Home
Apps

ನಿಮ್ಮ ಪೆನ್‌ಡ್ರೈವ್ ಡೇಟಾ ವರ್ಗಾವಣೆಯ ವೇಗ ಹೆಚ್ಚಿಸುವುದು ಹೇಗೆ?

ಎಲ್ಲಾ USB ಸಾಧನಗಳು ಒಂದೇ ತೆರನಾಗಿ ಕೆಲಸಮಾಡುತ್ತದೆಯೆಂದು ನೀವು ತಿಳಿದಿದ್ದರೆ ಅದು ನಿಜವಲ್ಲ. USB ಸಾಧನಗಳು ಎರಡು ರೀತಿಯದ್ದಾಗಿದೆ. ಒಂದು USB 2.0 ಆಗಿದ್ದು ಅದು 35 Mbps ಡೇಟಾ ವರ್ಗಾವಣೆಯ ವೇಗ ಹೊಂದಿದೆ.

By Tejaswini P G

ಎಲ್ಲಾ USB ಸಾಧನಗಳು ಒಂದೇ ತೆರನಾಗಿ ಕೆಲಸಮಾಡುತ್ತದೆಯೆಂದು ನೀವು ತಿಳಿದಿದ್ದರೆ ಅದು ನಿಜವಲ್ಲ. USB ಸಾಧನಗಳು ಎರಡು ರೀತಿಯದ್ದಾಗಿದೆ. ಒಂದು USB 2.0 ಆಗಿದ್ದು ಅದು 35 Mbps ಡೇಟಾ ವರ್ಗಾವಣೆಯ ವೇಗ ಹೊಂದಿದೆ. ಮತ್ತೊಂದು USB 3.0 ಆಗಿದ್ದು ಅದರ ಡೇಟಾ ವರ್ಗಾವಣೆಯ ವೇಗ 625 Mbps ಆಗಿದೆ.

ನಿಮ್ಮ ಬಳಿ ಇರುವ USB ಸಾಧನ ನೀವು ಮೂರು ವರ್ಷಗಳ ಹಿಂದೆ ಖರೀದಿಸಿದ್ದಾಗಿದ್ದರೆ ಅದು USB 2.0 ಆಗಿರುವ ಸಾಧ್ಯತೆ ಹೆಚ್ಚಿದೆ. ಅಧಿಕ ಮೊತ್ತದ ಡೇಟಾ ವರ್ಗಾವಣೆ ಮಾಡುವಾಗ ಈ USB ಸಾಧನದ ನಿಧಾನ ಗತಿಯ ಡೇಟಾ ವರ್ಗಾವಣೆಯಿಂದ ನೀವು ಬೇಸತ್ತುಹೋಗಿದ್ದೀರಾ? ನೀವು ನಿಮ್ಮ USB ಸಾಧನದ ವರ್ಗಾವಣೆಯ ವೇಗವನ್ನು ತೀವ್ರವಾಗಿ ಹೆಚ್ಚಿಸಲು ಸಾಧ್ಯವಿಲ್ಲವಾದರೂ ಈ ಕೆಳಗಿನ ವಿಧಾನವನ್ನು ಅನುಸರಿಸಿದರೆ ತಕ್ಕ ಮಟ್ಟಿಗೆ ಸುಧಾರಣೆಯನ್ನು ತರಬಹುದು.

ನಿಮ್ಮ ಪೆನ್ಡ್ರೈವ್ ನ ಡೇಟಾ ವರ್ಗಾವಣೆಯ ವೇಗ ಹೆಚ್ಚಿಸುವುದು ಹೇಗೆ?

