ವಾಟ್ಸ್‌ಆಪ್‌ನಲ್ಲಿ ಬೇಡದ ಫೋಟೋಗಳನ್ನು ಡಿಲೀಟ್ ಮಾಡುವುದು ಹೇಗೆ?

ಹಲವು ವಾಟ್ಸಾಪ್ ಗ್ರೂಪ್ಗಳಿಂದ ಸಾಕಷ್ಟು ಫಾರ್ವರ್ಡ್ಗಳು, ಮೀಮ್ ಗಳು ನಮ್ಮ ಮೊಬೈಲ್ ಗೆ ಬಂದು ಮೊಬೈಲ್ನಲ್ಲಿ ಅನಗತ್ಯ ಫೈಲ್ ಗಳು ಸಂಗ್ರಹವಾಗುತ್ತದೆ. ಆಗಾಗ ಗ್ಯಾಲರಿಯನ್ನು ಪರೀಶೀಲಿಸುತ್ತಾ ಬೇಡದ ಮೆಸೇಜ್ಗಳನ್ನು ಡಿಲೀಟ್ ಮಾಡುವುದು ತ್ರಾಸದಾಯಕ!!

By Tejaswini P G
|

ವಾಟ್ಸಾಪ್ ಮೂಲಕ ಮೊಬೈಲ್ ನಲ್ಲಿ ತುಂಬುವ ಬೇಡದ ಫೈಲ್ಗಳನ್ನು ಪರಿಶೀಲಿಸಿ ಡಿಲೀಟ್ ಮಾಡಲು ಹಲವು ಆಪ್ಗಳ ಲಭ್ಯವಿದ್ದು ಈ ಲೇಖನದಲ್ಲಿ ಸಿಫ್ಟರ್ ಮ್ಯಾಜಿಕ್ ಕ್ಲೀನರ್ ಮತ್ತು ಸ್ಟ್ಯಾಶ್ ಜಂಕ್ ಫೋಟೋ & ವೀಡಿಯೋ ಕ್ಲೀನರ್ ಆಪ್ಗಳ ಕುರಿತು ಮಾಹಿತಿ ನೀಡಲಾಗಿದೆ.

ಹಲವು ವಾಟ್ಸಾಪ್ ಗ್ರೂಪ್ಗಳಿಂದ ಸಾಕಷ್ಟು ಫಾರ್ವರ್ಡ್ಗಳು, ಮೀಮ್ ಗಳು ನಮ್ಮ ಮೊಬೈಲ್ ಗೆ ಬಂದು ಮೊಬೈಲ್ನಲ್ಲಿ ಅನಗತ್ಯ ಫೈಲ್ ಗಳು ಸಂಗ್ರಹವಾಗುತ್ತದೆ. ಆಗಾಗ ಗ್ಯಾಲರಿಯನ್ನು ಪರೀಶೀಲಿಸುತ್ತಾ ಬೇಡದ ಮೆಸೇಜ್ಗಳನ್ನು ಡಿಲೀಟ್ ಮಾಡುವುದು ತ್ರಾಸದಾಯಕ ಕೆಲಸ. ಒಂದು ವೇಳೆ ವಾಟ್ಸಾಪ್ ನ ಆಟೋ-ಡೌನ್ಲೋಡ್ ಸೌಲಭ್ಯವನ್ನು ಬಳಸಿದರೆ ನಾವು ಯಾವುದಾದರೂ ಮುಖ್ಯವಾದ ಫೈಲ್ ಅನ್ನು ಮಿಸ್ ಮಾಡುವ ಸಾಧ್ಯತೆಯಿದೆ.

ವಾಟ್ಸ್‌ಆಪ್‌ನಲ್ಲಿ ಬೇಡದ ಫೋಟೋಗಳನ್ನು ಡಿಲೀಟ್ ಮಾಡುವುದು ಹೇಗೆ?

ನೀವು ಇತ್ತೀಚಿನ ಮಾಹಿತಿಗಳನ್ನು ತಪ್ಪದೇ ಪಡೆಯಬೇಕು ಆದರೆ ಅನಗತ್ಯ ಮೆಸೇಜ್ಗಳನ್ನು ದೂರವಿರಿಸಬೇಕೆಂದು ಬಯಸಿದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲ ಆಪ್ಗಳ ಪ್ರಯೋಜನ ಪಡೆಯುವುದು ಉತ್ತಮ ಉಪಾಯವಾಗಿದೆ.

