Home
Apps

ಜಿಮೇಲ್ ನಲ್ಲಿ ಹೊಸ ಆಯ್ಕೆ: ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ...!

By Precilla Dias

ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಿರುವ ಜಿಮೇಲ್ ಕುರಿತು ಗೂಗಲ್ ಸಾಕಷ್ಟು ತಲೆ ಕಡೆಸಿಕೊಂಡಿದ್ದು, ತನ್ನ ಬಳಕೆದಾರರಿಗೆ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಹೊಸ ಹೊಸ ಆಯ್ಕೆಗಳು ಬಳಕೆದಾರರಿಗೆ ಜಿಮೇಲ್ ಅನ್ನು ಇನ್ನಷ್ಟು ಸುಲಭವಾಗಿಸುವುದಲ್ಲದೇ, ಜಿಮೇಲ್ ವಿನ್ಯಾಸವನ್ನು ಉತ್ತಮ ಪಡಿಸುತ್ತಿದೆ. ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರಿಗೆ ಕಾನ್ಪಿಡೇನ್ಷಿಯಲ್ ಮೋಡ್ ಅನ್ನು ಜಿಮೇಲ್ ನೀಡಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.

ಜಿಮೇಲ್ ನಲ್ಲಿ ಹೊಸ ಆಯ್ಕೆ: ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ...!

ಇಂದಿನ ದಿನದಲ್ಲಿ ಎಲ್ಲಾ ಆಪ್ ಗಳು ಅಭಿವೃದ್ಧಿ ಹೊಂದುತ್ತಿದ್ದು, ಇದೇ ಮಾದರಿಯಲ್ಲಿ ಜಿಮೇಲ್ ಸಹ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಇದೇ ಮಾದರಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗುತ್ತಿದರುವ 24 ಗಂಟೆಗಳು ಕಾಣಿಸಿಕೊಳ್ಳುವ ಸ್ಟೋರಿಗಳ ಮಾದರಿಯಲ್ಲಿ ಜಿಮೇಲ್ ಕಾನ್ಪಿಡೇನ್ಷಿಯಲ್ ಮೋಡ್ ನಲ್ಲಿ ಕಳುಹಿಸಿದ ಮೇಲ್ 24 ಗಂಟೆ ಇಲ್ಲವೇ ಬಳಕೆದಾರರು ನಿಗಧಿಪಡಿಸಿದ ಸಮಯದಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿದ್ದು, ನಂತರದಲ್ಲಿ ಕಾಣೆಯಾಗಲಿದೆ. ಇದಕ್ಕೇ ಪಾಸ್ ಕೋಡ್ ಅನ್ನು ಸಹ ನೀಡುವ ಅವಕಾಶ ಮಾಡಿಕೊಡಲಾಗಿದೆ.

ಕ್ರಿಯೇಟಿಂಗ್ ಮೇಲ್:

ಕಾನ್ಪಿಡೇನ್ಷಿಯಲ್ ಮೋಡ್ ಬಳಕೆ ಮಾಡಿಕೊಳ್ಳುವುದು ಸುಲಭವಾಗಿದ್ದು, ಇದಕ್ಕಾಗಿ ನೀವು ಸಾಮಾನ್ಯವಾಗಿ ಮೇಲ್ ಕ್ರಿಯೆಟ್ ಮಾಡಬೇಕಾಗಿದೆ. ಕಳುಹಿಸಬೇಕಾದ ಮೇಲ್, ವಿಳಾಸವನ್ನು ದಾಖಲು ಮಾಡಬೇಕಾಗಿದೆ. ಅಲ್ಲದೇ ಯಾವುದಾದರು ಫೈಲ್ ಅನ್ನು ಅಟ್ಯಾಚ್ ಮಾಡಬೇಕಿದ್ಧರು ಸಹ ಮಾಡಬಹುದಾಗಿದೆ.

ಮೇಲ್ ಸುರಕ್ಷತೆ:

ಮೇಲ್ ಅನ್ನು ಬರೆದ ನಂತರದಲ್ಲಿ ಕೆಳಭಾಗದಲ್ಲಿ ಕೆಲವು ಆಯ್ಕೆಗಳು ದೊರೆಯಲಿದೆ. ಅದರಲ್ಲಿ ಸಣ್ಣ ಐಕಾನ್ ವೊಂದು ಕಾಣಿಸಿಕೊಳ್ಳಲಿದ್ದು, ಇದರಲ್ಲಿ ಲಾಕ್ ಮತ್ತು ಕ್ಲಾಕ್ ಆಯ್ಕೆಗಳು ಇರಲಿದೆ. ಇವುಗಳನ್ನು ನೀವು ಮೇಲ್ ಸೆಂಟ್ ಮಾಡುವುದಕ್ಕೂ ಮುನ್ನ ಬಳಕೆ ಮಾಡಿಕೊಳ್ಳಬೇಕಾಗಿದೆ. '

ಸೆಟ್ ಮಾಡುವುದು:
ನೀವು ಈ ಐಕಾನ್ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ನಿಮಗೆ ಪಾಪ್ ಆಪ್ ವಿಂಡೋವೊಂದು ಕಾಣಿಸಿಕೊಳ್ಳಲಿದೆ. ಇದರಲ್ಲಿ ನೀವು ಕಳುಹಿಸುವ ಮೇಲ್ ಎಷ್ಟು ಸಮಯ ಕಾಣಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಬಹುದಾಗಿದೆ. 24 ಗಂಟೆಗಳಿಂದ ಹಿಡಿದು 24 ವರ್ಷಗಳ ವರೆಗೂ ಅವಧಿಯನ್ನು ನಿಗಧಿ ಮಾಡಬಹುದಾಗಿದೆ.

ಕಾನ್ಪಿಡೇನ್ಷಿಯಲ್ ಮೋಡ್:
ಇದನ್ನು ಸೆಟ್ ಮಾಡಿದ ನಂತರದಲ್ಲಿ ಪಾಸ್ ಕೋಡ್ ವೊಂದನ್ನು ಸೆಟ್ ಮಾಡಬೇಕಾಗಿದೆ. ಇದಕ್ಕಾಗಿ ಮೇಲ್ ಸ್ವೀಕರಿಸುವವರ ಫೋನ್ ನಂಬರ್ ಬಳಕೆ ಮಾಡಿಕೊಳ್ಳಬೇಕಾಗಿದೆ. ಇದನ್ನು ಸೆಟ್ ಮಾಡಿದ ಸಂದರ್ಭದಲ್ಲಿ ಅವರಿಗೆ OTP ಯೊಂದು ಹೋಗಲಿದ್ದು, ಮೇಲ್ ಅನ್ನು ಸ್ವೀಕರಿಸಿದ ಸಂದರ್ಭದಲ್ಲಿ ಆ ಪಾಸ್ ಕೋಡ್ ಅನ್ನು ಹಾಕಿದ ಸಂದರ್ಭದಲ್ಲಿ ಮಾತ್ರವೇ ಮೇಲ್ ಒಪನ್ ಆಗಲಿದೆ. ಇಲ್ಲವಾದರೆ ಮೇಲ್ ಒಪನ್ ಆಗುವುದಿಲ್ಲ.

Best Mobiles in India

English summary
How to use Confidential Mode in Gmail. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+