Home
Apps

ಪ್ಲೇಸ್ಟೋರ್‌ನಲ್ಲಿ ನಕಲಿ ಅಥವಾ ಅಸಲಿ ಆಪ್‌ಗಳು ಯಾವುವು ಎಂದು ಕಂಡುಹಿಡಿಯುವುದು ಹೇಗೆ?

ಪ್ಲೇಸ್ಟೋರ್ ನಿಂದ ಆಪ್ ಗಳನ್ನು ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡುವ ಮೊದಲು ಅದು ಅಸಲಿಯೇ ಅಥವಾ ನಕಲಿಯೇ ಎಂದು ಗುರುತಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ.

By Tejaswini P G

ಹೊಸ ಮೊಬೈಲ್ ಖರೀದಿಸಿದ ತಕ್ಷಣ ನಾವು ಮಾಡುವ ಮೊದಲ ಕೆಲಸವೆಂದರೆ ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್ ನಿಂದ ನಮ್ಮ ನೆಚ್ಚಿನ ಆಪ್ಗಳನ್ನು ಇನ್ಸ್ಟಾಲ್ ಮಾಡುವುದು. ಅದು ಯುಟಿಲಿಟಿ ಆಪ್ಗಳಿರಬಹುದು, ಗೇಮ್ಗಳು, ಮೆಸೇಜಿಂಗ್ ಅಥವಾ ಇನ್ಯಾವುದೇ ಆಪ್ಗಳಾಗಿರಬಹುದು. ಪ್ಲೇಸ್ಟೋರ್ ನಲ್ಲಿ ಸಾಕಷ್ಟು ಆಪ್ಗಳಿದ್ದು, ಅದರಲ್ಲಿ ಹಲವು ನಕಲಿ ಆಪ್ಗಳು ಮತ್ತು ಮಾಲ್ವೇರ್ ಹೊಂದಿರುವ ಆಪ್ಗಳೂ ಇರಬಹುದು.

ಕೆಲವೊಮ್ಮೆ ನಕಲಿ ಆಪ್ಗಳು ಸೆಕ್ಯೂರಿಟಿ ಅಪ್ಡೇಟ್ ನ ವೇಷಹೊತ್ತು ನಮ್ಮ ದಿಕ್ಕು ತಪ್ಪಿಸುತ್ತದೆ. ಅವು ನೀಡುವ ಲಿಂಕ್ಗಳನ್ನು ಕ್ಲಿಕ್ ಮಾಡುವುದರಿಂದ ನಮ್ಮ ಸಾಧನದಿಂದ ನಮ್ಮ ಮಾಹಿತಿ ಕಳವಾಗುತ್ತದೆ. ನಕಲಿ ಆಪ್ ಅನ್ನು ಸೃಷ್ಟಿಸುವವರು ಅದನ್ನು ಖ್ಯಾತ ಆಪ್ಗಳಿಗೆ ಹೋಲುವಂತೆ ಸೃಷ್ಟಿಸುತ್ತಾರೆ. ಅದರ ವಿನ್ಯಾಸ, ಐಕಾನ್ , ಹೆಸರು ಇವೆಲ್ಲವೂ ಖ್ಯಾತ ಆಪ್ಗಳನ್ನು ಬಹುವಾಗಿ ಹೋಲುವಂತಿರುತ್ತದೆ. ಹೀಗಾಗಿ ನಾವು ತಿಳಿಯದೇ ಅವನ್ನು ಡೌನ್ಲೋಡ್ ಮಾಡುತ್ತೇವೆ. ಇತ್ತೀಚೆಗೆ ಗೂಗಲ್ ಪ್ಲೇಸ್ಟೋರ್ ಹಲವು ನಕಲಿ ಮತ್ತು ಹಾನಿಕಾರಕ ಆಪ್ಗಳನ್ನು ಹೊಂದಿರುವ ಸುದ್ದಿ ಜನರ ನೆಮ್ಮದಿ ಕೆಡಿಸಿತ್ತು.

