Home
Apps

ವಾವ್..! ಇನ್ಮುಂದೆ ನಂಬರ್ ಸೇವ್ ಮಾಡಂಗಿಲ್ಲ.. ನೇರವಾಗಿ Whatsapp Call ಮಾಡಬಹುದು.. ಈ ಟ್ರಿಕ್ ಗೊತ್ತಾ?

ವಾಟ್ಸಾಪ್ ಕರೆಗೆ ಸಂಬಂಧಿಸಿದ ಹೊಸ ವೈಶಿಷ್ಟ್ಯ ಬಿಡುಗಡೆ..! ನೀವು ಮೊಬೈಲ್ ನಂಬರ್ ಸೇವ್ ಮಾಡದೆಯೇ ವಾಟ್ಸಾಪ್‌ನಲ್ಲಿ ಕಾಲ್ ಮಾಡಬಹುದು! ಹೌದು, ದೇಶಾದ್ಯಂತ ಬಹುತೇಕ ಜನರು ವಾಟ್ಸಾಪ್ (WhatsApp) ಬಳಕೆ ಮಾಡುತ್ತಾರೆ. ಆದರೆ, ಮೊದಲು ಮೊಬೈಲ್ ನಂಬರ್ ಅನ್ನು ಸೇವ್ ಮಾಡದೇ ವಾಟ್ಸಾಪ್ ಕರೆಗಳನ್ನು ಮಾಡುವಲ್ಲಿ ತೊಂದರೆಗಳಿದ್ದವು. ಇದಕ್ಕಾಗಿ ನೀವು ಮೊದಲು ನಿಮ್ಮ ಮೊಬೈಲ್‌ನಲ್ಲಿ ನಂಬರ್ ಅನ್ನು ಸೇವ್ ಮಾಡಬೇಕು. ಆಗ ಮಾತ್ರ ನೀವು ವಾಟ್ಸಾಪ್ ಕರೆಗಳನ್ನು ಮಾಡಬಹುದು ಅಥವಾ ಸಂದೇಶಗಳನ್ನು ಕಳುಹಿಸಬಹುದು.

ಪ್ರಸ್ತುತ, ವಾಟ್ಸಾಪ್ ಈ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಫೋನ್‌ನಲ್ಲಿ ನಂಬರ್ ಡಯಲ್ ಮಾಡುವ ಮೂಲಕ ಕರೆ ಮಾಡುವಂತೆಯೇ, ಈಗ ನೀವು ಮೊಬೈಲ್ ಸಂಖ್ಯೆಯನ್ನು ಉಳಿಸದೆಯೇ ನೇರವಾಗಿ ವಾಟ್ಸಾಪ್ ಮೂಲಕ ಕರೆ (Whatsapp Calling) ಮಾಡಬಹುದು. ಈ ವೈಶಿಷ್ಟ್ಯವು ವಿತರಣಾ ಏಜೆಂಟ್‌ಗಳು, ಹೋಟೆಲ್‌ಗಳು, ಗ್ರಾಹಕ ಬೆಂಬಲ ಅಥವಾ ಇತರೆ ತಾತ್ಕಾಲಿಕ ಸಂಖ್ಯೆಗಳಿಗೆ ತುಂಬಾ ಉಪಯುಕ್ತವಾಗಿದೆ.

ಇನ್ಮುಂದೆ ನಂಬರ್ ಸೇವ್ ಮಾಡಂಗಿಲ್ಲ! ನೇರವಾಗಿ Whatsapp Call ಮಾಡಬಹುದು.. ಹೇಗೆ?

ಮೊಬೈಲ್ ನಂಬರ್ ಸೇವ್ ಮಾಡದೇ ವಾಟ್ಸಾಪ್‌ನಲ್ಲಿ ಕರೆ ಮಾಡುವುದು ಹೇಗೆ?

ನೀವು ಮೊದಲು ವಾಟ್ಸಾಪ್ ಓಪನ್ ಮಾಡಿ. ಬಳಿಕ ಕರೆ ವಿಭಾಗಕ್ಕೆ ಹೋಗಿ. ಇದರ ನಂತರ, ಮೇಲ್ಭಾಗದಲ್ಲಿರುವ '+' ಐಕಾನ್ ಮೇಲೆ ಟ್ಯಾಪ್ ಮಾಡಿ. ಆಗ 'Call the number' ಆಯ್ಕೆಯನ್ನು ಆರಿಸಿ. ಆಗ ಡಿಸ್ಪ್ಲೇಯ ಮೇಲೆ ಡಯಲಿಂಗ್ ಪ್ಯಾಡ್ ಓಪನ್ ಆಗುತ್ತದೆ.

ಮೊಬೈಲ್ ಬಂಬರ್ ನಮೂದಿಸಿದ ಬಳಿಕ, ಅದು ವಾಟ್ಸಾಪ್‌ನಲ್ಲಿ ಲಭ್ಯವಿದೆಯೇ ಎಂದು ನೀವು ಪರಿಶೀಲಿಸಬಹುದು. ಇದಾದ ಬಳಿಕ ನೀವು ನೇರವಾಗಿ ಆ ಸಂಖ್ಯೆಗೆ ಕರೆ ಮಾಡಬಹುದು.

ಇದರ ಹೊರತಾಗಿ, ನೀವು ಇನ್ನೊಂದು ವಿಧಾನವನ್ನು ಸಹ ಬಳಸಬಹುದು. ನೀವು ಒಂದು ಮೊಬೈಲ್ ಸಂಖ್ಯೆಯನ್ನು ಹೊಂದಿದ್ದರೆ ಮತ್ತು ಅದನ್ನು ಸೇವ್ ಮಾಡದೆ ಕಾಲ್ ಮಾಡಲು ಬಯಸಿದರೆ, ಇದು ಬ್ರೌಸರ್ ಮೂಲಕವೂ ಸಾಧ್ಯವಾಗುಲಿದೆ.