ಪೆನ್ಡ್ರೈವ್ ನ ಡೇಟಾ ವರ್ಗಾವಣೆಯ ವೇಗವನ್ನು ಹೆಚ್ಚಿಸುವ ವಿಧಾನಗಳು

ನಿಮ್ಮ ಪೆನ್ಡ್ರೈವ ನ ಡೇಟಾ ವರ್ಗಾವಣೆಯ ವೇಗವನ್ನು ನಿರ್ಧರಿಸುವ ಹಲವು ಅಂಶಗಳ ಪೈಕಿ ಪೆನ್ಡ್ರೈವ್ ನ ಫೈಲ್ ಅಲೊಕೇಶನ್ ಟೇಬಲ್, ಸಾಧನದ ಪಾಲಿಸಿ, ಫೈಲ್ ನ ವಿಧಗಳು, ಓಎಸ್ ಮತ್ತು ಹಾರ್ಡ್ವೇರ್ ನ ಕಾರ್ಯಕ್ಷಮತೆ ಮುಖ್ಯ ಪಾತ್ರವಹಿಸುತ್ತದೆ. ಕೆಲವು ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡುವ ಮೂಲಕ ಈ ಅಂಶಗಳಲ್ಲಿ ಸುಧಾರಣೆಗಳನ್ನು ತಂದು ಪೆನ್ಡ್ರೈವ್ ನ ಡೇಟಾ ವರ್ಗಾವಣೆಯ ವೇಗವನ್ನು ಹೆಚ್ಚಿಸಬಹುದಾಗಿದೆ.

ನಿಮ್ಮ ಪೆನ್ಡ್ರೈವ್ ನ ಡೇಟಾ ವರ್ಗಾವಣೆಯ ವೇಗ ಹೆಚ್ಚಿಸುವುದು ಹೇಗೆ?

ವಿಧಾನ 1: ನಿಮ್ಮ ಫೈಲ್ ಅಲೊಕೇಶನ್ ಟೇಬಲ್ ಅನ್ನು ಫಾರ್ಮ್ಯಾಟ್ ಮಾಡಿ

ನಿಮ್ಮ ಪೆನ್ಡ್ರೈವ್ ನಲ್ಲಿ ಸಂಗ್ರಹವಾಗಿರುವ ಡೇಟಾದ ಮೆಮೋರಿ ಅಲೋಕೇಶನ್ ನ ಹೊಣೆ ಫೈಲ್ ಅಲೋಕೇಶನ್ ಟೇಬಲ್ನದ್ದಾಗಿದೆ. ಈ ಟೇಬಲ್ ಅನ್ನು ಡಿಲೀಟ್ ಮಾಡುವ ಮೂಲಕ ವರ್ಗಾವಣೆಯ ವೇಗವನ್ನು ಹೆಚ್ಚಿಸಬಹುದು. ನಿಮ್ಮ ಪೆನ್ಡ್ರೈವ್ ನ ಫೈಲ್ ಅಲೊಕೇಶನ್ ಟೇಬಲ್ ಅನ್ನು ಫಾರ್ಮ್ಯಾಟ್ ಮಾಡಲು ಈ ಕೆಳಗಿನ ಸೂಚನೆಗಳನ್ನು ಪಾಲಿಸಿ.

ಹಂತ 1: ನಿಮ್ಮ ಪೆನ್ಡ್ರೈವ್ ಅನ್ನು ಕಂಪ್ಯೂಟರ್ ಗೆ ಜೋಡಿಸಿ

ಹಂತ 2: 'ಮೈ ಕಂಪ್ಯೂಟರ್' ತೆರದು ಡ್ರೈವ್ ನ ಮೇಲೆ ರೈಟ್ ಕ್ಲಿಕ್ ಮಾಡಿ.

ಹಂತ 3: ನಂತರ 'ಪ್ರಾಪರ್ಟೀಸ್' ಮೇಲೆ ಕ್ಲಿಕ್ ಮಾಡಿ 'ಫಾರ್ಮ್ಯಾಟ್' ಅನ್ನು ಆಯ್ಕೆಮಾಡಿ

ಹಂತ 4: ನಂತರ 'ಫೈಲ್ ಸಿಸ್ಟಮ್' ನ ಡ್ರಾಪ್ ಡೌನ್ ಮೆನು ತೆರೆದು 'NTFS' ಆಯ್ಕೆ ಮಾಡಿ

ಹಂತ 5: ಈಗ ಫರ್ಮ್ಯಾಟ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಪೆನ್ಡ್ರೈವ್ ನ ಡೇಟಾ ವರ್ಗಾವಣೆಯ ವೇಗ ಹೆಚ್ಚಿಸುವುದು ಹೇಗೆ?

