ನಿಮ್ಮ ವಾಟ್ಸ್ ಆಪ್ ನಂಬರ್ ಬ್ಲಾಕ್ ಆಗಿದ್ದರೆ ತಿಳಿದುಕೊಳ್ಳುವುದು ಹೇಗೆ..?
ಇಂದು ವಾಟ್ಸ್ ಆಪ್ ಮೆಸೆಂಜರ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ವಾಟ್ಸ್ ಆಪ್ ಎನ್ನುವುದು ಮನುಷ್ಯನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಹಿರಿಯರಿಂದ ಹಿಡಿದು ಕಿರಿಯರವರೆಗೂ ಸಹ ವಾಟ್ಸ್ ಆಪ್ ಬಳಕೆ ಮಾಡುತ್ತಿದ್ದಾರೆ. ಅದೇನೆ ಇರಲಿ ಈಗ ನಿಮ್ಮ ವಾಟ್ಸ್ ಆಪ್ ನಂಬರನ್ನು ಯಾರಾದ್ರು ಬ್ಲಾಕ್ ಮಾಡಿದ್ದರೆ ಅದನ್ನು ತಿಳಿಯುವ ಸುಲಭ ಉಪಾಯೊಂದಿದೆ. ಆ ಉಪಾಯ ಯಾವುದು ಎಂದು ತಿಳಿಯಲು ಮುಂದೆ ಓದಿರಿ..

- ವಾಟ್ಸ್ ಆಪ್ ಓಪನ್ ಮಾಡಿ ಮೇಲಿರುವ ಮೂರು ಡಾಟಾಗಳ ಆಯ್ಕೆ ಮೇಲೆ ಕ್ಲಿಕ್ಕಿಸಿ.
- ಅವಾಗ ಹೊಸ ಗ್ರೂಪ್ ವೊಂದನ್ನು ತೆರೆಯುವ ಅವಕಾಶ ಇರುತ್ತದೆ.
- ಅಲ್ಲಿ ಕ್ಲಿಕ್ ಮಾಡಿದರೆ ಹೊಸ ಗ್ರೂಪ್ ಗೆ ಹೆಸರು ಬರೆಯುವ ಜಾಗ ಕಾಣ ಸಿಗುತ್ತದೆ.
- ಹೊಸ ಹೆಸರು ನಮೂದಿಸಿದ ಮೇಲೆ ನೆಕ್ಸ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಆಗ ನಿಮಗೆ ಹೊಸ ಸದಸ್ಯರನ್ನು ಸೇರಿಸುವ ಅವಕಾಶ ಇರುತ್ತದೆ.
- ಆಗ ನಿಮ್ಮನ್ನು ಬ್ಲಾಕ್ ಮಾಡದವರ ಹೆಸರನ್ನು ಕಂಡುಹಿಡಿದುಕೊಳ್ಳಬಹುದು. ಪ್ಲಸ್ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಅವರ ನಂಬರನ್ನು ಸಹ ಸೇರಿಸಿಕೊಳ್ಖಬಹುದು.
- ಹಾಗೆ ನೀವು ಆಯ್ಕೆ ಮಾಡಿದ ವ್ಯಕ್ತಿ ಗ್ರೂಪ್ ಸದಸ್ಯನಾಗುತ್ತಾನೆ.
- ನೀವು ತೆಗೆದುಕೊಂಡ ನಂಬರ್ ಮೇಲೆ ಮಾಡಿ ಕ್ರೀಯೆಟ್ ಅಂತ ಹೇಳಿದರೆ ಹೊಸ ಗ್ರೂಪ್ ಆರಂಭವಾಗುತ್ತದೆ.
- ಕ್ರೀಯೆಟ್ ಮಾಡಿದ ಗ್ರೂಪ್ ಗೆ ನೀವು ತೆಗೆದುಕೊಂಡ ಸೇರದಿದ್ದರೆ ಅವರು ನಿಮ್ಮನ್ನು ಬ್ಲಾಕ್ ಲಿಸ್ಟ್ ನಲ್ಲಿ ಇಟ್ಟಿದ್ದಾರೆ ಎಂದು ಗೊತ್ತಾಗುತ್ತದೆ.


Click it and Unblock the Notifications








