ಕಂಪ್ಯೂಟರ್‌ನಲ್ಲಿ PUBG ಗೇಮ್‌ ಆಡಬಹುದು..! ಹೇಗೆ ಗೊತ್ತಾ..?

|

ಸದ್ಯ ಎಲ್ಲರ ಬಾಯಲ್ಲೂ ಹರಿದಾಡುತ್ತಿರುವ ಮತ್ತು ಹೆಚ್ಚಿನ ಗೇಮ್ ಪ್ರಿಯರ ಅಚ್ಚುಮೆಚ್ಚಾಗಿರುವ ಗೇಮ್ ಎಂದರೆ ಅದು ಪಿಯುಬಿಜಿ. ಅವಕಾಶ ಸಿಕ್ಕ ಕೂಡಲೇ ಆಡಲು ಶುರುವಿಟ್ಟುಕೊಳ್ಳುವವರೇ ಅಧಿಕ ಮಂದಿ. ಕಳೆದ ವರ್ಷ ಚೀನಾದ ಟೆನ್ಸೆಂಟ್ ಗೇಮ್ಸ್ ಮತ್ತು ಪಿಯುಬಿಜಿ ಕಾರ್ಪೋರೇಷನ್ ಬಿಡುಗಡೆಗೊಳಿಸಿರುವ ರಿಯಲ್ ಟೈಮ್ ಮಲ್ಟಿಪ್ಲೇಯರ್ ಶೂಟರ್ ಗೇಮ್ ಇದು. ಪಿಯುಬಿಜಿ ಎಂದರೆ ಪ್ಲೇಯರ್ ಅನ್ ನೋನ್ ಬ್ಯಾಟಲ್ ಗ್ರೌಂಡ್ (PlayerUnknown Battlegrounds).

ಕಂಪ್ಯೂಟರ್‌ನಲ್ಲಿ PUBG ಗೇಮ್‌ ಆಡಬಹುದು..! ಹೇಗೆ ಗೊತ್ತಾ..?

ಈ ಗೇಮ್ ನಲ್ಲಿ ಪ್ಲೇಯರ್ ಅನ್ ನೋನ್ ಘೋಸ್ಟ್ ಹೋಟೆಲ್ ಬ್ಯಾಟಲ್ ರಾಯಲ್ ಗೇಮ್ ನ್ನು ಆಧರಿಸಿರುತ್ತದೆ ಮತ್ತು ಇದರಲ್ಲಿ ಹಲವಾರು ರೀತಿಯ ಕಂಟ್ರೋಲ್ ಗಳಿವೆ ಉದಾಹರಣೆಗೆ ಪ್ಯಾರಾಚೂಟ್ ಬಳಸಿ ಲ್ಯಾಂಡ್ ಆಗುವುದು, ವೆಪನ್ ಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಕಲೆಹಾಕುವುದು ಮತ್ತು ಶತ್ರುಗಳನ್ನು ಕೊಲ್ಲುವುದು ಮತ್ತು ಶತ್ರುಗಳಿಂದ ರಕ್ಷಿಸಿಕೊಳ್ಳುವಿಕೆ ಇತ್ಯಾದಿ. ಅವೆಲ್ಲವನ್ನೂ ಮ್ಯಾನೇಜ್ ಮಾಡುವುದೇ ಆಟದ ಅಜೆಂಡಾವಾಗಿದ್ದು ಅದನ್ನು ಸ್ಮಾರ್ಟ್ ಫೋನ್ ಸ್ಕ್ರೀನ್ ಅಥವಾ ಟಚ್ ಸ್ಕ್ರೀನ್ ನಲ್ಲಿ ಸಾಧಿಸುವುದು ಸ್ವಲ್ಪ ದುಸ್ಸಾಹಸವಾಗಬಹುದು.

ಇದೇ ಕಾರಣಕ್ಕೆ, ಹೆಚ್ಚಿನ ಆಟಗಾರರು ಥರ್ಡ್ ಪಾರ್ಟಿ ಪಿಸಿ ಆಂಡ್ರಾಯ್ಡ್ ಎಮ್ಯುಲೇಟರ್ ಗಳಾದ ಬ್ಲೂಸ್ಟ್ರ್ಯಾಕ್ ಮತ್ತು ನಾಕ್ಸ್ ಪ್ಲೇಯರ್ ಗಳನ್ನು ಬಳಸಿ ತಮ್ಮ ಪಿಸಿಯಲ್ಲಿ ಆಟವಾಡಲು ಆಸಕ್ತಿ ವಹಿಸಿದ್ದಾರೆ.

ಗೇಮ್ ಪ್ಲೇಯನ್ನು ಇನ್ನಷ್ಟು ಆಸಕ್ತಿದಾಯವಾಗಿಸಲು ಪಿಸಿಯಲ್ಲಿ ಆಟಗಾರರಿಗೆ ಕೀಬೋರ್ಡ್ ಮತ್ತು ಮೌಸ್ ಗಳ ಸಹಾಯ ಸಿಗುವುದರಿಂದಾಗಿ ಆಟದಲ್ಲಿ ಹೆಚ್ಚು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ. ಇದನ್ನು ಹೊರತುಪಡಿಸಿ ಇತರೆ ಯಾವುದೇ ಮಾರ್ಗವು ಆಟವನ್ನು ಅಭಿವೃದ್ಧಿ ಮಾಡಲು ಆಟಗಾರರಿಗೆ ಸಹಾಯವಾಗಿಲ್ಲ.

