ಗೂಗಲ್ ಪ್ಲೇ ಬಳಸುವಾಗ ಈ ಗೈಡ್ ಲೈನ್ ನ್ನು ಓದಿಕೊಳ್ಳಿ
ಗೂಗಲ್ ಪ್ಲೇ ಸ್ಟೋರ್ ನಲ್ಲಿ ದುರುದ್ದೇಶಪೂರಿತ ಆಪ್ ಗಳಿಗೆ ಮತ್ತೊಮ್ಮೆ ಬಲಿಯಾಗುತ್ತಿದೆ.ಕೆಲವು ಭದ್ರತಾ ಮತ್ತು ಸಂಶೋಧನಾ ಸಂಸ್ಥೆಗಳು ಆಂಡ್ರಾಯ್ಡ್ ಬಳಕೆದಾರರಿಗೆ ಕಂಟಕವಾಗಿರುವ ಇಂತಹ ಆಪ್ ಗಳ ಸರಣಿಯನ್ನೇ ತೋರಿಸಿದೆ. ಇದೇ ಕಾರಣಕ್ಕೆ ಗೂಗಲ್ ಇದೀಗ ಬಳಕೆದಾರರನ್ನು ಎಚ್ಚರಿಸುವ ಕೆಲಸವನ್ನು ಪ್ರಾರಂಭಿಸಿದೆ.

ಒಂದು ಬ್ಲಾಗ್ ಪೋಸ್ಟ್ ನಲ್ಲಿ ಗೂಗಲ್ ಹೀಗೆ ಬರೆದುಕೊಂಡಿದೆ “ ನಮ್ಮ ತಂಡ ಸಾಕಷ್ಟು ಶ್ರಮಿಸುತ್ತದೆ. ಆದರೆ ಗೂಗಲ್ ಪ್ಲೇ ಸ್ಟೋರ್ ಸುರಕ್ಷತೆ ಮತ್ತು ನಂಬಿಕೆಯ ಆಪ್ ಮತ್ತು ಗೇಮ್ ಗಳ ತಾಣವಾಗಿರಲು ನಮಗೆ ನಿಮ್ಮ ಸಹಕಾರ ಬೇಕಾಗುತ್ತದೆ”.
ಇದೇ ಕಾರಣಕ್ಕೆ ಗೂಗಲ್ ಜನಸಾಮಾನ್ಯರಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಯಾವುದೇ ಮೋಸಕ್ಕೆ ಬಲಿಯಾಗದಂತೆ ಎಚ್ಚರಿಕೆಯಿಂದ ಇರಲು ಮಾಡಬೇಕಾಗಿರುವ ಮತ್ತು ಮಾಡಬಾರದ ಅಂಶಗಳ ಬಗ್ಗೆ ತಿಳಿಸಿದೆ.

ಗೂಗಲ್ ಪ್ಲೇ ಸ್ಟೋರ್
ಒಂದು ವೇಳೆ ನೀವು ಕೂಡ ಗೂಗಲ್ ಪ್ಲೇ ಸ್ಟೋರ್ ನ ಬಳಕೆದಾರರಾಗಿದ್ದಲ್ಲಿ ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗಿರುವ ಕೆಲವು ಅಂಶಗಳು ಹೀಗಿದೆ.
* ಹಣ ಅಥವಾ ವಸ್ತುಗಳು( ವರ್ಚುವಲ್ ಕೂಡ) ರಿವ್ಯೂ ಮತ್ತು ರೇಟಿಂಗ್ ಗಳ ವಿನಿಮಯದಿಂದಾಗಿ ಸ್ವೀಕರಿಸಬೇಡಿ ಅಥವಾ ಖರೀದಿಸಬೇಡಿ.
* ಅಪ್ಲಿಕೇಷನ್ ಅಥವಾ ಆಟವನ್ನು ಟೀಕಿಸಲು ಅಶ್ಲೀಲ ಪದಗಳನ್ನು ಬಳಸಬೇಡಿ. ನಿಮ್ಮ ಪ್ರತಿಕ್ರಿಯೆಯನ್ನು ರಚನಾತ್ಮಕವಾಗಿ ಇರಿಸಿಕೊಳ್ಳಿ.
* ದ್ವೇಷ, ಲೈಂಗಿಕ, ಅಶುದ್ಧ, ಅಶ್ಲೀಲ ಮತ್ತು ವಿಷಯಕ್ಕೆ ಸಂಬಂಧವೇ ಇಲ್ಲದ ವಿಮರ್ಷೆಯನ್ನು ಮಾಡಬೇಡಿ.ಇಂತವುಗಳನ್ನು ಅನುಮತಿಸಲು ಸಾಧ್ಯವಿಲ್ಲ.
* ಕಮೆಂಟ್ ಪೋಸ್ಟ್ ಮಾಡಲು ಇರುವ ನಿಯಮಗಳನ್ನು ಓದಿಕೊಳ್ಳಿ.ಸಾರ್ವಜನಿಕವಾಗಿ ಯಾವುದೇ ವಿಮರ್ಷೆಯನ್ನು ಪೋಸ್ಟ್ ಮಾಡುವಾಗ ಅದು ಹೇಗಿರಬೇಕು ಎಂಬ ಬಗ್ಗೆ ಸಂಕ್ಷಿಪ್ತವಾಗಿ ಇದರಲ್ಲಿ ವಿವರಣೆ ನೀಡಲಾಗಿರುತ್ತದೆ.
* ಒಂದು ವೇಳೆ ನೀವು ಕೆಟ್ಟ ರೇಟಿಂಗ್ ಮತ್ತು ವಿಮರ್ಷೆಯನ್ನು ಗೂಗಲ್ ಪ್ಲೇ ನಲ್ಲಿ ಗಮನಿಸಿದ್ದೇ ಆದಲ್ಲಿ ಆ ರಿವ್ಯೂವನ್ನು ನೀವು "Spam" ಎಂದು ಮಾರ್ಕ್ ಮಾಡಬಹುದು ಮತ್ತು ಪ್ಲೇ ಕನ್ಸೋಲ್ ಮೂಲಕ ಡೆವಲಪರ್ ಗಳು ವಿಮರ್ಷೆಯನ್ನು ಸಲ್ಲಿಸಬಹುದು.

