ವಾಟ್ಸ್‌ಆಪ್ ಹೇಗೆ ದುಡ್ಡು ಮಾಡುತ್ತೆ ಅಂತ ಗೊತ್ತಾದ್ರೆ ಬೆಚ್ಚಿಬೀಳ್ತೀರಾ!!

    ಫೇಸ್‌ಬುಕ್‌, ಯೂಟ್ಯೂಬ್ ಹಾಗೂ ಗೂಗಲ್ ಕಂಪೆನಿಗಳು ನಮಗೆ ಉಚಿತ ಸೇವೆಯನ್ನು ಕೊಟ್ಟರೂ ಹೇಗೆ ಹಣ ಮಾಡುತ್ತಿವೆ ಎಂಬುದನ್ನು ನಾವೇನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ, ಎಲ್ಲರ ನೆಚ್ಚಿನ ಮೆಸೇಂಜಿಂಗ್ ಆಪ್ ಆಗಿರುವ ವಾಟ್ಸ್‌ಆಪ್ ಹೇಗೆ ದುಡ್ಡು ಮಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿಲ್ಲ. ಏಕೆಂದರೆ, ವಾಟ್ಸ್‌ಆಪ್ ಹಣ ಮಾಡುವುದೇ ಒಂತರ ವಿಚಿತ್ರ!

    ಹೌದು, ಕೋಟ್ಯಾಂತರ ಜನರು ಬಳಸುತ್ತಿರುವ ವಾಟ್ಸ್‌ಆಪ್‌ಗೆ ಯಾರೊಬ್ಬರೂ ನಯಾಪೈಸೆ ಕೊಡುತ್ತಿಲ್ಲ. ಜಾಹಿರಾತುಗಳನ್ನು ಸಹ ವಾಟ್ಸ್‌ಆಪ್ ನೀಡುವುದಿಲ್ಲ. ಆದರೆ, ನಮಗೆ ಉಚಿತ ಸೇವೆಯನ್ನು ಮಾತ್ರ ಹೇಗೆ ನೀಡುತ್ತಿದೆ ಎಂಬುದು ಎಲ್ಲರ ಪ್ರಶ್ನೆ. ಹಾಗಾಗಿ, ಇಂದಿನ ಲೇಖನದಲ್ಲಿ ಫೇಸ್‌ಬುಕ್‌ಗಿಂತ ಹೆಚ್ಚು ಹಣಗಳಿಸುತ್ತಿರುವ ವಾಟ್ಸ್‌ಆಪ್ ಬಗ್ಗೆ ನಾವು ಹೇಳಲೇಬೇಕಿದೆ.

    ವಾಟ್ಸ್‌ಆಪ್ ಹೇಗೆ ದುಡ್ಡು ಮಾಡುತ್ತೆ ಅಂತ ಗೊತ್ತಾದ್ರೆ ಬೆಚ್ಚಿಬೀಳ್ತೀರಾ!!

    ನಿಮಗೆ ನಾವಿಂದು ಮತ್ತೊಂದು ವಿಷಯವನ್ನು ನಾವು ತಿಳಿಸುತ್ತೇವೆ. ವಾಟ್ಸ್‌ಆಪ್ ಕಳೆದ ಕೆಲ ವರ್ಷಗಳಿಂದ ನಷ್ಟವನ್ನೇ ತೋರಿಸಿಕೊಂಡು ಬರುತ್ತಿದೆ. ಆದರೆ, ಖಂಡಿತವಾಗಿಯೂ ವಾಟ್ಸ್‌ಆಪ್ ನಷ್ಟ ಕೂಡ ಲಾಭವೇ ಆಗಿದೆ.! ಹಾಗಾದರೆ, ಒಂತರ ವಿಚಿತ್ರವಾಗಿರುವ 'ವಾಟ್ಸ್‌ಆಪ್ ಹೇಗೆ ದುಡ್ಡು ಮಾಡುತ್ತಿದೆ' ಎಂಬ ಕುತೋಹಲ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಇಂದು ವಾಟ್ಸ್ಆಪ್ ಮೌಲ್ಯ ಎಷ್ಟು?