ಕಂಪ್ಯೂಟರ್‌ನಲ್ಲಿ PUBG ಗೇಮ್‌ ಆಡಬಹುದು..! ಹೇಗೆ ಗೊತ್ತಾ..?

ಇದೇ ಕಾರಣಕ್ಕೆ ಟೆನ್ಸೆಂಟ್ ಗೇಮ್ಸ್ ಅಧಿಕೃತವಾಗಿ ಪಿಯುಬಿ ಎಮ್ಯುಲೇಟರ್ ನ್ನು ಬಿಡುಗಡೆಗೊಳಿಸಿದ್ದು ಅದನ್ನು ಟೆನ್ಸೆಂಟ್ ಗೇಮಿಂಗ್ ಬುದ್ಧಿ ಎಂದು ಹೆಸರಿಸಲಾಗಿದೆ. AOW ಎಂಜಿನ್ ಬಳಸಿ ಪಿಸಿಯಲ್ಲಿ ಪಿಯುಬಿಜಿ ಗೇಮ್ ನ್ನು ಆಪ್ಟಿಮೈಜ್ ಮಾಡುವ ಕೆಲಸವನ್ನು ಮಾಡಿದೆ. ಈ ಗೇಮಿಂಗ್ ಬುದ್ಧಿಯು ಸ್ವಯಂಚಾಲಿತವಾಗಿ ನಿಮ್ಮ ಕೀರ್ಬೋಡ್ ಮತ್ತು ಮೌಸ್ ನ್ನು ಡಿಟೆಕ್ಟ್ ಮಾಡುತ್ತದೆ. ಪಿಸಿ ರಿಸೋರ್ಸ್ ಗಳನ್ನು ಬಳಕೆ ಮಾಡುವಂತೆಯೂ ಕೂಡ ಇದನ್ನು ಡಿಸೈನ್ ಮಾಡಲಾಗಿದೆ.ಸದ್ಯ ಇದಿನ್ನು ಬೇಟಾ ಫೇಸ್ ನಲ್ಲೇ ಇದ್ದು ಕೆಲವೇ ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದ್ದು ನಿಮ್ಮ ಗೇಮಿಂಗ್ ಅನುಭವಕ್ಕೆ ಇನ್ನಷ್ಟು ಮೆರುಗು ನೀಡುವುದು ಗ್ಯಾರೆಂಟಿ.

ಒಂದು ವೇಳೆ ನೀವಿದನ್ನು ಬಳಕೆ ಮಾಡುವುದು ಹೇಗೆ ಎಂಬ ಬಗ್ಗೆ ಆಲೋಚಿಸುತ್ತಿದ್ದರೆ, ಆ ಬಗೆಗಿನ ಕ್ವಿಕ್ ಗೈಡ್ ಇಲ್ಲಿದೆ ನೋಡಿ.

ಕಂಪ್ಯೂಟರ್‌ನಲ್ಲಿ PUBG ಗೇಮ್‌ ಆಡಬಹುದು..! ಹೇಗೆ ಗೊತ್ತಾ..?

1. ನಿಮ್ಮ ಪಿಸಿಯಲ್ಲಿ 'https://syzs.qq.com/en/' ತೆರೆಯಿರಿ

2. ಡೌನ್ ಲೋಡ್ ಬಟನ್ ನ್ನು ಕ್ಲಿಕ್ಕಿಸಿ. ಡೌನ್ ಲೋಡ್ ಕಂಪ್ಲೀಟ್ ಆಗುವವರೆಗೆ ಕಾಯಿರಿ.

3. ಇನ್ಸ್ಟಾಲರ್ ನ್ನು ಡೌನ್ ಲೋಡ್ ಮಾಡಿ ಮತ್ತು ನಿಮ್ಮ ಪಿಸಿಯಲ್ಲಿ ಅದನ್ನು ಇನ್ಸ್ಟಾಲ್ ಮಾಡಿ.

4. ಒಮ್ಮೆ ಇನ್ಸ್ಟಾಲೇಷನ್ ಮುಗಿದ ನಂತರ ಸ್ಟಾರ್ಟ್ ಬಟನ್ ನ್ನು ಹಿಟ್ ಮಾಡಿ.

5. ಈಗ, 'Gaming buddy'ಯು ಸ್ವಯಂಚಾಲಿತವಾಗಿ ಗೇಮ್ ನ್ನು ಡೌನ್ ಲೋಡ್ ಮಾಡುತ್ತದೆ.

6. ಗೇಮ್ ಡೌನ್ ಲೋಡ್ ಆದ ನಂತರ ಆಟವನ್ನು ಆಡಲು ಪ್ಲೇ ಬಟನ್ ನ್ನು ಕ್ಲಿಕ್ಕಿಸಿ ಮತ್ತು ಆಟ ಆರಂಭಿಸಿ.

Best Mobiles in India

English summary
How to play PUBG mobile on your PC or laptop, the official way. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X