25 ಸೂಪರ್ ಆಂಡ್ರಾಯ್ಡ್ ಕಾರ್ ರೇಸಿಂಗ್ ಗೇಮ್ಗಳು ಇವು- ಒಮ್ಮೆಯಾದರೂ ಆಡಲೇ ಬೇಕು
ಪ್ಲೇಸ್ಟೋರ್ನಲ್ಲಿ ಬಹಳಷ್ಟು ಕಾರ್ ರೇಸಿಂಗ್ ಗೇಮ್ಗಳಿದ್ದು ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ಆಡಬಹುದಾದ ಟಾಪ್ 25 ರೇಸಿಂಗ್ ಗೇಮ್ಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.
ಮೊಬೈಲ್ನಲ್ಲಿ ಗೇಮ್ ಆಡಲು ಇಷ್ಟಪಡದವರು ಬಹಳ ವಿರಳ. ಅದರಲ್ಲೂ ಕಾರ್ ರೇಸಿಂಗ್ ಗೇಮ್ಗಳಿಗೆ ತುಂಬಾ ಬೇಡಿಕೆ. ಪ್ಲೇಸ್ಟೋರ್ನಲ್ಲಿ ಬಹಳಷ್ಟು ಕಾರ್ ರೇಸಿಂಗ್ ಗೇಮ್ಗಳಿದ್ದರೂ ಎಲ್ಲವೂ ಖುಷಿಕೊಡುವಂಥದ್ದಲ್ಲ. ಬಳಕೆದಾರರ ರೇಟಿಂಗ್, ಕಮೆಂಟ್ ಮುಂತಾದವುಗಳನ್ನಾಧರಿಸಿ ಅತ್ಯುತ್ತಮ ರೇಸಿಂಗ್ ಗೇಮ್ಗಳ ಪಟ್ಟಿಯನ್ನು ಗೇಮಿಂಗ್ ಪ್ರಿಯರಿಗೆಂದೇ ಸಿದ್ಧಪಡಿಸಲಾಗಿದೆ.

ನೀವು ಗೇಮಿಂಗ್ ನ ಕಟ್ಟಾ ಪ್ರೇಮಿಯಾಗಿದ್ದರೆ ಈ ಪಟ್ಟಿಯನ್ನು ಇಷ್ಟಪಡದೇ ಇರಲು ಸಾಧ್ಯವಿಲ್ಲ.ಇಲ್ಲಿ ಹೇಳಿರುವ ಬಹುತೇಕ ಗೇಮ್ಗಳಲ್ಲಿದೆ ಶ್ರೇಷ್ಠ ಗುಣಮಟ್ಟದ ಗ್ರಾಫಿಕ್ಸ್ ಮತ್ತು ಬಳಸಲು ಅನುಕೂಲಕರವಾದ ಇಂಟರ್ಫೇಸ್.ಅಲ್ಲದೆ ಖುಷಿಕೊಡುವಂಥ 3ಡಿ ಎಫೆಕ್ಟ್ಗಳೂ ಇಲ್ಲಿವೆ.

ನೀಡ್ ಫಾರ್ ಸ್ಪೀಡ್ ನೋ ಲಿಮಿಟ್ಸ್
ಗೂಗಲ್ ಪ್ಲೇಸ್ಟೋರ್ನಲ್ಲಿ ಬಹಳ ಖ್ಯಾತಿಗಳಿಸುತ್ತಿರುವ ಗೇಮ್ಗಳಲ್ಲಿ ನೀಡ್ ಫಾರ್ ಸ್ಪೀಡ್ ನೋ ಲಿಮಿಟ್ಸ್ ಮೊದಲನೆಯದು. ಶ್ರೇಷ್ಠ ಗುಣಮಟ್ಟದ ಗ್ರಾಫಿಕ್ಸ್ ಇದರ ಯಶಸ್ಸಿನ ಗುಟ್ಟು. ಇಲ್ಲಿ BRZ,BMWಮ4, ಮೆಕ್ಲಾರೆನ್ 650 ಮೊದಲಾದ ಆಕರ್ಷಕ ಕಾರ್ಗಳ ಆಯ್ಕೆ ನಿಮಗಿದ್ದು ಗೇಮ್ಪ್ಲೇ ಕೂಡ ಯಾವುದೇ ಅಡಚಣೆ ಇಲ್ಲದೆ ಮುಂದುವರೆಯುತ್ತದೆ. ಇಲ್ಲಿದೆ ಬ್ಲ್ಯಾಕ್ರಿಡ್ಜ್ ನಂತಹ ಹಿಟ್ ಟ್ರ್ಯಾಕ್ಗಳು. ಫಾಸ್ಟ್ ಮತ್ತು ಫಿಯರ್ಲೆಸ್ ಆಗಿ ಡ್ರೈವ್ ಮಾಡಿ, ಪ್ರತಿ ಟೇಕ್ಡೌನ್ ಮತ್ತು ಡ್ರಿಫ್ಟ್ಗಳಿಗೂ ಹೆಚ್ಚಿನ ಅಂಕ ಗಳಿಸಿ.ಪೋಲೀಸ್ ಪೆಟ್ರೋಲಿಂಗ್ ತಪ್ಪಿಸಿ ಗುರಿ ಮುಟ್ಟುವುದಷ್ಟೇ ಅಲ್ಲ, ಡ್ರಿಫ್ಟಿಂಗ್, ಡ್ರ್ಯಾಗಿಂಗ್, ನೈಟ್ರಸ್ ಮುಂತಾದವುಗಳನ್ನು ಬಳಸಿ, ಸಾವಿರಕ್ಕೂ ಮಿಕ್ಕಿ ಚ್ಯಾಲೆಂಜ್ಗಳನ್ನು ಗೆಲ್ಲಿ

