ನಿಮ್ಮ ಕಂಪ್ಯೂಟರ್ RAM ನಲ್ಲಿರುವ ತೊಂದರೆಯನ್ನು ಪರೀಕ್ಷಿಸಿಸುವುದು ಹೇಗೆ?

RAM ನಲ್ಲಿರುವ ತೊಂದರೆಯಿಂದಾಗಿ ನಿಮ್ಮ ಪಿಸಿಯಲ್ಲಿ ತೊಂದರೆ ಉಂಟಾಗುತ್ತಿದ್ದರೆ, ವಿಂಡೋಸ್ ಮೆಮೋರಿ ಡಯಾಗ್ನಿಸ್ಟಿಕ್ ಟೂಲ್ ಬಳಸಿ ನಿಮ್ಮ RAM ಅನ್ನು ನೀವು ಪರೀಕ್ಷಿಸಬಹುದಾಗಿದೆ.

By Tejaswini P G
|

ನಿಮ್ಮ ಕಂಪ್ಯೂಟರ್ ಅನ್ನು ಚಲಾಯಿಸುವಾಗ ತೊಂದರೆಗಳೆದುರಾಗುತ್ತಿದ್ದರೆ ನೀವು ನಿಮ್ಮ RAM ನಲ್ಲೇನಾದರೂ ತೊಂದರೆ ಇದೆಯೇ ಎಂದು ಪರೀಕ್ಷಿಸುವುದು ಉತ್ತಮ. ಸಾಮಾನ್ಯವಾಗಿ RAM ನಲ್ಲಿರುವ ತೊಂದರೆಗಳು ನಿಮ್ಮ ಕಂಪ್ಯೂಟರ್ ನ ತೊಂದರೆಗಳಿಗೆ ಕಾರಣವಾಗುತ್ತದೆ. ನಿಮ್ಮ ಪಿಸಿ ಯ RAM ನಲ್ಲಿರುವ ತೊಂದರೆಗಳನ್ನು ಪರೀಕ್ಷಿಸಲು ಹೆಚ್ಚುವರಿ ಸಾಧನಗಳೇನೂ ಬೇಕಾಗುವುದಿಲ್ಲ.

ನಿಮ್ಮ ವಿಂಡೋಸ್ ನಲ್ಲಿ ಈಗಾಗಲೇ ಲಭ್ಯವಿರುವ ಸಾಧನಗಳನ್ನು ಬಳಸಿ ನಿಮ್ಮ RAM ಅನ್ನು ಪರೀಕ್ಷಿಸಬಹುದಾಗಿದೆ. RAM ನಲ್ಲಿರುವ ತೊಂದರೆಗಳನ್ನು ಪರೀಕ್ಷಿಸಲು ವಿಂಡೋಸ್ ಮೆಮೋರಿ ಡಯಾಗ್ನಿಸ್ಟಿಕ್ ಅನ್ನು ಬಳಸಬಹುದಾಗಿದೆ.

ನಿಮ್ಮ ಕಂಪ್ಯೂಟರ್ RAM ನಲ್ಲಿರುವ ತೊಂದರೆಯನ್ನು ಪರೀಕ್ಷಿಸಿಸುವುದು ಹೇಗೆ?


ವಿಂಡೋಸ್ ಮೆಮೋರಿ ಡಯಾಗ್ನಿಸ್ಟಿಕ್ ಅನ್ನು ರನ್ ಮಾಡುವುದು ಹೇಗೆ?

ನಿಮ್ಮ ಕಂಪ್ಯೂಟರ್ನಲ್ಲಿರುವ ತೊಂದರೆಗಳನ್ನು ತಿಳಿಯಲು ನಿಮ್ಮ ಕಂಪ್ಯೂಟರ್ನಲ್ಲಿರುವ ಇನ್-ಬಿಲ್ಟ್ ಫೀಚರ್ ಈ ವಿಂಡೋಸ್ ಮೆಮೋರಿ ಡಯಾಗ್ನಿಸ್ಟಿಕ್. ನಿಮ್ಮ ಕಂಪ್ಯೂಟರ್ ನ RAM ನ ಸ್ಥಿತಿಗತಿ ತಿಳಿಯುವ ಸಲುವಾಗಿ ವಿಂಡೋಸ್ ಮೆಮೋರಿ ಡಯಾಗ್ನಿಸ್ಟಿಕ್ ಅನ್ನು ರನ್ ಮಾಡಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ.