    2014 ರಲ್ಲಿ ವಾಟ್ಸ್ಆಪ್ ಅನ್ನು ಫೇಸ್‌ಬುಕ್ ಖರೀದಿ ಮಾಡಿದ್ದು 1.23 ಸಾವಿರ ಕೋಟಿ ರೂ.ಗೆ.! ಆದರೆ, ಇಂದು ವಾಟ್ಸ್ಆಪ್ ಮೌಲ್ಯ ಎಷ್ಟು ಎಂಬುದನ್ನು ಸುಮ್ಮನೆ ಬೆಲೆ ಕಟ್ಟಲು ಸಾಧ್ಯವಿಲ್ಲ. 2014ರಿಂದ ಈಚೆಗೆ ಭಾರೀ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ವಾಟ್ಸ್ಆಪ್ ಬೆಲೆ ಇಂದು ಎಷ್ಟೋ ಲಕ್ಷ ಕೋಟಿಗಳನ್ನು ಮೀರಿದೆ ಎಂದರೆ ಆಶ್ಚರ್ಯವೇನಿಲ್ಲ.!

    ಫೇಸ್‌ಬುಕ್‌ಗಿಂತ ಹೆಚ್ಚು ಗಳಿಕೆ.!

    ಒಂದು ಅಂದಾಜಿನ ಪ್ರಕಾರ, ವಾಟ್ಸ್‌ಆಪ್ ಫೇಸ್‌ಬುಕ್‌ಗಿಂತ ಹೆಚ್ಚು ಗಳಿಕೆ ಮಾಡುತ್ತದೆ ಎಂದರೆ ನೀವು ನಂಬಲೇಬೇಕು. ವಾಟ್ಸ್ಆಪ್ ನೇರವಾಗಿ ಏನನ್ನೂ ಮಾರದೆ, ಜಾಹೀರಾತುಗಳನ್ನು ಸಹ ತೋರದೆ ಸಾವಿರಾರು ಕೋಟಿ ಹಣಗಳಿಕೆಯ ಮೂಲವಾಗಿದೆ. ಏಕೆಂದರೆ, ವಾಟ್ಸ್‌ಆಪ್ ಅವಶ್ಯಕತೆ ಫೇಸ್‌ಬುಕ್ ಸೇರಿದಂತೆ ಬಹುತೇಕ ಎಲ್ಲಾ ಆನ್‌ಲೈನ್ ದೈತ್ಯ ಕಂಪೆನಿಗಳಿಗೂ ಇದೆ.

    ಹಣಗಳಿಕೆ ಸಂಪೂರ್ಣ ಡಿಫರೆಂಟ್!

    ಮೊದಲೇ ಹೇಳಿದಂತೆ ವಾಟ್ಸ್ಆಪ್ ಹಣ ಮಾಡುವುದೇ ನಮ್ಮೆಲ್ಲರಿಗೂ ಒಂತರ ವಿಚಿತ್ರ. ನಮಗೆ ಏನನ್ನೂ ಮಾರದೆ, ಜಾಹೀರಾತುಗಳನ್ನು ಸಹ ತೋರದೆ ಹಣಗಳಿಸುತ್ತಿರುವುದು ನಮ್ಮ ದತ್ತಾಂಶಗಳಿಂದ. ವಾಟ್ಸ್‌ಆಪ್‌ಗೆ ದತ್ತಾಂಶಗಳೇ ಅದರ ಬಂಡವಾಳ. ಹಾಗಾಗಿ, ಈ ದತ್ತಾಂಶ ವಾಟ್ಸ್ಆಪ್‌ಗೆ ಕೇವಲ ಚಿನ್ನವನ್ನೆ ಹೊಂದಿರುವ 'ಚಿನ್ನದ ಗಣಿ" ಇದ್ದಹಾಗೆ.

    ಏನಿದು ವಾಟ್ಸ್ಆಪ್ ದತ್ತಾಂಶ?

    ನಾವು ವಾಟ್ಸ್ಆಪ್ ಮೂಲಕ ಕಳುಹಿಸಿದ ಒಂದೊಂದು ಮೆಸೇಜ್ ಸಹ ಅಮೆರಿಕದಲ್ಲಿರುವ ವಾಟ್ಸ್‌ಆಪ್‌ ಸರ್ವರ್‌ಗೆ ಹೋಗಿ ಅಲ್ಲಿಂದ ರವಾನೆಯಾಗುತ್ತದೆ. ಹೀಗೆ ಅಲ್ಲಿ ಸಂಗ್ರಹವಾದ ಎಲ್ಲಾ ಸಂದೇಶಗಳನ್ನು ಸರ್ವರ್‌ ಡಿಕೋಡ್‌ ಮಾಡಿ ನೋಡುತ್ತದೆ. ಇವುಗಳ ಒಟ್ಟು ದತ್ತಾಂಶವೇ ಈಗ ಇ-ಕಾಮರ್ಸ್ ಸೇರಿದಂತೆ ಪ್ರತಿಯೊಂದು ಆನ್‌ಲೈನ್ ಸಂಸ್ಥೆಗಳಿಗೆ ಹಾಟ್‌ಕೇಕ್ ಆಗಿದೆ.

    ದತ್ತಾಂಶಕ್ಕೆ ಅಷ್ಟೊಂದು ಬೆಲೆ ಏಕೆ?

    ವಾಟ್ಸ್‌ಆಪ್ ಬಳಸುತ್ತಿರುವವರ ಮೂಡ್ ಯಾವ ರೀತಿ ಇದೆ, ಅವರು ಈಗ ಏನನ್ನು ಬಯಸುತ್ತಿದ್ದಾರೆ, ಅವರು ಎಲ್ಲಿದ್ದಾರೆ ಎಂಬೆಲ್ಲಾ ತಿಳಿದುಕೊಳ್ಳುವುದಕ್ಕೆ ಈ ಡೇಟಾ ನೆರವಾಗುತ್ತದೆ.ಈ ಡೇಟಾ ಈಗ ಇ-ಕಾಮರ್ಸ್ ಸೇರಿದಂತೆ ಪ್ರತಿಯೊಂದು ಸಂಸ್ಥೆಗೂ ಚಿನ್ನದ ಗಣಿಯಾಗಿದ್ದು, ಜಾಹೀರಾತು ತೋರಿಸಿ ಗ್ರಾಹಕರನ್ನು ಸೆಳೆಯುವ ಚಿನ್ನವೇ ದತ್ತಾಂಶವಾಗಿದೆ.

    ಡಾಟಾ ಜಗತ್ತು ಇದು!

    ಇಡೀ ಜಗತ್ತು ಇಂದು ಡಾಟಾದ ಮೇಲೆ ನಿಂತಿದೆ. ಇ-ಕಾಮರ್ಸ್ ಕಂಪನಿಗಳೂ ಸೇರಿದಂತೆ ಪ್ರತಿಯೊಂದು ಸಂಸ್ಥೆಗೂ ಈಗ ಡಾಟಾಬೇಕಿದೆ. ಒಂದು ವಸ್ತುವನ್ನು ಯಾರಿಗೆ ಮಾರಬೇಕು, ಹೇಗೆ ಮಾರಬೇಕು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಡಾಟಾ ಬೇಕಿದೆ. ಹಾಗಾಗಿಯೇ, ವಾಟ್ಸ್ಆಪ್‌ನ ಸಂಪೂರ್ಣ ಮೌಲ್ಯ ಡಾಟಾದಲ್ಲಿಯೇ ಇದೆ!

