Home
Apps

ಆಂಡ್ರಾಯ್ಡ್ ಫೋನಿನಲ್ಲಿ ಅಲೆಕ್ಸಾ ವಾಯಿಸ್ ಅಸಿಸ್ಟೆಂಟ್ ಬಳಕೆ ಹೇಗೆ?

By Sushma Charhra

ಪ್ರಪಂಚದ ಸಿಯಾಟಲ್ ಜಾತ್ರೆ 1962. IBM ಪೆವಿಲಿಯನ್ ತನ್ನ IBM ಶೂಬಾಕ್ಸ್ ನ್ನು ಪ್ರದರ್ಶಿಸಿತ್ತು. ಆ ಷೂ ಬಾಕ್ಸ್ ನ ಸ್ಪೆಷಾಲಿಟಿ ಏನೆಂದರೆ ಅದು ಧ್ವನಿಯನ್ನು ಮತ್ತು ಗಣಿತದ ಕಾರ್ಯಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿತ್ತು. ಇದು ಮಾತನಾಡಿದ 16 ಪದಗಳನ್ನು ಮತ್ತು 0-9 ರ ವರೆಗಿನ ಎಲ್ಲಾ ಸಂಖ್ಯೆಗಳನ್ನು ಗುರುತಿಸುತ್ತಿತ್ತು. ಇದು ಸಾಧಾರಣವಾಗಿ ಒಂದು ಅಮೇರಿಕಾದ ಶೂ ಬಾಕ್ಸ್ ನಷ್ಟಿತ್ತು. ನೀವೇನು ಮಾಡಬೇಕೆಂದರೆ, ಸಾಧನಕ್ಕೆ ಏನು ಮಾಡಬೇಕು ಎಂದು ಹೇಳಬೇಕಿತ್ತು. ಅದನ್ನು ಅದು ಮಾಡುತ್ತಿತ್ತು.

ಆಂಡ್ರಾಯ್ಡ್ ಫೋನಿನಲ್ಲಿ ಅಲೆಕ್ಸಾ ವಾಯಿಸ್ ಅಸಿಸ್ಟೆಂಟ್ ಬಳಕೆ ಹೇಗೆ?

ಮೊದಲ ಧ್ವನಿ ಸಹಾಯಕದ ಬಗ್ಗೆ ಚರ್ಚೆಗಳು ಆರಂಭವಾಗಿ 60 ವರ್ಷಗಳು ಸಂದಿವೆ. ಗ್ರಾಹಕನ ಗ್ರಹಿಕೆಯಂತೆ ಈಗ ಅದು ಆಶ್ಚರ್ಯದ ಕೇಂದ್ರಬಿಂದುವಾಗಿ ಉಳಿದಿಲ್ಲ. ಸಣ್ಣ ಮಟ್ಟದ ಗಣಿತದ ಕೆಲಸಗಳಿಗಾಗಿ ಮಾತ್ರವಲ್ಲ ಬದಲಾಗಿ ಹಲವಾರು ಗಣಿತದ ಕೆಲಸಗಳನ್ನು ಮಾಡಲು, ಗೂಗಲ್ ನಲ್ಲಿ ಹುಡುಕಾಡುವಿಕೆಗೆ, ಹೋಟೆಲ್ ಗಳ ಹುಡುಕಾಟಕ್ಕೆ, ಟಿಕೆಟ್ ಬುಕ್ ಮಾಡಲು, ಹೀಗೆ ಸಣ್ಣಸಣ್ಣ ಕೆಲಸಗಳಿಂದ ಹಿಡಿದು ದೊಡ್ಡದೊಡ್ಡ ಕೆಲಸಗಳಿಗೂ ಕೂಡ ಧ್ವನಿ ಸಹಾಯಕವನ್ನು ಬಳಸುವಷ್ಟರ ಮಟ್ಟಿಕೆ ನಾವು ಮುಂದುವರಿದುಬಿಟ್ಟಿದ್ದೇವೆ.,

ಅಮೇಜಾನ್ ಈಕೋ ಪ್ಲಸ್: ಹಂತಗಳು ಹೇಗೆ,ಕೌಶಲಗಳನ್ನು ಸೇರಿಸಿ ಮತ್ತು ಆಜ್ಞೆ ನೀಡಿ.