ಹಂತ 1: ಸ್ಟಾರ್ಟ್ ಮೆನು ತೆರೆದು ಸರ್ಚ್ ಬಾರ್ ನಲ್ಲಿ "ವಿಂಡೋಸ್ ಮೆಮೋರಿ ಡಯಾಗ್ನಿಸ್ಟಿಕ್" ಎಂದು ನಮೂದಿಸಿ ಎಂಟರ್ ಒತ್ತಿರಿ. ವಿಂಡೋಸ್ ಮೆಮೋರಿ ಡಯಾಗ್ನಿಸ್ಟಿಕ್ ತೆರೆಯುವ ಇನ್ನೊಂದು ವಿಧಾನವೆಂದರೆ ವಿಂಡೋಸ್ ಕೀ ಮತ್ತು 'R' ಅನ್ನು ಒಟ್ಟಿಗೆ ಒತ್ತುವುದು. ಇದು ರನ್ ಡೈಲಾಗ್ ಅನ್ನು ತೆರೆಯುತ್ತದೆ. ಈಗ mdsched.exe ಎಂದು ನಮೂದಿಸಿ ಎಂಟರ್ ಒತ್ತಿರಿ.

ನಿಮ್ಮ ಕಂಪ್ಯೂಟರ್ RAM ನಲ್ಲಿರುವ ತೊಂದರೆಯನ್ನು ಪರೀಕ್ಷಿಸಿಸುವುದು ಹೇಗೆ?


ಹಂತ 2: ಈಗ "ವಿಂಡೋಸ್ ಮೆಮೋರಿ ಡಯಾಗ್ನಿಸ್ಟಿಕ್" ವಿಂಡೋ ತೆರೆದುಕೊಳ್ಳುತ್ತದೆ. ಈಗ "ರೀಸ್ಟಾರ್ಟ್ ನೌ ಆಂಡ್ ಚೆಕ್ ಫಾರ್ ಪ್ರಾಬ್ಲೆಮ್ಸ್(ರೆಕಮೆಂಡೆಡ್)" ಅನ್ನು ಕ್ಲಿಕ್ ಮಾಡಿ. ಇದನ್ನು ಕ್ಲಿಕ್ ಮಾಡಿದಾಗ ನಿಮ್ಮ ಕಂಪ್ಯೂಟರ್ ರೀಬೂಟ್ ಆಗುತ್ತದೆ. ಈ ತಪಾಸಣೆ ನಡೆಯುತ್ತಿರುವ ಸಂದರ್ಭದಲ್ಲಿ ನೀವು ನಿಮ್ಮ ಕಂಪ್ಯೂಟರ್ ಅನ್ನು ಬಳಸಲಾರಿರಿ.

ನಿಮ್ಮ ಕಂಪ್ಯೂಟರ್ ರೀಬೂಟ್ ಆದಾಗ ನಿಮ್ಮ ಪರದೆಯ ಮೇಲೆ "ವಿಂಡೋಸ್ ಮೆಮೋರಿ ಡಯಾಗ್ನಿಸ್ಟಿಕ್" ತೆರೆದುಕೊಳ್ಳುತ್ತದೆ ಮತ್ತು ಈ ತಪಾಸಣೆಯ ಪ್ರಕ್ರಿಯೆ ತನ್ನಿಂತಾನೆ ಪ್ರಾರಂಭವಾಗುತ್ತದೆ. ಇದು ಕೆಲ ನಿಮಿಷಗಳವರೆಗೆ ಮುಂದುವರೆಯುತ್ತದೆ. ಈ ತಪಾಸಣೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರೋಗ್ರೆಸ್ ಬಾರ್ ಮೂಲಕ ಇದರ ಪ್ರಗತಿಯನ್ನು ನೀವು ಗಮನಿಸುತ್ತಿರಬಹುದು. ಅಲ್ಲದೆ ನಿಮ್ಮ ವಿಂಡೋಸ್ ನಲ್ಲಿ ಮೂಡಿಬರುವ 'ಸ್ಟೇಟಸ್' ಮೆಸೇಜ್ ನಿಮ್ಮ ಪಿಸಿ ಯ RAM ನಲ್ಲಿ ಏನಾದರೂ ತೊಂದರೆಗಳು ಇವೆಯೇ ಎಂದು ತಿಳಿಸುತ್ತದೆ.