ಪ್ಲೇಸ್ಟೋರ್‌ನಲ್ಲಿ ನಕಲಿ ಅಥವಾ ಅಸಲಿ ಆಪ್‌ಗಳು ಯಾವುವು ಎಂದು ಕಂಡುಹಿಡಿಯುವುದು ಹೇಗ

ನಮ್ಮ ಫೋನಿನ ಸುರಕ್ಷತೆಯ ದೃಷ್ಟಿಯಿಂದ ನಾವು ನಮ್ಮ ಮೊಬೈಲ್ನಲ್ಲಿ ಯಾವುದೇ ಆಪ್ ಇನ್ಸ್ಟಾಲ್ ಮಾಡುವ ಮೊದಲು ಜಾಗರೂಕರಾಗಿರಬೇಕು ಮತ್ತು ಆಪ್ಗಳನ್ನು ಸರಿಯಾಗಿ ವಿಶ್ಲೇಷಿಸಬೇಕು. ಈ ಲೇಖನದಲ್ಲಿ ನಾವು ಗೂಗಲ್ ಪ್ಲೇಸ್ಟೋರ್ ನಲ್ಲಿರುವ ನಕಲಿ ಆಪ್ಗಳನ್ನು ಪತ್ತೆಹಚ್ಚುವುದು ಹೇಗೆಂಬುದನ್ನು ವಿವರಿಸಿದ್ದೇವೆ.

1.ಯಾವುದೇ ಆಪ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು ಅದರ ಡೆವೆಲಪರ್ಗಳ ಕುರಿತು ಒಂದಷ್ಟು ಸಂಶೋಧನೆ ನಡೆಸಿ. ಪ್ಲೇಸ್ಟೋರ್ ನಲ್ಲಿ ಆಪ್ ನಲ್ಲಿಯೇ ಡೆವೆಲಪರ್ಗಳ ಹೆಸರು ಸೂಚಿಸಿರುತ್ತದೆ. ಡೆವೆಲಪರ್ ಒಂದುವೇಳೆ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದಲ್ಲಿ ಅವರು ಸ್ವಂತ ವೆಬ್ಸೈಟ್ ಹೊಂದಿರುತ್ತಾರೆ ಅಥವಾ ಇಂಟರ್ನೆಟ್ನಲ್ಲಿ ಪರೀಶೀಲಿಸಬಹುದಾದ ಮಾಹಿತಿಗಳು ಲಭ್ಯವಿರುತ್ತದೆ.

2. ನೀವು ಆಪ್ ನ ವಿವರಣೆಯನ್ನು ಗಮನವಿಟ್ಟು ಓದಿದರೆ ನೀವು ನಿಮ್ಮ ತಿಳುವಳಿಕೆಯಿಂದ ಆಪ್ ಅಸಲಿಯೇ ಅಥವಾ ನಕಲಿಯೇ ಎಂದು ಪತ್ತೆಹಚ್ಚಬಹುದು. ಆಪ್ ಅನ್ನು ಇನ್ಸ್ಟಾಲ್ ಮಾಡುವಾಗ ಅದು ಕೇಳುವ ಅನುಮತಿಗಳು ಅದರ ಫೀಚರ್ಗಳಿಗೆ ಅಥವಾ ಕಾರ್ಯವೈಖರಿಗೆ ಸರಿಹೊಂದುವಂತಿರಬೇಕು.

3.ನೀವು ನೆನಪಿನಲ್ಲಡಬೇಕಾದ ವಿಷಯವೆಂದರೆ ನೈಜ ಡೆವಲಪರ್ ಗಳು ನಿಮಗೆ ಉಪಯೋಗವಾಗುವಂತಹ ಆಪ್ಗಳನ್ನು ಸೃಷ್ಟಿಸುತ್ತಾರೆಯೇ ಹೊರತು ಜಾಹೀರಾತು ಆಥವಾ ಲಿಂಕ್ಗಳನ್ನು ಕ್ಲಿಕ್ ಮಾಡುವಂತೆ ಪ್ರೇರೇಪಿಸುವ ಹಾನಿಕಾರಕ ಮೊಬೈಲ್ ವೆಬ್ಸೈಟ್ಗಳನ್ನಲ್ಲ.

