Home
Apps

ಸ್ಪರ್ಧಾತ್ಮಕ ಪರೀಕ್ಷೆಗೆ ‘ಗ್ರೇಡ್‌ಅಪ್’ ಆಪ್!! ವಿಧ್ಯಾರ್ಥಿಗಳೇ ಸ್ವಲ್ಪ ಇಲ್ಲಿ ಗಮನಿಸಿ!?

ಬ್ಯಾಂಕಿಂಗ್, IAS, CTET, SSC, GATE, TET RBI, JEE, UPSC, ಪರೀಕ್ಷೆ ತರಬೇತಿ ಜೊತೆಗೆ ಎಜಿನಿಯರಿಂಗ್ ಮತ್ತು ಎಂಬಿಎ ಪ್ರವೇಶ ಪರೀಕ್ಷಾ ಪಠ್ಯಗಳೆಲ್ಲವೂ ‘ಗ್ರೇಡ್‌ಅಪ್’ ಆಪ್‌ನಲ್ಲಿ ಸೇರಿವೆ.

By Bhaskar N J

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಅಧ್ಯಯನಕ್ಕಾಗಿ ಗ್ರಂಥಾಲಯದಲ್ಲಿ ಕೂರುವ ಕಾಲ ಇಂದು ಬದಲಾಗಿದೆ. ತಂತ್ರಜ್ಞಾನ ಅಭಿವೃದ್ಧಿ ಆದಂತೆ ಹೆಚ್ಚು ಪುಸ್ತಕಗಳು ಮಾಯವಾಗಿ ಅಂತರ್ಜಾಲವೇ ಹೇರಳವಾಗಿ ಅಧ್ಯಯನ ಸರಕುಗಳನ್ನು ನೀಡುತ್ತಿದೆ. ಇನ್ನು ಇದೀಗ ಸ್ಮಾರ್ಟ್‌ಫೋನ್‌ನಲ್ಲಿ 'ಗ್ರೇಡ್‌ಅಪ್' ಅನ್ನುವ ವಿಧ್ಯಾರ್ಥಿ ಮಾರ್ಗದರ್ಶಿ ಆಪ್‌ ಬಿಡುಗಡೆಯಾಗಿದೆ.

ಬ್ಯಾಂಕಿಂಗ್, IAS, CTET, SSC, GATE, TET RBI, JEE, UPSC, ಪರೀಕ್ಷೆ ತರಬೇತಿ ಜೊತೆಗೆ ಎಜಿನಿಯರಿಂಗ್ ಮತ್ತು ಎಂಬಿಎ ಪ್ರವೇಶ ಪರೀಕ್ಷಾ ಪಠ್ಯಗಳೆಲ್ಲವೂ 'ಗ್ರೇಡ್‌ಅಪ್' ಆಪ್‌ನಲ್ಲಿ ಸೇರಿವೆ. ಇದರಿಂದ ಯಾವುದೇ ಬುಕ್‌ಗಳನ್ನು ಖರೀದಿಸುವ ಅವಶ್ಯಕತೆ ವಿಧ್ಯಾರ್ಥಿಗಳಿಗೆ ಇರುವುದಿಲ್ಲ.

ಸ್ಪರ್ಧಾತ್ಮಕ ಪರೀಕ್ಷೆಗೆ ‘ಗ್ರೇಡ್‌ಅಪ್’ ಆಪ್!! ವಿಧ್ಯಾರ್ಥಿಗಳೇ ಸ್ವಲ್ಪ ಇಲ್ಲಿ ಗಮ

ಇನ್ನು ಪರೀಕ್ಷಾ ದಿನಾಂಕಗಳು, ಫಲಿತಾಂಶ ನೋಟಿಫಿಕೇಶನ್ ಅಲರ್ಟ್ ಅನ್ನು ಸಹ ಗ್ರೇಡ್‌ಅಪ್ ನೀಡುತ್ತದೆ. ಸ್ಪರ್ಧಾಸ್ಪೂರ್ತಿ, ಸ್ಪರ್ಧಾವಿಜೇತಗಳಂತೆ 'ಗ್ರೇಡ್‌ಅಪ್'ನಲ್ಲಿ ಬೇರೆ ಬೇರೆ ಪ್ರಕಾರದ ಪರೀಕ್ಷೆಗಳಿಗೆ ಅಧ್ಯಯನ ಸಾಮಗ್ರಿಗಳು ಸಿಗುತ್ತವೆ. 'ಗ್ರೇಡ್‌ಅಪ್'ನಲ್ಲಿನ ದೊರೆಯುವ ಬಹುತೇಕ ಪರೀಕ್ಷಾ ಸಾಮಗ್ರಿಗಳು ಉಚಿತವಾಗಿವೆ.

ನಿಮ್ಮಲ್ಲಿನ ಪ್ರಶ್ನೆಗಳನ್ನು ಹಂಚಿಕೊಂಡು ತಕ್ಷಣಕ್ಕೆ ಗೊಂದಲ ಪರಿಹರಿಸಿಕೊಳ್ಳಬಹುದಾದ ಸೇವೆಯನ್ನು ಈ ಆಪ್‌ ಒದಗಿಸುತ್ತಿದ್ದು, ಪ್ರತಿ ತಿಂಗಳು ಹೀಗೆ ಬಂದ ಐದು ಕೋಟಿಗೂ ಅಧಿಕ ಪ್ರಶ್ನೆಗಳನ್ನು ಪ್ರತಿಕ್ರಿಯಿಸಿದ್ದಾಗಿ 'ಗ್ರೇಡ್‌ಅಪ್' ಹೇಳಿಕೊಂಡಿದೆ. ಇನ್ನು ಪ್ರಾಯೋಗಿಕ ಪರೀಕ್ಷೆಗಳನ್ನು ತೆಗೆದುಕೊಂಡು ಸಾಮಾನ್ಯಜ್ಞಾನದ ಪರೀಕ್ಷೆ ಮಾಡಿಕೊಳ್ಳಬಹುದಾದ ಉತ್ತಮ ಆಪ್‌ ಇದಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ‘ಗ್ರೇಡ್‌ಅಪ್’ ಆಪ್!! ವಿಧ್ಯಾರ್ಥಿಗಳೇ ಸ್ವಲ್ಪ ಇಲ್ಲಿ ಗಮ

ಇನ್ನು ಒಂದೇ ವರ್ಷದ ಅವಧಿಯಲ್ಲಿ ಹದಿನಾರು ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಆಪ್ ಸಹಾಯ ಪಡೆದಿದ್ದು, 4.6 ರೇಟಿಂಗ್ ನೀಡಿದ್ದಾರೆ. ಗ್ರೇಡ್‌ಅಪ್' ಆಪ್‌ ಜನಪ್ರಿಯತೆಗೆ ಇದೊಂದು ಉದಾಹರಣೆ ಎನ್ನಬಹುದಾಗಿದೆ. ಶೋಭಿತ್ ಭಟ್ನಾಗರ್ ಎಂಬುವವರು ತಮ್ಮ ಗೆಳೆಯರೊಂದಿಗೆ ಈ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಆಂಡ್ರಾಯ್ಡ್ ಆವೃತ್ತಿಯ ಮೊಬೈಲ್‌ಗಳಿಗೆ ಆಪ್ ಲಭ್ಯವಿದೆ.

Best Mobiles in India

English summary
Gradeup App, the fastest growing Mobile learning destination has launched an excellent Exam Preparation App for Banking, SSC, CAT, JEE, GATE and Other Competitive Exams.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+