ಏರ್ ಟೆಲ್ ಪೇಮೆಂಟ್ ಬ್ಯಾಂಕ್ ನೊಂದಿಗೆ ಮೈತ್ರಿ ಮಾಡಿಕೊಂಡ ಹೈಕ್..!
ಭಾರತೀಯ ಮೂಲದ ಇನ್ ಸ್ಟೆಂಟ್ ಮೇಸೆಂಜಿಗ್ ಆಪ್ ಹೈಕ್, ಏರ್ ಟೆಲ್ ಪೇಮೆಂಟ್ ಬ್ಯಾಂಕ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಈ ಮೂಲಕ ತನ್ನ ಆಪ್ ನಲ್ಲಿ ಪೇಮೆಂಟ್ ಸೇವೆಯನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಮತ್ತೊಂದು ಪೇಮೆಂಟ್ ಆಪ್ ಮಾರುಕಟ್ಟೆಗೆ ಬಂದಿದೆ.

ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಈ ಒಪ್ಪಂದ ದಿಂದ ಸುಮಾರು 100 ಮಿಲಿಯನ್ ಹೈಕ್ ಬಳಕೆದಾರರನ್ನು ತನ್ನ ಬಳಿಗೆ ಸೆಳೆದುಕೊಳ್ಳಲಿದೆ. ಇದೇ ಮಾದರಿಯಲ್ಲಿ ಹೈಕ್ ಸಹ ವ್ಯಾಲೆಟ್ ಸೇವೆಯನ್ನು ಬಳಕೆದಾರರಿಗೆ ನೀಡಿದಂತೆ ಆಗಲಿದೆ. ಇದರಿಂದಾಗಿ ಪೇಮೆಂಟ್ ಸೇವೆ ಬಳಸಿಕೊಳ್ಳುತ್ತಿರುವ ಸಂಖ್ಯೆಯೂ ಹೆಚ್ಚಾಗಲಿದೆ.
ಇದರಿಂದಾಗಿ ಹೈಕ್ ಬಳಕೆದಾದರರು ಪೇಮೆಂಟ್ ಸೇವಯನ್ನು ಪಡೆಯಬಹುದಾಗಿದೆ. ಇದು ಸಹ ಕೆವೈಸಿ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಒಪ್ಪಂದದಿಂದ ಎರಡು ಕಂಪನಿಗಳಿಗೂ ಲಾಭವಾಗಲಿದ್ದು, ಇದರಿಂದ ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಾಗಿದೆ.
ಏರ್ ಟೆಲ್ ಪೇಮೆಂಟ್ ಬ್ಯಾಕ್ ತನ್ನ ಸೇವೆಯನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಈ ಒಪ್ಪಂದಕ್ಕೆ ಮುಂದಾಗಿದ್ದು, ಇದರಿಂದ ಹೆಚ್ಚಿನ ಜನರನ್ನು ತನ್ನ ಪೇಮೆಂಟ್ ಬ್ಯಾಂಕ್ ಬಳಕೆ ಮಾಡಿಕೊಳ್ಳುವಂತೆ ಮಾಡಲು ಮುಂದಾಗಿದೆ. ಅಲ್ಲದೇ ವಹಿವಾಟು ಸಹ ವೃದ್ಧಿಯಾಗಲಿದೆ.
ಇದಲ್ಲದೇ ವಾಟ್ಸ ಆಪ್ ಗೆ ಹೆಚ್ಚಿನ ಸ್ಪರ್ಧೆಯನ್ನು ನೀಡುತ್ತಿರುವ ಹೈಕ್, ವಾಟ್ಸ್ ಗೂ ಮುನ್ನವೇ ಪೇಮೆಂಟ್ ಸೇವೆಯನ್ನು ನೀಡಲು ಮುಂದಾಗಿದೆ, ಇದರಿಂದಾಗಿ ಭಾರತದಲ್ಲಿ ಹೆಚ್ಚಿನ ಬಳಕೆದಾರರನ್ನು ಹೈಕ್ ಸೆಳೆದುಕೊಳ್ಳಲಿದೆ ಎನ್ನಲಾಗಿದೆ.


Click it and Unblock the Notifications