4. ನೀವು ಯಾವುದಾದರೂ ಖ್ಯಾತ ಆಪ್ ಅನ್ನು ಡೌನ್ಲೋಡ್ ಮಾಡುತ್ತಿದ್ದರೆ, ಆ ಆಪ್ ಎಷ್ಟು ಬಾರಿ ಡೌನ್ಲೋಡ್ ಆಗಿದೆಯೆಂಬ ಸಂಖ್ಯೆಯತ್ತ ಗಮನಹರಿಸಿ. ಡೌನ್ಲೋಡ್ ಸಂಖ್ಯೆ ಕಡಿಮೆ ಇದ್ದಲ್ಲಿ ಅದು ನಕಲಿ ಆಪ್ ಆಗಿರುವ ಸಾಧ್ಯತೆ ಹೆಚ್ಚು.

5. ಆಪ್ ನ ವಿವರಣೆಗಳನ್ನು ಓದಿದ ನಂತರ ಎಲ್ಲವೂ ಸರಿಯಾಗಿದೆ ಎಂದು ನಿಮಗೆ ಅನಿಸಿದರೆ, ನಂತರ ಅದರ ರಿವ್ಯೂ ಅಥವಾ ವಿಮರ್ಶೆಗಳತ್ತ ಗಮನಹರಿಸಿ. ನಕಲಿ ಆಪ್ಗಳು ನಕಲಿ ವಿಮರ್ಶೆಗಳನ್ನು ಹೊಂದಿರುತ್ತವೆಯಾದರೂ ಅದನ್ನು ಇನ್ಸ್ಟಾಲ್ ಮಾಡಿದ ನಂತರ ಅದು ನಕಲಿಯೆಂದು ಅರಿವಾದವರ ನೈಜ ವಿಮರ್ಶೆಗಳೂ ಅಲ್ಲಿರುತ್ತವೆ.

6. ಆಪ್ ಬಗ್ಗೆ ನಿಮಗೆ ವಿಶ್ವಾಸವಿಲ್ಲದಿದ್ದರೆ ಅದನ್ನು ಇನ್ಸ್ಟಾಲ್ ಮಾಡಬೇಡಿ. ಆಪ್ ಕುರಿತು ಸಂಶಯವಿದ್ದರೆ ಅದನ್ನು ಇನ್ಸ್ಟಾಲ್ ಮಾಡುವ ಮುನ್ನ ಆ ಕುರಿತು ಒಂದಷ್ಟು ಸಂಶೋಧನೆ ನಡೆಸಿ.

7.ಒಂದು ವೇಳೆ ನೀವು ನಕಲಿ ಆಪ್ ಅನ್ನು ಗುರುತಿಸುವಲ್ಲಿ ಸಫಲಾರದರೆ ಆ ಪುಟದ ಕೆಳಕ್ಕೆ ಸ್ಕ್ರೋಲ್ ಮಾಡಿ "ಫ್ಲ್ಯಾಗ್ ಆಸ್ ಇನ್-ಆಪ್ರಾಪ್ರಿಯೇಟ್" ಮೇಲೆ ಕ್ಲಿಕ್ ಮಾಡುವ ಮೂಲಕ ಅದು ನಕಲಿ ಎಂದು ವರದಿಮಾಡಿ. ಅದನ್ನು ಕ್ಲಿಕ್ ಮಾಡಿದ ನಂತರ ಅದನ್ನು ನಕಲಿ ಎಂದು ಏಕೆ ನಿರ್ಧರಿಸಿದ್ದೀರಿ ಎಂಬುದರ ಕಾರಣವನ್ನು ನೀಡಿ.

Best Mobiles in India

English summary
How to check if apps are fake in the Play Store?to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+