ವೈಫೈ ನೆಟ್ ವರ್ಕ್ ಸರಿಯಾಗಿ ಮ್ಯಾಕ್‌ಗೆ ಕನೆಕ್ಟ್ ಆಗುತ್ತಿಲ್ಲವೇ?..ಹೀಗೆ ಮಾಡಿ!

|

ಸ್ವಲ್ಪ ಸಮಯ ಕೆಲಸ ಮಾಡಿದ ನಂತರ ನೀವು ನಿಮ್ಮ ಮ್ಯಾಕ್ ವೈಫೈ ನೆಟ್ ವರ್ಕ್ ಗೆ ಕನೆಕ್ಟ್ ಆಗದೇ ಇರುವುದನ್ನು ಗಮನಿಸುತ್ತೀರಿ ಎಂದಿಟ್ಟುಕೊಳ್ಳೋಣ.ಆಗ ನೀವು ಸಾಮಾನ್ಯವಾಗಿ ನಿಮ್ಮ ಸಿಸ್ಟಮ್ ನ್ನು ರೀಸ್ಟಾರ್ಟ್ ಮಾಡುತ್ತೀರಿ ಮತ್ತು ಪುನಃ ಕನೆಕ್ಟ್ ಮಾಡುವುದಕ್ಕೆ ಪ್ರಯತ್ನಿಸುತ್ತೀರಿ. ಆದರೆ ಇದು ಎಲ್ಲಾ ಬಾರಿಯೂ ಕೆಲಸ ಮಾಡುವುದಿಲ್ಲ. ಮತ್ತು ಇಂತಹ ಸಂದರ್ಬದಲ್ಲಿ ನಿಮಗೆ ಏನು ಮಾಡಬೇಕು ಎಂದು ತಿಳಿದಿರುವುದಿಲ್ಲ.ನಾವಿಲ್ಲಿ ಕೆಲವು ಟ್ರಬಲ್ ಶೂಟಿಂಗ್ ಮೆಥೆಡ್ ನ್ನು ಬರೆದಿದ್ದೇವೆ.

ವೈಫೈ ನೆಟ್ ವರ್ಕ್ ಸರಿಯಾಗಿ ಮ್ಯಾಕ್‌ಗೆ ಕನೆಕ್ಟ್ ಆಗುತ್ತಿಲ್ಲವೇ?..ಹೀಗೆ ಮಾಡಿ!

1. ನಿಮ್ಮ ನೆಟ್ ವರ್ಕ್ ನ್ನು ಪರೀಕ್ಷಿಸಿ

ಮೊದಲ ಬಹುಮುಖ್ಯ ಪರೀಕ್ಷೆ ಯಾವುದಾಗಿರಬೇಕು ಎಂದರೆ ನಿಮ್ಮ ನೆಟ್ ವರ್ಕ್ ನಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದಾಗಿದೆ. ಮತ್ತೊಂದು ಡಿವೈಸ್ ನ್ನು ಕನೆಕ್ಟ್ ಮಾಡುವುದಕ್ಕೆ ಪ್ರಯತ್ನಿಸಿ. ಒಂದು ವೇಳೆ ಆ ಡಿವೈಸ್ ಕನೆಕ್ಟ್ ಆದರೆ ನಿಮ್ಮ ಮ್ಯಾಕ್ ನಲ್ಲೇ ಏನೋ ಸಮಸ್ಯೆ ಇದೆ ಎಂಬುದು ಖಾತ್ರಿಯಾಗುತ್ತದೆ ಮತ್ತು ಅದರ ಪರಿಹಾರಕ್ಕೆ ಪ್ರಯತ್ನ ನಡೆಸಬೇಕಾಗುತ್ತದೆ. 2. ಈಥರ್ ನೆಟ್ ಕೇಬಲ್ ನ್ನು ಚೆಕ್ ಮಾಡಿ