ಎಸ್ಫಾಲ್ಟ್ 8 ಏರ್ಬಾರ್ನ್
ಎಸ್ಫಾಲ್ಟ್ ಸರಣಿಯ ಅತ್ಯಂತ ಯಶಸ್ವೀ ಗೇಮ್ ಎಸ್ಫಾಲ್ಟ್ 8 ಏರ್ಬಾರ್ನ್. ಶ್ರೇಷ್ಠ ಗ್ರಾಫಿಕ್ಸ್ ಮತ್ತು ಗೇಮ್ಪ್ಲೇ ಇದರ ಶಕ್ತಿ. ಉತ್ತಮ ಡಿಸ್ಪ್ಲೇ ಹೊಂದಿರುವ ಈ ಗೇಮ್ ಏರಿಯಲ್ ಸ್ಟಂಟ್ಸ್ ಮತ್ತು ರೋಚಕ ಡ್ರೈವ್ಗಳೊಂದಿಗೆ ಕಟ್ಟಾ ರೇಸಿಂಗ್ ಪ್ರಿಯರ ಮನಗೆದ್ದಿದೆ.95ಕ್ಕೂ ಮಿಕ್ಕಿ ಹೈ-ಪರ್ಫಾರ್ಮೆನ್ಸ್ ಕಾರ್ಗಳು,ಬ್ಯಾರೆಲ್ ರೋಲ್ , 360 ಡಿಗ್ರೀ ಜಂಪ್ಗಳು ಮೊದಲಾದ ಸ್ಟಂಟ್ಗಳು, ವೆನೀಸ್ ಮೊದಲಾದ ಆಕರ್ಷಕ ಸೆಟ್ಟಿಂಗ್ನಲ್ಲಿ ರೇಸ್, 9 ಸೀಸನ್ಗಳು, ಮಲ್ಟಿಪ್ಲೇಯರ್ ಆಯ್ಕೆ ಮತ್ತು ರೋಚಕ ಮ್ಯೂಸಿಕ್ ಇರುವ ಎಸ್ಫಾಲ್ಟ್ 8 ಏರ್ಬಾರ್ನ್ ರೇಸಿಂಗ್ ಪ್ರಿಯರಿಗೆ ಅಚ್ಚುಮೆಚ್ಚು.

ಕಾಲಿನ್ ಮೆಕ್ ರೇ ರ್ಯಾಲಿ
ಕಾಲಿನ್ ಮೆಕ್ ರೇ ರ್ಯಾಲಿ ಒಂದು ಆಫ್-ರೋಡ್ ಡರ್ಟ್ ರೇಸ್ ಗೇಮ್ ಆಗಿದ್ದು, ಮೊದಲಿಗೆ ಪಿಸಿಗೆಂದು ತಯಾರಿಸಲಾದ ಈ ಗೇಮ್ ಆಂಡ್ರಾಯ್ಡ್ಗೂ ಲಗ್ಗೆ ಇಟ್ಟಿದೆ. ಸುಬಾರು ಇಂಪ್ರೆಝಾ,ಮಿಟ್ಸುಬಿಶಿ ಲ್ಯಾನ್ಸೆರ್ ಮೊದಲಾದ ಸೂಪರ್ ಕಾರ್ಗಳಿದ್ದು ಜನರಿಗೆ ನಿಜ ರೇಸಿಂಗ್ ನ ಅನುಭವ ನೀಡುತ್ತದೆ. ನೈಜ ಅನುಭವ ನೀಡುವ ಗೇಂ ಇದಾಗಿದ್ದು ಉತ್ತಮ ಕಂಟ್ರೋಲ್ನೊಂದಿಗೆ ಜಾಗ್ರತೆಯಿಂದ ಕಾರ್ ಚಲಾಯಿಸದಿದ್ದರೆ ಸುಂದರ ಮತ್ತು ರೋಚಕ ಸೆಟಪ್ನಲ್ಲಿ ಡ್ಯಾಮೇಜ್ ಖಂಡಿತ. ಕ್ವಿಕ್ ರೇಸ್,ಫುಲ್ ರ್ಯಾಲಿ ಮತ್ತು ಚ್ಯಾಂಪಿಯನ್ಶಿಪ್ ಮೊದಲಾದ ಮೋಡ್ಗಳಿದ್ದು ನಿಮಗೆ ಬೇಕಾದ್ದನ್ನು ಆಯ್ಕೆಮಾಡಬಹುದು.