ಬ್ಲಾಗ್ ಪೋಸ್ಟ್
ಡೆವಲಪರ್ ಗಳಿಗೂ ಕೂಡ ಕೆಲವು ಗೈಡ್ ಲೈನ್ ಗಳನ್ನು ಬ್ಲಾಗ್ ಪೋಸ್ಟ್ ನಲ್ಲಿ ಪಟ್ಟಿ ಮಾಡಲಾಗಿದೆ:
* ನಕಲಿ ಅಥವಾ ಪ್ರೋತ್ಸಾಹವಿಲ್ಲದ ರೇಟಿಂಗ್ ನ್ನು ಖರೀದಿಸಬೇಡಿ.
* "ನಮಗೆ 5 ಸ್ಟಾರ್ ಗಳನ್ನು ನೀಡಿ ನಾವು ನಿಮಗೆ ಅಪ್ಲಿಕೇಷನ್ನಿನ ಐಟಂನ್ನು ನೀಡುತ್ತೇವೆ!" ಎಂಬುದು ಉತ್ತೇಜಿತ ರೇಟಿಂಗ್ ಎಂದು ಪರಿಗಣಿಸಲ್ಪಡುತ್ತದೆ ಮತ್ತು ಇದನ್ನು ನೀತಿಯಿಂದ ನಿಷೇಧಿಸಲ್ಪಡುತ್ತದೆ. ಈ ರೀತಿಯ ಯಾವುದೇ ಪ್ರಚಾರ ಕಾರ್ಯವನ್ನು ಮಾಡುವಂತಿಲ್ಲ.
* ಗೂಗಲ್ ಪ್ಲೇ ಡೆವಲಪರ್ ನೀತಿಯನ್ನು ಓದಿಕೊಳ್ಳಿ ಮತ್ತು ನೀವು ಯಾವುದೇ ರೀತಿಯಲ್ಲೂ ನೀತಿಯನ್ನು ಉಲ್ಲಂಘಿಸುತ್ತಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಫೇಕ್ ಆಪ್ ಮತ್ತು ರಿವ್ಯೂಗಳನ್ನು ರಿಮೂವ್ ಮಾಡಿದ ಗೂಗಲ್:
ಇದಿಷ್ಟು ಗೈಡ್ ಲೈನ್ ಗಳ ಜೊತೆಗೆ ಕಂಪೆನಿಯು ಫೇಕ್ ರಿವ್ಯೂ ಮತ್ತು ರೇಟಿಂಗ್ ಪೋಸ್ಟ್ ಮಾಡಿದ್ದಲ್ಲಿ ಅದನ್ನು ರಿಮೂವ್ ಮಾಡಲಾಗುತ್ತದೆ ಎಂಬುದನ್ನು ಕೂಡ ತಿಳಿಸಿದೆ ಜೊತೆಗೆ ಇಂತಹ ಅನೈತಿಕ ಅಭ್ಯಾಸಗಳಿಗೆ ಪ್ರೋತ್ಸಾಹವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ. AI ಬೆಂಬಲ ಮತ್ತು ಮಾನವ ಸ್ನೇಹಿ ಸಿಸ್ಟಮ್ ಗಳ ಸಹಕಾರದಿಂದಾಗಿ ಇದೀಗ ಗೂಗಲ್ ಮಿಲಿಯನ್ ಗಟ್ಟಲೆ ರಿವ್ಯೂ ಮತ್ತು ರೇಟಿಂಗ್ ಗಳನ್ನು ಪ್ಲೇಸ್ಟೋರ್ ನಿಂದ ರಿಮೂವ್ ಮಾಡಲು ಸಾಧ್ಯವಾಗುತ್ತಿದೆ ಮತ್ತು ಅನುಮಾನಾಸ್ಪದ ಆಪ್ ಮತ್ತು ರಿವ್ಯೂ, ರೇಟಿಂಗ್ ಗಳನ್ನು ಕೂಡ ಪ್ಲೇಸ್ಟೋರ್ ನಿಂದ ತೆಗೆದುಹಾಕಲಾಗುತ್ತಿದೆ. ಈಗಾಗಲೇ ಇಂತಹ ಹಲವಾರು ಆಪ್ ಗಳು ಮತ್ತು ರಿವ್ಯೂಗಳು ಗೂಗಲ್ ಗೆ ತಿಳಿದುಬಂದಿದ್ದು ಅದನ್ನು ರಿಮೂವ್ ಮಾಡಲಾಗಿದೆ.


Click it and Unblock the Notifications








