ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಎಮೋಜಿ ಸ್ಲೈಡರ್, ಪೋಲ್ಸ್, ಮ್ಯೂಸಿಕ್ ಸೇರಿಸುವುದು ಹೇಗೆ?
ಇನ್ಸ್ಟಾಗ್ರಾಂ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಈಗ ತಾನೆ ಅಂತರ್ಜಾಲ ಬಳಸಲು ಪ್ರಾರಂಭಿಸಿದ ಹುಡುಗರಿಂದ ಹಿಡಿದು ದೊಡ್ಡ ದೊಡ್ಡ ವ್ಯಕ್ತಿಗಳಿಗೂ ಕೂಡ ಇಷ್ಟದ ವೇದಿಕೆ. ಅದೇ ಕಾರಣಕ್ಕೆ ಸರಿಸುಮಾರು 400 ಮಿಲಿಯನ್ ಕ್ರಿಯಾಶೀಲ ಬಳಕೆದಾರರನ್ನು ಇನ್ಸ್ಟಾಗ್ರಾಂ ಹೊಂದಿದೆ.

ಇಷ್ಟು ದೊಡ್ಡ ಬಳಗವನ್ನು ಹೊಂದಿರುವ ಇನ್ಸ್ಟಾಗ್ರಾಂ ಪ್ರತಿದಿನ ಬಳಕೆದಾರರು ತಮ್ಮ ಫೋಟೋ, ವೀಡಿಯೋ ಮತ್ತು ಸ್ಟೋರಿಗಳನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಹೊಸ ಅವಕಾಶಗಳನ್ನು ತೆರೆದು, ಬಹುದೊಡ್ಡ ವೇದಿಕೆಯಾಗಿ ಜನಮನ್ನಣೆ ಪಡೆದಿದೆ. ಅದೇ ಕಾರಣಕ್ಕೆ ಅಂತರ್ಜಾಲ ಪ್ರಿಯರಿಗೆ ಇನ್ಸ್ಟಾಗಾಂ ಅಂದರೆ ಬಹಳ ಅಚ್ಚುಮೆಚ್ಚು.

ಮತ್ತಷ್ಟು ಹೊಸ ವೈಶಿಷ್ಟ್ಯ
ಕಳೆದ ಕೆಲವು ವಾರಗಳಿಂದೀಚೆಗೆ ಫೇಸ್ ಬುಕ್ ಮಾಲಿಕತ್ವದ ಇನ್ಸ್ಟಾಗ್ರಾಂ ಫೋಟೋ ಮತ್ತು ವೀಡಿಯೋ ಹಂಚಿಕೊಳ್ಳುವ ಸೇವೆಗೆ ಮತ್ತಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸಿರುವ ಬಗ್ಗೆ ಪ್ರಕಟಣೆ ನೀಡಿದೆ. ಅದುವೇ ಸ್ಟೋರೀಸ್ ವೈಶಿಷ್ಟ್ಯ.ಇದು ಎಮೋಜಿ ಸ್ಲೈಡರ್, ಎಸ್/ನೋ ಪೋಲ್ಸ್ ಗಳು, ಸ್ಟೋರಿ ಸೌಂಡ್ ಟ್ರ್ಯಾಕ್ ಗಳು ಮತ್ತು ಇತ್ಯಾದಿಗಳನ್ನು ಒಳಗೊಂಡಿದೆ.
ಹಾಗಾದ್ರೆ ಈ ಹೊಸ ವೈಶಿಷ್ಟ್ಯತೆಗಳು ಹೇಗೆ ಕೆಲಸ ಮಾಡುತ್ತದೆ.. ಇಲ್ಲಿದೆ ನೋಡಿ ನಿಮಗೆ ಸಂಪೂರ್ಣ ಮಾಹಿತಿ ಮತ್ತು ಇನ್ಸ್ಟಾಗ್ರಾಂ ಸ್ಟೋರೀಸ್ ನಲ್ಲಿ ಇದನ್ನು ಬಳಕೆ ಮಾಡುವುದು ಹೇಗೆ ಎಂಬ ಬಗೆಗಿನ ಹಂತಹಂತವಾಗಿ ತಿಳಿಸಿರುವ ಮಾಹಿತಿಗಳು. ನಿಮಗೂ ತಿಳಿಯಬೇಕಾ ಮುಂದೆ ಓದಿ...

