ಆಂಡ್ರಾಯ್ಡ್ ಆಟೋ: ಕಾರು ಓಡಿಸಲು ಇದೊಂದೇ ಆಪ್ ಸಾಕು..!
ಕಾರು ಚಾಲನೆ ಮಾಡುವ ಸಂದರ್ಭದಲ್ಲಿ ಚಾಲಕರಿಗೆ ಸಹಾಯ ಮಾಡುವ ಸಲುವಾಗಿಯೇ ಗೂಗಲ್ ಹೊಸದೊಂದು ಆಪ್ ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಸಾಕಷ್ಟು ಹೊಸ ಆಯ್ಕೆಗಳು ಲಭ್ಯವಿದ್ದು, ಡ್ರೈವಿಂಗ್ ಸಂದರ್ಭದಲ್ಲಿ ಸ್ಮಾರ್ಟ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ, ಬಳಕೆದಾರರಿಗೆ ಚಾಲನೆಯಲ್ಲಿ ಹೆಚ್ಚಿನ ಗಮನ ಹರಿಸುವಂತೆ ಮಾಡಲು ಸಹಾಯ ಮಾಡಲಿದೆ. ಈ ಹಿನ್ನಲೆಯಲ್ಲಿ ಗೂಗಲ್ ಆಂಡ್ರಾಯ್ಡ್ ಆಟೋ ಆಪ್ ಲಾಂಚ್ ಮಾಡಿದ್ದು, ಈ ಕುರಿತ ಮಾಹಿತಿಯೂ ಮುಂದಿದೆ.

ಇದಲ್ಲದೇ ಆಂಡ್ರಾಯ್ಡ್ ಆಟೋ ಆಪ್ ನಲ್ಲಿ ನಿಮ್ಮ ಕಾರಿನ ಬ್ಲೂಟೂತ್ ಮ್ಯೂಸಿಕ್ ಸಿಸ್ಟಮ್ ಅನ್ನು ನಿಯಂತ್ರಿಸುವ ಅವಕಾಶವನ್ನು ಮಾಡಿಕೊಡಲಿದೆ. ಇದರಿಂದಾಗಿ ನಮ್ಮ ಪ್ರಯಾಣವು ಸುಖಕರವಾಗಲಿದೆ. ಈ ಹೊಸ ಆಪ್ ನಲ್ಲಿ ಮ್ಯೂಸಿಕ್, ನ್ಯಾವಿಗೇಷನ್, ಕರೆ ಮತ್ತು ಮೇಸೆಜ್ ಮಾಡುವ ಅವಕಾಶ ಮಾತ್ರವೇ ದೊರೆಯಲಿದೆ.
ಡೌನ್ ಲೋಡ್ ಮಾಡಿ:
ಮೊದಲಿಗೆ ಪ್ಲೇ ಸ್ಟೋರಿನಲ್ಲಿ ಆಪ್ ಡೌನ್ ಲೋಡ್ ಮಾಡಿಕೊಳ್ಳಿ, ನಂತರದಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಮ್ಯೂಸಿಕ್ ಸಿಸ್ಟಮ್ ನೊಂದಿಗೆ ಕನೆಕ್ಟ್ ಮಾಡಿಕೊಳ್ಳಿ.
ಆರಂಭಿಸಿ:
1. ಆಂಡ್ರಾಯ್ಡ್ ಆಪ್ ಓಪನ್ ಮಾಡಿ, ಗೆಟ್ ಸ್ಟ್ರಾಟೆಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
2. ನಂತರ ಆಕ್ಸೆಪ್ಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
3. ಕಂಟಿನ್ಯೂ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಬ್ಲೂಟೂತ್ ಡಿವೈಸ್ ಸೆಲೆಕ್ಟ್ ಮಾಡಿಕೊಂಡು ಟರ್ನ್ ಆನ್ ಮಾಡಿ.
ಆಪ್ ಬಳಕೆ ಹೇಗೆ:
1. ನೀವು ಆಂಡ್ರಾಯ್ಡ್ ಆಟೋ ಆಪ್ ಬಳಕೆ ಮಾಡಿಕೊಂಡು ಪೋನ್ ಕರೆಗಳನ್ನು ಮಾಡಿಬಹುದು, ಮೇಸೆಜ್ ಗಳಿಗೆ ರಿಪ್ಲೇಯನ್ನು ನೀಡಬಹುದು ಎನ್ನಲಾಗಿದೆ. ಇದಲ್ಲದೇ ನೋಟಿಫಿಕೇಷನ್ ಗಳು ಸಹ ಇದರಲ್ಲಿ ಕಾಣಿಸಿಕೊಳ್ಳಲಿದೆ.
2. ಇದಲ್ಲದೇ ನೀವು ನ್ಯಾವಿಗೇಷನ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ಗೂಗಲ್ ಅಸಿಸ್ಟೆಂಟ್ ಸೇವೆಯನ್ನು ಬಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ವಾಯ್ಸ್ ಕಮ್ಯಾಂಡ್ ನೀಡಬಹುದಾಗಿದೆ.
3. ಅಲ್ಲದೆ ಆಂಡ್ರಾಯ್ಡ್ ಆಟೋ ಆಪ್ ನಲ್ಲಿ ಮಾತ್ರವೇ ಕಾರ್ಯನಿರ್ವಹಿಸುವ ಆಪ್ ಕೆಲವುಗಳನ್ನು ನೀವು ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ.


Click it and Unblock the Notifications








