ಹಾನರ್ 10 ಸ್ಮಾರ್ಟ್ ಫೋನ್ ಲಾಂಚ್: ಬೆಲೆ, ವಿಶೇಷತೆ ಕುರಿತ ಮಾಹಿತಿ..!
ಲಂಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾನರ್ 10 ಸ್ಮಾರ್ಟ್ ಫೋನ್ ಜಾಗತಿಕವಾಗಿ ಲಾಂಚ್ ಆಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ರೂ.32,999ಕ್ಕೆ ಮಾರಾಟವಾಗಲಿದೆ. ಈ ಸ್ಮಾರ್ಟ್ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ಮಾತ್ರವೇ ಮಾರಾಟವಾಲಿದ್ದು, ಮೇ.16ರಿಂದ ದೊರೆಯಲಿದೆ.
ಹಾನರ್ 10 ಸ್ಮಾರ್ಟ್ ಫೋನ್ ಹೊಸ ಮಾದರಿಯ ವಿನ್ಯಾಸದಿಂದ ಕೂಡಿದ್ದು, ಹಿಂಭಾಗದಲ್ಲಿ ಕೃತಕ ಬುದ್ದಿಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, ಈ ವರ್ಷದ ಬೆಸ್ಟ್ ಟಾಪ್ ಎಂಡ್ ಸ್ಮಾರ್ಟ್ ಫೋನ್ ಎಂದರು ತಪ್ಪಾಗುವುದಿಲ್ಲ.

ಡಿಸೈಸ್:
ಯೂನಿಮೆಟಲ್ ಬಾಡಿ ವಿನ್ಯಾಸವನ್ನು ಹೊಂದಿದೆ. ನೋಡಲು ಸುಂದರವಾಗಿ ಕಾಣಿಸುತ್ತಿದ್ದು, ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿಯೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ.
ವಿಶೇಷತೆ:
5.84 ಇಂಚಿನ FHD+ ಗುಣಮಟ್ಟದ ಡಿಸ್ ಪ್ಲೇಯನ್ನು ಹಾನರ್ 10 ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದೆ. ಅಲ್ಲದೇ ಐಫೋನ್ ಮಾದರಿಯ ನೋಚ್ ಅನ್ನು ಅಳವಡಿಸಲಾಗಿದ್ದು, ಹೊಸ ಲುಕ್ ನೀಡುತ್ತಿದೆ. 6GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಇದರಲ್ಲಿ ಕಾಣಬಹುದಾಗಿದೆ.
ಕ್ಯಾಮೆರಾ:
ಹಾನರ್ 10 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ 16MP + 24 MP ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ ಸೆಲ್ಫಿಗಾಗಿ 24MP ಕ್ಯಾಮೆರಾವನ್ನು ನೀಡಲಾಗಿದೆ ಇದರಲ್ಲಿ ಗುಣಮಟ್ಟದ ವಿಡಿಯೋವನ್ನು ಸೆರೆಹಿಡಿಯಬಹುದಾಗಿದೆ.
ಇತರೆ:
ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸುವ ಹಾನರ್ 10 ಸ್ಮಾರ್ಟ್ ಫೋನ್, ಜೊತೆಗೆ EMUI 8.1 ಅನ್ನು ಹಹೊಂದಿದೆ. ಅಲ್ಲದೇ 3400mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ. ಇದು ಬಳಕೆದಾರರಿಗೆ ಹೆಚ್ಚಿನ ಬ್ಯಾಕಪ್ ಅನ್ನು ನೀಡಲಿದೆ.
ಮೊಬೈಲ್:
ಹಾನರ್ 10 ಸ್ಮಾರ್ಟ್ ಫೋನ್ ಹೊಸ ಮಾದರಿಯ ವಿನ್ಯಾಸದಿಂದ ಕೂಡಿದ್ದು, ಹಿಂಭಾಗದಲ್ಲಿ ಕೃತಕ ಬುದ್ದಿಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, ಈ ವರ್ಷದ ಬೆಸ್ಟ್ ಟಾಪ್ ಎಂಡ್ ಸ್ಮಾರ್ಟ್ ಫೋನ್ ಎಂದರು ತಪ್ಪಾಗುವುದಿಲ್ಲ ಎನ್ನಲಾಗಿದೆ.


Click it and Unblock the Notifications