ಅಮೇಜಾನ್ ಈಕೋ ಮತ್ತು ಗೂಗಲ್ ಹೋಮ್ ಗಳು ಹೋಮ್ ಆಟೋಮೇಷನ್ ಸಿಸ್ಟಮ್ ನಲ್ಲಿ ದೊಡ್ಡ ಹೆಸರು ಗಳಿಸಿವೆ. ಅಲೆಕ್ಸಾ ಅನ್ನುವುದು ಧ್ವನಿ ಸಹಾಯಕವಾಗಿ ಅಮೇಜಾನ್ ಈಕೋ ಮತ್ತು ಅಮೇಜಾನ್ ಈಕೋ ಡಾಟ್ ಸ್ಮಾರ್ಟ್ ಸ್ಪೀಕರ್ ನಲ್ಲಿ ಮೊದಲ ಬಾರಿಗೆ ಬಳಸಲಾಗಿದ್ದು ಅಮೇಜಾನ್ ಲ್ಯಾಬ್ 126 ನಿಂದ ಇದನ್ನು ತಯಾರಿಸಲಾಗಿದೆ. ಅಲೆಕ್ಸಾ ಹಲವು ಸಾಧನಗಳನ್ನು ಒಮ್ಮೆಲೆ ಕಂಟ್ರೋಲ್ ಮಾಡುವ ಸಾಮರ್ಥ್ಯ ಹೊಂದಿದೆ. ಅಲೆಕ್ಸಾ ವನ್ನು ಆಂಡ್ರಾಯ್ಡ್ ಗೂ ತರಲಾಗಿದ್ದು, ಅಲೆಕ್ಸಾಗೆ ಗೊತ್ತಿರುವ ಎಲ್ಲಾ ಕಾರ್ಯಗಳನ್ನು ಇಲ್ಲಿ ಮಾಡಬಹುದಾಗಿದೆ.

ನಿಮ್ಮ ಫೋನಿಗೆ ಅಲೆಕ್ಸಾ ಹಾಕಿಕೊಳ್ಳುವುದು ಹೇಗೆ . ಈ ಹಂತಗಳನ್ನು ಅನುಸರಿಸಿ

1 . ಅಮೇಜಾನ್ ಅಲೆಕ್ಸಾ ಆಪ್ ಡೌನ್ ಲೋಡ್ ಮಾಡಿ ಮತ್ತು ಅದನ್ನು ನಿಮ್ಮ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿ.

2 . ಇನ್ಸ್ಟಲೇಷನ್ ಮುಗಿದ ನಂತರ ನಿಮ್ಮ ಅಮೇಜಾಬ್ ಅಕೌಂಟಿಗೆ ಲಾಗಿನ್ ಆಗಬೇಕು.

3. ನಿಮ್ಮ ಡಿವೈಸ್ ನಲ್ಲಿ ಸೆಟ್ಟಿಂಗ್ಸ್ ನ್ನು ಪ್ರವೇಶಿಸಿ, ಆಪ್ಸ್ ಎಂಡ್ ನೋಟಿಫಿಕೇಷನ್ ಗೆ ಹೋಗಿ ಅಲ್ಲಿ ಅಡ್ವಾಸ್ಸ್ಡ್ ನ್ನು ಕ್ಲಿಕ್ಕಿಸಿ

4. ಡಿಫಾಲ್ಟ್ ಆಪ್ ನ್ನು ಕ್ಲಿಕ್ಕಿಸಿ, ಅಸಿಸ್ಟ್ ಎಂಡ್ ವಾಯ್ಸ್ ಇನ್ ಫುಟ್ ನ್ನು ಸೆಲೆಕ್ಟ್ ಮಾಡಿ, ನಂತರ ಅಸಿಸ್ಟ್ ಆಪ್ ನ್ನು ಕ್ಲಿಕ್ಕಿಸಿ

5. ಈಗ ನಿಮ್ಮ ಮೊಬೈಲ್ ನಲ್ಲಿ ಅಲೆಕ್ಸಾ ಲಭ್ಯವಾಗಿರುತ್ತೆ.

