ಗೂಗಲ್‌ನ 10 ಆಪ್‌ಗಳು ತುಂಬಾ ಉಪಯುಕ್ತವಂತೆ..!
ಗೂಗಲ್ ಪ್ಲೇ ನಲ್ಲಿ ಲಭ್ಯವಿರುವ ಅದೆಷ್ಟೋ ಮಿನಿಯನ್ ಆಪ್ ಗಳಲ್ಲಿ ಗೂಗಲ್ ಮಹಾಶಯ ಈ 10 ಆಪ್ ಗಳನ್ನು ನಿಮ್ಮ ಆಂಡ್ರಾಯ್ಡ್ ಗೆ ಡೌನ್ ಲೋಡ್ ಮಾಡಿಕೊಳ್ಳಿ ಎಂದು ತಿಳಿಸುತ್ತದೆ. ಈ ಆಪ್ ಗಳು ಗೂಗಲ್ ಪ್ರಕಾರ ಅವುಗಳ ಹೈ ಕ್ವಾಟಿಲಿ, ಬಳಕೆದಾರರ ಅನುಭವ, ಬಲಿಷ್ಟವಾದ ತಾಂತ್ರಿಕ ಪ್ರದರ್ಶನದ ಆಧಾರದಲ್ಲಿ ಹೇಳಲಾಗುತ್ತಿದೆಯಂತೆ.

ಈ ಆಪ್ ಗಳಲ್ಲಿ ಹೊಸ ಭಾಷೆಯನ್ನು ಕಲಿಯುವಿಕೆ, ನಿಮ್ಮ ಹಣಕಾಸು ವ್ಯವಹಾರವನ್ನು ನಿಭಾಯಿಸುವ ಆಪ್ ಮತ್ತು ಇತರೆ ಹಲವು ಆಪ್ ಗಳು ಸೇರಿಕೊಂಡಿವೆ. ಹಾಗಾದ್ರೆ ನೀವು ಇವುಗಳಲ್ಲಿ ಯಾವ್ಯಾಯ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದೀರಿ ಪರೀಕ್ಷಿಸಿಕೊಳ್ಳಿ.

1. ಬೀಲಿಂಗ್ ಗುಪ್ಪ: ಭಾಷೆ ಕಲಿಕೆಯ ಆಪ್
ಈ ಉಚಿತ ಆಪ್ ನಿಮಗೆ ಹೊಸ ಭಾಷೆಗಳನ್ನು ಕಲಿಯುವುದಕ್ಕೆ ಸಹಾಯ ಮಾಡಲಿದೆ. ಸ್ಪಾನಿಶ್, ಇಂಗ್ಲೀಷ್, ಜರ್ಮನಿ, ಪೋರ್ಚುಗೀಸ್, ಕೊರಿಯನ್, ಫ್ರೆಂಚ್, ಹಿಂದಿ, ರಷಿಯನ್, ಟರ್ಕೀಸ್, ಚೈನೀಸ್, ಅರೇಬಿಕ್, ಇಟಾಲಿಯನ್ ಮತ್ತು ಜಾಪನೀಸ್ ಭಾಷೆಗಳ ಕಲಿಕೆಗೆ ಇದು ನೆರವು ನೀಡಲಿದೆ. ನೀವು ಆಡಿಯೋ ಬುಕ್ಸ್ ಗಳ ಮೂಲಕವೂ ಕಲಿತುಕೊಳ್ಳಬಹುದು, ಟೆಕ್ಸ್ಟ್ ಗಳನ್ನು ಓದಲೂ ಬಹುದು ಜೊತೆಗೆ ಪದಗಳ ಉಚ್ಛಾರಣೆಯನ್ನು ಕೇಳಿಸಿಕೊಳ್ಳಲೂ ಈ ಆಪ್ ನಲ್ಲಿ ಅವಕಾಶವಿರುತ್ತದೆ.

2. BTFIT: ತಾಲೀಮು ಮತ್ತು ವಯಕ್ತಿತ ತರಬೇತುದಾರಿಕೆಯ ಆಪ್
ಈ ಆಪ್ ಬಳಕೆಯ ಮುಖಾಂತರ ತಮ್ಮ ತೂಕವನ್ನು ಹೇಗೆ ಇಳಿಸಿಕೊಳ್ಳುವುದು ಎಂಬ ಬಗ್ಗೆ ಸರಿಯಾದ ಮಾರ್ಗದರ್ಶನ ದೊರಕಲಿದೆ. ಇದು ಆರೋಗ್ಯಕಾರಿ ಜೀವನಶೈಲಿಯನ್ನು ರೂಢಿಸಿಕೊಂಡು ನಿಮ್ಮ ಗುರಿಯನ್ನು ತಲುಪಲು ನೆರವು ನೀಡುತ್ತದೆ.