    ಉದಾಹರಣೆ ಹೀಗಿದೆ!

    ನೀವು ಇರುವ ಸ್ಥಳದಲ್ಲಿ ಮಳೆ ಬರುತ್ತಿದೆ ಎಂದು ವಾಟ್ಸ್ಆಪ್ ಮೂಲಕ ಸಂಭಾಷಣೆ ನಡೆಸಿದರೆ ಅಲ್ಲಿ ಮಳೆ ಬಂದಿದೆ ಎಂದರ್ಥ. ಹಾಗಾಗಿ, ನಿಮಗೆ ಮಳೆಗೆ ಸಂಬಂಧಿಸಿದ ಸಾಮಗ್ರಿಗಳ ಜಾಹೀರಾತು ತೋರಿಸಿದರೆ ಅವನ್ನು ಖರೀದಿ ಮಾಡುವಂತೆ ನಿಮ್ಮನ್ನು ಟೆಂಪ್ಟ್ ಮಾಡಬಹುದು. ಇದು ದತ್ತಾಂಶದ ಆದಾಯಕ್ಕಿರುವ ಅತ್ಯಂತ ಸರಳ ಲೆಕ್ಕಾಚಾರ.

    ಮಾರುಕಟ್ಟೆ ಸಮೀಕ್ಷೆಗಿಂತ ಭಿನ್ನ!

    ಒಂದು ವಸ್ತುವನ್ನು ಮಾರಲು ಮಾರುಕಟ್ಟೆ ಸಮೀಕ್ಷೆಯನ್ನು ನಡೆಸಿದರೂ ಕೂಡ ಇವೆಲ್ಲವೂ ನೈಜ ಸನ್ನಿವೇಶವನ್ನು ಕಟ್ಟಿಕೊಡಲಾರವು. ಆದರೆ, ವಾಟ್ಸ್ಆಪ್‌ನಲ್ಲಿ ಹಾಗಲ್ಲ. ಇಲ್ಲಿನ ಎಲ್ಲ ಸಂವಹನಗಳೂ ನೈಜ. ಹೀಗಾಗಿ ಇದರಿಂದ ತೆಗೆದ ಎಲ್ಲ ಮಾಹಿತಿಯೂ ನೈಜ. ಹಾಗಾಗಿಯೇ, ಇದರ ದತ್ತಾಂಶಕ್ಕೆ ಚಿನ್ನದ ಮೌಲ್ಯ.

    ಫೇಸ್‌ಬುಕ್‌ಗೆ ವಾಟ್ಸ್‌ಆಪ್ ಲಾಭ!

    ವಾಟ್ಸ್ಆಪ್ ಡೇಟಾವನ್ನು ಬಳಸಿಕೊಂಡು ಫೇಸ್‌ಬುಕ್‌ ಕೂಡ ತನ್ನ ಜಾಹೀರಾತುಗಳನ್ನು ಇನ್ನಷ್ಟು ಸರಿಯಾಗಿ ಟಾರ್ಗೆಟ್‌ ಮಾಡುತ್ತಿದೆ. ವಾಟ್ಸ್‌ಆಪ್ ದತ್ತಾಂಶಗಳನ್ನು ಬಳಸಿಕೊಂಡು ಯಾವ ಫೇಸ್‌ಬುಕ್ ಬಳಕೆದಾರನಿಗೆ ಯಾವ ಜಾಹಿರಾತನ್ನು ನೀಡಬೇಕು ಎಂದು ಫೇಸ್‌ಬುಕ್ ನಿರ್ಧರಿಸುತ್ತಿದೆ. ಇದರಿಂದ, ಫೇಸ್‌ಬುಕ್ ಲಾಭ ಕೂಡ ಹೆಚ್ಚಾಗುತ್ತಿದೆ.

    ಆದಾಯವಿದ್ದರೂ ನಷ್ಟ!

