ನಿಮ್ಮ ಐಫೋನ್ಗೆ ಉತ್ತಮ ಎನ್ಕ್ರಿಪ್ಶನ್ ಆಪ್ ಗಳಿವು!

ಜನರ ಮಾಹಿತಿಯ ಸುರಕ್ಷತೆಯೇ ಮುಖ್ಯವಾಗಿರುವ ಸಮಯದಲ್ಲಿ ಐಫೋನ್ ಗಳಲ್ಲಿ ಬಳಸಬಹುದಾದ ಎನ್ಕ್ರಿಪ್ಶನ್ ಹೊಂದಿರುವ ಆಪ್ಗಳ ಪಟ್ಟಿ ಇಲ್ಲಿದೆ.

By Tejaswini P G
|

ಇಂದಿನ ದಿನಗಳಲ್ಲಿ ನಮ್ಮ ಜೀವನದ ದಿನ ನಿತ್ಯದ ಕೆಲಸಗಳು ಬಹಳಷ್ಟು ಆನ್ಲೈನ್ ನಲ್ಲೇ ನೆರವೇರುತ್ತದೆ. ಶಾಪಿಂಗ್, ಮೂವಿ ವೀಕ್ಷಣೆ, ಬಿಲ್ ಪಾವತಿ ಹೀಗೆ ಎಲ್ಲವೂ ಆನ್ಲೈನ್ ನಲ್ಲೇ ನಡೆಯುತ್ತದೆ. ಹೀಗಿರುವಾಗ ನಮ್ಮ ಮೊಬೈಲ್ನಲ್ಲಿರುವ ಮಾಹಿತಿ ಸುರಕ್ಷಿತವಾಗಿರುವುದಿಲ್ಲ ಮಾತ್ರವಲ್ಲದೇ ಸೈಬರ್ ಕ್ರಿಮಿನಲ್ಲಳಿಗೆ ಸುಲಭವಾಗಿ ದಕ್ಕುವಂತಿರುತ್ತದೆ.

ನಿಮ್ಮ ಐಫೋನ್ಗೆ ಉತ್ತಮ ಎನ್ಕ್ರಿಪ್ಶನ್ ಆಪ್ ಗಳಿವು!

ಈ ಕಾರಣಕ್ಕಾಗಿ ಈಗ ಹಲವಾರು ಸಂಸ್ಥೆಗಳು ಜನರ ಮಾಹಿತಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆಪಲ್ ಕೂಡ ಇದಕ್ಕೆ ಹೊರತಾಗಿಲ್ಲ.ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಪಲ್ ತನ್ನ ಐಫೋನ್ಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಉತ್ತಮ ಫೀಚರ್ಗಳನ್ನು ನೀಡಿದ್ದು, ಬಳಕೆದಾರರು ಇವುಗಳನ್ನು ಬಳಸಿ ತಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸಬಹುದು.

ಏನಿದು ಎನ್ಕ್ರಿಪ್ಶನ್?

ಏನಿದು ಎನ್ಕ್ರಿಪ್ಶನ್?

ಡೇಟಾ ಅಥವಾ ಮಾಹಿತಿಯ ಸುರಕ್ಷತೆಯ ದೃಷ್ಟಿಯಿಂದ ಡೇಟಾವನ್ನು ಅದರ ಮೂಲ ಸ್ವರೂಪದಿಂದ ವಿಭಿನ್ನ ಮತ್ತು ರಹಸ್ಯ ಕೋಡ್ ಸ್ವರೂಪಕ್ಕೆ ಬದಲಾಯಿಸುವುದನ್ನು ಎನ್ಕ್ರಿಪ್ಶನ್ ಎನ್ನುತ್ತಾರೆ.

ಈ ಲೇಖನದಲ್ಲಿ ನೀವು ನಿಮ್ಮ ಐಫೋನ್ ನಲ್ಲಿ ಬಳಸಬಹುದಾದ ಎನ್ಕ್ರಿಪ್ಶನ್ ಹೊಂದಿರುವ ಆಪ್ಗಳನ್ನು ಪಟ್ಟಿಮಾಡಿದ್ದೇವೆ.

ವಿಕರ್ ಮಿ

ವಿಕರ್ ಮಿ

ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯವಿರುವ ವಿಕರ್ ಮಿ ಆಪ್ ನಲ್ಲಿದೆ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಫೀಚರ್. ಅಲ್ಲದೆ ನಿಮ್ಮ ಮೆಸೇಜ್ಗಳಿಂದ ಟೈಮ್ಸ್ಟಾಂಪ್ ನಂತಹ ಮಾಹಿತಿಗಳನ್ನು ತೆಗೆಯಬಹುದು. ನಿರ್ದಿಷ್ಟ ಸಮಯದ ನಂತರ ಮೆಸೇಜ್ ಗಳು ತನ್ನಿಂತಾನೇ ಡಿಲೀಟ್ ಆಗುವಂತೆ ಸೆಟ್ ಕೂಡ ಮಾಡಬಹುದು ಈ ಅಪ್ನಲ್ಲಿ!