ಸಿಫ್ಟರ್ ಮ್ಯಾಜಿಕ್ ಕ್ಲೀನರ್

ಇಮೇಜ್ ರೆಕಗ್ನಿಶನ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳನ್ನು ಬಳಸುವ ಸಿಫ್ಟರ್ ಆಪ್ ನಿಮ್ಮ ಗ್ಯಾಲರಿಯಲ್ಲಿರುವ ಪೋಟೋಗಳನ್ನು ಪರಿಶೀಲಿಸುತ್ತಾ ಫೋಟೋಗಳ ನಕಲು ಪ್ರತಿಗಳನ್ನು, ಮೀಮ್, ಫಾರ್ವರ್ಡ್ ಮತ್ತು ಕಾಮಿಕ್ಗಳನ್ನು ಪತ್ತೆಹಚ್ಚುತ್ತದೆ.

ಈ ಆಪ್ ಅನ್ನು ಬಳಸುವುದು ತುಂಬಾ ಸರಳ. ಈ ಆಪ್ ಅನ್ನು ತೆರದು ನಂತರ ಅದರ ಎನಲಿಟಿಕ್ಸ್ ಅನ್ನು ಓಡಿಸಿದರಾಯಿತು. ಸಿಫ್ಟರ್ ಮ್ಯಾಜಿಕ್ ಕ್ಲೀನರ್ ಬ್ಯಾಚ್ ಗಳಲ್ಲಿ ವಿಶ್ಲೇಷಣೆಯನ್ನು ನಡೆಸಿ ಫಲಿತಾಂಶವಾಗಿ ನಿಮ್ಮ ಮೊಬೈಲ್ನಲ್ಲಿರುವ ಜಂಕ್ ಡೇಟಾದ ವಿವರವನ್ನು ನಿಮ್ಮ ಮುಂದಿರಿಸುತ್ತದೆ.

ವಾಟ್ಸ್‌ಆಪ್‌ನಲ್ಲಿ ಬೇಡದ ಫೋಟೋಗಳನ್ನು ಡಿಲೀಟ್ ಮಾಡುವುದು ಹೇಗೆ?


ಈ ಪೂರ್ತಿ ಪ್ರಕ್ರಿಯೆ ಪೂರ್ಣಗೊಳ್ಳಲು ಐದರಿಂದ ಹದಿನೈದು ನಿಮಿಷಗಳು ಬೇಕಾಗಬಹುದು. ಈ ಪ್ರಕ್ರಿಯೆ ಹಿನ್ನಲೆಯಲ್ಲಿ ಕೂಡ ನಡೆಯಬಹುದು. ಈ ವಿಶ್ಲೇಷಣೆ ಪೂರ್ಣವಾದ ಬಳಿಕ ಡಿಲೀಟ್ ಆಗಲು ಆಯ್ಕೆಯಾಗಿರುವ ಫೈಲ್ಗಳ ಪಟ್ಟಿಯನ್ನು ನಿಮ್ಮ ಮುಂದಿರಿಸಲಾಗುತ್ತದೆ. ಈ ಪಟ್ಟಿಯನ್ನು ಪರಿಶೀಲಿಸಿ ನೀವು ಇರಿಸಿಕೊಳ್ಳಲು ಇಚ್ಛಿಸುವ ಫೈಲ್ಗಳನ್ನು ಅನ್ಚೆಕ್ ಮಾಡಬಹುದು.

ಸ್ಟ್ಯಾಶ್ ಜಂಕ್ ಫೋಟೋ & ವೀಡಿಯೋ ಕ್ಲೀನರ್

ಸ್ಟ್ಯಾಶ್ ಜಂಕ್ ಫೋಟೋ & ವೀಡಿಯೋ ಕ್ಲೀನರ್ ನ ಮುಖ್ಯ ಫೀಚರ್ಗಳ ಪೈಕಿ ಅದರ ಅತಿ ವೇಗದ ಕೃತಕ ಬುದ್ಧಿಮತ್ತೆಯೇ ಪ್ರಮುಖವಾಗಿದೆ. ಸಿಫ್ಟರ್ ನಂತೆ ಈ ಆಪ್ ಕೂಡ ಇಮೇಜ್ಗಳನ್ನು ಬ್ಯಾಚ್ ಅಥವಾ ಗುಂಪುಗಳಲ್ಲಿ ಪ್ರಾಸೆಸ್ ಮಾಡುತ್ತದೆ.

