರೆಗೂ ಹಣವನ್ನು ಗೆಲ್ಲ ಬಹುದಾಗಿದೆ.

ಆಕೌಂಟ್ ಆಡ್‌ ಮಾಡಿದ್ರೂ ಕಾಸು:

ಆಕೌಂಟ್ ಆಡ್‌ ಮಾಡಿದ್ರೂ ಕಾಸು:

ಮೊದಲು ಆಕೌಂಟ್ ಆಡ್ ಮಾಡಿದರೆ ಗೂಗಲ್ ನಿಂದ ಯಾವುದೇ ಕಾಸು ದೊರೆಯುತ್ತಿರಲಿಲ್ಲ. ಆದರೆ ಇನ್ನು ಮುಂದೆ ಗೂಗಲ್ ಪೇಗೆ ನಿಮ್ಮ ಬ್ಯಾಂಕ್ ಆಕೌಂಟ್ ಅನ್ನು ಲೀಂಕ್ ಮಾಡಿದರೆ ಸಾಕು ನಿಮಗೆ ಹಣವನ್ನು ನೀಡಲಿದೆ.

ರೂ.150 ಕಳುಹಿಸಿ:

ರೂ.150 ಕಳುಹಿಸಿ:

ಇದಲ್ಲದೇ ಗೂಗಲ್ ಪೇ ಮೂಲಕ ನೀವು ಹಣವನ್ನು ಕಳುಹಿಸಿದ ಸಂದರ್ಭದಲ್ಲಿ ಸ್ಕ್ರಾಚ್ ಕಾರ್ಡ್‌ಗಳನ್ನು ಗೆಲ್ಲಬಹುದಾಗಿದೆ. ರೂ.150ಕ್ಕಿಂತಲೂ ಹೆಚ್ಚಿನ ಹಣವನ್ನು ಕಳುಹಿಸಿದ ಸಂದರ್ಭದಲ್ಲಿ ಸ್ಕ್ರಾಚ್ ಕಾರ್ಡ್‌ಗಳನ್ನು ಗೆಲ್ಲಬಹುದಾಗಿದೆ. ಇದರಲ್ಲಿ ಕ್ಯಾಷ್ ಬ್ಯಾಕ್ ಇರಲಿದೆ.

ರೂ.500 ಕಳುಹಿಸಿ:

ರೂ.500 ಕಳುಹಿಸಿ:

ಇದಲ್ಲದೇ ನೀವು ಗೂಗಲ್ ಪೇ ಮೂಲಕ ರೂ.500 ಕಳುಹಿಸಿದ ಸಂದರ್ಭದಲ್ಲಿ ನಿಮಗೆ ಸ್ಕ್ರಾಷ್ ಕಾರ್ಡ್ ವೊಂದು ದೊರೆಯಲಿದ್ದು, ಇದರಲ್ಲಿ ನೀವು ರೂ.1 ಲಕ್ಷ ವರೆಗೂ ಹಣವನ್ನು ಗೆಲ್ಲುವ ಅವಕಾಶವನ್ನು ಮಾಡಿಕೊಡುತ್ತಿದೆ.

ವ್ಯಾಪಾರ ಮಾಡಿ:

ವ್ಯಾಪಾರ ಮಾಡಿ:

ಇದಲ್ಲದೇ ನೀವು ರೂ.150ಕ್ಕೆ ಹೆಚ್ಚಿನ ವ್ಯಾಪಾರವನ್ನು ಮಾಡಿ ತೇಜ್ ಮೂಲಕ ಹಣವನ್ನು ಪಾವತಿ ಮಾಡಿದರೆ ಇಲ್ಲಿಯೂ ನಿಮಗೆ ರೂ.1000 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದರಿಂದಾಗಿ ಹೆಚ್ಚಿನ ಲಾಭವಾಗಲಿದೆ.

ನೀವು ಊಹಿಸಲಾಗದಷ್ಟು ಬದಲಾಗಿವೆ ವಿಶ್ವದ Top 10 ಮಹಾನಗರಗಳು..!

ನೀವು ಊಹಿಸಲಾಗದಷ್ಟು ಬದಲಾಗಿವೆ ವಿಶ್ವದ Top 10 ಮಹಾನಗರಗಳು..!