ಸೈಲೆಂಟ್

ಸೈಲೆಂಟ್

ಆಂಡ್ರಾಯ್ಡ್ ನ ಮೂಲ ಮೆಸೇಜಿಂಗ್ ಆಪ್ ಗೆ ಬದಲಿಯಾಗಿರುವ ಈ ಆಪ್ , ನಾವು ನಮ್ಮ ಮೊಬೈಲ್ನಲ್ಲಿ ಸ್ವೀಕರಿಸುವ ಎಲ್ಲಾ ಮೆಸೇಜ್ಗಳನ್ನು ಎನ್ಕ್ರಿಪ್ಟೆಡ್ ಡೇಟಾಬೇಸ್ ನಲ್ಲಿ ಸಂಗ್ರಹಿಸಿಡುತ್ತದೆ.ಮೆಸೆಜ್ ಕಳುಹಿಸುವವರು ಮತ್ತು ಸ್ವೀಕರಿಸುವವರಿಬ್ಬರೂ ಈ ಆಪ್ ಅನ್ನು ಬಳಸುತ್ತಿದ್ದರೆ,ಟೆಕ್ಸ್ಟ್ ಮತ್ತು ಮೀಡಿಯಾ ಮೆಸೇಜ್ ಕಳುಹಿಸಲು ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ತಂತ್ರಜ್ಞಾನ ಬಳಸುತ್ತದೆ.

ಸಿಗ್ನಲ್

ಸಿಗ್ನಲ್

ಸಿಗ್ನಲ್ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಹೊಂದಿರುವ ಮೆಸೇಜಿಂಗ್ ಆಪ್ ಆಗಿದ್ದು, ನಮ್ಮ ಮೆಸೇಜ್ಗಳ ಕುರಿತಾದ ಯಾವುದೇ ಮಾಹಿತಿ ಅಥವಾ ಮೆಟಾಡೇಟಾ ಅನ್ನು ರೆಕಾರ್ಡ್ ಮಾಡುವುದಿಲ್ಲ ಮತ್ತು ನಮ್ಮ ಮೆಸೇಜ್ಗಳ ಪ್ರತಿಯನ್ನು ಎಲ್ಲೂ ಸಂಗ್ರಹಿಸುವುದಿಲ್ಲ. ಈ ಆಪ್ ನ ಸೋರ್ಸ್ ಕೋಡ್ ಅಥವ ಮೂಲ ಕೋಡ್ ಆನ್ಲೈನ್ ನಲ್ಲಿ ಲಭ್ಯವಿದ್ದು ನುರಿತ ತಜ್ಞರು ಇದರಲ್ಲಿರುವ ಲೋಪಗಳನ್ನು ನಿರಂತರವಾಗಿ ಕಂಡುಹಿಡಿದು ಸರಿಪಡಿಸಬಹುದು.

ಗ್ಲಿಫ್

ಗ್ಲಿಫ್

SSL ಬಳಸಿ ಎನ್ಕ್ರಿಪ್ಶನ್ ಮಾಡುವ ಈ ಆಪ್ ಸುರಕ್ಷಿತವಾಗಿ ಮೆಸೇಜ್ ಡಿಲೀಟ್ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ. ಸುರಕ್ಷಿತವಾದ ಗ್ರೂಪ್ ಮೆಸೇಜಿಂಗ್ ಫೀಚರ್ ಬಳಸಿ ಹಲವರೊಡನೆ ಸುರಕ್ಷಿತ ಸಂಭಾಷಣೆ ನಡೆಸಬಹುದು.ಅಲ್ಲದೆ ಬಿಟ್ಕಾಯಿನ್ ಪಾವತಿ ಸೌಲಭ್ಯ ಹೊಂದಿರುವ ಈ ಆಪ್ ಅನ್ನು ಬಳಸಿ ಸುರಕ್ಷಿತವಾಗಿ ನಮ್ಮ ಕಾಂಟಾಕ್ಟ್ಗಳೊಡನೆ ಹಣ ವಿನಿಮಯ ಮಾಡಬಹುದು.

 ಟೆಲಿಗ್ರಾಮ್

ಟೆಲಿಗ್ರಾಮ್

ಟೆಲಿಗ್ರಾಮ್ ಆಪ್ನಲ್ಲಿ ಮೆಸೇಜ್ಗಳು ಎನ್ಕ್ರಿಪ್ಟ್ ಆಗಿರುತ್ತವೆ. ಅಲ್ಲದೆ ಇದರಲ್ಲಿರುವ ಸೀಕ್ರೆಟ್ ಚ್ಯಾಟ್ ಫೀಚರ್ ಬಳಸಿ ನಿರ್ದಿಷ್ಟ ಸಮಯದ ನಂತರ ತನ್ನಿಂತಾನೇ ಡಿಲೀಟ್ ಆಗುವಂತೆ ಸೆಟ್ ಮಾಡಬಹುದು.ಆದರೆ ಈ ಅಪ್ನಲ್ಲಿ ಲೋಕಲ್ ಮೆಸೇಜ್ ಡೇಟಾಬೇಸ್ ಎನ್ಕ್ರಿಪ್ಟ್ ಆಗದೇ ಇರುವ ಕಾರಣ ನೀವು ಇದಕ್ಕೆ ಪಾಸ್ವರ್ಡ್ ಸೆಟ್ ಮಾಡಬೇಕಾಗುತ್ತದೆ. ಟೆಲಿಗ್ರಾಮ್ ಆಪ್ನಲ್ಲಿ MTProto ಎಂಬ ಎನ್ಕ್ರಿಪ್ಶನ್ ಅಲ್ಗೋರಿದಮ್ ಬಳಸಲಾಗಿದ್ದು, ಸ್ವತಃ ಟೆಲಿಗ್ರಾಮ್ ಡೆವೆಲಪರ್ಸ್ ಅಭಿವೃದ್ಧಿಪಡಿಸಿರುವ ಎನ್ಕ್ರಿಪ್ಶನ್ ಅಲ್ಗೋರಿದಮ್ ಇದಾಗಿದೆ.

Best Mobiles in India

Read more about:
English summary
These days, we are living our most of lives online from watching movies to shopping and much more. It's a known fact that the data we have is not strongly protected and vulnerable to cybercriminals as well. Check out some of the encrypted app that you can use on your iPhone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X