Home
Apps

ನಿಮ್ಮ ಆರೋಗ್ಯ ಕಾಪಾಡುವುದಕ್ಕೆ ಬಂದಿದೆ ಗೂಗಲ್‌ ಫಿಟ್‌

By Gizbot Bureau

ಗೂಗಲ್ ಸಂಸ್ಥೆ ಹೊಸದಾಗಿ ಗೂಗಲ್ ಫಿಟ್ ಎಂಬ ಫಿಟ್ ನೆಸ್ ಆಪ್ ಒಂದನ್ನು ಪರಿಚಯಿಸಿದ್ದು ಬಳಕೆದಾರರ ಜೀವನ ಶೈಲಿಯನ್ನು ಆರೋಗ್ಯಪೂರ್ಣವಾಗಿಸುವ ಉದ್ದೇಶವನ್ನು ಹೊಂದಲಾಗಿದೆ.ಒಂದು ಹೆಜ್ಜೆ ಮುಂದೆ ಹೋಗಿರುವ ಕಂಪೆನಿ ಈಗ ಗೂಗಲ್ ಫಿಟ್ ಗೆ ಹೊಸ ವೈಶಿಷ್ಟ್ಯೆತೆಗಳನ್ನು ಸೇರಿಸಿದೆ. ಹೊಸ ವೈಶಿಷ್ಟ್ಯತೆಯು ಬಳಕೆದಾರರಿಗೆ ಹೆಚ್ಚು ಕ್ಯಾಲೋರಿ ಬರ್ನ್ ಮಾಡುವುದಕ್ಕೆ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

ಕಂಪೆನಿ ಹೇಳುವಂತೆ ಗೂಗಲ್ ಫಿಟ್ ನ್ನು ಎರಡು ಸರಳ ಮತ್ತು ಸ್ಮಾರ್ಟ್ ಚಟುವಟಿಕೆಗಳ ಆಧಾರದಲ್ಲಿ ಕೇಂದ್ರೀಕರಿಸಲಾಗಿದೆ. AHA ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವ WHO’s ನ ಚಟುವಟಿಕೆಯ ಆಧಾರದಲ್ಲಿ ಅಂದರೆ “ಮೂವ್ ಮಿನಿಟ್” ಮತ್ತು “ಹಾರ್ಟ್ ಪಾಯಿಂಟ್” ನ ಆಧಾರದಲ್ಲಿ ಕೇಂದ್ರೀಕರಿಸಿ ಡಿಸೈನ್ ಮಾಡಲಾಗಿದೆ.

ನಿಮ್ಮ ಆರೋಗ್ಯ ಕಾಪಾಡುವುದಕ್ಕೆ ಬಂದಿದೆ ಗೂಗಲ್‌ ಫಿಟ್‌

ಹೊಸ ವೈಶಿಷ್ಟ್ಯತೆಗಳ ಹೆಸರು “ಮೂವ್ ಮಿನಿಟ್” ಮತ್ತು “ಹಾರ್ಟ್ ಪಾಯಿಂಟ್”. ಮೂವ್ ಮಿನಿಟ್ ನ ಪ್ರಮುಖ ಉದ್ದೇಶವೇನೆಂದರೆ ಬಳಕೆದಾರರು ತಮ್ಮ ದೈನಂದಿನ ಚಟುವಟಿಕೆಗೆಗೆ ಇನ್ನಷ್ಟು ವ್ಯಾಯಾಮವನ್ನು ಸೇರಿಸುವುದು. ಆಪ್ ನಲ್ಲಿ ಈಗ ದಿನಕ್ಕೆ ಮೂವ್ ಮಿನಿಟ್ಸ್ ನ್ನು 100 ಕ್ಕೆ ಸೆಟ್ ಮಾಡಿ ಗುರಿ ಹೊಂದಲಾಗಿರುತ್ತದೆ ಮತ್ತು ಅದರ ಪ್ರೊಗ್ರೆಸ್ ನ್ನು ಪರಿಶೀಲನೆ ಮಾಡುತ್ತಾ ಇರಲಾಗುತ್ತದೆ.

ಇನ್ನೊಂದೆಡೆ ಹಾರ್ಟ್ ಪಾಯಿಂಟ್ ವೈಶಿಷ್ಟ್ಯತೆಯು ಬಳಕೆದಾರರ ಹೃದಯದ ಪಂಪಿಂಗ್ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿರುತ್ತದೆ. ಒಂದು ವೇಳೆ ಬಳಕೆದಾರರು ತಮ್ಮ ವಾಕಿಂಗ್ ನ ವೇಗವನ್ನು ಹೆಚ್ಚಿಸಿದರೆ ಅವರು ಹೆಚ್ಚು ಪಾಯಿಂಟ್ ಗಳಿಸುತ್ತಾರೆ. ಹೆಚ್ಚು ತೀವ್ರವಾಗಿ ತಾಲೀಮು ನಡೆಸುವವರಿಗೆ ಹೆಚ್ಚೆಚ್ಚು ಪಾಯಿಂಟ್ ಗಳು ಲಭ್ಯವಾಗುತ್ತದೆ.

