Subscribe to Gizbot

ಫುಕ್ರೇ ರಿಟರ್ನ್ಸ್ ಸ್ಟಿಕರ್ ಮತ್ತು ಲೈವ್ ಫಿಲ್ಟರ್ಗಳನ್ನು ಸೃಷ್ಟಿಸಿದ ಹೈಕ್!

Posted By: Tejaswini P G

ಬಿಡುಗಡೆಗೆ ಸಜ್ಜಾಗಿ ನಿಂತಿರುವ ಫುಕ್ರೇ ರಿಟರ್ನ್ಸ್ ಚಿತ್ರದ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಸಾಫ್ಟ್ಬ್ಯಾಂಕ್ ನ ಆಪ್ ಆದ ಹೈಕ್ ಮೆಸೆಂಜರ್ ಫುಕ್ರೇ ರಿಟರ್ನ್ಸ್ ಚಿತ್ರದ ಮೇಲೆ ಕೆಲವು ಸ್ಟಿಕರ್ಸ್ ಮತ್ತು ಲೈವ್ ಫಿಲ್ಟರ್ಗಳನ್ನು ಸೃಷ್ಟಿಸಿದೆ.

ಫುಕ್ರೇ ರಿಟರ್ನ್ಸ್ ಸ್ಟಿಕರ್ ಮತ್ತು ಲೈವ್ ಫಿಲ್ಟರ್ಗಳನ್ನು ಸೃಷ್ಟಿಸಿದ ಹೈಕ್!

ಹೈಕ್ ಮೆಸೆಂಜರ್ ಆಪ್ 10 ಹೊಸ ಸ್ಟಿಕರ್ಗಳನ್ನು ಮತ್ತು 4 ಫೇಸ್ ಫಿಲ್ಟರ್ಗಳನ್ನು ಸೃಷ್ಟಿಸಿದ್ದು, ಇವೆಲ್ಲವೂ ಆ ಸಿನೆಮಾ ದ ಹಾಸ್ಯ ಭರಿತ ದೃಶ್ಯ ಮತ್ತು ಡೈಲಾಗ್ ಗಳನ್ನು ಆಧರಿಸಿದೆ.

ಹೈಕ್ ಬಳಕೆದಾರರು ಚೂಚ, ಭೋಲಿ ಪಂಜಾಬನ್, ಲಲ್ಲಿ, ಹನ್ನಿ, ಝಫರ್ ಮೊದಲಾದವರ ವ್ಯಾಕಿ ಸ್ಟಿಕರ್ಗಳು ಮತ್ತು ಹನ್ನಿ-ಚೂಚ ಇವರ ಬ್ರೊಮ್ಯಾನ್ಸ್ ಮತ್ತು ಇತರ ಹಾಸ್ಯಭರಿತ ಡೈಲಾಗ್ ಹೊಂದಿರುವ ಸ್ಟಿಕರ್ಗಳನ್ನು ಬಳಸುವ ಮೂಲಕ ಫುಕ್ರೇ ರಿಟರ್ನ್ಸ್ ನ ಅನುಭವವನ್ನು ಪಡೆಯಬಹದು.

ಫುಕ್ರೇ ರಿಟರ್ನ್ಸ್ ಡಿಸೆಂಬರ್ 8, 2017ರಂದು ಬಿಡುಗಡೆಯಾಗಲಿದ್ದು, ಅದಕ್ಕಿಂತ ಮೊದಲೇ ಹೈಕ್ ಬಳಕೆದಾರರು ಈ ಸ್ಟಿಕರ್ ಮತ್ತು ಲೈವ್ ಫಿಲ್ಟರ್ಗಳನ್ನು ಬಳಸಬಹುದಾಗಿದೆ.

ಫುಕ್ರಾಪನ್ತಿ ಫಿವರ್ ನ ಅನುಭವ ಪಡೆಯಲು ಹೈಕ್ ಬಳಕೆದಾರರು ಮಾಡಬೇಕಾದದ್ದು ಇಷ್ಟೇ. ಹೈಕ್ ನ ಸ್ಟಿಕರ್ ಶಾಪ್ ಗೆ ಹೋಗಿ ಫುಕ್ರೇ ಸ್ಟಿಕರ್ ಪ್ಯಾಕ್ ಅನ್ನು ಡೌನ್ಲೋಡ್ ಮಾಡಬಹುದು ಅಥವಾ ಹೈಕ್ ಸ್ಟೋರೀಸ್ ಗೆ ಹೋಗಿ ತಮ್ಮ ಫೇವರೆಟ್ ಕ್ಯಾರೆಕ್ಟರ್ ನ ಫಿಲ್ಟರ್ಗಳನ್ನು ಬಳಸಬಹುದು. ನಿಮ್ಮ ಸಂಭಾಷಣೆಯಲ್ಲಿ ಫುಕ್ರಾಪನ್ತಿಯನ್ನು ಸೇರಿಸಿ, ಸಂಭಾಷಣೆಯ ಮಜಾ ಪಡೆಯಿರಿ.

