ಫೇಸ್ ಬುಕ್ ಮೇಸೆಂಜರ್ ಕಿಡ್ಸ್: ಹೊಸದಾಗಿ ಬಂದಿರುವ ಆಯ್ಕೆಗಳು!
ಫೇಸ್ ಬುಕ್ ಮೆಸೆಂಜರ್ ಕಿಡ್ಸ್ ಆಪ್ ಅನ್ನು ಅವರ ಪೋಷಕರು ತಮ್ಮ ಫೇಸ್ ಬುಕ್ ಆಕೌಂಟ್ ನಿಂದಲೇ ನಿಯಂತ್ರಿಸಬಹುದಾಗಿತ್ತು. ಅಲ್ಲದೇ ಈ ಆಪ್ ಸದ್ಯ ಅಮೆರಿಕಾದಲ್ಲಿ ಮಾತ್ರವೇ ಬಳಕೆಗೆ ದೊರೆಯುತ್ತಿದ್ದು, ಶೀಘ್ರವೇ ವಿಶ್ವದ ಎಲ್ಲಾ ಭಾಗಗಳಿಗೂ ತಲುಪಿಸಲು ಫೇಸ್ ಬುಕ್ ಚಿಂತನೆಯನ್ನು ನಡೆಸಿದೆ. ಇದೇ ಮಾದರಿಯಲ್ಲಿ ಫೇಸ್ ಬುಕ್ ಮೆಸೆಂಜರ್ ಕಿಡ್ಸ್ ಆಪ್ ಅನ್ನು ಅಪ್ಡೇಟ್ ಮಾಡಿದೆ.
ಫೇಸ್ ಬುಕ್ 13 ವರ್ಷದ ಒಳಗಿನ ಮಕ್ಕಳು ಬಳಕೆ ಮಾಡಿಕೊಳ್ಳಲು ಸುಲಭವಾಗುವಂತೆ ಪೋಷಕರು ನಿಯಂತ್ರಿಸಬಹುದಾದ ಮೇಸೆಂಜರ್ ಕಿಡ್ಸ್ ಆಪ್ ಅನ್ನು ಲಾಂಚ್ ಮಾಡಿತ್ತು. ಇದನ್ನು ಎನ್ ಜಿಓ ಒಂದರ ಸಹಾಯದಿಂದ ನಿರ್ಮಿಸಿತ್ತು. ಇದನ್ನು ಮಕ್ಕಳು ಸಲುಭವಾಗಿ ಬಳಕೆ ಮಾಡಿಕೊಳ್ಳಲು ಮತ್ತು ಸುರಕ್ಷಿತವಾಗಿ ಬಳಕೆ ಮಾಡಿಕೊಳ್ಳಲುವಂತೆ ವಿನ್ಯಾಸವನ್ನು ಮಾಡಲಾಗಿದೆ.

ಫೇಸ್ ಬುಕ್ ಮೆಸೆಂಜರ್ ಕಿಡ್ಸ್ ಆಪ್ ಅನ್ನು ಅವರ ಪೋಷಕರು ತಮ್ಮ ಫೇಸ್ ಬುಕ್ ಆಕೌಂಟ್ ನಿಂದಲೇ ನಿಯಂತ್ರಿಸಬಹುದಾಗಿತ್ತು. ಅಲ್ಲದೇ ಈ ಆಪ್ ಸದ್ಯ ಅಮೆರಿಕಾದಲ್ಲಿ ಮಾತ್ರವೇ ಬಳಕೆಗೆ ದೊರೆಯುತ್ತಿದ್ದು, ಶೀಘ್ರವೇ ವಿಶ್ವದ ಎಲ್ಲಾ ಭಾಗಗಳಿಗೂ ತಲುಪಿಸಲು ಫೇಸ್ ಬುಕ್ ಚಿಂತನೆಯನ್ನು ನಡೆಸಿದೆ. ಇದೇ ಮಾದರಿಯಲ್ಲಿ ಫೇಸ್ ಬುಕ್ ಮೆಸೆಂಜರ್ ಕಿಡ್ಸ್ ಆಪ್ ಅನ್ನು ಅಪ್ಡೇಟ್ ಮಾಡಿದೆ.
