Home
Apps

ಜಿಯೋ ಸೂಪರ್ ಆಪ್ – 100 ಸೇವೆಗಳು ಒಂದೇ ಆಪ್ ನಲ್ಲಿ ಲಭ್ಯ!

By Gizbot Bureau

ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಅಧಿತಕೃತವಾಗಿ ವಿಶ್ವದ ಅತೀ ದೊಡ್ಡ ಆನ್ ಲೈನ್ ಟು ಆಫ್ ಲೈನ್ ನ ಹೊಸ ಇ-ಕಾಮರ್ಸ್ ಫ್ಲ್ಯಾಟ್ ಫಾರ್ಮ್ ಬಗ್ಗೆ ಕೆಲಸ ಮಾಡುತ್ತಿದ್ದು ಇದು ಅಮೇಜಾನ್ ಮತ್ತು ವಾಲ್ ಮಾರ್ಟ್-ಫ್ಲಿಪ್ ಕಾರ್ಟ್ ಗೆ ಭರ್ಜರಿ ಸ್ಪರ್ಧೆಯೊಡ್ಡುವ ನಿರೀಕ್ಷೆ ಇದೆ. ರಿಲಯನ್ಸ್ ಜಿಯೋ ಸಂಸ್ಥೆ “ಸೂಪರ್ ಆಪ್” ಗಾಗಿ ಕಾರ್ಯ ನಿರ್ವಹಿಸುತ್ತಿದ್ದು ಒಂದೇ ಪ್ಲಾಟ್ ಫಾರ್ಮ್ ನಲ್ಲಿ 100 ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

ಜಿಯೋ ಸೂಪರ್ ಆಪ್ – 100 ಸೇವೆಗಳು ಒಂದೇ ಆಪ್ ನಲ್ಲಿ ಲಭ್ಯ!

ಜಿಯೋ ಇದೀಗ ಸುಮಾರು 300 ಮಿಲಿಯನ್ ಚಂದಾದಾರಿಕೆಯನ್ನು ಭಾರತದಲ್ಲಿ ಹೊಂದಿದೆ ಮತ್ತು ಡಾಟಾ,ವಾಯ್ಸ್ ಟ್ರಾಫಿಕ್ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ.

ತಜ್ಞರು ಅಭಿಪ್ರಾಯ

ತಜ್ಞರು ಅಭಿಪ್ರಾಯ

ತಜ್ಞರು ಅಭಿಪ್ರಾಯ ಪಡುವಂತೆ, ಸೂಪರ್ ಆಪ್ ನ್ನು ಈ ಸಂದರ್ಬದಲ್ಲಿ ರಿಲಯನ್ಸ್ ಜಿಯೋ ಬಿಡುಗಡೆಗೊಳಿಸುವುದರಿಂದಾಗಿ ಉತ್ತಮ ಸ್ಥಾನ ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಮಾರುಕಟ್ಟೆಯಲ್ಲಿರುವ ಸ್ನ್ಯಾಪ್ ಡೀಲ್, ಪೇಟಿಎಂ, ಫ್ರೀಚಾರ್ಜ್, ಫ್ಲಿಪ್ ಕಾರ್ಟ್ ಮತ್ತು ಹೈಕ್ ಗಳು ಅನುತ್ತೀರ್ಣವಾದ ಕೆಲವು ವಿಚಾರಗಳಲ್ಲಿ ಯಶಸ್ಸು ಗಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳುತ್ತಿದ್ದಾರೆ.