ದಿನ ಬದಲಾದಂತೆ ನಾವು ಬದಲಾಗುತ್ತಿದ್ದೇವೆ. ಇದರೊಂದಿಗೆ ನಾವಿರುವ ನಗರಗಳು ತಮ್ಮ ಚಹರೆಯನ್ನು ಬದಲಾಯಿಸಿಕೊಳ್ಳುತ್ತಿವೆ. ಜಗತ್ತು ಕಳೆದು ಎರಡರಿಂದ ಮೂರು ದಶಕದಲ್ಲಿ ಸಾಕಷ್ಟು ಬದಲಾವಣೆಯನ್ನು ಹೊಂದಿದೆ. ಆಧುನೀಕತೆ ಮೈಗೂಡಿಸಿಕೊಂಡು, ತಂತ್ರಜ್ಞಾನವನ್ನು ಬಳಸಿಕೊಂಡು ಇತಿಹಾಸವೇ ನಾಚುವಂತೆ ಅಭಿವೃದ್ಧಿಯನ್ನು ಹೊಂದುತ್ತಿವೆ.

ಜಗತ್ತಿನ ಪ್ರಮುಖ ಅನೇಕಗಳು ಗುರುತು ಸಿಗದಷ್ಟು ಬದಲಾವಣೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಜಗತ್ತಿನ ಪ್ರಮುಖ ಪಟ್ಟಣಗಳ ಚಿತ್ರಗಳು ಇಲ್ಲಿದೆ. ಹಿಂದೆ ಹೇಗೆತ್ತು, ಇಂದು ಈ ನಗರಗಳು ಯಾವ ರೀತಿಯಲ್ಲಿ ಇದೆ ಎಂಬುದನ್ನು ನೀವು ಕಾಣಬಹುದಾಗಿದೆ. ಹಿಂದೆ ಹೀಗಿತ್ತ ಅಂತ ನೀವು ಮೂಗಿನ ಮೇಲೆನ ಬೆರಳು ಇಡುವಂತೆ ಮಾಡಲಿವೆ, ನಾವು ಜೀವನ ಶೈಲಿನಲ್ಲಿ ಬದಲಾಯಿಸಿದಂತೆ ಈ ನಗರಗಳು ಬದಲಾಗಿವೆ.

ಹಿಂಗಿತ್ತಾ ಸಿಂಗಾಫುರ್..!

ಹಿಂಗಿತ್ತಾ ಸಿಂಗಾಫುರ್..!

ಅಭಿವೃದ್ದಿಯ ಹಾದಿಯಲ್ಲಿ ತನ್ನ ಚಹರೆಯನ್ನು ಬದಲಾಯಿಸಿಕೊಂಡಿದೆ ಸಿಂಗಾಪುರಾ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿಯಾಗಿದೆ. 1900ರಲ್ಲಿ ಇದ್ದ ಚಿತ್ರಕ್ಕೂ ಈಗಿನ ಚಿತ್ರಕ್ಕೂ ಭಾರಿ ವ್ಯತ್ಯಾಸ.

ರೊಟರ್ ಡ್ಯಾಮ್

ರೊಟರ್ ಡ್ಯಾಮ್

ನೆದರ್ ಲ್ಯಾಂಡ್ ಈ ನಗರ ಭಾರೀ ಪ್ರಮಾಣದಲ್ಲಿ ಬದಲಾವಣೆಯನ್ನು ಸಾಧಿಸಿದೆ. 1940ರಲ್ಲಿ ಹಂಗಿದ್ದ ಪ್ರದೇಶ ಇಂದು ಊಹೆಗೂ ನಿಲುಕದ ಹಾಗೆ ಬೆಳವಣಿಗೆಯನ್ನು ಸಾಧಿಸಿದೆ.

ರಿಯೋ ಡಿ ಜನೈರೋ

ರಿಯೋ ಡಿ ಜನೈರೋ

ಬ್ರೆಜಿಲ್ ದೇಶದ ಪ್ರಮುಖ ಆಕರ್ಷಣೆಯಾಗಿರುವ ರಿಯೋ ಡಿ ಜನೈರೋ ಈ ಹಿಂದೆ ಹೇಗೆ ಇತ್ತು ಮತ್ತು ಇಂದು ಹೇಗಿದೆ ಎಂಬುದನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.

