Subscribe to Gizbot

'ಟ್ರೂ ಕಾಲರ್' ಆಪ್ ಬಳಸಿ ಹಣಕಳೆದುಕೊಳ್ಳಬೇಡಿ!!..ಈಗಲೇ ಎಚ್ಚರವಾಗಿ!?!

Written By:

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹಲವು ಸೇವೆಗಳನ್ನು ನೀಡುತ್ತಿರುವ 'ಟ್ರೂ ಕಾಲರ್' ಒಂದು ಉತ್ತಮ ಆಪ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಭಾರತದಾಧ್ಯಂತ ಹೆಚ್ಚು ಬಳಕೆಯಲ್ಲಿರುವ ಟ್ರೂ ಕಾಲರ್ ಆಪ್‌ನಿಂದಾಗುತ್ತಿರುವ ತಪ್ಪಿಗೆ ಗ್ರಾಹಕರು ಮೋಸ ಹೋಗಿ ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳ ವರದಿಯಾಗುತ್ತಿವೆ.!!

'ಟ್ರೂ ಕಾಲರ್' ಆಪ್ ಬಳಸಿ ಹಣಕಳೆದುಕೊಳ್ಳಬೇಡಿ!!..ಈಗಲೇ ಎಚ್ಚರವಾಗಿ!?!

ಹೌದು, 'ಟ್ರೂ ಕಾಲರ್' ಒಂದು ಖಾಸಾಗಿ ಆಪ್ ಆಗಿದ್ದು, ಜನರಿಂದಲೇ ಮಾಹಿತಿ ಸಂಗ್ರಹಿಸುವ ಈ ಆಪ್‌ನಲ್ಲಿನ ಕೆಲವು ಫೀಚರ್‌ಗಳನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿದ್ದು, ಜನರು ಮೋಸ ಹೋಗುತ್ತಿದ್ದಾರೆ. ಹಾಗಾಗಿ, ನೀವು ಟ್ರೂ ಕಾಲರ್ ಆಪ್ ಬಳಕೆ ಮಾಡುತ್ತಿದ್ದರೆ ಈ ಕೆಳಗಿನ ಎಚ್ಚರಿಕೆಯನ್ನು ಖಂಡಿತವಾಗಿ ಪಾಲಿಸಲೇಬೇಕಾಗುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ರೂ ಕಾಲರ್ ಮಹಿಮೆ !

ಟ್ರೂ ಕಾಲರ್ ಮಹಿಮೆ !

ನಮ್ಮ ಮೊಬೈಲ್ ಹೊಸ ನಂಬರ್‌ನಿಂದ ಕಾಲ್ ಬಂದರೆ ಟ್ರೂ ಕಾಲ್ ಅಪ್ಲಿಕೇಶನ್ ಅದನ್ನು ತೋರಿಸುತ್ತದೆ.! ಒಂದು ನಂಬರ್ ಅನ್ನು ಹೆಚ್ಚು ಜನರು ಯಾವ ಹೆಸರಿನಿಂದ ಮೊಬೈಲ್ ನಂಬರ್ ಸೇವ್ ಮಾಡಿಕೊಳ್ಳುತ್ತಾರೆ ಎಂಬುದರ ಮೂಲಕ ಟ್ರೂ ಕಾಲರ್ " ಆ ನಂಬರ್‌ನ ಹೆಸರನ್ನು ತನ್ನ ಬಳಕೆದಾರರಿಗೆ ತೋರಿಸುತ್ತದೆ.!!

ಉದಾಹರಣೆ ಹೀಗಿದೆ.!!

ಉದಾಹರಣೆ ಹೀಗಿದೆ.!!

ನಿಮ್ಮ ಮೊಬೈಲ್ ನಂಬರ್ ಅನ್ನು ನಿಮ್ಮ ಗೆಳೆಯರು ಹೇಗೆ ಸೇವ್ ಮಾಡಿದ್ದಾರೆ ಎಂಬುದನ್ನು ಟ್ರೂ ಕಾಲರ್ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಒಂದು ವೇಳೆ ನಿಮ್ಮದೇ ಮೊಬೈಲ್ ನಂಬರ್‌ಗೆ ಅವರು ಮತ್ತೊಂದು ಹೆಸರನ್ನು ಸೇವ್ ಮಾಡಿಕೊಂಡಿದ್ದರೆ ಆ ಹೆಸರು ಟ್ರೂ ಕಾಲರ್ ಆಪ್‌ನಲ್ಲಿ ಸೇವ್ ಆಗುತ್ತದೆ.!!

ಟ್ರೂ ಕಾಲರ್ ಹೇಳುವುದೆಲ್ಲಾ ನಿಜವಲ್ಲ.!!

ಟ್ರೂ ಕಾಲರ್ ಹೇಳುವುದೆಲ್ಲಾ ನಿಜವಲ್ಲ.!!