ಜಿಟಿ ರೇಸಿಂಗ್ 2
ಖ್ಯಾತ ಗೇಮಿಂಗ್ ಡೆವಲಪರ್ ಗೇಮ್ಲಾಫ್ಟ್ ತಯಾರಿಸಿರುವ ರೇಸಿಂಗ ಗೇಮ್ " ದಿ ಜಿಟಿ ರೇಸಿಂಗ್ : ಮೋಟರ್ ಅಕಾಡೆಮಿ ಫ್ರೀ". ಈ ಗೇಂ ನೈಜ ಡ್ರೈವಿಂಗ್ ಅನುಭವ ನೀಡುತ್ತದೆ.ಡ್ರೈವರ್ಸ್ ಟೆಸ್ಟ್ ಪಾಸ್ ಮಾಡುವ ಮೂಲಕ ಅನೇಕ ಲೆವೆಲ್ ಗಳನ್ನು ಅನ್ಲಾಕ್ ಮಾಡಬಹುದಲ್ಲದೆ, ಆನ್ಲೈನ್ ನಲ್ಲಿ ವರ್ಚ್ಯುವಲ್ ಮೀಡಿಯಾ ಜೊತೆಗೆ ಕೂಡ ಆಡಬಹುದು. ಮರ್ಸೆಡೆಸ್ ಬೆನ್ಜ್, ಫೆರಾರಿ, ನಿಸ್ಸಾನ್, ಔಡಿ ಮೊದಲಾದ ತಯಾರಕರಿಂದ 71 ಆಕರ್ಷಕ ಕಾರ್ಗಳು, 13 ರೋಚಕ ಟ್ರ್ಯಾಕ್ಗಳು ಇಲ್ಲಿದೆ. ಕ್ಲಾಸಿಕ್ ರೇಸ್, ಡ್ಯುಯಲ್ಸ್, ನಾಕೌಟ್, ಓವರ್-ಟೇಕ್ ಮೊದಲಾದ 1400 ಇವೆಂಟ್ಗಳಿದ್ದು, ಪ್ರತೀ ವಾರ 28 ಹೊಸ ಚ್ಯಾಲೇಂಜ್ಗಳು ನಿಮಗಾಗಿ ಬರಲಿವೆ

ರೇಜಿಂಗ್ ಥಂಡರ್ ಫ್ರೀ
ರೇಜಿಂಗ್ ಥಂಡರ್ ಫ್ರೀ ಆಂಡ್ರಾಯ್ಡ್ ಸಾಧನದಲ್ಲಿ ಆಡಲು ಉತ್ತಮ ಗೇಂ ಆಗಿದ್ದು ಒಳ್ಳೆಯ ಗ್ರಾಫಿಕ್ಸ್ ಕೂಡ ಹೊಂದಿದೆ. ಆನ್ಲೈನ್ ಮಲ್ಟೀ-ಪ್ಲೇಯರ್ ಗೇಮ್ ಇದಾಗಿದ್ದು ಇದರ 3ಡಿ ಗ್ರಾಫಿಕ್ಸ್ ನಿಮಗೆ ನೈಜ ರೇಸಿಂಗ್ ಅನುಭವ ನೀಡಲಿದೆ. ಬೂಸ್ಟ್, ಡ್ರಿಫ್ಟ್ ಮೊದಲಾದ ಸ್ಟಂಟ್ಗಳಿದ್ದು, ಇದರ ಕಂಟ್ರೋಲ್ಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಸ್ಟಮೈಜ್ ಮಾಡಬಹುದು.

ಡ್ರ್ಯಾಗ್ ರೇಸಿಂಗ್
ಡ್ರ್ಯಾಗ್ ರೇಸಿಂಗ್ ಆಂಡ್ರಾಯ್ಡ್ ನ ಬೆಸ್ಟ್ ಮತು ಅತ್ಯಂತ ಎಡಿಕ್ಟಿವ್ ಗೇಮ್ ಎಂದರೆ ತಪ್ಪಾಗದು. 50ಕ್ಕೂ ಮಿಕ್ಕಿ ಸರ್ಟಿಫೈಡ್ ಕಾರ್ಗಳು ಇಲ್ಲಿದ್ದು ಆಡಿದಷ್ಟೂ ಸಾಕೆನಿಸದು. ಗೂಗಲ್ ಪ್ಲೇ ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಬಹುದು. ಮಲ್ಟೀಪ್ಲೇಯರ್ ಗೇಮ್ ಇದಾಗಿದ್ದು ಒಳ್ಳೆಯ ಕಮ್ಯುನಿಟಿಯೂ ಇಲ್ಲಿದೆ.

