ನಿಮ್ಮ ಫೇಸ್‌ಬುಕ್ ಮೂಲಕ ಪ್ರೀಪೇಡ್ ಫೋನ್ ರೀಚಾರ್ಜ್ ಮಾಡಿಕೊಳ್ಳುವುದು ಹೇಗೆ ಗೊತ್ತಾ?
ಭಾರತದಲ್ಲಷ್ಟೇ ಯಾಕೆ, ವಿಶ್ವದಲ್ಲೇ ಪ್ರಸಿದ್ಧಿಯಾಗಿರುವ ಫೇಸ್ಬುಕ್, ತನ್ನ ಬಳಕೆದಾರರಿಗೆ ಹೊಸ ವೈಶಿಷ್ಯತೆಯನ್ನು ಪರಿಚಯಿಸುತ್ತಿದೆ. ಅಂದರೆ ಫೇಸ್ಬುಕ್ ಮೂಲಕವೇ ಮೊಬೈಲ್ ರಿಚಾರ್ಜ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತಿದೆ. ಹೌದು, ನಿಮ್ಮ ಯಾವುದೇ ಮೊಬೈಲ್ ಆಪರೇಟರ್ ಆಗಿರಲಿ, ನಿಮ್ಮ ಪ್ರೀಪೇಡ್ ಸಿಮ್ ನ್ನು ಫೇಸ್ಬುಕ್ ಮೂಲಕ ರಿಸಾರ್ಜ್ ಮಾಡಿಕೊಳ್ಳಬಹುದು. ಆದರೆ ಇದು ಸದ್ಯಕ್ಕೆ ಪ್ರೀಪೇಡ್ ಬಳಕೆದಾರರಿಗೆ ಮತ್ತು ಆಂಡ್ರಾಯ್ಡ್ ಫೋನ್ ಬಳಸುತ್ತಿರುವವರಿಗಾಗಿ ಮಾತ್ರ ಇರುವ ಅವಕಾಶವಾಗಿದೆ. ಈ ವೈಶಿಷ್ಯತೆಯನ್ನು ಡೆಸ್ಕ ಟಾಪ್ ಮತ್ತು ಐಫೋನ್ ಬಳಕೆದಾರರಿಗೆ ವಿಸ್ತರಿಸಲು ಆಲೋಚಿಸಲಾಗುತ್ತಿದೆ. ಅಷ್ಟೇ ಅಲ್ಲ,ಪೋಸ್ಟ್ ಪೈಡ್ ಮೊಬೈಲ್ ನಂಬರ್ ಗಳ ಬಿಲ್ ಪಾವತಿಸಲು ಕೂಡ ಅವಕಾಶವನ್ನು ಮುಂದಿನ ದಿನಗಳಲ್ಲಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಸದ್ಯದಲ್ಲೇ ಜಾರಿಗೆ ಬರಬಹುದು.

ಹಾಗಾದ್ರೆ ಈ ಹೊಸ ವೈಶಿಷ್ಯತೆಯನ್ನು ಬಳಸಿಕೊಳ್ಳುವುದು ಹೇಗೆ ಎಂದು ಆಲೋಚಿಸುತ್ತಿದ್ದೀರಾ.. ನಾವಿದ್ದೀವಲ್ಲ ನಿಮಗೆ ಮಾರ್ಗದರ್ಶನ ನೀಡಲು.. ಈ ಲೇಖನದ ಮುಂದಿನ ಭಾಗವನ್ನು ಓದಿ ಮತ್ತು ಫೇಸ್ಬುಕ್ ಮೂಲಕ ನಿಮ್ಮ ಪ್ರೀಪೇಡ್ ಮೊಬೈಲ್ ರೀಸಾರ್ಜ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಿ..
1. ನೋಟಿಫಿಕೇಷನ್ ಬಟನ್ ಇರುವ ಪಕ್ಕದಲ್ಲೇ ಇರುವ ಮೂರು ಅಡ್ಡಗೆರೆಯ ಗುರುತನ್ನು ಟ್ಯಾಪ್ ಮಾಡಿ
2. ಅಲ್ಲಿ ಮೊಬೈಲ್ ರಿಚಾರ್ಜ್ ಎಂಬ ಆಯ್ಕೆ ಇರುತ್ತೆ. ಒಂದು ವೇಳೆ ಇಲ್ಲವಾದರೆ see more ಒತ್ತಿ. ಹೇಳಿದ ಆಯ್ಕೆಯನ್ನು ಪ್ರೆಸ್ ಮಾಡಿ
3. ಆಗ ನಿಮಗೆ "Choose a plan and pay with your debit or credit card, its fast, secure and free." ಅನ್ನೋ ವಿಂಡೋ ತೆರೆದುಕೊಳ್ಳುತ್ತೆ. ಅಲ್ಲಿ 'Recharge Now' ಎಂದು ಇರುತ್ತೆ. ಅದನ್ನು ಟ್ಯಾಪ್ ಮಾಡಿ.
