ನಿಮ್ಮ ಸ್ಮಾರ್ಟ್‌ಫೋನಿಗೆ ಆಂಡ್ರಾಯ್ಡ್ ಪಿ ಬೀಟಾ ಇನ್‌ಸ್ಟಾಲ್ ಮಾಡುವುದು ಹೇಗೆ?

By Tejaswini P G
|

ಗೂಗಲ್ ಸಂಸ್ಥೆಯು ಮಂಗಳವಾರ ನಡೆದ ಗೂಗಲ್ I/O 2018 ಸಮಾವೇಶ ದಲ್ಲಿ ಆಂಡ್ರಾಯ್ಡ್ P ಅನ್ನು ಘೋಷಿಸಿದೆ. ಓಎಸ್ ನ ಈ ಆವೃತ್ತಿಯ ಮೊದಲ ಪಬ್ಲಿಕ್ ಬೀಟಾ ಬಿಲ್ಡ್ ಈಗಾಗಲೇ ಲಭ್ಯವಿದೆ. ಈ ಹಿಂದಿನ ಆವೃತ್ತಿಗಳಂತೆ ಇದು ಕೇವಲ ಪಿಕ್ಸೆಲ್ ಸಾಧನಗಳಿಗೆ ಮಾತ್ರ ಸೀಮಿತವಾಗದೇ ಇತರ ಸಾಧನಗಳಿಗೂ ಲಭ್ಯವಿದೆ. ಪ್ರಾಜೆಕ್ಟ್ ಟ್ರೆಬಲ್ ನಿಂದಾಗಿ ಇದು ಸಾಧ್ಯವಾಗಿದೆ.

ಆಂಡ್ರಾಯ್ಡ್ P ಹಲವು ಸುಧಾರಣೆಗಳು ಮತ್ತು ವಿನ್ಯಾಸದಲ್ಲಿ ಬದಲಾವಣೆಗಳನ್ನು ಹೊಂದಿದೆ. ಇದು ಎಐ ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಹಲವು ಆಂಡ್ರಾಯ್ಡ್ ಮೊಬೈಲ್ ತಯಾರಕರು ಒಲವು ತೋರುತ್ತಿರುವ ಡಿಸ್ಪ್ಲೇ ನಾಚ್ ಫೀಚರ್ಗೂ ಅಗತ್ಯ ಬೆಂಬಲ ನೀಡಲಿದೆ. ನಾವು ಈಗಾಗಲೇ ಒಂದು ಲೇಖನದಲ್ಲಿ ಆಂಡ್ರಾಯ್ಡ್ P ಯ ಫೀಚರ್ಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದು, ಈ ಲೇಖನದಲ್ಲಿ ಆಯ್ದ ಮೊಬೈಲ್ಗಳಲ್ಲಿ ಅದನ್ನು ಇನ್ಸ್ಟಾಲ್ ಮಾಡುವ ವಿಧಾನವನ್ನು ತಿಳಿಸಲಿದ್ದೇವೆ.

ನಿಮ್ಮ ಸ್ಮಾರ್ಟ್‌ಫೋನಿಗೆ ಆಂಡ್ರಾಯ್ಡ್ ಪಿ ಬೀಟಾ ಇನ್‌ಸ್ಟಾಲ್ ಮಾಡುವುದು ಹೇಗೆ?


ಆಂಡ್ರಾಯ್ಡ್ P ಬೀಟಾ ಬೆಂಬಲಿಸುವ ಸಾಧನಗಳು

ಈಗಾಗಲೇ ಹೇಳಿದಂತೆ ಆಂಡ್ರಾಯ್ಡ್ ನ ಹಿಂದಿನ ಆವೃತ್ತಿಯು ಪಿಕ್ಸೆಲ್ , ಪಿಕ್ಸೆಲ XL, ಪಿಕ್ಸೆಲ್ 2 , ಪಿಕ್ಸೆಲ್ 2 XL ಮೊದಲಾದ ಪಿಕ್ಸೆಲ್ ಸಾಧನಗಳಿಗೆ ಮಾತ್ರ ಲಭ್ಯವಿತ್ತು. ಆದರೆ ಆಂಡ್ರಾಯ್ಡ್ P ಬೀಟಾ ಪಿಕ್ಸೆಲ್ ಸಾಧನಗಳು ಮಾತ್ರವಲ್ಲದೆ ಒನ್ಪ್ಲಸ್ 6, ಶಿಯೋಮಿ ಮಿ ಮಿಕ್ಸ್ 2S, ನೋಕಿಯಾ 7 ಪ್ಲಸ್, ಒಪ್ಪೋ R15 ಪ್ರೋ, ವಿವೋ X21, ವಿವೋ X21 UD, ಎಸೆನ್ಶಿಯಲ್ PH-1 ಮತ್ತು ಸೋನಿಯಾ ಎಕ್ಸ್ಪೀರಿಯಾ X72 ಮೊದಲಾದ ಸಾಧನಗಳನ್ನೂ ಬೆಂಬಲಿಸುತ್ತದೆ.