6. ಅದನ್ನು ಬಳಕೆ ಮಾಡಬೇಕು ಎಂದರೆ ನೀವು ನಿಮ್ಮ ಹೋಮ್ ಸ್ಕ್ರೀನ್ ನಲ್ಲಿ ಲಭ್ಯವಾಗಿರುವ ಅಲೆಕ್ಸಾವನ್ನು ಟ್ಯಾಪ್ ಮಾಡಿ ಹೋಲ್ಡ್ ಮಾಡಬೇಕು.

ಮೊದಲ ಬಾರಿಗೆ ನೀವು ಅಲೆಕ್ಸಾವನ್ನು ನೀವು ಬಳಸುತ್ತಿದ್ದೀರಾದರೆ ಮೈಕ್ರೋಫೋನ್ ಮತ್ತು ಲೋಕೆಷನ್ ನ್ನು ಬಳಸಲು ಅದು ಪರ್ಮಿಷನ್ ಕೇಳಲಿದೆ. ಅಲೆಕ್ಸಾ ಬಳಕೆ ಒಂದು ದೊಡ್ಡ ಪ್ರತಿಕೂಲತೆ ಎಂದರೆ, ನೀವು ಮಾತನಾಡುವ ಪ್ರತಿ ಪದದ ಹಿಂದೆಯೂ wake ಪದವನ್ನು ಬಳಕೆ ಮಾಡಬೇಕಾಗುತ್ತದೆ. ಉದಾಹರಣೆಗೆ wake ಅಲೆಕ್ಸಾ ಪ್ಲೀಸ್ ಡು ದಿಸ್ ಹಾಗೆ... ಆದರೆ ಹ್ಯಾಂಡ್ ಫ್ರೀ ಅನುಕೂಲತೆಯೂ ಇದರಲ್ಲಿ ಇಲ್ಲ. ನಿಮಗೆ ಅಮೆಜಾನ್ ಅಲೆಕ್ಸಾ ಗೆ ಆಕ್ಸಿಕ್ ಸಿಗಬೇಕೆಂದರೆ ಪವರ್ ಬಟನ್ ನ್ನು ಒತ್ತಿಕೊಂಡೇ ಇರಬೇಕು.

ಗೂಗಲ್ ಪಿಕ್ಸಲ್ ಫೋನ್ ನಲ್ಲಿರುವ ಆಕ್ಟೀವ್ ಎಡ್ಜ್ ಫೀಚರ್ ಧ್ವನಿ ಸಹಾಯಕವನ್ನು ನಿಮ್ಮ ಫೋನ್ ನ್ನು ಕ್ವೀಝ್ ಮಾಡುವ ಮೂಲಕವೇ ಆಕ್ಟೀವೇಟ್ ಮಾಡಲು ಅವಕಾಶ ನೀಡುತ್ತೆ. ಆಂಡ್ರಾಯ್ಡ್ ಗಳಿಗೆ ತನ್ನದೇ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಗಳಿರುತ್ತೆ. ಅದನ್ನು ಆಕ್ಟೀವೇಟ್ ಮಾಡವು ಕೇವಲ ಸ್ಕೀಝ್ ಮಾಡಿದರೆ ಸಾಕು., ಆದರೆ ಅಮೆಜಾನ್ ಅಲೆಕ್ಸಾ ಹಾಗಲ್ಲ. ಈ ವೈಶಿಷ್ಟ್ಯವನ್ನು ಅದು ಹೊಂದಿಲ್ಲ.ಆದರೆ ಇದನ್ನು ಗೂಗಲ್ ಗೂಗಲ್ ಪಿಕ್ಸಲ್ 2 ಫೋನ್ ನಲ್ಲಿ ಮಾರ್ಪಡಿಸಲು ಅವಕಾಶವಿದೆ., ಈ ವೈಶಿಷ್ಯವನ್ನು ಹೊಸ ಸ್ಯಾಮಸಂಗ್ ಫೋನ್ ಗಳಲ್ಲಿ ಕಾಣಬಹುದಾಗಿದೆ.

Best Mobiles in India

English summary
Make Alexa your primary voice assistant on Android with these simple tricks.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+