ರಿಲಯನ್ಸ್ ಜಿಯೋ ಸೂಪರ್ ಆಪ್ ಇಕಾಮರ್ಸ್ ವೆಬ್ ಸೈಟ್ ಮೂಲಕ ಆನ್ ಲೈನ್ ಬುಕ್ಕಿಂಗ್ ಮತ್ತು ಪಾವತಿಯನ್ನು ಒಂದೇ ಜಾಗದಲ್ಲಿ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ರಿಲಯನ್ಸ್ ಜಿಯೋ ಹೂಡಿಕೆ

ರಿಲಯನ್ಸ್ ಜಿಯೋ ಹೂಡಿಕೆ

ಇದೀಗ ರಿಲಯನ್ಸ್ ಜಿಯೋ ತನ್ನ ಹೂಡಿಕೆ ಮತ್ತು ಸ್ವಾಧೀನತೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಲೇಯರ್ ನ್ನು ಸೇರಿಸುತ್ತಿದೆ ಮತ್ತು ವರ್ನಾಕ್ಯುಲರ್ ವಾಯ್ಸ್ ಟೆಕ್ ಲೇಯರ್, ಲಾಜಿಸ್ಟಿಕ್ ಲೇಯರ್ ಮತ್ತು ಎಐ ಆಧಾರಿತ ಎಜುಕೇಷನ್ ಲೇಯರ್ ನ್ನು ಕೂಡ ತನ್ನಲ್ಲಿ ಸೇರಿಸಿಕೊಳ್ಳುತ್ತಿದೆ. ಭಾರತದ ವಿಚಾಟ್ ನ್ನು ಸೃಷ್ಟಿಮಾಡುವುದಕ್ಕೆ ರಿಲಯನ್ಸ್ ನ ಈ ಎಲ್ಲಾ ಲೇಯರ್ ಗಳು ವಿಶೇಷ ಮಹತ್ವವನ್ನು ನೀಡುತ್ತದೆ ಮತ್ತು ಜಿಯೋ ಡಿವೈಸ್ ನೆಟ್ ವರ್ಕ್ ನ ಸ್ಥಾನವನ್ನು ಅಭಿವೃದ್ಧಿ ಪಡಿಸುವುದಕ್ಕೆ ನೆರವಾಗುತ್ತದೆ.

ವೇಗವಾಗಿ ಬೆಳೆಯುತ್ತಿರುವ ಭಾರತದ ಇಕಾಮರ್ಸ್ ಮಾರುಕಟ್ಟೆಯಲ್ಲಿ 2017 ರಲ್ಲಿ 24$ ಬಿಲಿಯನ್ ಇರುವುದು ರಿಲಯನ್ಸ್ ನ ಎಂಟ್ರಿಯಿಂದಾಗಿ 84$ ಬಿಲಿಯನ್ ಗೆ ಏರಿಕೆಯಾಗುತ್ತದೆ ಎಂದು ಅಂದಾಜಿಸಲಾಗುತ್ತಿದ್ದು ಈ ಬಗ್ಗೆ ಡಿಲಾಯ್ಟ್ ಇಂಡಿಯಾ ಮತ್ತು ರಿಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ ವರದಿ ಹೇಳುತ್ತಿದೆ.

ಹೊಸ ಕಾಮರ್ಸ್ ಪ್ಲಾಟ್ ಫಾರ್ಮ್

ಹೊಸ ಕಾಮರ್ಸ್ ಪ್ಲಾಟ್ ಫಾರ್ಮ್

ಮುಖೇಶ್ ಅಂಬಾನಿಯ ಪ್ರಕಾರ ಹೊಸ ಕಾಮರ್ಸ್ ಪ್ಲಾಟ್ ಫಾರ್ಮ್ ದೇಶದಾದ್ಯಂತ ಇರುವ 3 ಕೋಟಿ ಜನರ ಜೀವನಶೈಲಿಯನ್ನು ಬದಲಿಸಲಿದೆ. ಅವರಿಗೆ ಎಲ್ಲಾ ದೊಡ್ಡ ಎಂಟರ್ ಪ್ರೈಸ್ ಜೊತೆಗೆ ಮತ್ತು ಇ-ಕಾಮರ್ಸ್ ಜೊತೆಗೆ ತಂತ್ರಜ್ಞಾನದ ಮೂಲಕ ಸಂಬಂಧ ಇಟ್ಟುಕೊಳ್ಳುವುದಕ್ಕೆ ಇದು ನೆರವು ನೀಡುತ್ತದೆ.