ಆಂಡ್ರಾಯ್ಡ್ P ಬೀಟಾ ಇನ್ಸ್ಟಾಲ್ ಮಾಡುವ ವಿಧಾನ

ನಿಮ್ಮ ಸ್ಮಾರ್ಟ್ಫೋನ್ ಆಂಡ್ರಾಯ್ಡ್ P ಬೀಟಾ ಅಪ್ಡೇಟ್ ಪಡೆಯಲು ಅರ್ಹವಾಗಿದ್ದಲ್ಲಿ ಅದನ್ನು ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಇನ್ಸ್ಟಾಲ್ ಮಾಡಲು ಈ ಕೆಳಗಿನ ಸೂಚನೆಗಳನ್ನು ಪಾಲಿಸಿ.

ಹಂತ 1: ನೀವು ಈ ಮೇಲೆ ಹೇಳಿರುವ ಸಾಧನಗಳ ಪೈಕಿ ಯಾವುದಾದರೂ ಒಂದನ್ನು ಹೊಂದಿದ್ದರೆ ನಿಮ್ಮ ಪಿಸಿ ಅಥವಾ ಮೊಬೈಲ್ ಬ್ರೌಸರ್ ನಲ್ಲಿ android.com/beta ಗೆ ಭೇಟಿ ನೀಡಿ

ಹಂತ 2: ನೀವು ಅಪ್ಡೇಟ್ ಮಾಡಬಯಸುವ ಸ್ಮಾರ್ಟ್ಫೋನ್ ನಲ್ಲಿ ಲಾಗಿನ್ ಮಾಡಲು ಬಳಸಿರುವ ಗೂಗಲ್ ಐಡಿ ಬಳಸಿ ಸೈನ್-ಇನ್ ಮಾಡಿ

ಹಂತ 3: ಸೈನ್-ಇನ್ ಮಾಡಿದ ನಂತರ ಈ ಅಪ್ಡೇಟ್ ಪಡೆಯಲು ಅರ್ಹವಾಗಿರುವ ನಿಮ್ಮ ಸಾಧನ 'ಆಪ್ಟ್-ಇನ್' ಎಂಬ ಬಟನ್ ನೊಂದಿಗೆ ನಿಮಗೆ ಕಾಣಸಿಗುತ್ತದೆ. ಈ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 4: ಆಂಡ್ರಾಯ್ಡ್ P ಬೀಟಾ ಪ್ರೋಗ್ರಾಮ್ ಗೆ ದೃಢೀಕರಣ ದೊರಕಿದ ಮೇಲೆ ಸ್ವಲ್ಪ ಹೊತ್ತು ಕಾಯಬೇಕು. ನಂತರ ಸೆಟ್ಟಿಂಗ್ಸ್->ಸಿಸ್ಟಮ್->ಅಡ್ವಾನ್ಸ್ಡ್->ಸಿಸ್ಟಮ್ ಅಪ್ಡೇಟ್ ಗೆ ಹೋಗಿ. ಆಂಡ್ರಾಯ್ಡ್ ನ ಇತ್ತೀಚಿನ ಆವೃತ್ತಿ ಲಭ್ಯವಿದ್ದಲ್ಲಿ ಅದನ್ನು ಡೌನ್ಲೋಡ್ ಮಾಡಿ ನಿಮ್ಮ ಸಾಧನವನ್ನು ರೀಬೂಟ್ ಮಾಡಿ. ಈ ಅಪ್ಡೇಟ್ ಅಂದಾಜು 1.2 GB ಗಾತ್ರದ್ದಾಗಿದೆ.

ಇನ್ಸ್ಟಾಲೇಶನ್ ಪೂರ್ಣಗೊಂಡ ಮೂಲಕ ನಿಮ್ಮ ಸಾಧನ ಆಂಡ್ರಾಯ್ಡ್ P ಬೀಟಾ ಆವೃತ್ತಿ ಚಲಾಯಿಸುತ್ತದೆ. ನೀವು ಮಾರ್ಚ್ನಲ್ಲಿ ಬಂದ ಡೆವಲಪರ್ ಪ್ರಿವ್ಯೂ 1 ಅನ್ನು ಇನ್ಸ್ಟಾಲ್ ಮಾಡಿದ್ದರೆ ಮೇಲೆ ಹೇಳಿದ ಸೂಚನೆಗಳ ಮೂಲಕ ಬೀಟಾ ಆವೃತ್ತಿಯನ್ನು ಪಡೆಯಬಹುದು. ಈ ಅಪ್ಡೇಟ್ ಅನ್ನು ಫ್ಯಾಕ್ಟರಿ ಇಮೇಜ್ಗಳನ್ನು ಮ್ಯಾನುವಲಿ ಫ್ಲ್ಯಾಶ್ ಮಾಡುವ ಮೂಲಕ ಕೂಡ ಪಡೆಯಬಹುದಾಗಿದ್ದು ಅದನ್ನು ಗೂಗಲ್ ಇನ್ನೂ ಬಿಡುಗಡೆ ಮಾಡಬೇಕಷ್ಟೆ.

Best Mobiles in India

English summary
Android P Beta is available for a slew of devices. Get to know how to install it on your device.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X