ಹೈಕ್ ಕಂಪೆನಿಯು ತನ್ನ ವಾಲೆಟ್ ನ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಏರ್ಟೆಲ್ ಪೇಯ್ಮೆಂಟ್ಸ್ ಬ್ಯಾಂಕ್ ನೊಂದಿಗೆ ಕೈಜೋಡಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

ಈ ಸಹಯೋಗದೊಂದಿಗೆ ಏರ್ಟೆಲ್ ಪೇಯ್ಮೆಂಟ್ಸ್ ಬ್ಯಾಂಕ್ 100 ಮಿಲಿಯನ್ ಗೂ ಅಧಿಕ ಹೈಕ್ ಬಳಕೆದಾರರೊಂದಿಗೆ ಸಂಪರ್ಕ ಪಡೆಯುತ್ತದಲ್ಲದೆ,ಹೈಕ್ ವಾಲೆಟ್ ಗೆ ತನ್ನ ಬೆಂಬಲವನ್ನೂ ನೀಡುತ್ತದೆ.ಹೈಕ್ ಬಳಕೆದಾರರು ಈ ಮೂಲಕ ಏರ್ಟೆಲ್ ಪೇಯ್ಮೆಂಟ್ ಬ್ಯಾಂಕ್ ನ ಮರ್ಚಂಟ್ ಮತ್ತು ಯುಟಿಲಿಟಿ ಪೇಯ್ಮೆಂಟ್ಗಳು ಮತ್ತು ಕೆಯೈಸಿ ಇನ್ಫ್ರಾಸ್ಟ್ರಕ್ಚರ್ ನ ಸದ್ಬಳಕೆಯನ್ನು ಮಾಡಬಹುದು. ಈ ಕೆಯೈಸಿ ಇನ್ಫ್ರಾಸ್ಟ್ರಕ್ಚರ್ ದೇಶದ ದೊಡ್ಡ ಕೆಯೈಸಿ ಇನ್ಫ್ರಾಸ್ಟ್ರಕ್ಚರ್ ಗಳಲ್ಲಿ ಒಂದಾಗಿದ್ದು, RBI ಘೋಷಿಸಿರುವ ಇತ್ತೀಚಿನ ಕೆಯೈಸಿ ಸೂಚನೆಗಳ ಹಿನ್ನಲೆಯಲ್ಲಿ ಈ ಹೆಜ್ಜೆ ದೊಡ್ಡ ಸಾಧನೆಯಾಗಿದೆ.

ಜಿಯೋ ಫೋನ್ - ಭಾರತ್‌ 1 ಫೋನ್: ಬೆಸ್ಟ್‌ ಯಾವುದು? ವಿಶೇಷತೆಗಳೇನು.?

ಹೈಕ್ ಮೆಸೆಂಜರ್ 2012ರಲ್ಲಿ ಬಿಡುಗಡೆಯಾಗಿದ್ದು, ಜನವರಿ 2016ರೊಳಗೆ 100 ಮಿಲಿಯನ್ ಗೂ ಮಿಕ್ಕಿ ಬಳಕೆದಾರರನ್ನು ಪಡೆದುಕೊಂಡಿತ್ತು. ಆಗಸ್ಟ್ 2016 ರಲ್ಲಿ ಹೈಕ್ ತನ್ನ ನಾಲ್ಕನೇ ಸುತ್ತಿನ ಫಂಡಿಂಗ್ ಅನ್ನು ಪಡೆದಿತ್ತು. ಟೆನ್ಸೆಂಟ್ ಮತ್ತು ಫಾಕ್ಸ್ಕಾನ್ $175 ಮಿಲಿಯನ್ ನಷ್ಟು ಫಂಡಿಂಗ್ ನೀಡಿದ್ದು, ಕಂಪೆನಿಯ ಒಟ್ಟು ಮೌಲ್ಯ $1.4 ಬಿಲಿಯನ್ ಆಗಿತ್ತು. ಕೇವಲ 3.7 ವರ್ಷಗಳಲ್ಲಿ $1 ಬಿಲಿಯನ್ ಮೌಲ್ಯ ಗಳಿಸುವ ಮೂಲಕ ಹೈಕ್ ಭಾರತದಲ್ಲಿ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಕಂಪೆನಿ ಎಂದು ಹೆಸರು ಪಡೆದಿದೆ.

English summary
Users can catch up on the Fukrey content on Hike before the scheduled launch of the movie on 8th December 2017.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot