ನೋಟಿಫಿಕೇಷನ್ ನಿಯಂತ್ರಿಸದಿದ್ದರೆ ಕಿರಿಕಿರಿ ತಪ್ಪಿದ್ದಲ್ಲ!!?
ಹೊಸದೊಂದು ಅಧ್ಯಯನದ ಮೂಲಕ ಸ್ಮಾರ್ಟ್‌ಫೋನ್‌ಗಳಿಗೆ ಬರುವ ಮೂರನೇ ಒಂದರಷ್ಟು ಡಿಜಿಟಲ್ ನೋಟಿಫಿಕೇಷನ್‌ಗಳು ಬಳಕೆದಾರರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತವೆ ಎಂದು ತಿಳಿದುಬಂದಿದೆ.!!
ಸ್ಮಾರ್ಟ್‌ಫೋನ್ ಬಳಕೆದಾರರು ಏನೆಲ್ಲಾ ತೊಂದರೆಗಳಿಗೆ ಸಿಲುಕುತ್ತಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ, ಹೊಸದೊಂದು ಅಧ್ಯಯನದ ಮೂಲಕ ಸ್ಮಾರ್ಟ್‌ಫೋನ್‌ಗಳಿಗೆ ಬರುವ ಮೂರನೇ ಒಂದರಷ್ಟು ಡಿಜಿಟಲ್ ನೋಟಿಫಿಕೇಷನ್‌ಗಳು ಬಳಕೆದಾರರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತವೆ ಎಂದು ತಿಳಿದುಬಂದಿದೆ.!!
ವಿಶ್ವವಿದ್ಯಾಲಯದ ಸಂಶೋಧಕರು ಡಿಜಿಟಲ್ ನೋಟಿಫಿಕೇಷನ್‌ಗಳು ಬಳಕೆದಾರರಿಗೆ ಕಿರಿಕಿರಿ ನೀಡುತ್ತಿವೆಯೇ ಎಂಬುದನ್ನು ಪರೀಕ್ಷಿಸಲು 50 ಜನರನ್ನು ಸಂಶೋಧನೆಗೆ ಒಳಪಡಿಸಿದ್ದು, ಈ ವರದಿಯಲ್ಲಿ ಶಾಕಿಂಗ್ ಅಂಶಗಳು ಹೊರಬಿದ್ದಿವೆ.!! ಹಾಗಾದರೆ ಆ ಅಂಶಗಳು ಯಾವುವು? ಅಪಾಯದಿಂದ ಪಾರಾಗುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ಅಧ್ಯಯನ ನಡೆದಿದ್ದು ಹೀಗೆ!!
ಡಿಜಿಟಲ್ ನೋಟಿಫಿಕೇಷನ್‌ಗಳು ಬಳಕೆದಾರರಿಗೆ ಕಿರಿಕಿರಿ ನೀಡುತ್ತಿವೆಯೇ ಎಂಬುದನ್ನು ಪರೀಕ್ಷಿಸಲು 50 ಜನರನ್ನು ಸಂಶೋಧನೆಗೆ ಒಳಪಡಿಸಿ ಅವರಿಗೆ ಐದು ವಾರಗಳ ಕಾಲ ಸಾವಿರಕ್ಕೂ ಹೆಚ್ಚು ಡಿಜಿಟಲ್ ನೋಟಿಫಿಕೇಷನ್‌ಗಳನ್ನು ಕಳುಹಿಸಲಾಗಿದೆ. ನೋಟಿಫಿಕೇಷನ್‌ಗಳನ್ನು ಕಳುಹಿಸಿದಾಗ ಅವರ ವರ್ತನೆ ಮತ್ತು ಭಾವನೆಗಳನ್ನು ಅನುಸರಿಸಿ ಈ ಅಧ್ಯಯನ ನಡೆಸಲಾಗಿದೆ.!!

ವರದಿಯಲ್ಲಿ ಶಾಕಿಂಗ್ ಅಂಶಗಳು!!
ಸಾಕಷ್ಟು ಡಿಜಿಟಲ್ ನೋಟಿಫಿಕೇಷನ್‌ಗಳು ಬಳಕೆದಾರರಿಗೆ ಕಿರಿ ಕಿರಿ ಉಂಟುಮಾಡುತ್ತಿವೆ. ಅವರ ದೈನಂದಿನ ಜೀವನ, ವೃತ್ತಿ ಮತ್ತು ದಾಂಪತ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿವೆ. ಇದರಿಂದ ಮೊಬೈಲ್ ಬಳಕೆದಾರರು ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಎಮಾನ್ ಕುಂಜೊ ತಿಳಿಸಿದ್ದಾರೆ.

ಕೆಲಸ ಮತ್ತು ಪಾವತಿ ನೋಟಿಫಿಕೇಷನ್!!
ಸ್ಮಾರ್ಟ್‌ಫೋನ್‌ಗಳಿಗೆ ಬರುವ ಕೆಲಸದ ವಿಷಯವಾಗಿ ಮತ್ತು ಪಾವತಿ ನೋಟಿಫಿಕೇಷನ್‌ಗಳು ಜನರಿಗೆ ಹೆಚ್ಚು ಮಾನಸಿಕ ಹಿಂಸೆ ನೀಡುತ್ತವೆಯಂತೆ. ಆದರೆ, ಇದೇ ಸಮಯದಲ್ಲಿ ತನ್ನ ಗೆಳೆಯರು ಮತ್ತು ಪ್ರೀತಿಪಾತ್ರರಿಂದ ಬರುವ ನೋಟಿಫಿಕೇಷನ್‌ಗಳು ಹೆಚ್ಚು ಖುಷಿಯನ್ನು ನೀಡಿವೆ.!!

ಹೆಚ್ಚು ನೋಟಿಫಿಕೇಷನ್‌ಗಳು ನಿರ್ಭಂಧಿಸಿ.!!
ಡಿಜಿಟಲ್ ಸೇವೆ ನೀಡುವ ಆಪ್‌ಗಳು ಹೆಚ್ಚು ಹೆಚ್ಚು ನೋಟಿಫಿಕೇಷನ್‌ಗಳನ್ನು ಕಳುಹಿಸಲು ಪ್ರಯತ್ನಿಸುತ್ತಿರುತ್ತವೆ. ಇದರಿಂದ ನಿಮ್ಮ ನೆಮ್ಮದಿ ಕೂಡ ಹಾಳಾಗುವುದರಿಂದ ಡಿಜಿಟಲ್ ಆಪ್‌ಗಳು ನೋಟಿಫಿಕೇಷನ್ ಕಳುಹಿಸುವ ಆಯ್ಕೆಗೆ ನಿರ್ಭಂಧಿಸಿರಿ.!!


Click it and Unblock the Notifications