3. ಫಾರ್ಚ್ಯೂನ್ ಸಿಟಿ – ಸಿಮ್ಯುಲೇಶನ್ ಆಟವನ್ನು ಆಡುವಾಗ ನಿಮ್ಮ ವೆಚ್ಚಗಳನ್ನು ಟ್ರ್ಯಾಕ್ ಮಾಡಿ
ಫಾರ್ಚೂನ್ ಸಿಟಿ ಆಪ್ ಒಂದು ಪುಸ್ತಕವನ್ನು ಮೈಂಟೇನ್ ಮಾಡುವ ಆಪ್ ಆಗಿದ್ದು, ನಿಮ್ಮ ವೆಚ್ಚವನ್ನು ಟ್ರ್ಯಾಕ್ ಮಾಡಿ ಇಟ್ಟುಕೊಳ್ಳಲು ನೆರವು ನೀಡುತ್ದೆ.

4. ಲಿಂಗೋಡೀರ್– ಆಫ್ ಲೈನ್ ನಲ್ಲಿದ್ದಾಗಲೂ ಭಾಷೆ ಕಲಿಯಿರಿ
ಈ ಉಚಿತ ಆಪ್ ನಿಮಗೆ ಭಾಷೆಗಳನ್ನು ಕಲಿಯಲು ಸಹಾಯ ಮಾಡುತ್ತದೆ ಜಾಪನೀಸ್, ಕೊರಿಯನ್, ವಿಯಟ್ನಾಮೀಸ್ ಮತ್ತು ಚೈನೀಸ್ (ಮ್ಯಾಂಡರಿಯನ್) ಭಾಷೆಯನ್ನು ಆಫ್ ಲೈನ್ ನಲ್ಲೂ ಅಂದರೆ ಇಂಟರ್ ನೆಟ್ ಕನೆಕ್ಷನ್ ಇಲ್ಲದೆಯೂ ಕಲಿತುಕೊಳ್ಳಲು ಇದರಲ್ಲಿ ಅವಕಾಶವಿರುತ್ತದೆ.

5. ಮೆಂಬ್ ರೈಸ್ – ಭಾಷೆ ಕಲಿಕೆಗಿರುವ ಮತ್ತೊಂದು ಆಪ್, ವ್ಯಾಕರಣ ಮತ್ತು ಶಬ್ದಕೋಶ
ಮೆಂಬ್ ರೈಸ್ ಆಪ್ ಕೂಡ ಉಚಿತ ಆಪ್ ಆಗಿದ್ದು ಇದು ಕೂಡ ಹೊಸ ಭಾಷೆಯ ಕಲಿಕೆಗೆ ನೆರವು ನೀಡುತ್ತದೆ. ಕೇವಲ ಭಾಷೆ ಕಲಿಸುವುದು ಮಾತ್ರವಲ್ಲ, ವ್ಯಾಕರಣ ಮತ್ತು ಶಬ್ದಕೋಶಗಳನ್ನು ಹೆಚ್ಚಿಸಲು ಕೂಡ ನೆರವು ನೀಡುತ್ತದೆ. ಇದರ ಕೆಲವು ಪಾವತಿಸಿ ಪಡೆಯಬಹುದಾದ ಪ್ರೋ ವರ್ಷನ್ ಗಳೂ ಕೂಡ ಲಭ್ಯವಿದ್ದು, ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

6. ಪಿಕ್ಸ್ ಆರ್ಟ್ – ಫೋಟೋಗಳನ್ನು ಈ ಆಪ್ ಮೂಲಕ ಸುಲಭದಲ್ಲಿ ಎಡಿಟ್ ಮಾಡಿ
ಪಿಕ್ಸ್ ಆರ್ಟ್ ಆಪ್ ಒಂದು ಉಚಿತವಾಗಿ ಫೋಟೋ ಎಡಿಟ್ ಮಾಡಬಹುದಾದ ಆಪ್ ಆಗಿದೆ ಮತ್ತು ಕೋಲ್ಯಾಜ್ ಮೇಕರ್ ಕೂಡ ಆಗಿದೆ. ಇದು ಬಳಕೆದಾರ ಸೃಷ್ಟಿಸಿದ ಸ್ಟಿಕ್ಕರ್ ಗಳಿಗೆ ಅನುಮತಿ ನೀಡುತ್ತದೆ. ಎಫೆಕ್ಟ್, ಫಿಲ್ಮರ್ ಮತ್ತು ಹೆಚ್ಚಿನ ಎಡಿಟಿಂಗ್ ಟೂಲ್ ಗಳು ಇದರಲ್ಲಿ ಲಭ್ಯವಿದೆ. ಚಿತ್ರದ ಮೇಲೆ ಅಕ್ಷರಗಳನ್ನು ಹಾಕಲು ಮತ್ತು ಅದನ್ನು ಡಾಡಲ್ ಆಗಿ ಮಾಡಲೂ ಕೂಡ ನಿಮಗೆ ಇದರಲ್ಲಿ ಅವಕಾಶವಿರುತ್ತದೆ.