ರಿಯಲ್ ರೇಸಿಂಗ್ 3
ಖ್ಯಾತ ಗೇಂ ಡೆವೆಲಪರ್ಸ್ ಆದ "ಇಲೆಕ್ಟ್ರಾನಿಕ್ ಆರ್ಟ್ಸ್" ಕಂಪೆನಿಯ ಯಶಸ್ವೀ ಗೇಂ ರಿಯಲ್ ರೇಸಿಂಗ್ 3. ಗೂಗಲ್ ಪ್ಲೇನಲ್ಲಿ ಖ್ಯಾತಿ ಗಳಿಸುತ್ತಿರುವ ಈ ಗೇಂ ಆಕರ್ಷಕ ಗ್ರಾಫಿಕ್ಸ್ ಹೊಂದಿದ್ದು, ಕಾರು ಚಲಾಯಿಸುವಾಗ ನೈಜ ಅನುಭವ ನೀಡುತ್ತದೆ. 100ಕ್ಕೂ ಅಧಿಕ ಕಾರ್ಗಳು ಇಲ್ಲಿದ್ದು, ರಿಯಲ್ ಟ್ರ್ಯಾಕ್ಗಳು, ಅನ್ಲೈನ್ ನಲ್ಲಿ ಹಲವಾರು ಪ್ಲೇಯರ್ಗಳೊಂದಿಗೆ ಆಡುವ ಆಯ್ಕೆ , ಹಲವಾರು ಇವೆಂಟ್ಗಳು ಇಲ್ಲಿ ನಿಮಗೆ ದೊರೆಯಲಿದೆ.

ರೋಡ್ ವಾರಿಯರ್ಸ್
ಆಕ್ಷನ್ ಆಧಾರಿತ ಕಾರ್ ರೇಸಿಂಗ್ ಗೇಮ್ ಇದಾಗಿದ್ದು, ಮಲ್ಟೀಪ್ಲೇಯರ್ ಆಯ್ಕೆ ಬಳಸಿ ನಿಮ್ಮ ಗೆಳೆಯರೊಂದಿಗೆ ಆಡಬಹುದು.ಹಲವಾರು ಚ್ಯಾಲೆಂಜ್ಗಳು ನಿಮಗೆ ದೊರೆಯಲಿದ್ದು, ಲೆವೆಲ್ಗಳನ್ನು ಮುಗಿಸುತ್ತಿದ್ದಂತೆ ಹಲವಾರು ಗನ್ ಸೆಟ್ ಗಳನ್ನು ನೀವು ಸಂಪಾದಿಸಬಹುದು.ಹಲವಾರ ಟ್ರ್ಯಾಕ್ ಗಳು ಇಲ್ಲಿ ಲಭ್ಯವಿದ್ದು, ಪ್ರತೀ ಟ್ರ್ಯಾಕ್ನಲ್ಲೂ ಹಲವಾರು ದಾರಿಗಳಿವೆ. ಸೆಡಾನ್ ನಿಂದ ಟ್ರಕ್ ಗಳ ವರೆಗೂ ವಾಹನಗಳ ಆಯ್ಕೆ ಇದ್ದು,ಫ್ಲಿಪ್ ಮೊದಲಾದ ಸ್ಟಂಟ್ ಮೂಲಕ ಕಾಯಿನ್ ಮತ್ತು ನೈಟ್ರೋ ಬೂಸ್ಟ್ ಸಂಪಾದಿಸಬಹುದು. ಗ್ರಾಫಿಕ್ಸ್ ಕೂಡ ನೈಜವಾಗಿಯೇ ಇದೆ.

ಹಿಲ್ ಕ್ಲೈಂಬ್ ರೇಸಿಂಗ್
ಪ್ಲೇಸ್ಟೋರ್ ನಲ್ಲಿ ಲಭ್ಯವಿರುವ ಹಿಲ್ ಕ್ಲೈಂಬ್ ರೇಸಿಂಗ್ ಮಜಾ ನೀಡುವ ಗೇಮ್ ಆಗಿದ್ದು ನಿಮ್ಮ ಭೌತಶಾಸ್ತ್ರದ ಜ್ಞಾನವನ್ನೂ ಇದು ಪರೀಕ್ಷಿಸುತ್ತದೆ. ಬೈಕ್, ಟ್ರಕ್, ಜೀಪ್, ಟ್ಯಾಂಕ್ ಮೊದಲಾದ ವಿಭಿನ್ನ ವಾಹನಗಳು ಇಲ್ಲಿ ಲಭ್ಯವಿದ್ದು ಅದರ ಬಿಡಿ ಭಾಗಗಳಿಗೂ ಅಪ್ಗ್ರೇಡ್ ದೊರೆಯುತ್ತದೆ.ಹಳ್ಳಿಗಾಡು, ಮರುಭೂಮಿ,ಹಿಮಪ್ರದೇಶ, ಚಂದ್ರ ಹೀಗೆ ಹಲವಾರು ಟ್ರ್ಯಾಕ್ಗಳಿದ್ದು, ಆಕರ್ಷಕ ಗ್ರ್ಯಾಫಿಕ್ಸ್ ಮತ್ತು ಫಿಸಿಕ್ಸ್ ಸಿಮ್ಯುಲೇಶನ್ ಹೊಂದಿದೆ. ಸ್ಕ್ರೀನ್ಶಾಟ್ ತೆಗೆದು ಗೆಳೆಯರೊಂದಿಗೆ ನಿಮ್ ಸ್ಕೋರ್ ಕೂಡ ಹಂಚಿಕೊಳ್ಳಬಹುದು.