ಇಂಟರ್ನೆಟ್ ಕನೆಕ್ಷನ್ ಗೆ ನೀವು ಕೇಬಲ್ ಬಳಸುತ್ತಿದ್ದರೆ, LAN ಕೇಬಲ್ ನಲ್ಲಿ ಒಮ್ಮೊಮ್ಮೆ ಸಮಸ್ಯೆ ಇರುವ ಸಾಧ್ಯತೆ ಇರುತ್ತದೆ. ಕೇಬಲ್ ನ್ನು ಭದ್ರವಾಗಿ ಫಿಕ್ಸ್ ಮಾಡಲಾಗಿದೆಯೇ ಎಂಬುದನ್ನು ಪರೀಕ್ಷಿಸಿ, ಇಲ್ಲದೇ ಇದ್ದರೆ ಮತ್ತೊಂದು ಕೇಬಲ್ ಗೆ ರೀಪ್ಲಗ್ ಮಾಡಿ. LAN ಕೇಬಲ್ ನ್ನು ನೀವು ಕನೆಕ್ಟ್ ಮಾಡಿಲ್ಲದೇ ಇದ್ದರೂ ಕೂಡ ಕೆಲವು ಸಮಯದ ನಂತರ ಇದು ಇಂಟರ್ನೆಟ್ ಕನೆಕ್ಷನ್ ಆಕ್ಸಿಸ್ ನೀಡುವ ಸಾಧ್ಯತೆ ಇರುತ್ತದೆ.

3. ಸ್ಥಳ
ಕೆಲವೊಮ್ಮೆ ನಿಮ್ಮ ಮ್ಯಾಕ್ ಡಿವೈಸ್ ರೂಟರ್ ನಿಂದ ತುಂಬಾ ದೂರದಲ್ಲಿ ಇರಬಹುದು ಅಥವಾ ರೂಟರ್ ನ್ನು ದಪ್ಪನೆಯ ಗೋಡೆಯ ಹಿಂಭಾಗದಲ್ಲಿ ಇಟ್ಟಿರುವ ಸಾಧ್ಯತೆ ಇರುತ್ತದೆ ಅಥವಾ ರೂಟರ್ ಸರಿಯಾದ ಸ್ಥಾನದಲ್ಲಿ ಸರಿಯಾಗಿ ಫಿಕ್ಸ್ ಆಗಿಲ್ಲದೇ ಇರುವ ಸಾಧ್ಯತೆ ಇರುತ್ತದೆ. ಸರಿಯಾದ ಸಿಗ್ನಲ್ ರೂಟರ್ ನಿಂದ ಲಭ್ಯವಾಗದ ಕಾರಣದಿಂದ ಮ್ಯಾಕ್ ಗೆ ವೈಫೈ ಕನೆಕ್ಟ್ ಆಗಿಲ್ಲದೇ ಇರಬಹುದು.

4. ಸಾಮಾನ್ಯ ಅಂಶಗಳನ್ನು ಪರೀಕ್ಷಿಸಿ
ನಿಜವಾಗಿಯೂ ಮ್ಯಾಕ್ ನಲ್ಲಿ ವೈಫೈ ಆನ್ ಆಗಿ ಇದಿಯಾ ಅಥವಾ ಇಲ್ಲವಾ ಪರೀಕ್ಷಿಸಿ. ಒಂದು ವೇಳೆ ಆನ್ ಆಗಿದ್ದರೆ ಕನೆಕ್ಟ್ ಆಗಿರುವ ನೆಟ್ ವರ್ಕ್ ಸರಿಯಾದ ನೆಟ್ ವರ್ಕ್ ಹೌದೋ ಅಥವಾ ಅಲ್ಲವೋ ಎಂಬುದನ್ನು ಗಮನಿಸಿ. ಬೇರೆ ನೆಟ್ ವರ್ಕ್ ಗೆ ಕನೆಕ್ಟ್ ಮಾಡಿರುವ ಸಾಧ್ಯತೆ ಇರುತ್ತದೆ. ಯಾವುದಕ್ಕೂ ಒಮ್ಮೆ ಪರೀಕ್ಷಿಸಿಕೊಳ್ಳಿ.

