PUBG, ಪೋರ್ಟ್‌ನೈಟ್‌ ಗೇಮ್‌ಗೆ ಕಾರಣವಾಗಿದೆ 90ರ ದಶಕದ ಈ ಗೇಮ್‌

|

90 ರ ದಶಕದಲ್ಲಿ ಗೇಮಿಂಗ್ ಜಗತ್ತನ್ನು ಆಳುತ್ತಿದ್ದ 2-ಡೈಮೆನ್ಷಷನಲ್ ಗೇಮ್ ಗಳಾದ ಮಾರಿಯೋ ಬ್ರೋಸ್, ಪ್ರಿನ್ಸ್ ಆಫ್ ಪರ್ಷಿಯಾ, ಕಾಂಟ್ರಾ ಮತ್ತು ಸ್ಟ್ರೀಟ್ಫೈಟರ್ ಮುಂತಾದವುಗಳು ಈಗಲೂ ಕೂಡ ತಮ್ಮ ಪ್ರಾಬಲ್ಯವನ್ನು ಇಂದಿನ ಗೇಮ್ ಗಳಲ್ಲಿ ಉಳಿಸಿಕೊಂಡಿವೆ ಎಂದರೆ ಆಶ್ಚರ್ಯವಾಗಬಹುದು.

ಗೇಮಿಂಗ್ ಕಂಪನಿ ಐಡಿ ಸಾಫ್ಟ್ವೇರ್ ತನ್ನ ಮೊದಲ 3D ಆಟ ಕ್ಯಾಟಕಾಮ್ 3-ಡಿ ಅನ್ನು 1991 ರಲ್ಲಿ ಬಿಡುಗಡೆ ಮಾಡಿತು ಮತ್ತು ಒಂದು ವರ್ಷದ ನಂತರ ಅದು ಹೊಸ ಅವತಾರದಲ್ಲಿ ಬಂತು ಮತ್ತು ಅದರ ಹೊಸ ಹೆಸರು Wolfenstein 3D.ಆದರೆ ಗೇಮಿಂಗ್ ಉದ್ಯಮದಲ್ಲಿ ಟ್ರೈಲ್ ಬ್ಲೇಜರ್ ಆಗುವಂತಹ ಆಟಗಳಿಗೆ ಇದು ಮುನ್ನುಡಿಯಾದಂತಾಯಿತು. ಒಂದು ವೇಳೆ ಈ ಗೇಮ್ ಗಳು ಸೆಟ್ ಆಗಿಲ್ಲದೇ ಇದ್ದಲ್ಲಿ ಇಂದಿನ ಪಿಯುಬಿಜಿ ಮತ್ತು ಫೋರ್ಟ್ ನೈಟ್ ಗೇಮ್ ಗಳು ಬಹುಶ್ಯಃ ಟ್ರೆಂಡ್ ಆಗುತ್ತಲೇ ಇರಲಿಲ್ಲ.

PUBG, ಪೋರ್ಟ್‌ನೈಟ್‌ ಗೇಮ್‌ಗೆ ಕಾರಣವಾಗಿದೆ 90ರ ದಶಕದ ಈ ಗೇಮ್‌

ಧೂಮ್ ಗೇಮ್ 1993 ರಲ್ಲಿ ಬಿಡುಗಡೆಗೊಂಡಿತ್ತು. ಇದೇ ಸಮಯದಲ್ಲಿ ಫಸ್ಟ್ ಪರ್ಸನ್ ಶೂಟರ್ ಪದ ಬಳಕೆಗೆ ಬಂತು ಅಥವಾ ಎಫ್ ಪಿಸಿ ಎಂದು ನಾವು ಇಂದು ಕರೆಯುವ ಗೇಮಿಂದ್ ಪದಬಳಕೆಯು ಹುಟ್ಟಿದ್ದೇ ಅಂದಿನಿಂದ. ಧೂಮ್ ಒಂದು ಸ್ಟೋರಿ ಬೇಸ್ಡ್ ಆಗಿರುವ ವಿಭಿನ್ನ ದೃಷ್ಟಿಕೋನದಲ್ಲಿ ಆಡಬಹುದಾದ ಆಟವಾಗಿತ್ತು ಆದರೆ ಇದು ಅಷ್ಟೊಂದು ಪ್ರಸಿದ್ಧಿಯಾಗಲು ಕಾರಣ ಇದರ ಗೇಮಿಂಗ್ ಪರಿಕಲ್ಪನೆ ಮತ್ತು ಅದರ ಪುನರ್ ವ್ಯಾಖ್ಯಾನ.