ಗೂಗಲ್ ಅಧಿಕೃತ ಬ್ಲಾಗ್ ನಲ್ಲಿ ಕಂಪೆನಿಯು ಹೇಳಿರುವಂತೆ ನೀವು ನಡೆದಾಡಿದರೆ, ಓಡಿದರೆ, ಬೈಕ್ ನಲ್ಲ ಸಂಚರಿಸದರೆ ನಿಮ್ಮ ಓಡಾಟ ಹೇಗೆ ಇದ್ದರೂ ಗೂಗಲ್ ಫಿಟ್ ಸ್ವಯಂಚಾಲಿತವಾಗಿ ನಿಮ್ಮ ಆಕ್ಟಿವಿಟಿಯನ್ನು ಫೋನ್ ಮೂಲಕವೇ ಗ್ರಹಿಸುತ್ತದೆ. ಎಕ್ಸಲಮೀಟರ್ ಮತ್ತು ಜಿಪಿಎಸ್ ತಂತ್ರಜ್ಞಾನದ ಮೂಲಕ ಇದನ್ನು ಸಾಧಿಸಲಾಗುತ್ತದೆ ಮತ್ತು ನೀವೆಷ್ಟು ಹಾರ್ಟ್ ಪಾಯಿಂಟ್ ಗಳನ್ನು ಗಳಿಸುತ್ತಿದ್ದೀರಿ ಎಂಬುದನ್ನು ನಮೂದಿಸಲಾಗುತ್ತದೆ.

ನಿಮ್ಮ ಆರೋಗ್ಯ ಕಾಪಾಡುವುದಕ್ಕೆ ಬಂದಿದೆ ಗೂಗಲ್‌ ಫಿಟ್‌

ಒಂದು ವೇಳೆ ನೀವು ಬೇರೆ ರೀತಿಯ ವ್ಯಾಯಾಮದಲ್ಲಿ ತೊಡಗಿಕೊಂಡಿದ್ದರೆ ಉದಾಹರಣೆಗೆ ತೋಟಗಾರಿಗೆ, ವಿಮಾನ ಚಾಲನೆ, ದೋಣಿ ಚಾಲನೆ,ಹೊಲಿಗೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದರೂ ಕೂಡ ಗೂಗಲ್ ಫಿಟ್ ಅದನ್ನು ಲೆಕ್ಕ ಹಾಕುತ್ತದೆ ಮತ್ತು ಈ ಕೆಲಸಗಳನ್ನು ನಿಮಗೆ ಹಾರ್ಟ್ ಪಾಯಿಂಟ್ ಲಭ್ಯವಾಗುತ್ತದೆ. ಇದಿಷ್ಟೇ ಅಲ್ಲದೆ ಈ ಆಪ್ ನಲ್ಲಿ ಬಳಕೆದಾರರಿಗೆ ತಮ್ಮ ವರ್ಕ್ ಔಟ್ ನ್ನು ವೃದ್ಧಿಸಿಕೊಳ್ಳುವುದಕ್ಕೂ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ.

ಕೇವಲ ದೈಹಿಕ ಆರೋಗ್ಯವನ್ನು ಡಿಜಿಟಲ್ ಆಗಿ ಕಾಪಾಡಿಕೊಳ್ಳುವೆಡೆಗೆ ಗೂಗಲ್ ಫೋಕಸ್ ಮಾಡಿದಂತೆ ಕಾಣುತ್ತದೆ. ಈ ವೈಶಿಷ್ಟ್ಯತೆಯನ್ನು ಗೂಗಲ್ ತನ್ನ ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ ನಲ್ಲಿ ಪರಿಚಯಿಸುತ್ತದೆ. ಡಿಜಿಟಲ್ ಆಗಿ ಡಿವೈಸ್ ನಿಮ್ಮ ಹವ್ಯಾಸ, ಗಮನ ಮತ್ತು ನೀವು ಸಮಯವನ್ನು ಹೇಗೆ ಮತ್ತು ಎಲ್ಲಿ ಕಳೆಯುತ್ತೀರಿ ಎಂಬುದನ್ನು ಕೂಡ ಗಮನಿಸಿ ನಿಮ್ಮ ಆರೋಗ್ಯಕ್ಕಾಗಿ ಸಲಹೆ ನೀಡುತ್ತದೆ. ಉದಾಹರಣೆಗೆ ನೀವು ಅತೀ ಹೆಚ್ಚು ಯುಟ್ಯೂಬ್ ಮತ್ತು ಇತರೆ ಆಪ್ ಗಳಲ್ಲೇ ಸಮಯ ಕಳೆಯುತ್ತಿದ್ದೀರಾದರೆ, ಆಂಡ್ರಾಯ್ಡ್ ಡ್ಯಾಶ್ ಬೋರ್ಡ್ ನಿಮಗೆ ಬ್ರೇಕ್ ತೆಗೆದುಕೊಳ್ಳುವಂತೆ ಮತ್ತು ನಿಮ್ಮ ಫ್ಯಾಮಿಲಿ ಮತ್ತು ಸ್ನೇಹಿತರೊಡನೆ ಬೆರೆಯುವಂತೆ ಸಲಹೆ ನೀಡುತ್ತದೆ.

Best Mobiles in India

English summary
Google wants you to be fit and healthy through this app. TO know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+