ಫೇಸ್ ಬುಕ್ ಮೆಸೆಂಜರ್ ಕಿಡ್ಸ್ ಆಪ್ ನಲ್ಲಿ ಸ್ಲೀಪ್ ಮೊಡ್ ಅನ್ನು ಆಯ್ಕೆಯನ್ನು ನೀಡಲಾಗಿದೆ. ಇದರಲ್ಲಿ ಮಕ್ಕಳು ಮಲಗಿಕೊಳ್ಳುವ ಅವಧಿಯನ್ನು ಫಿಕ್ಸ್ ಮಾಡಬಹುದಾಗಿದೆ. ಇದನ್ನು ಪೋಷಕರೇ ನಿರ್ಧರಿಸಬಹುದಾಗಿದೆ. ಈ ಟೈಮ್ ನಲ್ಲಿ ಮಕ್ಕಳು ಮೇಸೆಂಜರ್ ನಲ್ಲಿ ಯಾವುದೇ ಚಟುವಟಿಕೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.
ಸ್ಲಿಪ್ ಮೊಡ್ ಸಂದರ್ಭದಲ್ಲಿ ಮಕ್ಕಳು ಮೇಸೆಜ್ ಮಾಡುವುದಾಗಲಿ ಅಥವಾ ಸ್ವೀಕರಿಸುವುದಾಗಲಿ ಮಾಡಲು ಸಾಧ್ಯವಾಗುವದಿಲ್ಲ. ಮತ್ತು ವಿಡಿಯೋ ಕರೆಗಳನ್ನು ಮಾಡಲಾಗುವುದಿಲ್ಲ. ಅಲ್ಲದೇ ಯಾವುದೇ ನೋಟಿಫಿಕೇಷನ್ ಗಳನ್ನು ಸ್ವೀಕರಿಸುವುದಿಲ್ಲ. ಇದರಿಮದಾಗಿ ಅವರು ಮೊಬೈಲ್ ಅನ್ನು ಬಳಸುವುದು ಬಿಟ್ಟು ಸಲುಭವಾಗಿ ನಿದ್ದೆ ಮಾಡಬಹುದಾಗಿದೆ.
ಫೇಸ್ ಬುಕ್ ಮೆಸೆಂಜರ್ ಕಿಡ್ಸ್ ಆಪ್ ನಲ್ಲಿ ಸ್ಲಿಪ್ ಮೋಡ್ ಬಳಕೆ ಹೇಗೆ..?
ಹಂತ 01:
ಮೊದಲಿಗೆ ಫೇಸ್ ಬುಕ್ ಆಪ್ ಅನ್ನು ಒಪನ್ ಮಾಡಿರಿ. ಮಾಡಿದ ನಂತರದಲ್ಲಿ ಮೆಸೆಂಜರ್ ಕಿಡ್ಸ್ ಕಂಟ್ರೋಲ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
ಹಂತರ 02:
ಇದಾದ ನಂತರದಲ್ಲಿ ಆಪ್ ಕಂಟ್ರೋಲ್ ವಿಭಾಗದಲ್ಲಿ ಸ್ಲಿಪ್ ಮೊಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿರಿ.
ಹಂತ 03:
ನಂತರದಲ್ಲಿ ನೀವು ಆಪ್ ನಲ್ಲಿ ಸ್ಲಿಪಿಂಗ್ ಮೋಡ್ ಟೈಮಿಂಗ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ವಾರದಿನಗಳಲ್ಲಿ ಮತ್ತು ವಾರಾಂತ್ಯದಲ್ಲಿ ಬೇರೆ ಬೇರೆ ಸಮಯಗಳನ್ನು ನಿಗಧಿಯನ್ನು ಮಾಡುವ ಅವಕಾಶವನ್ನು ಇದರಲ್ಲಿ ಮಾಡಿಕೊಡಲಾಗಿದೆ. ಇದರಿಂದಾಗಿ ಮಕ್ಕಳು ಸುಖವಾಗಿ ನಿದ್ರೆ ಮಾಡಬಹುದಾಗಿದೆ.


Click it and Unblock the Notifications








