ವಾಟ್ಸ್‌ಆಪ್‌ನಲ್ಲಿವೆ ಅನೇಕರಿಗೆ ಗೊತ್ತಿರದ ಗೌಪ್ಯ ಫೀಚರ್ಸ್..!

By Gizbot Bureau
|

ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಇನ್‌ಸ್ಟಾಂಟ್‌ ಮೆಸೆಂಜಿಂಗ್‌ ಆಪ್‌ ವಾಟ್ಸ್‌ಆಪ್‌ ಆಗಿದ್ದು, ಆಪ್‌ನಲ್ಲಿ ವಾಟ್ಸ್‌ಆಪ್ ವೆಬ್, ವಿಡಿಯೋ ಕಾಲಿಂಗ್, ಮೀಡಿಯಾ ಷೇರ್‌, ಎಮೋಜಿಸ್‌, ಸ್ಟಿಕ್ಕರ್‌ಗಳು ಮತ್ತು ಇನ್ನೂ ಹೆಚ್ಚಿನ ಫೀಚರ್‌ಗಳಿವೆ. ಇವಷ್ಟೇ ಅಲ್ಲದೇ, ಕೆಲವು ಫೀಚರ್‌ಗಳು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಂತಹ, 5 ಗೌಪ್ಯ ಫೀಚರ್‌ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಆಪ್‌ ಲಾಕ್‌

ಆಪ್‌ ಲಾಕ್‌

ಆಂಡ್ರಾಯ್ಡ್ ಹಾಗೂ ಐಒಎಸ್ ಎರಡೂ ಸಾಧನಗಳಲ್ಲಿ ಫಿಂಗರ್‌ಪ್ರಿಂಟ್, ಟಚ್ ಐಡಿ ಅಥವಾ ಫೇಸ್‌ಐಡಿ ಬಳಸಿ ಅಪ್ಲಿಕೇಶನ್‌ನ್ನು ಲಾಕ್ ಮಾಡಲು ವಾಟ್ಸ್‌ಆಪ್ ಇತ್ತೀಚೆಗೆ ಬಳಕೆದಾರರಿಗೆ ಅವಕಾಶ ನೀಡಿದೆ. ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಫಿಂಗರ್‌ಪ್ರಿಂಟ್ ಅನ್‌ಲಾಕ್‌ನ್ನು ಹೊಂದಿಸಲು, ಮೊದಲು ವಾಟ್ಸ್‌ಆಪ್ ಸೆಟ್ಟಿಂಗ್ಸ್‌ಗೆ ತೆರಳಿ, ನಂತರ ಅಕೌಂಟ್, ಬಳಿಕ ಸ್ಕ್ರೀನ್ ಲಾಕ್ ಅಥವಾ ಫಿಂಗರ್‌ಪ್ರಿಂಟ್ ಲಾಕ್‌ಗೆ ತೆರಳಿ ಫಿಂಗರ್‌ಪ್ರಿಂಟ್‌ ಕನ್ಫಿಗರ್‌ ಮಾಡಬಹುದು.

ಟೆಕ್ಸ್ಟ್‌ ಫಾರ್ಮ್ಯಾಟಿಂಗ್

ಟೆಕ್ಸ್ಟ್‌ ಫಾರ್ಮ್ಯಾಟಿಂಗ್

ವಾಟ್ಸ್‌ಆಪ್ ಟೆಕ್ಸ್ಟ್‌ ಫಾರ್ಮ್ಯಾಟಿಂಗ್‌ನ್ನು ಬಹಿರಂಗವಾಗಿ ಅನುಮತಿಸುವುದಿಲ್ಲ. ಆದಾಗ್ಯೂ, ಬೋಲ್ಡ್‌ ಟೆಕ್ಸ್ಟ್‌, ಇಟಾಲಿಕ್ ಮತ್ತು ಸ್ಟ್ರೈಕ್‌ಥ್ರೂ ತರ ವಿಶೇಷ ಅಕ್ಷರಗಳನ್ನು ಬಳಸಲು ಇದು ಅನುಮತಿಸುತ್ತದೆ. ಈ ಫಾರ್ಮ್ಯಾಟಿಂಗ್ ಆಯ್ಕೆಗಳನ್ನು ಬಳಸಲು, ನೀವು ಪಠ್ಯವನ್ನು ಈ ರೀತಿಯಲ್ಲಿ ಟೈಪ್ ಮಾಡಬೇಕಾಗುತ್ತದೆ: * ಬೋಲ್ಡ್‌ * , _ಇಟಾಲಿಕ್ಸ್_ , ~ ಸ್ಟ್ರೈಕ್‌ಥ್ರೂ ~. ನೀವು ಫಾರ್ಮ್ಯಾಟ್ ಮಾಡಲು ಬಯಸುವ ಪಠ್ಯದ ಪ್ರಾರಂಭ ಮತ್ತು ಅಂತ್ಯದಲ್ಲಿ ವಿಶೇಷ ಅಕ್ಷರಗಳನ್ನು ಟೈಪ್‌ ಮಾಡಬೇಕು.