How to save WhatsApp Status other than taking screenshots!! Kannada

ಇಮೇಜ್ಗಳನ್ನು ವಿಶ್ಲೇಷಿಸಿ ಬೇಡವಾದ ಇಮೇಜ್ಗಳನ್ನು ಪಟ್ಟಿಮಾಡಿದ ನಂತರ 'ಕ್ಲೀನ್ ವಾಟ್ಸಾಪ್ ಜಂಕ್' ಮೇಲೆ ಕ್ಲಿಕ್ ಮಾಡುವ ಮೂಲಕ ಬೇಡದ ಫೈಲ್ಗಳೆಲ್ಲವನ್ನೂ ಡಿಲೀಟ್ ಮಾಡಬಹುದು.

ವಾಟ್ಸ್‌ಆಪ್‌ನಲ್ಲಿ ಬೇಡದ ಫೋಟೋಗಳನ್ನು ಡಿಲೀಟ್ ಮಾಡುವುದು ಹೇಗೆ?


ಸ್ಟ್ಯಾಶ್ ಆಪ್ ನ ಮತ್ತೊಂದು ವಿಶೇಷತೆಯೆಂದರೆ ಅದು ಒಂದು ಅನನ್ಯ ಗಳಿಕೆಯ ವ್ಯವಸ್ಥೆಯನ್ನು ಹೊಂದಿದ್ದು ಒಂದು ಗೇಮ್ ನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಆಪ್ ಅನ್ನು ಬಳಸಿದಾಗಲೆಲ್ಲಾ ನೀವು ನಿರ್ದಿಷ್ಟ ಮೊತ್ತದ ನಾಣ್ಯಗಳನ್ನು ಸಂಪಾದಿಸುತ್ತೀರಿ. ಫೈಲ್ಗಳ ನಕಲಿ ಪ್ರತಿಗಳನ್ನು ನಿರ್ಮೂಲನೆ ಮಾಡಲು ನಿಮಗೆ 50 ನಾಣ್ಯಗಳು ಬೇಕಾಗಬಹುದು. ಆದರೆ ಒಂದು ಬಾರಿ ಕ್ಲೀನಪ್ ಅನ್ನು ಮಾಡುವ ಮೂಲಕ ನೀವು 500 ನಾಣ್ಯಗಳನ್ನು ಸಂಪಾದಿಸುತ್ತೀರಿ.

ಈ ಆಪ್ ನ ಮತ್ತೊಂದು ಉಪಯುಕ್ತ ಫೀಚರ್ ಎಂದರೆ ನೀವು ಈಗಾಗಲೇ ಡಿಲೀಟ್ ಮಾಡಿರುವ ಫೈಲ್ಗಳನ್ನು ಮತ್ತೆ ಆಕ್ಸೆಸ್ ಮಾಡಬಹುದಾಗಿದ್ದು , ನೀವು ಬಯಸಿದರೆ ಅವನ್ನು ಮತ್ತೆ ಹಿಂಪಡೆಯಬಹುದಾಗಿದೆ. ಹಾಗಾಗಿ ನೀವು ಯಾವುದಾದರೂ ಫೈಲ್ ಅನ್ನು ತಪ್ಪಿ ಡಿಲೀಟ್ ಮಾಡಿದ್ದರೆ ಕೇವಲ ಒಂದು ಕ್ಲಿಕ್ ನ ಮೂಲಕ ಅದನ್ನು ಹಿಂಪಡೆಯಬುದು. ನೀವು ಡಿಲೀಟ್ ಮಾಡಿರುವ ಫೈಲ್ಗಳನ್ನು ಈ ಆಪ್ 10 ದಿನಗಳ ಕಾಲ ತನ್ನಲ್ಲಿ ಉಳಿಸಿಕೊಂಡಿರುತ್ತದೆ. ಆಪ್ ನ ಮೇಲ್ಭಾಗದಲ್ಲಿ ಬಲಬದಿಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಟ್ರ್ಯಾಶ್ ಅನ್ನು ಆಕ್ಸೆಸ್ ಮಾಡಬಹುದಾಗಿದ್ದು ನಿಮಗೆ ಬೇಕಾದ ಫೈಲ್ಗಳನ್ನು ಹಿಂಪಡೆಯಬಹುದು.

Best Mobiles in India

English summary
How to delete unwanted photos on WhatsApp. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X