ಎಮೋಸಿ ಸ್ಲೈಡರ್ ನ್ನು ಬಳಸಿ ಸೌಂಡ್ ಟ್ರ್ಯಾಕ್ ಸೇರಿಸಿ
1. ಇನ್ಸ್ಟಾಗ್ರಾಂ ಆಪ್ ನ್ನು ತೆರಿಯಿರಿ ಮತ್ತು ಆಪ್ನ ಮೇಲ್ಬಾಗದ ಎಡ ಬದಿಯಲ್ಲಿರುವ ಕ್ಯಾಮರಾ ಐಕಾನ್ ನ್ನು ಟ್ಯಾಪ್ ಮಾಡಿ.
2. ಹೊಸ ಚಿತ್ರವನ್ನು ಕ್ಯಾಪ್ಚರ್ ಮಾಡಿ ಇಲ್ಲವೇ ಈಗಾಗಲೇ ನಿಮ್ಮ ಗ್ಯಾಲರಿಯಲ್ಲಿರುವ ಚಿತ್ರವನ್ನು ಆಯ್ಕೆ ಮಾಡಿ.
3. ಈಗ, ಎಮೋಜಿ ಐಕಾನ್ ನ್ನು ಟ್ಯಾಪ್ ಮಾಡಿ.(ಎಡಭಾಗದಿಂದ ಮೂರನೇ ಐಕಾನ್ ಆಗಿರುತ್ತದೆ.) ಅಥವಾ ಎಮೋಜಿ ಪೆನಲ್ ನ್ನು ಸರಳವಾಗಿ ಸ್ವೈಪ್ ಮಾಡುವುದರಿಂದಾಗಿಯೂ ಕೂಡ ನೀವು ಕಾರ್ಯ ಮಾಡಬಹುದು.
4. ಎಮೋಜಿ ಸ್ಲೈಡರ್ ನ್ನು ಆಯ್ಕೆಯನ್ನು ಗಮನಿಸಿ ಮತ್ತು ನಿಮ್ಮ ಸ್ಟೋರಿಗೆ ಅದನ್ನು ಸೇರಿಸಲು ಟ್ಯಾಪ್ ಮಾಡಿ.
5. ಈಗ ನಿಮ್ಮ ಪ್ರಶ್ನೆಯನ್ನು ಟೈಪ್ ಮಾಡಿ ಮತ್ತು ಈಗ ನಿಮ್ಮ ಸ್ಲೈಡರ್ ಗೆ ಎಮೋಜಿಯನ್ನು ಆಯ್ಕೆ ಮಾಡಿ ಮತ್ತು ಪೋಸ್ಟ್ ಮಾಡಿ.

ಕಂಡಕ್ಟ್ ಪೋಲ್ಸ್ ಬಳಸಿ
1. ಇದನ್ನು ಸಾಧಿಸಲು ಕೂಡ ನೀವು ಮೊದಲು ಇನ್ಸ್ಟಾಗ್ರಾಂ ಆಪನ್ನು ತೆರೆಯಬೇಕು.
2. ಒಮ್ಮೆ ತೆರದ ನಂತರ,ಆಪ್ ನ ಮೇಲ್ಬಾಗದ ಎಡ ಬದಿಯಲ್ಲಿರುವ ಕ್ಯಾಮರಾ ಐಕಾನ್ ನ್ನು ಟ್ಯಾಪ್ ಮಾಡಿ.
3. ಹೊಸ ಚಿತ್ರವನ್ನು ತೆಗೆದುಕೊಳ್ಳಿ ಇಲ್ಲವೇ ಗ್ಯಾಲರಿಯಲ್ಲಿ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಿ.
4. ಇದಾದ ನಂತರ, ಎಮೋಜಿ ಐಕಾನ್ (ಬಲಭಾಗದಿಂದ ಮೂರನೇ ಐಕಾನ್) ನ್ನು ಟ್ಯಾಪ್ ಮಾಡಿ ಅಥವಾ ನೀವು ಎಮೋಜಿ ಪೆನಲ್ ನ್ನು ಸರಳವಾಗಿ ಸ್ವೈಪ್ ಮಾಡುವ ಮುಖಾಂತರವೂ ತೆರೆಯಬಹುದು. 5. ಪೋಲ್ಸ್ ಆಯ್ಕೆಯನ್ನು ಗಮನಿಸಿ ಮತ್ತು ನಿಮ್ಮ ಸ್ಟೋರಿಗೆ ಅದನ್ನು ಸೇರಿಸಲು ಟ್ಯಾಪ್ ಮಾಡಿ.
6. ನಿಮ್ಮ ಪ್ರಶ್ನೆಯನ್ನು ಟೈಪ್ ಮಾಡಿ ಮತ್ತು ನಿಮ್ಮ ಕ್ವೆರಿಯ ಜೊತೆಗೆ ಪ್ರತಿಕ್ರಿಯೆಯನ್ನು ಸಿನ್ಕ್ರನೈಸ್ ಮಾಡಬಹುದು.