ಈ ತಪಾಸಣೆಯ ಸಂದರ್ಭದಲ್ಲಿ ನೀವು ನಿಮ್ಮ ಕಂಪ್ಯೂಟರ್ ನ ಮುಂದೆಯೇ ಕುಳಿತಿರ ಬೇಕಿಲ್ಲ. ನೀವು ಸ್ವಲ್ಪ ಹೊತ್ತು ಕಳೆದ ನಂತರ ಕಂಪ್ಯೂಟರ್ ನತ್ತ ಹಿಂದಿರುಗಬಹುದು. ಈ ತಪಾಸಣೆ ಮುಗಿದ ನಂತರ ನಿಮ್ಮ ಪಿಸಿ ತನ್ನಿಂತಾನೆ ರೀಬೂಟ್ ಆಗುತ್ತದೆ. ನಂತರ ನೀವು ನಿಮ್ಮ ಪಿಸಿ ಗೆ ಲಾಗಿನ್ ಆಗಬೇಕು. ಈ ತಪಾಸಣೆಯ ಫಲಿತಾಂಶ ಈಗ ನಿಮ್ಮ ಪರದೆಯ ಮೇಲಿರುತ್ತದೆ.

ಈ ತಪಾಸಣೆಯ ಫಲಿತಾಂಶ ತನ್ನಿಂತಾನೆ ನಿಮ್ಮ ಪರದೆಯ ಮೇಲೆ ಕಾಣಿಸದಿದ್ದರೆ ವಿಂಡೋಸ್ ನ ಇವೆಂಟ್ ವ್ಯೂವರ್ ತೆರೆಯಿರಿ. ನಂತರ "ವಿಂಡೋಸ್ ಲಾಗ್ಸ್" ಗೆ ಹೋಗಿ 'ಸಿಸ್ಟಮ್' ಮೇಲೆ ಕ್ಲಿಕ್ ಮಾಡಿ. ಈಗ 'ಫೈಂಡ್' ಎಂಬ ಪ್ಯಾನಲ್ ನಲ್ಲಿ 'ಮೆಮೋರಿ ಡಯಾಗ್ನಿಸ್ಟಿಕ್' ಎಂದು ಹುಡುಕಿ. ಈಗ ನೀವು ತಪಾಸಣೆಯ ಫಲಿತಾಂಶವನ್ನು ಕಾಣಬಲ್ಲಿರಿ.

Summary

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

• RAM ನಲ್ಲಿರುವ ತೊಂದರೆಗಳಿಂದಾಗಿ ಪಿಸಿ ಯಲ್ಲಿ ತೊಂದರೆ ಉಂಟಾಗುತ್ತದೆ.

• RAM ಪರೀಕ್ಷಿಸಲು 'ವಿಂಡೋಸ್ ಮೆಮೋರಿ ಡಯಾಗ್ನಿಸ್ಟಿಕ್' ಟೂಲ್ ಬಳಕೆ

• ಸ್ಟಾರ್ಟ್ ಮೆನು ತೆರೆದು ಸರ್ಚ್ ಬಾರ್ ನಲ್ಲಿ "ವಿಂಡೋಸ್ ಮೆಮೋರಿ ಡಯಾಗ್ನಿಸ್ಟಿಕ್" ಎಂದು ನಮೂದಿಸಿ

• ವಿಂಡೋಸ್ ಕೀ ಮತ್ತು 'R' ಅನ್ನು ಒಟ್ಟಿಗೆ ಒತ್ತಿ, ರನ್ ಡೈಲಾಗ್ ನಲ್ಲಿ mdsched.exe ನಮೂದಿಸಿ

• ತಪಾಸಣೆ ಮುಗಿದ ನಂತರ ಫಲಿತಾಂಶ ತನ್ನಿಂತಾನೆ ಪರದೆಯ ಮೇಲೆ ಮೂಡುತ್ತದೆ.

Best Mobiles in India

English summary
You can use tools already present in your Windows to have a quick check of your RAM. The Windows Memory Diagnostic can be used for checking issues in your RAM.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X