ಒಂದೇ ಆಪ್ ಬಳಕೆಗೆ ಅನುಮತಿ ನೀಡಿ ಸ್ಮಾರ್ಟ್‌ಫೋನ್ ಲಾಕ್ ಮಾಡಬಹುದು!! ಹೇಗೆ ಗೊತ್ತಾ!?
ನೀವು ನಿಮ್ಮ ಸ್ಮಾರ್ಟ್ ಫೋನ ನ್ನು ಇತರರ ಜೊತೆ ಹಂಚಿಕೊಳ್ಳುವುದಕ್ಕೆ ಇಚ್ಛಿಸುವುದಿಲ್ಲವೇ? ಅದೆಷ್ಟೋ ಸಂದರ್ಬದಲ್ಲಿ ನಾವು ನಮ್ಮ ಸ್ಮಾರ್ಟ್ ಫೋನನ್ನು ನಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳುವ ಸಂದರ್ಬ ಬರುತ್ತದೆ.
ಉದಾಹರಣೆಗೆ ನಿಮ್ಮ ತಂದೆ ನಿಮ್ಮ ಸೆಲ್ ಫೋನ್ ಬಳಶಿ ಒಂದು ಕರೆ ಮಾಡಲು ಕೇಳುತ್ತಾರೆ ಅಥವಾ ಮಕ್ಕಳು ನಿಮ್ಮ ಸ್ಮಾರ್ಟ್ ಫೋನನ್ನು ಆಟ ಆಡುವುದಕ್ಕಾಗಿ ಕೇಳುತ್ತಾರೆ. ಇಂತಹ ಸಂದರ್ಬಗಳಲ್ಲಿ, ಅವರು ಬಯಸುವ ಆಪ್ ಗಳಿಗೆ ಮಾತ್ರ ಆಕ್ಸಿಕ್ ಕೊಟ್ಟು ಹೇಗೆ ಅವರ ಕೈಗೆ ಮೊಬೈಲ್ ಕೊಡುವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡಿರಬಹುದು.

ಎಸ್, ಇಂತಹ ಸಂದರ್ಬಗಳಿಗಾಗಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನ ಒಳಗೆ ಒಂದು ಆಯ್ಕೆಯನ್ನು ನೀಡಲಾಗಿದೆ ಅದುವೇ “ಪಿನ್ ವಿಂಡೋಸ್” ಈ ವೈಶಿಷ್ಟ್ಯವು ನಿಮ್ಮನ್ನು ಪಿನ್ ಸ್ಪೆಸಿಫಿಕ್ ವಿಂಡೋಗಳನ್ನು ಮಾತ್ರ ತೆರೆಯಲು ಅವಕಾಶ ನೀಡುತ್ತದೆ ಮತ್ತು ಉಳಿದೆಲ್ಲ ಕಡೆ ಸ್ಮಾರ್ಟ್ ಫೋನ್ ಲಾಕ್ ಆಗಿರುವಂತೆ ನೋಡಿಕೊಳ್ಳುತ್ತದೆ.
ಒಂದು ವೇಳೆ ನೀವು ಇದನ್ನು ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ,ಅದಕ್ಕಾಗಿ ಒಂದು ಸರಳ ಸಲಹಾ ಮಾರ್ಗಗಳು ಇಲ್ಲಿವೆ ಮತ್ತು ಇದನ್ನು ನೀವೇ ಮಾಡಿಕೊಳ್ಳಬಹುದಾಗಿದೆ.
ಅಗತ್ಯತೆಗಳು:
• ನಿಮ್ಮ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಲಾಲಿಪಪ್ ಅಥವಾ ಅದಕ್ಕೂ ಮುಂದಿನ ವರ್ಷನ್ ನಲ್ಲಿ ರನ್ ಆಗುತ್ತಿರಬೇಕು

ಅನುಸರಿಸಬೇಕಾಗಿರುವ ಹಂತಗಳು :
1. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸೆಟ್ಟಿಂಗ್ಸ್ ನ್ನು ತೆರೆಯಿರಿ.
2. 'Security & Lock screen’ ಆಯ್ಕೆ ಗೆ ತೆರಳಿ.0
3. ಸ್ಕ್ರಾಲ್ ಡೌನ್ ಮಾಡಿ ಮತ್ತು 'Screen Pinning’ ಎಂಬ ಆಯ್ಕೆ ಯನ್ನು ಗಮನಿಸಿ ಮತ್ತು ಅದನ್ನು ಟ್ಯಾಪ್ ಮಾಡಿ ತೆರೆಯಿರಿ
4. ಈ ವೈಶಿಷ್ಟ್ಯವನ್ನು ಆಕ್ಟಿವೇಟ್ ಮಾಡಲು ಟಾಗಲ್ ಮಾಡಿ
5. ಜೊತೆಗೆ 'Ask for unlock pattern before unpinning’ ಆಯ್ಕೆಯನ್ನೂ ಕೂಡ ಆನ್ ಮಾಡಿ. ಇದು ನಿಮಗೆ ಪಾಸ್ ವರ್ಡ್ ಅಥವಾ ಪ್ಯಾಟರ್ನ್ ಆಯ್ಕೆ ಮಾಡುವಂತೆ ಹೇಳುತ್ತದೆ. ಅಂದರೆ ಆಪ್ ನ್ನು ಅನ್ ಪಿನ್ ಮಾಡಲು ಬಳಸಬೇಕಾಗಿರುವ ಪಾಸ್ ವರ್ಡ್ ಅಥವಾ ಪ್ಯಾಟರ್ನ್..
6. ಈಗ ನೀವು ಪಿನ್ ಮಾಡಬೇಕು ಎಂದುಕೊಂಡಿರುವ ಆಪ್ ನ್ನು ತೆರೆಯಿರಿ ಮತ್ತು 'Recent’ ಬಟನ್ ನ್ನು ಟ್ಯಾಪ್ ಮಾಡಿ.
7. ಆಪ್ ನ್ನು ಪಿನ್ ಮಾಡಲು 'Pin” ಐಕಾನ್ ನ್ನು ಪ್ರೆಸ್ ಮಾಡಿ
8.ಈಗ ನಿಮ್ಮ ಆಪ್ ಪಿನ್ ಆಗಿರುತ್ತದೆ. ನೀವು ಮತ್ತೊಂದು ಆಪ್ ನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ತೆರೆಯಬೇಕಿದ್ದರೆ ಆಪ್ ನ್ನು ಅನ್ ಪಿನ್ ಮಾಡಬೇಕಾಗುತ್ತದೆ
ಸೂಚನೆ: ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಉದಾಹರಣೆಗೆ ಸ್ಯಾಮ್ ಸಂಗ್ ಈ ಆಯ್ಕೆಯು 'Lock Screen and security’> 'Other security settings’> 'Pin windows’ನಲ್ಲಿ ಇರುತ್ತದೆ.


Click it and Unblock the Notifications