ಸೌಂಡ್ ಟ್ರ್ಯಾಕ್ ಸೇರಿಸುವ ಹಂತಗಳು
1. ಇನ್ಸ್ಟಾಗ್ರಾಂ ಆಪ್ ನ ಮೇಲ್ಬಾಗದ ಎಡ ಬದಿಯಲ್ಲಿರುವ ಕ್ಯಾಮರಾ ಐಕಾನ್ ನ್ನು ಟ್ಯಾಪ್ ಮಾಡಿ.
2. ಹೊಸ ಚಿತ್ರವನ್ನು ತೆಗೆದುಕೊಳ್ಳಿ ಇಲ್ಲವೇ ಗ್ಯಾಲರಿಯಲ್ಲಿರುವ ಚಿತ್ರವನ್ನೇ ಆಯ್ಕೆ ಮಾಡಿಕೊಳ್ಳಿ .
3. ಈಗ, ಎಮೋಜಿ ಐಕಾನ್ ನ್ನು ಟ್ಯಾಪ್ ಮಾಡಿ,(ಬಲಬದಿಯಿಂದ ಮೂರನೇ ಐಕಾನ್ ) ಅಥವಾ ನೀವು ಎಮೋಜಿ ಪೆನಲ್ ನ್ನು ಸ್ವೈಪ್ ಮಾಡುವ ಮುಖಾಂತರ ಕೂಡ ಆಯ್ಕೆ ಮಾಡಿಕೊಳ್ಳಬಹುದು.
4. ಮ್ಯೂಸಿಕ್ ಆಯ್ಕೆಯನ್ನು ಗಮನಿಸಿ ಮತ್ತು ನಿಮ್ಮ ಸ್ಟೋರಿಗೆ ಸೇರಿಸಲು ಅದನ್ನು ಟ್ಯಾಪ್ ಮಾಡಿ. ಲೈಬ್ರರಿಯಿಂದ ನಿಮ್ಮ ಇಚ್ಛೆಗೆ ಅನುಸಾರವಾದ ಹಾಡನ್ನು ಸೇರಿಸಲು ಆಯ್ಕೆ ಮಾಡಿ.
5. ಒಮ್ಮೆ ಹಾಡನ್ನು ಆಯ್ಕೆ ಮಾಡಿದ ನಂತರ, ನೀವು ಅದನ್ನು ಫಾಸ್ಟ್ ಫಾರ್ವಡ್ ಅಥವಾ ರಿವೈಂಡ್ ಮಾಡಿ ಆಲಿಸಲು ಕೂಡ ಅವಕಾಶವಿರುತ್ತದೆ ಮತ್ತು ಹಾಡಿನ ಕೆಲವೇ ಭಾಗವನ್ನು ಕತ್ತರಿಸಿ ನಿಮ್ಮ ಸ್ಟೋರಿಯಲ್ಲಿ ಹಂಚಿಕೊಳ್ಳುವುದಕ್ಕೂ ಅವಕಾಶವಿರುತ್ತದೆ.


Click it and Unblock the Notifications





