6000 ರೂ.ಗೆ 5.45 ಇಂಚಿನ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ 'ಹಾನರ್ ಪ್ಲೇ 7' !!
ಹಾನರ್ ಸಂಸ್ಥೆಯು ಹಾನರ್ ಪ್ಲೇ 7 ಅನ್ನುವ ಹೊಸ ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ನ್ನು ಚೈನಾದಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಕೂಡಿದೆ. ಹಾನರ್ ಪ್ಲೇ ಲೆವೆಲ್ ನ ಚೈನಾ ಬೆಲೆಯು 599 ಯೂವಾನ್ (6000 ರುಪಾಯಿ) ಆಗಿದೆ. ಈ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಈ ಬೆಲೆಗೆ ಕೈಗೆಟುವುದು ನಿಜಕ್ಕೂ ಆಶ್ಚರ್ಯವೇ ಸರಿ. 18:9 ಅನುಪಾತವಿರುವ ಡಿಸ್ಲೇ ಇರುವ ಸ್ಮಾರ್ಟ್ ಫೋನ್ ಈ ಬೆಲೆಗೆ ಹಾನರ್ ಸಂಸ್ಥೆಯು ಪರಿಚಯಿಸುವುತ್ತಿರುವ ಗ್ರಾಹಕನಿಗೆ ನಿಜವಾದ ಲಾಭವೇ ಸರಿ. VMall ಮೂಲಕ ಚೈನಾದಲ್ಲಿ ಸದ್ಯ ಈ ಫೋನ್ ಗಳು ಖರೀದಿಗೆ ಲಭ್ಯವಿದೆ. ಸದ್ಯಕ್ಕೆ ಭಾರತದಲ್ಲಿ ಈ ಫೋನಿನ ಲಭ್ಯತೆ ಅಥ್ವಾ ಮಾರುಕಟ್ಟೆಯ ಬಗ್ಗೆ ಯಾವುದೇ ವಿವರಗಳಿಲ್ಲ. ಹಾನರ್ ಕಂಪೆನಿಯು ಹಾನರ್7A ಮತ್ತು ಹಾನರ್ 7c ಯನ್ನು ಮೇ 22ಕ್ಕೆ ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ.

ಹಾನರ್ ಪ್ಲೇ 7 ಡಿಸೈನ್
ಹಾನರ್ ಪ್ಲೇ 7 ಲೋಹದ ರೀತಿಯ ಯುನಿಬಾಡಿ ಡಿಸೈನ್ ಹೊಂದಿದ್ದು, ಸ್ಮಾರ್ಟ್ ಫೋನಿನ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಆಂಟೆನ್ ಬ್ಯಾಂಡ್ ರೀತಿಯ ಡಿಸೈನ್ ನ್ನು ಹೊಂದಿದೆ. ಆದರೆ ಬೆರಳಚ್ಚಿನ ಸಂವೇದಕವನ್ನಾಗಲಿ ಇಲ್ಲವೇ ಮುಖವನ್ನು ಗುರುತಿಸುವ ಡೆಟೆಕ್ಟರ್ ಗಳನ್ನಾಗಲಿ ಹೊಂದಿಲ್ಲ. ಒಟ್ಟಾರೆಯಾಗಿ ನೋಡಲು ಉಳಿದೆಲ್ಲ ಹಾನರ್ ಕಂಪೆನಿಯ ಸರಣಿ ಮೊಬೈಲ್ ಗಳಂತೆಯೇ ಇದೂ ಕಾಣುತ್ತೆ. ಆ ಫೋನ್ 142 ಗ್ರಾಂ ತೂಕವಿದ್ದು,146.50x70.90x8.30mm ಉದ್ದಗಲವನ್ನು ಹೊಂದಿದೆ.
ಹಾನರ್ ಪ್ಲೇ 7 ವೈಶಿಷ್ಟ್ಯಗಳು
ಹಾನರ್ ಪ್ಲೇ 7 ನಲ್ಲಿ 5.45 ಇಂಚಿನ IPS LCD ಡಿಸ್ಲೇ ಇದ್ದು ಇದು HD+ ರೆಸೊಲ್ಯೂಷನ್ ನ್ನು ಹೊಂದಿದೆ. ಡಿಸ್ಲೇಯು 18:9 ಅನುಪಾತದಲ್ಲಿದ್ದು, ಡಿಸ್ಲೇಯ ಎರಡು ಬದಿಗಳಲ್ಲಿ ಕಿರಿದಾದ ಬಝೆಲ್ ನ್ನು ಹೊಂದಿದೆ. ಮೀಡಿಯಾ ಟೆಕ್ MT6739 Quad-Core ಚಿಪ್ ಸೆಟ್ 2ಜಿಬಿ ರ್ಯಾಂನೊಂದಿಗೆ ಪೇರ್ ಆಗಿದ್ದು 16 ಜಿಬಿ ಸ್ಟೋರೇಜ್ ಕೆಪಾಸಿಟಿ ಇದರಲ್ಲಿದೆ. ಮಿಕ್ರೋ ಎಸ್ ಡಿ ಕಾರ್ಡ್ ಮೂಲಕ 256ಜಿಬಿ ವರೆಗೆ ಬಳಕೆದಾರ ಅದನ್ನು ಎಕ್ಸ್ ಪಾಂಡ್ ಮಾಡಬಹುದು.
ಈ ಸ್ಮಾರ್ಟ್ ಫೋನ್ ನಲ್ಲಿ 13MP ಪ್ರೈಮರಿ ಕ್ಯಾಮರಾವಿದ್ದು,1080ಪಿ ವೀಡಿಯೋ ಮತ್ತು 5ಎಂಪಿ ಸೆಲ್ಫಿ ಕ್ಯಾಮರಾ ಸೌಲಭ್ಯವಿದೆ. ಆದರೆ ಫೇಸ್ ಅನ್ ಲಾಕ್ ಸಿಸ್ಟಮ್ ಇದರಲ್ಲಿಲ್ಲ. LTE,VoLte, ವೈಫ್, ಬ್ಯೂ ಟೂತ್ 4.2 ಎಲ್ ಇ ಕನೆಕ್ಷನ್ ಗಳಿಗೆ ಇದು ಸಹಾಯ ಮಾಡಲಿದೆ. 3.5ಎಮ್ ಎಮ್ ಹೆಡ್ ಫೋನ್ ಹಾಕಲು ಅವಕಾಶವಿದೆ. ಜೊತೆಗೆ ಎಫ್ ಎಂ ಸೌಲಭ್ಯವೂ ಇದೆ. ಹಾನರ್ ಪ್ಲೇ 7 ನಲ್ಲಿರುವುದು ನೂತನ ಆಂಡ್ರಾಯ್ಡ್ ಓರಿಯೋ 8.1 ವರ್ಷನ್ ಆಗಿದೆ. ಮತ್ತು ಕಸ್ಟಮ್ EMUI 8.1 ಟಾಪ್ ನಲ್ಲಿದೆ. 3020 mAH ಬ್ಯಾಟರಿ ಇದ್ದು, ಚಾರ್ಜಿಂಗ್ ಮತ್ತು ಡಾಟಾ ಸೈಕ್ರೋನೈಸೇಷನ್ ಗೆ ಮೈಕ್ರೋ ಯುಎಸ್ ಬಿ ಪೋರ್ಟ್ ಇದೆ.


Click it and Unblock the Notifications