4. ನಿಮ್ಮ ಮೊಬೈಲ್ ನಂಬರ್ ನ್ನು “mobile recharge” ಸ್ಕ್ರೀನ್ ನಲ್ಲಿ ಬರೆಯಿರಿ
5. ಫೇಸ್ಬುಕ್ ತನ್ನಷ್ಟಕ್ಕೇ ತಾನೇ ನಿಮ್ಮ ಮೊಬೈಲ್ ಆಪರೇಟರ್ ಯಾರು ಎಂದು ಗುರುತಿಸಿಕೊಳ್ಳುತ್ತೆ. ಆದರೆ ನೀವು ಅದನ್ನು ಬದಲಿಸಬಹುದಾದ ಆಯ್ಕೆಯೂ ಇರುತ್ತೆ. ಏರ್ ಟೆಲ್, ಬಿಎಸ್ ಎನ್ ಎಲ್, ಐಡಿಯಾ,ಜಿಯೋ, ಎಂಟಿಎನ್ ಎಲ್ ದೆಹಲಿ,ಎಂಟಿಎನ್ ಎಲ್ ಮುಂಬೈ, ಟಾಟಾ ಡೊಕೋಮೋ, ಟೆಲೆನಾರ್ ಮತ್ತು ವಡಾಫೋನ್.
6. ನೀವು ಎಷ್ಟು ಹಣವನ್ನು ರೀಚಾರ್ಜ್ ಮಾಡಬೇಕು ಎಂದುಕೊಂಡಿದ್ದೀರಿ ಅದನ್ನು ಬರೆಯಿರಿ., ನೀವು ರೀಚಾರ್ಜ್ ಮಾಡಬೇಕು ಎಂದುಕೊಳ್ಳುವ ಪ್ಲಾನ್ ಬಗ್ಗೆ ಅಥವಾ ಆಫರ್ ಗಳ ಬಗ್ಗೆ ನಿಮಗೆ ಮಾರ್ಗದರ್ಶನವಿಲ್ಲದೆ ಇದ್ದರೆ “ browse plan” ನ್ನು ಒತ್ತಿ ಮಾಹಿತಿ ಪಡೆದು ಅದನ್ನು ಆಯ್ಕೆ ಮಾಡಬಹುದಾಗಿದೆ.
7. ನಿಮಗೆ ಬೇರೆಬೇರೆ ಪ್ಲಾನ್ ಗಳ ಬಗ್ಗೆ ಮಾಹಿತಿ ನೀಡಲಾಗುತ್ತೆ. ಉದಾಹರಣೆಗೆ ಫುಲ್ ಟಾಕ್ ಟೈಮ್, 3ಜಿ ಮೊಬೈಲ್ ಡಾಟಾ, ಸ್ಪೆಷಲ್ ತಾರಿಫ್ ಓಚರ್, ಟಾಪ್ ಅಪ್,ಎಸ್ ಎಂ ಎಸ್, ಇತ್ಯಾದಿಗಳು, ನೀವು ಯಾವ ಪ್ಲಾನ್ ಆಯ್ಕೆ ಮಾಡಲು ಇಚ್ಛಿಸುತ್ತೀರೋ ಅದನ್ನು ಆಯ್ಕೆ ಮಾಡಿ.
8. 'Review Order' ನ್ನು ಟ್ಯಾಪ್ ಮಾಡಿ
9. ನಂತ್ರ ನಿಮ್ಮ ಡೆಬಿಟ್ ಕಾರ್ಡ್ ಇಲ್ಲವೇ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನೀಡಬೇಕು. ಕಾರ್ಡ್ ನಂಬರ್, ಕಾರ್ಡ್ ಅವಧಿ, ಸೆಕ್ಯುರಿಟಿ ಕೋಡ್ ಅಂದರೆ CVV ನಂಬರ್.
10. Place Order ನ್ನು ಟ್ಯಾಪ್ ಮಾಡಿ
11. ನಿಮಗೊಂದು ಪಾಸ್ ವರ್ಡ್ ಬಂದಿರುತ್ತೆ. ಅದು ಒನ್ ಟೈಮ್ ಪಾಸ್ ವರ್ಡ್. ಅದನ್ನು ಬರೆದು ರಿಚಾರ್ಜ್ ಮಾಡಿದರಾಯ್ತು.


Click it and Unblock the Notifications