ಈಗ ನಿಮ್ಮ ಪೆನ್ಡ್ರೈವ್ ಹಿಂದಿಗಿಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಡೇಟಾ ಅಲೊಕೇಶನ್ ಟೇಬಲ್ ಅನ್ನು ಫಾರ್ಮ್ಯಾಟ್ ಮಾಡುವ ಮೊದಲು ನಿಮ್ಮ ಡೇಟಾ ದ ಬ್ಯಾಕಪ್ ತೆಗೆದಿರಿಸಲು ಮರೆಯದಿರಿ.


ವಿಧಾನ 2: USB ಸಾಧನದ ಪಾಲಿಸಿಗಳಲ್ಲಿ ಬದಲಾವಣೆ ಮಾಡಿ

ನಿಮ್ಮ USB ಸಾಧನದ ಪಾಲಿಸಿಯಲ್ಲಿ ಬದಲಾವಣೆ ಮಾಡುವ ಮೂಲಕ ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು. ಈ ಕೆಳಗೆ ನೀಡಿರುವ ಸೂಚನೆಗಳನ್ನು ಅನುಸರಿಸುವ ಮೂಲಕ ನಿಮ್ಮ ಪೆನ್ಡ್ರೈವ್ ನ ವೇಗ ಹೆಚ್ಚುತ್ತದೆ. ಈ ವಿಧಾನದ ಮೊದಲೆರಡು ಹಂತಗಳನ್ನು ಮೇಲೆ ಹೇಳಿರುವ ವಿಧಾನದಿಂದ ಅಳವಡಿಸಿಕೊಳ್ಳಿ. ನಾವು ಈ ವಿಭಾಗದಲ್ಲಿ ಮೂರನೇ ಹಂತದಿಂದ ಪ್ರಾರಂಭಿಸಿ ನಂತರದ ಸೂಚನೆಗಳನ್ನು ನೀಡಿದ್ದೇವೆ.

ಹಂತ 1: 'ಪ್ರಾಪರ್ಟೀಸ್' ಆಯ್ಕೆ ಮಾಡಿ 'ಹಾರ್ಡ್ವೇರ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ನಿಮ್ಮ ಪೆನ್ಡ್ರೈವ್ ನ ಡೇಟಾ ವರ್ಗಾವಣೆಯ ವೇಗ ಹೆಚ್ಚಿಸುವುದು ಹೇಗೆ?

ಹಂತ 2: ಈಗ ನಿಮ್ಮ ಪರದೆಯ ಮೇಲೆ ಬೇರೆ ಬೇರೆ ಡ್ರೈವರ್ ಗಳ ಪಟ್ಟಿ ಬರುತ್ತದೆ. ಅವುಗಳ ಪೈಕಿ ನಿಮ್ಮ ಡ್ರೈವ್ ಅನ್ನು ಆಯ್ಕೆ ಮಾಡಿ ಪುನ: 'ಪ್ರಾಪರ್ಟೀಸ್' ಮೇಲೆ ಕ್ಲಿಕ್ ಮಾಡಿ

ಹಂತ 3: 'ಚೇಂಜ್ ಸೆಟ್ಟಿಂಗ್ಸ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ ನಂತರ 'ಪಾಲಿಸಿ ಟ್ಯಾಬ್' ಕ್ಲಿಕ್ ಮಾಡಿ

ಹಂತ 4: 'ಬೆಟರ್ ಪರ್ಫಾರ್ಮೆನ್ಸ್ ಆಪ್ಶನ್' ಎಂಬ ಬಾಕ್ಸ್ ಮೇಲೆ 'ಟಿಕ್' ಮಾಡಿ. ಈ ವಿಧಾನದಿಂದ ನಿಮ್ಮ ಪೆನ್ಡ್ರೈವ್ ನ ಕಾರ್ಯಕ್ಷಮತೆ ಹೆಚ್ಚುವುದು.

Best Mobiles in India

English summary
How to increase data transfer speed of your pendrive? to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+