5. ಅಪ್ ಡೇಟ್
ಮ್ಯಾಕ್ ಓಎಸ್ ನ್ನು ಅಪ್ ಡೇಟ್ ಮಾಡಿಕೊಳ್ಳಿ. ಓಟ್ ಡೇಟ್ ಆಗಿರುವ ಸಾಫ್ಟ್ ವೇರ್ ನಿಂದ ಕೂಡ ಕೆಲವೊಮ್ಮೆ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ.ಮೇಲ್ಬಾಗದ ಎಡ ಕಾರ್ನರ್ ನಲ್ಲಿರುವ ಆಪಲ್ ಲೋಗೋ ಕ್ಲಿಕ್ಕಿಸುವ ಮೂಲಕ ನೀವಿದನ್ನು ಮಾಡಬಹುದು. “About This Mac”ನ್ನು ಕ್ಲಿಕ್ಕಿಸಿ ಮತ್ತು ಅದರಲ್ಲಿ ಸಾಫ್ಟ್ ವೇರ್ ಅಪ್ ಡೇಟ್ ಆಯ್ಕೆ ಇದಿಯಾ ಎಂಬುದನ್ನು ನೀವು ಗಮನಿಸಬಹುದು.

6. ವೈಫೈ ನೆಟ್ ವರ್ಕ್ ನ್ನು ಮರೆತಿದ್ದೀರಾ?
ಕೆಲವೊಮ್ಮೆ ಸಿಂಪಲ್ ಟ್ರಿಕ್ ಕೆಲಸ ಮಾಡಿರುತ್ತದೆ. ಒಮ್ಮೆ ನಿಮ್ಮ ನೆಟ್ ವರ್ಕ್ ನ್ನು ಮರೆತುಬಿಡಿ ಮತ್ತು ಕ್ರಿಡೆನ್ಶಿಯಲ್ಸ್ ನ್ನು ಪುನಃ ಎಂಟರ್ ಮಾಡಿ ಮತ್ತು ರಿಕನೆಕ್ಟ್ ಮಾಡಿ. ಇದನ್ನು ಮಾಡುವುದಕ್ಕಾಗಿ ಆಪಲ್ ಲೋಗೋವನ್ನು ಕ್ಲಿಕ್ಕಿಸಿ ಮತ್ತು ಸಿಸ್ಟಮ್ ಪ್ರಿಫರೆನ್ಸ್ ಗೆ ತೆರಳಿ> ನೆಟ್ ವರ್ಕ್> ಅಡ್ವಾನ್ಸ್ಡ್ ಗೆ ತೆರಳಿ. ನೆಟ್ ವರ್ಕ್ ಗಳ ಪಟ್ಟಿ ನಿಮಗೆ ಸಿಗುತ್ತದೆ. ಮತ್ತು ನೀವು ಡಿಸ್ಕನೆಕ್ಟ್ ಮಾಡುವುದನ್ನು ಸೆಲೆಕ್ಟ್ ಮಾಡಿ ಮತ್ತು ಮೈನಸ್ ಸೈನ್ ನ್ನು ಕ್ಲಿಕ್ಕಿಸಿ.