ಒಂದು ವೇಳೆ ನೀವು ಪಿಯುಬಿಜಿ ಅಥವಾ ಫೋರ್ಟ್ ನೈಟ್ ಗೇಮ್ ಗಳನ್ನು ನೀವು ಕಠಿಣವಾಗಿರುವ ಗೇಮ್ ಗಳು ಎಂದು ಅಂದುಕೊಳ್ಳುತ್ತಿದ್ದಲ್ಲಿ ಖಂಡಿತ ನೀವು ಧೂಮ್ ನ್ನು ಆಡುವುದಿಲ್ಲ. ಯಾಕೆಂದರೆ ಅದರಲ್ಲಿ ಮ್ಯಾಪ್ ಗಳಿಲ್ಲ, ಬ್ಯಾಕ್ ಅಪ್ ಟೀಮ್ ಗಳಿರುವುದಿಲ್ಲ, ಅಷ್ಟೇ ಯಾಕೆ ಕ್ರೈಸಿಸ್ ಗಳು ಇರುವುದಿಲ್ಲ.ಈಗಿನ ಆಟದಲ್ಲಿ ಇರುವ ಕೆಲವು ಫೀಚರ್ ಗಳು ಇಲ್ಲದೇ ಇದ್ದರೂ ಕೂಡ ಇಂದಿನ ಆಟದ ಫೀಚರ್ ಗಳಿಗೆ ಅಂದಿನ ಧೂಮ್ ಆಟ ಪ್ರಭಾವ ನೀಡಿರುವುದಂತೂ ಸುಳ್ಳಲ್ಲ. ಮರೆಮಾಚಿಕೊಂಡಿರುವ ಶಸ್ತ್ರಾಸ್ತ್ರಗಳು, ಹೆಲ್ತ್ ಕಿಟ್ ಗಳು ಹಾಗೂ ಇತರೆ ಕೆಲವು ಆಟದ ನಿಯಮಗಳು ಮತ್ತು ಫೆಸಿಲಿಟಿಗಳಿಗೆ ಸ್ಪೂರ್ತಿ ನೀಡಿದ್ದು ಅಂದಿನ ಧೂಮ್ ಆಟ.

ಇದಕ್ಕೆ ಸೇರ್ಪಡೆಯೆಂಬಂತೆ ಇನ್ನು ಕೆಲವು ಅಂಶಗಳು ಅಂದರೆ ಗೇಮ್ ನಲ್ಲಿ ಕ್ರೀಪಿ ಕ್ಯಾರೆಕ್ಟರ್ ಗಳು ಇದ್ದದ್ದು ಮತ್ತು ಭವಿಷ್ಯದ ಶಸ್ತ್ರಾಸ್ತ್ರಗಳು ಮತ್ತು ಅತ್ಯುತ್ತಮ ಗ್ರಾಫಿಕ್ಸ್ ಗಳು ಆ ಕಾಲದಲ್ಲೇ ಧೂಮ್ ನಲ್ಲಿದ್ದವು.ಈ ಗೇಮ್ ಮೂರು ಚಾಪ್ಟರ್ ನಲ್ಲಿ ಬಂದಿತ್ತು ಮತ್ತು ಮೊದಲ ಚಾಪ್ಟರ್ ಶೇರ್ ವೇರ್ ಆಗಿ ರಿಲೀಸ್ ಆಗಿತ್ತು. ಉಚಿತವಾಗಿ ಆಡಬಹುದಾಗಿದ್ದ ಆಟ ಇದು ಮತ್ತು ಯಾವುದೇ ಲೈಸನ್ಸ್ ಇಲ್ಲದೆ ಪಿಸಿಗೆ ಕಾಪಿ ಮಾಡಿಕೊಳ್ಳಲು ಈ ಗೇಮ್ ಆಟಗಾರರಿಗೆ ಅವಕಾಶ ನೀಡುತ್ತಿತ್ತು.ಆದರೆ ಎರಡನೇ ಚಾಪ್ಟರನ್ನು ಆಟಗಾರರು ಖರೀದಿಸಬೇಕಿತ್ತು. ಇದು ಇಂದಿನ ಗೇಮ್ ಗಳಲ್ಲಿ ಧೂಮ್ ನಿಂದ ಪ್ರಭಾವಕ್ಕೆ ಒಳಪಟ್ಟಿರುವ ಮತ್ತೊಂದು ಅಂಶವಾಗಿದೆ.

ಧೂಮ್ ಗೇಮನ್ನು ಯಾರು ಬೇಕಿದ್ದರೂ ಯಾವಾಗ ಬೇಕಿದ್ದರೂ ಆಡಬಹುದಾದ ಆಟವಾಗಿದೆ. ಅದೇ ಕಾರಣಕ್ಕೆ ಇದು ಅಷ್ಟೊಂದು ಪ್ರಸಿದ್ಧಿಯಾಯಿತು ಮತ್ತು ಅದೇ ಕಾರಣಕ್ಕೆ ಈ ಗೇಮ್ ಇಂದಿನ ಜಮಾನದ ಎಫ್ ಪಿಸಿ ಗೇಮ್ ಗಳ ಮೇಲೂ ಕೂಡ ತನ್ನ ಪ್ರಭಾವವನ್ನು ಬೀರಿದೆ. ನೀವು ಇಂದಿನ ಯಾವುದೇ ಎಫ್ ಪಿಸಿ ಟೈಟಲ್ ನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿ ನೀವು ಧೂಮ್ ಸ್ಟ್ಯಾಂಪ್ ನ್ನು ಎಲ್ಲಾ ಕಡೆ ನೋಡಲು ಸಾಧ್ಯವಾಗುತ್ತದೆ. ಧೂಮ್ ಗೇಮ್ ಇಲ್ಲದೆ ಇಂದಿನ ಯಾವ ಗೇಮ್ ಇದೆ ಎಂದು ಕೇಳಿದರೆ ಅದು ಕೆಲವರಿಗೆ ಉತ್ಪ್ರೇಕ್ಷೆ ಅನ್ನಿಸಬಹುದು ಆದರೆ ನೀವು ಧೂಮ್ ಆಟವನ್ನು ಆಡಿದವರೇ ಆಗಿದ್ದರೆ ಖಂಡಿತ ಉತ್ಪ್ರೇಕ್ಷೆ ಮಾಡುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ.

Best Mobiles in India

English summary
How this game laid the foundations for PUBG and Fortnite. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X