ರಿಲಯನ್ಸ್ ಜಿಯೋ ಇದೀಗ ವಿಶ್ವದ ಅತೀ ದೊಡ್ಡ ಆನ್ ಲೈನ್ ಟು ಆಫ್ ಲೈನ್ ನ ಹೊಸ ಕಾಮರ್ಸ್ ಫ್ಲ್ಯಾಟ್ ಫಾರ್ಮ್ ನ್ನು ಸೃಷ್ಟಿಮಾಡುವ ಬಗ್ಗೆ ಕೆಲಸ ನಿರ್ವಹಿಸುತ್ತಿದೆ ಎಂದು ಅಂಬಾನಿ ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಮೇಕ್ ಇನ್ ಒಡಿಸ್ಸಾ ಕಾಂನ್ಕ್ಲೇವ್ ನಲ್ಲಿ ತಿಳಿಸಿದ್ದಾರೆ.

ಮೊಬಿಲಿಟಿ ಬ್ಯುಸಿನೆಸ್

ಮೊಬಿಲಿಟಿ ಬ್ಯುಸಿನೆಸ್

ಮೊಬಿಲಿಟಿ ಬ್ಯುಸಿನೆಸ್ ನ್ನು ಯಶಸ್ವಿಯಾಗಿ ನಿರ್ವಹಿಸಿದ ನಂತರ ಜಿಯೋ ಇದೀಗ ಜಿಯೋ ಗಿಗಾ ಫೈಬರ್ ಎಫ್ ಟಿಟಿಹೆಚ್ ಸೇವೆಯ ಬಗ್ಗೆ ಗಮನವನ್ನು ಕೇಂದ್ರೀಕರಿಸಿದ್ದು ಮನೆಮನೆಗೂ ಅಂತರ್ಜಾಲ ಸಂಪರ್ಕದ ಕಾನ್ಸೆಪ್ಟ್ ನ್ನು ಈ ಮೂಲಕ ಇಟ್ಟುಕೊಂಡಿದೆ. 2018-19 ರ ಸಾಲಿನ ವಾರ್ಷಿಕ ಆದಾಯದಲ್ಲಿ ಜನವರಿ-ಮಾರ್ಚ್ ತಿಂಗಳ ಸ್ಟ್ಯಾಂಡ್ ಅಲೋನ್ ನೆಟ್ ಲಾಭವು ಶೇಕಡಾ 64.7 ರಷ್ಟು ಅಧಿಕವಾಗಿದೆ ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ವರದಿ ಮಾಡಿದೆ. 2017-18 ನೇ ಸಾಲಿನಲ್ಲಿ ಸ್ಟ್ಯಾಂಡ್ ಅಲೋನ್ ನೆಟ್ ಪ್ರಾಫಿಟ್ ನಾಲ್ಕನೇ ತ್ರೈಮಾಸಿಕದಲ್ಲಿ 840 ಕೋಟಿ ರುಪಾಯಿಗಳಾಗಿದ್ದು ಹಿಂದಿನ ವರ್ಷದ 510 ಕೋಟಿಗಿಂತ ಅಧಿಕವಾಗಿದೆ. ಎಲ್ಲಾ ಒಟ್ಟು ವ್ಯವಹಾರದಲ್ಲಿ ಕಂಪೆನಿಯ ಮಾಸಿಕ ಲಾಭವು 11,106 ಕೋಟಿ ಎಂದು ಹೇಳಾಗಿದ್ದು ಹಿಂದಿನ ವರ್ಷದ 7,128 ಕೋಟಿ ರುಪಾಯಿಗಿಂತ ಅಧಿಕವಾಗಿದ್ದು ಒಟ್ಟಾರೆ 55.8 ಶೇಕಡಾ ಅಭಿವೃದ್ಧಿಯನ್ನು ಸಾಧಿಸಲಾಗಿದೆ. ಈ ಎಲ್ಲಾ ಲೆಕ್ಕಾಚಾರವನ್ನು ನೋಡಿದರೆ ಜಿಯೋ ತಾನಿಟ್ಟುಕೊಂಡ ಗುರಿ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Best Mobiles in India

English summary
How Reliance Jio plans to take on Amazon, Flipkart with 'super app'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+