ಟ್ರ್ಯಾಫಿಕ್ ರೇಸರ್
ಈ ಆಟದಲ್ಲಿ ಅತ್ಯಂತ ಹೆಚ್ಚಿನ ಟ್ರ್ಯಾಫಿಕ್ ನಲ್ಲಿ ನೀವು ರೇಸಿಂಗ್ ನಡೆಸಬಹುದು.33 ವಿಭಿನ್ನ ಕಾರ್ಗಳಿದ್ದು, ಪಟ್ಟಣ, ಮರುಭೂಮಿ, ಹಿಮಪ್ರದೇಶ, ಮಳೆ ಅಥವ ಕತ್ತಲಿನ ಪರಿಸರದಲ್ಲಿ ರೇಸ್ ಮಾಡಬಹುದು.ಎಂಡ್-ಲೆಸ್,ಟೂ-ವೇ, ಟೈಮ್-ಟ್ರಯಲ್,ಪೋಲೀಸ್ ಚೇಸ್ ಮತ್ತು ಫ್ರೀ ರೈಡ್ ಎಂಬ 5 ಮೋಡ್ಗಳು ಇಲ್ಲಿದೆ.

ಕಾರ್ಸ್-ಫಾಸ್ಟ್ ಆಸ್ ಲೈಟ್ನಿಂಗ್
ಜನರ ಮನಗೆದ್ದಿರುವ ಕಾರ್ಸ್ ನ ಪಾತ್ರಗಳಾಗಿ ನೈಟ್ರೋ ಚಾರ್ಜ್ಡ್ ರೇಸ್ ಮಾಡಿ ಈ ಗೇಮ್ನಲ್ಲಿ.ಉತ್ತಮ ಗುಣಮಟ್ಟದ ಆನಿಮೇಶನ್ ಮತ್ತು ಖುಶಿ ಕೊಡುವ ಕಾರ್ಸ್ ಪಾತ್ರಗಳೊಡನೆ ಈ ಗೇಮ್ ತುಂಬ ಆಕರ್ಷಕವಾಗಿದೆ.

ಬೀಚ್ ಬಗ್ಗಿ ಬ್ಲಿಟ್ಝ್
ಟಿಕಿ ವಿಗ್ರಹಗಳು, ದೈತ್ಯ ಏಡಿಗಳು, ಲಾವಾ ದೈತ್ಯರು, ಯೇತಿಗಳು, ರಹಸ್ಯ ಗುಹೆಗಳು , ಸುಂದರ ಸಮುದ್ರ ತೀರಗಳು, ಪಾಳು ಬಿದ್ದ ದೇವಾಲಯಗಳು ಹೀಗೆ ವಿಸ್ಮಯಗಳಿಂದ ತುಂಬಿದ ಸುಂದರವಾದ ಪರಿಸರದಲ್ಲಿ ಕಾರ್ ಚಲಾಯಿಸುವುದೇ ಒಂದು ರೋಚಕ ಅನುಭವ. ಇಂತಹ ಪರಿಸರದಲ್ಲಿ ಹೊಸ ಹೊಸ ಕಾರ್ಗಳು ಮತ್ತು ಪಾತ್ರಗಳ ಮೂಲಕ ರೇಸ್ ಮಾಡವುದಲ್ಲದೇ, ಬೂಸ್ಟರ್ಸ್ ಮತ್ತು ಗ್ಯಾಜೆಟ್ಗಳ ಸಹಾಯದಿಂದ ಉತ್ತಮ ಪ್ರದರ್ಶನ ನೀಡಬಹುದು.