ಲಂಡನ್

ಲಂಡನ್

ಇಂಗ್ಲೆಂಡ್ ಕಲಶ ಎನ್ನುವ ಲಂಡನ್ ನಗರವು ಈ ಹಿಂದೆ 1950ರಲ್ಲಿ ಹೇಗಿತ್ತು. ನಂತರದ ಚಿತ್ರದಲ್ಲಿ ಈಗ ಹೇಗಿದೆ ಎಂಬುದನ್ನು ನೀವೇ ನೋಡಿರಿ.

ಸೌತ್ ಕೋರಿಯಾ

ಸೌತ್ ಕೋರಿಯಾ

ಇಡೀ ವಿಶ್ವದಲ್ಲಿಯೇ ತನ್ನ ಎಲೆಕ್ಟ್ರಾನಿಕ್ ವಸ್ತುಗಳಿಂದ ಪರಿಚಿತವಾಗಿರುವ ಸೌತ್‌ ಕೋರಿಯಾ ಬದಲಾಗಿರುವುದನ್ನು ಈ ಚಿತ್ರದ ಮೂಲಕವೇ ನೀವು ಗುರುತಿಸಬಹುದಾಗಿದೆ.

ಟೋಕಿಯೋ

ಟೋಕಿಯೋ

ಜಪಾನಿನ ಟೋಕಿಯೋ ದೊಡ್ಡ ಮಟ್ಟದ ಬದಲಾವಣೆಗೆ ಸಾಕ್ಷಿಯಾಗಿದೆ. 1945ರಲ್ಲಿ ಹೇಗಿತ್ತು ಮತ್ತು ಇಂದು ಹೇಗಿದೆ ಎಂಬುದನ್ನು ನೀವೆ ನೋಡಿರಿ.

ದುಬೈ

ದುಬೈ

ವಿಶ್ವದ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿರುವ ದುಬೈ ಇದೆ ಕೆಲವು ದಿನಗಳ ಹಿಂದೆ ಹೇಗಿತ್ತು ಮತ್ತು ಈಗ ಹೇಗಿದೆ ಎಂಬುದನ್ನು ನೋಡಿದರೆ ಆಶ್ಚರ್ಯ ಖಂಡಿತವಾಗಿಯೂ ಆಗಲೇ ಬೇಕು.

ಬರ್ಲಿನ್

ಬರ್ಲಿನ್

ಜರ್ಮನಿಯ ಬರ್ಲಿನ್ ನಗರವು ಯುದ್ದದ ಸಂದರ್ಭದಲ್ಲಿ ಹೇಗಾಗಿತ್ತು ನಂತರದಲ್ಲಿ ಬದಲಾವಣೆಯನ್ನು ಸಾಧಿಸಿ ಇಂದಿನ ದಿನದಲ್ಲಿ ಹೇಗಿದೆ ಎಂಬುದನ್ನು ನೋಡಿ.

ಮಾಸ್ಕೋ

ಮಾಸ್ಕೋ

ರಷ್ಯಾದ ಮಾಸ್ಕೋ ನಗರವು ಗುರುತಿಸಬಹುದಾದ ಬದಲಾವಣೆಗೆ ಸಾಕ್ಷಿಯಾಗಿದೆ. ಬ್ಲಾಕ್-ವೈಟ್ ನಿಂದ ಕರ್ಲರ್ ಗೆ ಬದಲಾದ ಸಂದರ್ಭದಲ್ಲಿ ನೋಡಲು ಸುಂದರವಾಗಿ ಕಾಣುತ್ತಿದೆ.

ಪ್ಯಾರಿಸ್

ಪ್ಯಾರಿಸ್

ಪ್ರಯಣಕ್ಕೆ ಖ್ಯಾತಿಯನ್ನು ಪಡೆದಿರುವ ಪ್ಯಾರಿಸ್ ಸಹ ನಾಟಕೀಯ ಬದಲಾವಣೆಗೆ ಸಾಕ್ಷಿಯಾಗಿದೆ. ನೀವು ಅಂದು ಖಂಡಿತ ಪ್ಯಾರಿಸ್‌ಗೆ ಮತ್ತು ಇಂದಿನ ಪ್ಯಾರಿಸ್‌ಗೆ ಸಾಕಷ್ಟು ಬದಲಾವಣೆಯನ್ನು ಕಾಣಬಹುದಾಗಿದೆ.

Best Mobiles in India

English summary
Google Tez (Pay) is Rewarding Up to Rs.1 Lakh on Transacting 5 Times; Here’s How to Avail the Offer. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+