ಮೊದಲು ನಿಮ್ಮ ಫೋನ್‌ನಲ್ಲಿ ಕ್ರೋಮ್ (Chrome) ನಂತಹ ಬ್ರೌಸರ್ ಓಪನ್ ಮಾಡಿ. ಇದಾದ ಬಳಿಕ, ವಿಳಾಸ ಪಟ್ಟಿಯಲ್ಲಿ https://wa.me/91XXXXXXXXXX ಎಂದು ಟೈಪ್ ಮಾಡಿ. ನಂತರ ಗೋ ಒತ್ತಿ ವಾಟ್ಸಾಪ್ ಓಪನ್ ಮಾಡಿ. ಆಗ ನೀವು ಸುಲಭವಾಗಿ ಕಾಲ್ ಮಾಡಬಹುದು ಅಥವಾ ಮೆಸೇಜ್ ಕಳುಹಿಸಬಹುದು.

ಇದರಿಂದ ಯಾರಿಗೆ ಹೆಚ್ಚು ಲಾಭ?

ವಾಟ್ಸಾಪ್‌ನ ಈ ಹೊಸ ವೈಶಿಷ್ಟ್ಯವು ವಿಶೇಷವಾಗಿ ಹೊಸ ಸಂಖ್ಯೆಗಳಿಗೆ ಆಗಾಗ್ಗೆ ಚಾಟ್ ಮಾಡಲು ಅಥವಾ ಕರೆ ಮಾಡಲು ಬಯಸುವವರಿಗೆ ಉಪಯುಕ್ತವಾಗಿದೆ. ಆದರೆ, ಇದು ತಮ್ಮ ಕಾಂಟಾಕ್ಟ್ ಲೀಸ್ಟ್‌ನಲ್ಲಿ (ಸಂಪರ್ಕ ಪಟ್ಟಿ) ಮೊಬೈಲ್ ನಂಬರ್ ಸೇವ್ ಮಾಡಲು ಬಯಸದವರಿಗೆ ಇದು ಸಹಕಾರಿಯಾಗಿದೆ. ಒಟ್ಟಾರೆ, ವಾಟ್ಸಾಪ್ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ತನ್ನ ಬಳಕೆದಾರರ ಅನುಭವವನ್ನು ನಿರಂತರವಾಗಿ ಸುಧಾರಿಸುತ್ತಿದೆ. ಈಗ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡದೆಯೇ ನೇರವಾಗಿ ಕಾಲ್ ಮಾಡುವುದು ವೇಗವಾಗಿ, ಸುಲಭವಾಗಿ ಮತ್ತು ಹೆಚ್ಚು ಅನುಕೂಲಕರವಾಗಿದೆ.

ಎಐ ಸಹಾಯದಿಂದ ಗ್ರೂಪ್ ಐಕಾನ್

ಗುಂಪು ಚಾಟ್‌ಗಳಿಗಾಗಿ ವಾಟ್ಸಾಪ್ ಹೊಸ ಎಐ (AI) ಆಧಾರಿತ ಪ್ರೊಫೈಲ್ ಪಿಕ್ಚರ್ ಜನರೇಟರ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಪ್ರಸ್ತುತ, ಈ ವೈಶಿಷ್ಟ್ಯವನ್ನು ಪರೀಕ್ಷಿಸಲಾಗುತ್ತಿದೆ ಮತ್ತು ಸೀಮಿತ ಬೀಟಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಮೆಟಾ ಎಐ ಬಳಸಿ ವೈಯಕ್ತಿಕಗೊಳಿಸಿದ, ವಿಶಿಷ್ಟ ಗುಂಪು ಐಕಾನ್‌ಗಳನ್ನು ರಚಿಸಬಹುದು. ಆದರೆ, ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಯಾವಾಗ ಲಭ್ಯವಾಗುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ವಾಟ್ಸಾಪ್ ಎಐ (WhatsApp AI) ಪ್ರೊಫೈಲ್ ಪಿಕ್ಚರ್ ಜನರೇಟರ್ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ಇದು ಪಠ್ಯ ಪ್ರಾಂಪ್ಟ್ ಬಳಸಿ ತಮಗೆ ಬೇಕಾದ ಚಿತ್ರವನ್ನು ವಿವರಿಸುವ ಮೂಲಕ ಕಸ್ಟಮ್ ಗುಂಪು ಪ್ರೊಫೈಲ್ ಚಿತ್ರಗಳನ್ನು ರಚಿಸಲು ಅನುಮತಿಸುತ್ತದೆ. ಪ್ರಸ್ತುತ, ಈ ವೈಶಿಷ್ಟ್ಯವು ವೈಯಕ್ತಿಕ ಪ್ರೊಫೈಲ್ ಚಿತ್ರಗಳಿಗೆ ಲಭ್ಯವಿಲ್ಲ. ನೀವು ತಮ್ಮ ಗುಂಪಿನ ಥೀಮ್, ಆಸಕ್ತಿಗಳು ಅಥವಾ ವೈಬ್ ಅನ್ನು ಆಧರಿಸಿ ವಿವರಣೆಗಳನ್ನು ನಮೂದಿಸಬಹುದು. ಬಳಿಕ ಎಐ ಕೊಟ್ಟಿರುವ ಪ್ರಾಂಪ್ಟ್‌ಗೆ ಹೊಂದಿಕೆಯಾಗುವ ಚಿತ್ರವನ್ನು ರಚಿಸುತ್ತದೆ.

Best Mobiles in India

English summary
How to call on whatsapp without saving the number: follow this tips and tricks
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+