ಆಂಗ್ರಿ ಬರ್ಡ್ಸ್ ಗೋ
ರೇಸಿಂಗ ಗೇಮ್ಗಳ ಪಟ್ಟಿಯಲ್ಲಿ ಆಂಗ್ರಿ ಬರ್ಡ್ಸ್ ಹೇಗೆ ಬಂತೆಂದು ಅಚ್ಚರಿ ಪಡದಿರಿ. ತರಲೆ ಎದುರಾಳಿಗಳು ರೋಚಕ ಹಾದಿಗಳು ಇರುವ ಈ ಗೇಮ್ನಲ್ಲಿ ಪಿಗ್ಗಿ ಐಲ್ಯಾಂಡ್ ನ ಶ್ರೇಷ್ಠ ಚಾಲಕ ಅನ್ನಿಸಿಕೊಳ್ಳುವುದೇ ಸಾಧನೆ.ಪ್ರತೀ ಪಾತ್ರಕ್ಕೂ ವಿಶೇಷ ಶಕ್ತಿಗಳಿದ್ದು , ಇಲ್ಲಿರುವ ವಿವಧ ರೇಸ್ ಟ್ರ್ಯಾಕ್ಗಳು, ಸ್ಟಂಟ್ಗಳು ಮುದ ನೀಡುವುದಲ್ಲದೆ, ಪ್ರತಿ ದಿನ ಹೊಸ ರೇಸ್ ಆಡುವುದರೊಂದಿಗೆ ಟ್ರ್ಯಾಕ್ನಲ್ಲಿ ಅವಿತಿರುವ ಗಿಫ್ಟ್ ಬಾಕ್ಸ್ ಕೂಡ ನಿಮ್ಮದಾಗಿಸಿಕೊಳ್ಳಬಹುದು.

ನೀಡ್ ಫಾರ್ ಸ್ಪೀಡ್ ಮೋಸ್ಟ್ ವಾಂಟೆಡ್
ಸ್ಟ್ರೀಟ್ ರೇಸರ್ಗಳೊಡನೆ ಸ್ಪರ್ಧಿಸುವುದು ಮಾತ್ರವಲ್ಲ ಅಟ್ಟಿಸಿಕೊಂಡು ಬರುತ್ತಿರುವ ಪೋಲೀಸರಿಂದ ತಪ್ಪಿಸಿಕೊಳ್ಳುವುದು ಕೂಡ ನಿಮ್ಮ ಗುರಿಯಾಗಿರುತ್ತದೆ. ಆಕ್ಷನ್ ತುಂಬಿದ ಈ ರೇಸ್ನಲ್ಲಿ ಹಮ್ಮರ್ , ಪೋರ್ಶ್ ಮೊದಲಾದ 40ಕ್ಕೂ ಆಧಿಕ ಸೂಪರ್ ಕಾರ್ಗಳಿದ್ದು ಗ್ರಾಫಿಕ್ಸ್ ಕೂಡ ಅಚ್ಚರಿ ಮೂಡಿಸುವಂತಿದೆ.

ಡೆತ್ ರ್ಯಾಲಿ
ಡೆತ್ ರ್ಯಾಲಿ ಒಂದು ರೋಚಕ ರೇಸಿಂಗ್ ಮತ್ತು ಡಿಸ್ಟ್ರಕ್ಶನ್ ಗೇಮ್ ಆಗಿದ್ದು, ಕಾರ್ಗಳೊಡನೆ ಶಸ್ತ್ರಗಳನ್ನೂ ಅಪ್ಗ್ರೇಡ್ ಮಾಡಬಹುದಲ್ಲದೆ ಎದುರಾಳಿಗಳನ್ನು ನಾಶಪಡಿಸುತ್ತ ರೇಸ್ ಗೆಲ್ಲುವ ಗುರಿ ನಿಮ್ಮದಾಗಿರುತ್ತದೆ

CSR ರೇಸಿಂಗ್
ಪಟ್ಟಣದ ರಸ್ತೆಗಳಲ್ಲಿ ಡ್ರ್ಯಾಗ್ ರೇಸಿಂಗ್ ಮಾಡುವ CSR ರೇಸಿಂಗ್ನಲ್ಲಿದೆ 100ಕ್ಕೂ ಮಿಕ್ಕಿ ಕಾರ್ಗಳು , ಅದ್ಭುತ ಗ್ರಾಫಿಕ್ಸ್ ಮತ್ತು ಆನ್ಲೈನ್ ಪ್ಲೇಯರ್ಗಳೊಡನೆ ಆಡುವ ಅವಕಾಶ.

ಹಾರಿಝಾನ್ ಚೇಸ್-ವರ್ಲ್ಡ್ ಟೂರ್
ರೆಟ್ರೋ ಗೇಮಿಂಗ್ ಪ್ರಿಯರ ಕನಸು ಹಾರಿಝಾನ್ ಚೇಸ್. 80 ಮತ್ತು 90ರ ದಶಕದ ರೇಸಿಂಗ್ ಗೇಮ್ಗಳಾದ ಔಟ್ ರನ್, ರಶ್ ಮೊದಲಾದವುಗಳ ಮ್ಯಾಜಿಕ್ ಅನ್ನು ಇಲ್ಲಿ ಮರುಸೃಷ್ಟಿ ಮಾಡಲಾಗಿದೆ.16-ಬಿಟ್ ಜನರೇಶನ್ ನ ಗ್ರಾಫಿಕ್ಸ್ ಜೊತಗೆ 90ರ ದಶಕದ ರೇಸಿಂಗ್ ನೆನಪುಗಳು ಮರುಕಳಿಸುತ್ತವೆ.ಪ್ರತೀ ಕಪ್ ನೊಂದಿಗೆ ಆಕರ್ಷಕ ಟ್ರ್ಯಾಕ್ನಲ್ಲಿ ರೆಸ್ ಮಾಡುವ ಅವಕಾಶ ಮಾತ್ರವಲ್ಲದೆ, ಖ್ಯಾತ ಮ್ಯುಸಿಶಿಯನ್ ಬ್ಯಾರಿ ಲೆಯ್ಶ್ ರ ಹಿನ್ನಲೆ ಸಂಗೀತ ಇಲ್ಲಿದೆ.