    ಮೊದಲೇ ಹೇಳಿದಂತೆ ವಾಟ್ಸ್ಆಪ್ 2017ರಲ್ಲಿ 40 ಕೋಟಿ ಡಾಲರ್ ನಷ್ಟವನ್ನು ತೋರಿಸಿದೆ.ಆದರೆ, ವಾಟ್ಸ್‌ಆಪ್ ಖರೀದಿಸಿದ ನಂತರ ಫೇಸ್‌ಬುಕ್‌ನ ಲಾಭದಲ್ಲಿ ನೂರಾರು ಪಟ್ಟು ಹೆಚ್ಚಳವಾಗಿದೆ. ಇದರರ್ಥ ವಾಟ್ಸ್ಆಪ್ ಡೇಟಾ ಬಳಸಿಕೊಂಡು ಫೇಸ್‌ಬುಕ್‌ ಸಾವಿರಾರು ಕೋಟಿ ಲಾಭ ಮಾಡಿಕೊಳ್ಳುತ್ತಿದೆ. ಇದು ''ಅಳಿಯ ಅಲ್ಲ. ಆದರೆ, ಮಗಳ ಗಂಡ'' ಎಂಬಂತಾಗುತ್ತದೆ.

    ನೇರ ಆದಾಯದ ಉದ್ದೇಶ ಸಧ್ಯಕಿಲ್ಲ!

    ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್ ಅವರು ವಾಟ್ಸ್‌ಆಪ್ ಉಚಿತ ಆಪ್ ಆಗಿರಲಿ ಎಂದು ಬಯಸಿದ್ದಾರೆ. ಇತ್ತೀಚೆಗೆ ವಾಟ್ಸಾಪ್ ಸಿಇಒ ಜಾನ್‌ ಕೊವುಮ್ ಸಂದರ್ಶನವೊಂದರಲ್ಲಿ, ಕಂಪನಿಯ ಉದ್ದೇಶ ಲಾಭ ಗಳಿಸುವುದಲ್ಲ. ಬದಲಾಗಿ ಬಳಕೆಯನ್ನು ವಿಸ್ತರಿಸುವುದು ಎಂದಿದ್ದರು. ಹಾಗಾಗಿ, ನೇರ ಆದಾಯದ ಉದ್ದೇಶ ವಾಟ್ಸ್‌ಆಪ್‌ಗೆ ಸಧ್ಯಕಿಲ್ಲ.

    ಪ್ರೈವೆಸಿಗೆ ದಕ್ಕೆ ಆಗೊಲ್ಲಾ!

    ವಾಟ್ಸ್‌ಆಪ್ ಹೀಗೆ ದತ್ತಾಂಶ ಸಂಗ್ರಹಿಸಿದರೆ ನಮ್ಮ ಗೌಪ್ಯತೆಯ ಕಥೆಯೇನು ಎಂದು ನೀಮಗನಿಸುವುದು ನಿಜ. ಆದರೆ. ನಾವು ಕಳುಹಿಸುವ ಸಂದೇಶ ವಾಟ್ಸ್‌ಆಪ್ ಸರ್ವರ್‌ಗೆ ಹೋದಾಗ, ನಮ್ಮ ಮೊಬೈಲಿನಿಂದ ಸಂದೇಶ ಕಳುಹಿಸಿದ್ದು ಎಂಬ ಅಂಶವನ್ನು ಡಿಕೋಡ್‌ ಮಾಡುವುದಿಲ್ಲ. ಬದಲಿಗೆ ಸಂದೇಶವನ್ನಷ್ಟೇ ಡಿಕೋಡ್‌ ಮಾಡುತ್ತದೆ. ಹೀಗಾಗಿ, ವಾಟ್ಸ್‌ಆಪ್ ಬಳಕೆದಾರನ ಪ್ರೈವೆಸಿಗೆ ಧಕ್ಕೆಯಾಗುವುದಿಲ್ಲ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    How does messaging work in WhatsApp? Is this the right approach for communication between client and server?
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more