7. ಪಾಕೆಟ್ ಕಾಸ್ಟ್ – ಪಾಡ್ ಕಾಸ್ಟ್ ಗಳನ್ನು ಪ್ರೀತಿಸುವವರಿಗಾಗಿ
ಪಾಕೆಟ್ ಕಾಸ್ಟ್ ಒಂದು ಪ್ರಸಿದ್ಧವಾದ ಪಾಡ್ ಕಾಸ್ಟ್ ಆಪ್ ಆಗಿದೆ. ಇದರಲ್ಲಿ ಹಲವಾರು ಪಾಡ್ ಕಾಸ್ಟ್ ಚಾನೆಲ್ ಗಳಿದ್ದು ಇದಕ್ಕ ನೀವು ಚಂದಾದಾರರಾಗಬಹುದು ಮತ್ತು ಅದನ್ನ ಡೌನ್ ಲೋಡ್ ಮಾಡಿ ಆಫ್ ಲೈನ್ ನಲ್ಲೂ ಆಲಿಸಬಹುದು.

8. ಶೇರ್ ದಿ ಮೀಲ್ ಆಪ್ – ಚಾರಿಟಿ ಆಪ್
ಇದು ಉಚಿತವಾದ ಚಾರಿಟಿ ಆಪ್ ಆಗಿದೆ. ವಿಶ್ವ ಆಹಾರ ಕಾರ್ಯಕ್ರಮದಿಂದ ನಿರ್ಮಿಸಲಾಗಿರುವ ಆಪ್ ಇದು. ಯಾವ ಮಕ್ಕಳಿಗೆ ಆಹಾರದ ಅಗತ್ಯವಿದೆಯೋ ಅಂತಹ ಮಕ್ಕಳಿಗೆ ಊಟ ಒದಗಿಸಲು ಈ ಆಪ್ ಮೂಲಕ ನೀವು ಫಂಡ್ ನೀಡಬಹುದು. ನೀವು ನಿಮ್ಮ ಇಚ್ಛೆಗೆ ಅನುಸಾರವಾದ, ನಿಮ್ಮ ಕೈಲಾದಷ್ಟು ಹಣವನ್ನು ನೀಡಿ ಹಸಿದ ಮಕ್ಕಳ ಆಹಾರದ ಇಂಗಿತವನ್ನು ನೀಗಿಸಬಹುದು.

09. ಮೈಂಡ್ ಫುಲ್ ನೆಸ್ ಆಪ್ – ನಿಮ್ಮನ್ನು ಶಾಂತವಾಗಿಸಿಕೊಳ್ಳಲು ಮತ್ತು ಹೆಚ್ಚು ಗಮನವಿಟ್ಟು ಕಾರ್ಯದಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ.
ಈ ಆಪ್ ನಿಮ್ಮ ದಿನನಿತ್ಯದ ಕೆಲಗಳನ್ನು ಇನ್ನೂ ಅತ್ಯುತ್ತಮಗೊಳಿಸಲು ನೆರವು ನೀಡುತ್ತದೆ. ಅಂದರೆ ಸರಿಯಾದ ಸಮಯಕ್ಕೆ ನೀವು ಧ್ಯಾನ ಕೈಗೊಳ್ಳುವಂತೆ ಮಾಡುತ್ತದೆ ಮತ್ತು ಇದರಲ್ಲಿ ನೈಸರ್ಗಿಕ ಶಬ್ದಗಳು, ಘಂಟೆಯ ನಿನಾದ, ಇತ್ಯಾದಿಗಳಿದ್ದು ನಿಮ್ಮ ಮನಸ್ಸನ್ನು ಉಲ್ಲಾಸಿತಗೊಳಿಸುತ್ತದೆ.ಇದರಲ್ಲಿ ಪ್ರೀಮಿಯಂ ಚಂದಾದಾರರಾಗುವ ಮಾಡೆಲ್ ಕೂಡ ಲಭ್ಯವಿದೆ.

10. ಟ್ರೆಲ್ಲೋ – ನಿಮ್ಮ ಕೆಲಸಗಳನ್ನು ಸುಲಭದಲ್ಲಿ ನಿಭಾಯಿಸಿ
ಟ್ರೆಲ್ಲೋ ನಿಮಗೆ ಸುಲಭದಲ್ಲಿ ಪಟ್ಟಿ ತಯಾರಿಸಲು ಸಹಾಯ ಮಾಡುತ್ತದೆ. ಯಾವುದೇ ಕೆಲಸದ ಸ್ಕ್ರೀನ್ ಪ್ಲೇ, ಕಿರಾಣಿ ಅಂಗಡಿಯಿಂದ ತರಬೇಕಾದ ಸಾಮಾನುಗಳ ಪಟ್ಟಿ ಮತ್ತು ಇತ್ಯಾದಿ. ಬಳಕೆದಾರರು ಒಂದು ಬೋರ್ಡ್ ತಯಾರಿಸಿಕೊಳ್ಳಬಹುದು ಮತ್ತು ಕೆಲಸದ ಹರಿವನ್ನು ಕಡಿಮೆಗೊಳಿಸಿಕೊಳ್ಳಬಹುದು.


Click it and Unblock the Notifications