ರೇಸಿಂಗ್ ಫೀವರ್
ಆರ್ಕೇಡ್ ರೇಸಿಂಗ್ ಮತ್ತು ಡ್ರೈವಿಂಗ್ ಸಿಮ್ಯುಲೇಶನ್ಗಳಿರುವ ರೇಸಿಂಗ್ ಫೀವರ್ ನಲ್ಲಿ ನಿಮ್ಮ ಗೆಳೆಯರೊಂದಿಗೆ ಅಥವ ಆನ್ಲೈನ್ ಪ್ಲೇಯರ್ಗಳೊಂದಿಗೆ ಕಠಿಣ ರೇಸ್ಗಳನ್ನಾಡಿ. ಅತಿ ವೇಗದ ರೇಸ್ಗಳು, ಅದ್ಭುತ 3ಡಿ ಗ್ರಾಫಿಕ್ಸ್ ನೀಡುವ ನೈಜ ಪರಿಸರದ ಅನುಭವಗಳೊಡನೆ ಕಾರ್ಗಳನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ಬದಲಾಯಿಸುವ ಅವಕಾಶ ಇಲ್ಲಿದೆ

ಅಸ್ಫಾಲ್ಟ್ ಎಕ್ಸ್ಟ್ರೀಮ್ : ರ್ಯಾಲಿ ರೇಸಿಂಗ್
ಅಸ್ಫಾಲ್ಟ್ ಸರಣಿಯ ಹೊಸ ಸೇರ್ಪಡೆ ಅಸ್ಫಾಲ್ಟ್ ಎಕ್ಸ್ಟ್ರೀಮ್. ಆಫ್ ರೋಡ್ ರೇಸಿಂಗ್ ಇರುವ ಈ ಗೇಮ್ನಲ್ಲಿ 35 ಮಾನ್ಸ್ಟರ್ ಕಾರ್ಗಳಿದ್ದು ರೋಚಕ ರೇಸಿಂಗ್ ಅನುಭವ ನೀಡಲಿದೆ. ಒಂದೇ ಬಾರಿಗೆ 8 ಮಂದಿಯೊಡನೆ ಆನ್ಲೈನ್ ರೇಸಿಂಗ್ ಮಾಡಬಹುದಾಗಿದ್ದು ಜಗತ್ತಿನ ಹಲವು ಸುಂದರ ಪ್ರದೇಶಗಳಲ್ಲಿ ರೇಸ್ ಮಾಡಬಹುದು.

ನೈಟ್ರೋ ನೇಶನ್ ಆನ್ಲೈನ್
ಆಂಡ್ರಾಯ್ಡ್ ಫೊನ್ಗೆ ಲಭ್ಯವಿರುವ ಸುಂದರ ಡ್ರ್ಯಾಗ್ ರೇಸಿಂಗ್ ಗೇಮ್ ಇದೆಂದರೆ ತಪ್ಪಾಗಲಾರದು. 100ಕ್ಕೂ ಮಿಕ್ಕಿ ಅಂತರಾಷ್ಟ್ರೀಯ ಬ್ರ್ಯಾಂಡ್ಗಳ ಕಾರ್ಗಳಿಲ್ಲಿದ್ದು ಜಗತ್ತಿನ ಮೂಲೆ ಮೂಲೆಯಿಂದ ಬರುವ ಎದುರಾಳಿಗಳೊಡನೆ ಲೈವ್ ಮಲ್ಟೀಪ್ಲೇಯರ್ ರೇಸ್ ನಡೆಸಬಹುದು.

ರಿಯಲ್ ರೇಸಿಂಗ್ 2
"ಇಲೆಕ್ಟ್ರಾನಿಕ್ ರೇಸಿಂಗ್" ನೀಡಿರುವ ಮತ್ತೊಂದು ಯಶಸ್ವೀ ಗೇಂ ರಿಯಲ್ ರೇಸಿಂಗ್ 2. 15 ಸುಂದರ ಸ್ಥಳಗಳು, 40 ಮೈಲಿಗಳ ರೇಸ್ ಟ್ರ್ಯಾಕ್, 16 ಕಾರ್ ಗ್ರಿಡ್ ಗಳಲ್ಲಿ ನುರಿತ ಎಐ ಚಾಲಕರೊಡನೆ ರೇಸ್ ಮಾಡುವ ಅವಕಾಶ. ಟಚ್ ಅಥವ ಟಿಲ್ಟ್ ಮೂಲಕ ಸ್ಟೇರಿಂಗ್ ಅನ್ನು ನಿಯಂತ್ರಿಸಬಹುದಲ್ಲದೆ ಗ್ರಾಫಿಕ್ಸ್ ಕೂಡ ಅದ್ಭುತವಾಗಿದೆ.

ಮಿನಿ ಮೋಟರ್ ರೇಸಿಂಗ್
ರಿಮೋಟ್ ಕಂಟ್ರೋಲ್ ಕಾರ್ಗಳಲ್ಲಿ ನೈಟ್ರೋ ಬೂಸ್ಟ್ ಮೊದಲಾದ ಆಧುನಿಕ ತಂತ್ರಜ್ಞಾನ ಬಳಸಿ ರೇಸ್ ಮಾಡುವ ಅನುಭವ ನೀಡಲಿದೆ ಮಿನಿ ಮೋಟರ್ ರೇಸಿಂಗ್. ವೈಫೈ, ಬ್ಲೂಟೂತ್ ಮತ್ತು ಆನ್ಲೈನ್ ಮೂಲಕ ಮಲ್ಟೀಪ್ಲೇಯರ್ ಗೇಮ್ಗಳನ್ನು ಆಡಬಹುದು. 50ಕ್ಕೂ ಮಿಕ್ಕಿ ಟ್ರ್ಯಾಕ್ಗಳಿದ್ದು ಮನಸ್ಸಿಗೆ ಮುದ ನೀಡುವ ಗ್ರಾಫಿಕ್ಸ್ ಇಲ್ಲಿದೆ.

ಟೇಬಲ್ ಟಾಪ್ ರೇಸಿಂಗ್
ಸೋನಿಯ ಪ್ಲೇಸ್ಟೇಶನ್ ಫ್ರಾಂಚೈಸಿಯಾಗಿರುವ "ವೈಪ್ ಔಟ್" ತಯಾರಿಸಿರುವ, ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ರೇಸಿಂಗ್ ಗೇಮ್ ಟೇಬಲ್ ಟಾಪ್ ರೇಸಿಂಗ್. ಉತ್ತಮ ಗ್ರಾಫಿಕ್ಸ್, 17 ಮ್ಯಾಡ್-ಕ್ಯಾಪ್ ಕಾರ್ಗಳು, 8 ರೋಚಕ್ ಟ್ರ್ಯಾಕ್ಗಳು, 4 ಉಗ್ರ ಚ್ಯಾಂಪಿಯನ್ಶಿಪ್ಗಳು, 30 ವಿಶೇಷ ಇವೆಂಟ್ಗಳು, 7 ಗೇಂಪ್ಲೇ ಮೋಡ್ಗಳು ಇರುವ ಈ ಗೇಮ್ ನಿಮ್ಮನ್ನು ಘಂಟೆಗಟ್ಟಲೆ ಆವರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

ರಿ-ವೋಲ್ಟ್ ಕ್ಲಾಸಿಕ್
ರಿ -ವೋಲ್ಟ್ ಕ್ಲಾಸಿಕ್ನಲ್ಲಿದೆ ಕ್ಷಿಪ್ರ ಗತಿಯ ರೋಚಕ ಗೇಂ ಪ್ಲೇ. 40ಕ್ಕೂ ಅಧಿಕ ಕಾರ್ಗಳಿದ್ದು ವಿಭಿನ್ನ ಶೈಲಿಯ ಟ್ರ್ಯಾಕ್ಗಳು ಇಲ್ಲಿದೆ. ಪ್ರತೀ ಟ್ರ್ಯಾಕ್ ಗೂ ಜಾಗತಿಕ ಮಟ್ಟದ ರ್ಯಾಂಕಿಂಗ್ ಕೂಡ ಇದೆ. ಇದರ ಹಿನ್ನಲೆ ಸಂಗೀತ ನೀವು ಆಟ ಆಡಿದ ಬಹಳಷ್ಟು ಸಮಯದ ನಂತರವೂ ಮನದಲ್ಲಿ ರಿಂಗಣಿಸುತ್ತಿರುತ್ತದೆ.

ಕ್ರೇಝಿ ಟ್ಯಾಕ್ಸಿ
ಈ ಆಟದಲ್ಲಿ ನೀವು ನಿಮ್ಮ ಕಾರ್ನಲ್ಲಿ ಪಟ್ಟಣದ ಒಳಗೆ ನಿಮ್ಮ ಪ್ರಯಾಣಿಕರನ್ನು ಅವರ ಗುರಿಮುಟ್ಟಿಸಬೇಕು. ಎಷ್ಟು ಕ್ರೇಝಿಯಾಗಿ ಡ್ರೈವ್ ಮಾಡುತ್ತೀರೋ ಅಷ್ಟು ಅಧಿಕ ಅಂಕಗಳು ನಿಮಗೆ ದೊರಕಲಿದೆ.


Click it and Unblock the Notifications