7. ರೂಟರ್ ಚಾನಲ್ ನ್ನು ಚೇಂಜ್ ಮಾಡಿ
ರೂಟರ್ ಗಳು ಕನೆಕ್ಟ್ ಆಗುವುದಕ್ಕೆ ಚಾನಲ್ ಗಳನ್ನು ಬಳಸುತ್ತವೆ. ಕೆಲವೊಮ್ಮೆ ಚಾನಲ್ ಗಳು ಬ್ಯುಸಿಯಾಗಿರುತ್ತದೆ. ಅದೇ ಕಾರಣಕ್ಕೆ ಕನೆಕ್ಷನ್ ನಿಧಾನವಾಗುತ್ತದೆ. ಚಾನಲ್ ನ್ನು ಚೇಂಜ್ ಮಾಡುವುದಕ್ಕಾಗಿ ನಿಮ್ಮ ರೂಟರ್ ನ್ನು ಐಪಿ ನಿಮಗೆ ತಿಳಿದಿರಬೇಕಾಗಿರುತ್ತದೆ.ನೆಟ್ ವರ್ಕ್ ಗೆ ತೆರಳಿ >TCP/IP. ನಿಮ್ಮ ನೆಟ್ ವರ್ಕ್ ನ ವಿರುದ್ಧವಾಗಿ ರೂಟರ್ ಐಪಿ ಇರುತ್ತದೆ. ನಿಮ್ಮ ಬ್ರೌಸರ್ ನ ಅಡ್ರೆಸ್ ಬಾರ್ ನಲ್ಲಿ ಇದನ್ನು ಕಾಪಿ ಮಾಡಿ. ರೂಟರ್ ಚಾನಲ್ ನ್ನು ಮಾನಿಟರ್ ಮಾಡುವುದಕ್ಕೆ ಇದು ನೆರವಾಗುತ್ತದೆ. ಇದರಲ್ಲಿ ಪಾಸ್ ವರ್ಡ್ ಇರುತ್ತದೆ.ಒಂದು ವೇಳೆ ನೀವಿದನ್ನು ಚೇಂಜ್ ಮಾಡಿಲ್ಲದೇ ಇದ್ದಲ್ಲಿ ಗೂಗಲ್ ಮಾಡಬಹುದು.

8. DHCP ರಿನ್ಯೂ ಮಾಡುವಿಕೆ

DHCP ನಿಮ್ಮ ಮ್ಯಾಕ್ ಗೆ ಐಪಿ ಅಡ್ರೆಸ್ ನ್ನು ಅಸೈನ್ ಮಾಡುತ್ತದೆ. ಇದನ್ನು ರಿನ್ಯೂ ಮಾಡುವುದರಿಂದಾಗಿ ನಿಮ್ಮ ನೆಟ್ ವರ್ಕ್ ನ್ನು ಸರಿಯಾಗಿ ರೀಕನೆಕ್ಟ್ ಮಾಡುವುದಕ್ಕೆ ಸಹಾಯವಾಗುತದೆ. TCP/IP ಸೆಕ್ಷನ್ ಗೆ ವಿಸಿಟ್ ಮಾಡುವ ಮೂಲಕ ನೀವಿದ್ದನ್ನು ಸಾಧಿಸಬಹುದು ಮತ್ತು DHCP ಲೀಸ್ ನ್ನು ಕ್ಲಿಕ್ಕಿಸಿ ರಿವ್ಯೂ ಮಾಡಬಹುದು.


9. DNS ಸೆಟ್ಟಿಂಗ್ಸ್ ನ್ನು ಚೇಂಜ್ ಮಾಡಿ
ಡಿಎನ್ಎಸ್ ನ್ನು ಬದಲಾಯಿಸುವುದರಿಂದಾಗಿ ಹಲವು ಲಾಭಗಳಿದೆ. ಇದು ಡೊಮೈನ್ ಹೆಸರಿಗೆ ನಿಮ್ಮ ಐಪಿಯನ್ನು ಮ್ಯಾಚ್ ಮಾಡುತ್ತದೆ ಮತ್ತು ಕನೆಕ್ಷನ್ ಗೆ ಸಹಕರಿಸುತ್ತದೆ. ನೆಟ್ ವರ್ಕ್ ನ ಅಡಿಯಲ್ಲಿರುವ ಅಡ್ವಾನ್ಸ್ಡ್ ಗೆ ತೆರಳಿ> DNS > DNS ಸರ್ವರ್ಸ್.ಪ್ಲಸ್ ಸೈನ್ ನ್ನು ಕ್ಲಿಕ್ಕಿಸಿ.ಆನ್ ಲೈನ್ ನಲ್ಲಿ ಲಭ್ಯವಿರುವ ಯಾವುದೇ ಡಿಎನ್ಎಸ್ ನಂಬರ್ ಗೆ ಬದಲಾಯಿಸಿ. ಗೂಗಲ್ ನದ್ದು 8.8.8.8.

Best Mobiles in India

English summary
Select Wi-Fi from the left pane, click the Network Name drop-down menu, then select the Wi-Finame you want to connect to. NOTE: Depending on your Mac version, Wi-Fi might display as AirPort.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X