ಡೇಟಾ ಮತ್ತು ಸಂಗ್ರಹಣೆ ಬಳಕೆ

ಡೇಟಾ ಮತ್ತು ಸಂಗ್ರಹಣೆ ಬಳಕೆ

ನಿಮ್ಮ ಡೇಟಾ ಬಳಕೆಯ ಬಗ್ಗೆ ನಿಗಾ ಇಡಲು ವಾಟ್ಸ್‌ಆಪ್ ನಿಮಗೆ ಅವಕಾಶ ನೀಡುತ್ತದೆ. ಈ ಬಳಕೆಯು ನೆಟ್‌ವರ್ಕ್ ಬಳಕೆ ಮಾತ್ರವಲ್ಲದೆ ಸ್ಮಾರ್ಟ್‌ಫೋನ್‌ನ ಶೇಖರಣಾ ಬಳಕೆಯನ್ನೂ ಒಳಗೊಂಡಿದೆ. ನೀವು ಯಾವ ವ್ಯಕ್ತಿಯೊಂದಿಗೆ ಹೆಚ್ಚು ಚಾಟ್ ಮಾಡುತ್ತಿದ್ದೀರಿ ಅಥವಾ ಯಾರೊಂದಿಗೆ ನೀವು ಹೆಚ್ಚಿನ ಮೀಡಿಯಾ ಹಂಚಿಕೊಳ್ಳುತ್ತೀರಿ ಎಂಬುದನ್ನು ಪತ್ತೆಹಚ್ಚಲು ಇದನ್ನು ಬಳಸಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನ ಸಂಗ್ರಹ ಸ್ಥಳವನ್ನು ನಿರ್ವಹಿಸಲು ಸಹ ಇದು ಸಹಾಯ ಮಾಡುತ್ತದೆ.

ಕಸ್ಟಮ್ ನೊಟಿಫಿಕೇಷನ್‌

ಕಸ್ಟಮ್ ನೊಟಿಫಿಕೇಷನ್‌

ಅಪ್ಲಿಕೇಶನ್‌ನ ಸೆಟ್ಟಿಂಗ್ಸ್‌ ಪುಟದಿಂದ ವಾಟ್ಸ್‌ಆಪ್ ಅಧಿಸೂಚನೆಗಳನ್ನು ನಿರ್ವಹಿಸುವುದು ಸುಲಭ. ಗುಂಪು ಮತ್ತು ವೈಯಕ್ತಿಕ ಅಧಿಸೂಚನೆಗಳಿಗಾಗಿ ವಿಭಿನ್ನ ಅಧಿಸೂಚನೆ ಟೋನ್‌ಗಳನ್ನು ಹೊಂದಿಸಲು ಇದು ನಿಮ್ಮನ್ನು ಅನುಮತಿಸುತ್ತದೆ. ಆದಾಗ್ಯೂ, ನೀವು ಪ್ರತಿ ಚಾಟ್‌ಗೆ ಕಸ್ಟಮ್ ಟೋನ್‌ಗಳನ್ನು ಸಹ ಹೊಂದಿಸಬಹುದು.

ಪಿನ್ ಚಾಟ್‌ಗಳು

ಪಿನ್ ಚಾಟ್‌ಗಳು

ವಾಟ್ಸ್‌ಆಪ್ ಟೆಕ್ಸ್ಟಿಂಗ್ ಜಗತ್ತಿನಲ್ಲಿ ಸಾಕಷ್ಟು ಸಂದೇಶಗಳನ್ನು ಪಡೆಯುತ್ತೇವೆ. ಈಗಿದ್ದಾಗ, ಕೆಲವೊಮ್ಮೆ ಒಂದು ಅಥವಾ ಇಬ್ಬರು ಸಂಖ್ಯೆಗಳು ಕಾಂಟ್ಯಾಕ್ಟ್‌ ಲೀಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿ ಇರಲು ಬಯಸುತ್ತೇವೆ. ಇದಕ್ಕಾಗಿಯೇ ಫೇಸ್‌ಬುಕ್ ಒಡೆತನದ ಅಪ್ಲಿಕೇಶನ್ ನಿಮಗೆ ಅಗತ್ಯವಿರುವ ಚಾಟ್‌ಗಳನ್ನು ಪಿನ್ ಮಾಡಲು ಅನುಮತಿಸುತ್ತದೆ.

Most Read Articles
Best Mobiles in India

Read more about:
English summary
Hidden WhatsApp Features On The Latest Version

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X