ಮೊದಲೇ ಹೇಳಿದಂತೆ ಒಂದು ನಂಬರ್ ಅನ್ನು ಟ್ರೂ ಕಾಲರ್ ಬಳಸುವ ಹಲವು ಹೇಗೆ ಸೇವ್ ಮಾಡಿದ್ದಾರೆ ಎಂದು ಟ್ರೂ ಕಾಲರ್ ನಮಗೆ ಹೇಳುತ್ತದೆ.!! ಹಾಗಾಗಿ, ಕೆಲ ಕ್ರಿಮಿನಲ್‌ಗಳು ಸೇರಿ ಒಂದೇ ಮೊಬೈಲ್ ಸಂಖ್ಯೆಯನ್ನು ಒಂದೇ ರೀತಿ ಸೇವ್ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ.!!

ಟ್ರೂ ಕಾಲರ್ ಆಪೇ ಬಂಡವಾಳ!!

ಟ್ರೂ ಕಾಲರ್ ಆಪೇ ಬಂಡವಾಳ!!

ಟ್ರೂ ಕಾಲರ್ ಬಳಕೆ ಮಾಡುವ ಹಲವರು ಟ್ರೂ ಕಾಲರ್ ಮುಖಾಂತರ ಬರುವ ಹೆಸರನ್ನೇ ನಂಬುತ್ತಿದ್ದಾರೆ.! ಹಾಗಾಗಿ, ಇದನ್ನು ದುರುಪಯೋಗ ಪಡಿಸಿಕೊಳ್ಳಲು ಮೋಸಗಾರರು ಮುಂದಾಗಿ, ಬ್ಯಾಂಕ್ ಮ್ಯಾನೇಜರ್ ಅಥವಾ ಬ್ಯಾಂಕ್ ಆಫೀಸರ್ ಅಂತ ಹೇಳಿ ಟ್ರೂ ಕಾಲರ್ ಬಳಕೆದಾರರಿಗೆ ಮೋಸ ಮಾಡುತ್ತಿದ್ದಾರೆ.!!

ಮೋಸ ಮಾಡುತ್ತಿರುವುದು ಹೇಗೆ?

ಮೋಸ ಮಾಡುತ್ತಿರುವುದು ಹೇಗೆ?

ಬ್ಯಾಂಕ್ ಮ್ಯಾನೇಜರ್ ಅಥವಾ ಬ್ಯಾಂಕ್ ಆಫೀಸರ್ ಅಂತ ಹೇಳಿ ಕರೆ ಮಾಡುವ ವಂಚಕರು ಬ್ಯಾಂಕ್ ಮಾಹಿತಿ ಕೇಳುತ್ತಾರೆ. ಇತ್ತ ಟ್ರೂ ಕಾಲರ್ ಬಳಕೆದಾರರು ಅದನ್ನು ಜನ ಎಂದು ನಂಬುವುದರಿಂದ ಕಾಲ್ ಮಾಡಿದ ವ್ಯಕ್ತಿಗೆ ಡೀಟೇಲ್ಸ್ ನೀಡುತ್ತಾರೆ. ಹೀಗೆ ನೀಡೀದ ಮರುಕ್ಷಣದಲ್ಲಿಯೇ ಅವರ ಅಕೌಂಟ್‌ನಲ್ಲಿದ್ದ ದುಡ್ಡು ಖಾಲಿಯಾಗುತ್ತದೆ.!!

How to Sharing a Mobile Data Connection with Your PC (KANNADA)
ಹಾಗಾಗಿ, ನೀವು ಹುಷಾರು.!!

ಹಾಗಾಗಿ, ನೀವು ಹುಷಾರು.!!

ಟ್ರೂ ಕಾಲರ್ ಆಪನಲ್ಲಿ ಕಾಣಿಸುವ ಯಾವುದೇ ಹೆಸರನ್ನು ನಂಬುಲೇಬೇಡಿ. ಅದಕ್ಕಿಂತಲೂ ಹೆಚ್ಚಾಗಿ, ಯಾವುದೇ ಕಾರಣಕ್ಕೂ ಬ್ಯಾಂಕ್ ಡೀಟೇಲ್ಸ್ ಅನ್ನು ಫೋನಿನಲ್ಲಿ ನೀಡಬೇಡಿ. ಏಕೆಂದರೆ, ಹೀಗೆ ಟ್ರೂ ಕಾಲರ್ ನಂಬಿ ತುಂಬಾ ಜನರು ಮೋಸ ಹೋಗಿದ್ದಾರೆ. ಅದರಲ್ಲಿ ನೀವೊಬ್ಬರು ಆಗುವುದು ಬೇಡ.!!

ಓದಿರಿ:ಬೆಂಗಳೂರಿನಲ್ಲಿ ದೇಶದ ಮೊದಲ ‘ಹೆಲಿ ಟ್ಯಾಕ್ಸಿ ಸೇವೆ' ಆರಂಭಕ್ಕೆ ಕ್ಷಣಗಣನೆ!!.ಬಡವರು ಸಹ ಬಳಸಬಹುದು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Please also note that You can always choose not to share Contact Information withTruecaller. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot