ಆಗಸ್ಟ್ 18 ರಿಂದ ಬರಲಿದೆ ಲೆನೋವೋ ಕೆ8 ನೋಟ್, ಬೆಲೆ ರೂ 12999ರಿಂದ ಆರಂಭ!!

ಡ್ಯುಯಲ್ ಪ್ರೈಮರಿ ಕ್ಯಾಮೆರಾ ಸೆನ್ಸರ್ ಮತ್ತು 13MP ಸೆಲ್ಫೀ ಕ್ಯಾಮೆರಾದಿಂದ ಒಳ್ಳೆಯ ಫೋಟೋಗಳನ್ನೂ ಸೆರೆಹಿಡಿಯಬಹುದು.ರೂ 12,999/- ಮತ್ತು ರೂ 13,999/- ಬೆಲೆಯ ಎರಡು ಆವೃತ್ತಿಗಳಲ್ಲಿ ಬರಲಿರುವ ಕೆ8 ನೋಟ್ ಆಗಸ್ಟ್ 18ರಂದು ಬಿಡುಗಡೆಯಾಗಲಿದೆ.

By Staff
|

ಲೆನೋವೋ ಕೆ8 ನೋಟ್ ಹಲವಾರು ಉತ್ತಮ ಫೀಚರ್ಗಳನ್ನು ಕೈಗೆಟಕುವ ಬೆಲೆಯಲ್ಲಿ ಜನರಿಗೆ ನೀಡಲಿರುವ ಕಿಲ್ಲರ್ ಫೊನ್ ಎಂದರೆ ತಪ್ಪಾಗದು.ಗೊರಿಲ್ಲಾ ಗ್ಲಾಸ್ ಹೊಂದಿರುವ 5.5ಇಂಚ್ ಡಿಸ್ಪ್ಲೇ,ಶ್ರೇಷ್ಠ ಅಲ್ಯುಮಿನಿಯಂ ಬಾಡಿ ಮಾಡಿದೆ ಕೆ8 ನೋಟ್ ಅನ್ನು ಸುದೃಢ! ಅಲ್ಲದೆ ಮೀಡಿಯಾಟೆಕ್ ಹೀಲಿಯೋ X20 ಪ್ರೋಸೆಸರ್, 3GB/4GB RAM, 32GB/64GB ಸ್ಟೋರೇಜ್ ಮತ್ತು ಸ್ಟಾಕ್ ಆಂಡ್ರಾಯ್ಡ್ ನ್ಯಾಗಾ ನೀಡಲಿದೆ ಒಳ್ಳೆಯ ಪರ್ಫಾರ್ಮೆನ್ಸ್.

ಡ್ಯುಯಲ್ ಪ್ರೈಮರಿ ಕ್ಯಾಮೆರಾ ಸೆನ್ಸರ್ ಮತ್ತು 13MP ಸೆಲ್ಫೀ ಕ್ಯಾಮೆರಾದಿಂದ ಒಳ್ಳೆಯ ಫೋಟೋಗಳನ್ನೂ ಸೆರೆಹಿಡಿಯಬಹುದು.ರೂ 12,999/- ಮತ್ತು ರೂ 13,999/- ಬೆಲೆಯ ಎರಡು ಆವೃತ್ತಿಗಳಲ್ಲಿ ಬರಲಿರುವ ಕೆ8 ನೋಟ್ ಆಗಸ್ಟ್ 18ರಂದು ಬಿಡುಗಡೆಯಾಗಲಿದೆ.

ಲೆನೋವೋ ಪ್ರಿಯರ ಕನಸು ನನಸಾಗುವ ದಿನ ಹತ್ತಿರ ಬಂದಿದೆ. ಕೊನೆಗೂ ಲೆನೋವೋ ಕೆ8 ನೋಟ್ ಬಿಡುಗಡೆ ಕುರಿತು ಅಧಿಕೃತ ಸುದ್ದಿ ಬಂದಿದೆ.ಕೆ6 ನೋಟ್ ನಂತರ ಸೀದಾ ಕೆ8 ನೋಟ್ ಗೆ ಲಗ್ಗೆ ಇಟ್ಟಿರುವ ಲೆನೋವೋ ತಮ್ಮ ಫ್ಯಾನ್ಗಳಿಗೆ ನಿರಾಸೆಯಾಗದಂತೆ ನೋಡಿಕೊಂಡಿದ್ದಾರೆ. ಕೆ8 ನೋಟ್ ನೀಡಲಿದೆಯಂತೆ ಕೆ6 ನೋಟ್ ಗಿಂತ ಡಬಲ್ ಪರ್ಫಾರ್ಮೆನ್ಸ್.

ಕೆ8 ನೋಟ್ ನ ವಿಶೇಷತೆಗಳು ಹಲವು!ಕೆ8 ನೋಟ್ ಗೆ ಇದೆಯಂತೆ ಡ್ಯುಯಲ್ ಪ್ರೈಮರಿ ಕ್ಯಾಮೆರಾ ಸೆನ್ಸರ್. ಅಲ್ಲದೆ ಕೆ8 ನೋಟ್ ಬೇರೆ ಲೆನೋವೋ ಫೋನ್ ಗಳಂತೆ ವೈಬ್ ಪ್ಯೂರ್ ಯುಐ ಬಳಸದೆ ಆಂಡ್ರಾಯ್ಡ್ ನ ಮೂಲ ರೂಪವನ್ನೇ ಬಳಸುವ ಮೊದಲ ಲೆನೋವೋ ಫೋನ್ ಎನಿಸಿದೆ.

ಅಲ್ಲದೆ ಇಲ್ಲಿ ಬಳಸಲಾಗಿರುವ ಮೀಡಿಯಾಟೆಕ್ ಹೀಲಿಯೋ X20 SoC ಕೆ8 ನೋಟ್ ಗೆ ನೀಡಿದೆ ಭರ್ಜರಿ ಪರ್ಫಾರ್ಮೆನ್ಸ್.ಅಲ್ಲದೆ ಕೆ8 ನೋಟ್ ನಲ್ಲಿದೆ ಡಾಲ್ಬಿ ಅಟ್ಮಾಸ್, ಮ್ಯೂಸಿಕ್ ಕೀ , ಥಿಯೇಟರ್ ಮ್ಯಾಕ್ಸ್ ನಂತಹ ಸೂಪರ್ ಫೀಚರ್ಗಳು. ಕೆ8 ನೋಟ್ ನಲ್ಲಿರುವ ವಾಟರ್ ರಿಪೆಲ್ಲೆಂಟ್ ನ್ಯಾನೋ ಕೋಟಿಂಗ್ ನೀಡುತ್ತದೆ ಫೋನ್ಗೆ ಅಚಾನಕ್ ನೀರೆಸೆತಗಳಿಂದ ರಕ್ಷಣೆ.ಕೆ8 ನೋಟ್ ಸೂಪರ್ ಫೋನ್ ಅನ್ನೋದರಲ್ಲಿ ಸಂಶಯವಿಲ್ಲ.

ಬನ್ನಿ ನೋಡೋಣ ಲೆನೋವೋ ದ ಕಿಲ್ಲರ್ ನೋಟ್ ಅಂದರೆ ಕೆ8 ನೋಟ್ ನ ಫೀಚರ್ಗಳನ್ನು

ವಿನ್ಯಾಸ ಮತ್ತು ಡಿಸ್ಪ್ಲೇ:

ವಿನ್ಯಾಸ ಮತ್ತು ಡಿಸ್ಪ್ಲೇ:

ಕೆ8 ನೋಟ್ 5.5ಇಂಚ್ FHD ಡಿಸ್ಪ್ಲೇ ಹೊಂದಿದ್ದು 1080p ರೆಸೊಲ್ಯೂಶನ್ ಪಡೆದಿದೆ. ಇದರ ಡಿಸ್ಪ್ಲೇ ಗೆ 178-ಡಿಗ್ರೀ ವೈಡ್ ವ್ಯೂವಿಂಗ್ ಆಂಗಲ್ ಕೂಡ ಇದೆ. ಡಿಸ್ಪ್ಲೇ ಮೇಲೆ ವಿಶೇಷ ಓಲಿಯೋಫೋಬಿಕ್ ಕೋಟಿಂಗ್ ಇದ್ದು ಗೋರಿಲ್ಲಾ ಗ್ಲಾಸ್ ನ ರಕ್ಷಣಾ ಕವಚವೂ ಇದೆ.ಈ ಸ್ಮಾರ್ಟ್ಫೋನ್ ನ ಹೊರ ಕವಚದ ತಯಾರಿಯಲ್ಲಿ ಅಲ್ಯೂಮಿನಿಯಂ 5000 ಶ್ರೇಣಿಯ ಲೋಹವನ್ನು ಬಳಸಲಾಗಿದ್ದು, ಕೆ8 ನೋಟ್ ಆಗಿದೆ ಬಲಿಷ್ಠ.

ಹಾರ್ಡ್ವೇರ್ ಮತ್ತು ಸಾಫ್ಟ್ವೇರ್:

ಹಾರ್ಡ್ವೇರ್ ಮತ್ತು ಸಾಫ್ಟ್ವೇರ್:

ಲೆನೋವೋ ಕೆ8 ನೋಟ್ 20nm ಪ್ರಾಸೆಸ್ ಆಧಾರಿತ ಡೆಕಾ-ಕೋರ್ ಮೀಡಿಯಾಟೆಕ್ ಹೀಲಿಯೋ X20 ಪ್ರಾಸೆಸರ್ ಬಳಸುತ್ತಿದ್ದು 3GB/4GB RAM ಹೊಂದಿದೆ. ಕೆ8 ನೋಟ್ 32GB/64GB ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು ಅದನ್ನು ಮೈಕ್ರೋSD ಕಾರ್ಡ್ ಬಳಸಿ ಮತ್ತಷ್ಟು ವಿಸ್ತರಿಸಬಹುದಾಗಿದೆ. ಈ ಫೋನ್ ನಲ್ಲಿ ಹೈಬ್ರಿಡ್ ಸಿಮ್ ಕಾರ್ಡ್ ಸ್ಲಾಟ್ ಇರದಿರುವುದು, 2 ಸಿಮ್ ಮತ್ತು ಒಂದು ಮೈಕ್ರೋSD ಕಾರ್ಡ್ ಬಳಸಲು ಬಯಸುವವರಿಗೆ ವರದಾನವಾಗಿದೆ. ಇಷ್ಟೇ ಅಲ್ಲದೆ ಇಲ್ಲಿದೆ USB OTG ಸಪೋರ್ಟ್!

ಲೆನೋವೋ ಕೆ8 ನೋಟ್ ನ ಬ್ಯಾಟರಿ ಸಾಮರ್ಥ್ಯ 4000mAH ಆಗಿದ್ದು ಟರ್ಬೋ ಚಾರ್ಜಿಂಗ್ ಫೀಚರ್ ಕೂಡ ಇದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 7.1.1 ನುಗಾಟ್ ಬಳಸುತ್ತಿದ್ದು ಈ ಮೊದಲೇ ಹೇಳಿದಂತೆ ಆಂಡ್ರಾಯ್ಡ್ ನ ಮೂಲ ರೂಪವನ್ನೇ ಬಳಸುತ್ತಿರುವುದು ವಿಶೇಷ.

ಕ್ಯಾಮೆರಾ:

ಕ್ಯಾಮೆರಾ:

ಲೆನೋವೋ ಕೆ8 ನೋಟ್ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದ್ದು, 13MP ಮತ್ತು 5MP ಯ ಎರಡು ಸೆನ್ಸರ್ಗಳನ್ನು ಹಿಂಬದಿಯಲ್ಲಿ ಹೊಂದಿದೆ. ಈ ಸೆಟಪ್ನಿಂದ ಉತ್ತಮ ಫೋಟೋಗಳನ್ನು ಸೆರೆಹಿಡಿಯುವುದು ಸಾಧ್ಯ ಹಾಗೂ ಬೋಕೆ ಎಫೆಕ್ಟ್ ಇರುವ ಸುಂದರ ಫೋಟೋಗಳನ್ನು ತೆಗೆಯಲು ಸಾಧ್ಯ ಎನ್ನುತ್ತದೆ ಲೆನೋವೋ. ಇದರ 13MP ರೆಸಲ್ಯೂಷನ್ ನ ಫ್ರಂಟ್/ಸೆಲ್ಫೀ ಕ್ಯಾಮೆರಾ F/2.0 ಎಪರ್ಚರ್ ಹೊಂದಿದ್ದು ಪ್ರೋ ಮೋಡ್,ಬ್ಯೂಟಿಫೈ ಮೋಡ್,ವೈಡ್ ಆಂಗಲ್ ಲೆನ್ಸ್ ಮೊದಲಾದ ಮೋಡ್ಗಳೂ ಇವೆ. ಇಷ್ಟು ಸಾಲದೆನ್ನುವಂತೆ ಕಡಿಮೆ ಬೆಳಕಿನಲ್ಲೂ ಉತ್ತಮ ಸೆಲ್ಫೀ ತೆಗೆಯಲು ಅನುವಾಗುವಂತೆ ಸೆಲ್ಫೀ ಫ್ಲ್ಯಾಷ್ ಕೂಡ ಇದೆ.

ಬೆಲೆ ಮತ್ತು ಲಭ್ಯತೆ:

ಬೆಲೆ ಮತ್ತು ಲಭ್ಯತೆ:

ಲೆನೋವೋ ಕೆ8 ನೋಟ್ ಎರಡು ವಿಭಿನ್ನ ವರ್ಣಗಳಲ್ಲಿ ಲಭ್ಯವಿದೆ- ವೆನಮ್ ಬ್ಲ್ಯಾಕ್ ಮತ್ತು ಫೈನ್ ಗೋಲ್ಡ್. ಕೆ8 ನೋಟ್ ನ 3GB RAM /32GB ಸ್ಟೋರೇಜ್ ಆವೃತ್ತಿಯ ಬೆಲೆ ರೂ 12,999/- ಮತ್ತು 4GB RAM/64GB ಸ್ಟೋರೇಜ್ ಆವೃತ್ತಿಯ ಬೆಲೆ ರೂ 13,999/- .ಸೂಪರ್ ಬೆಲೆಯಲ್ಲಿ ಸೂಪರ್ ಫೋನ್.

ಈ ಫೋನ್ಗಾಗಿ ಕಾಯೋದು ಕಷ್ಟ ಅನ್ನಿಸುತ್ತಿದೆಯಾ? ಆಗಸ್ಟ್ 18ರಂದು ಮಧ್ಯಾಹ್ನ 12 ಘಂಟೆಯಿಂದ ಅಮೇಜಾನ್ ಇಂಡಿಯಾ ದಲ್ಲಿ ದೊರೆಯಲಿದೆ ಲೆನೋವೋ ಕೆ8 ನೋಟ್.. ಖರೀದಿಸಿ..ಆನಂದಿಸಿ!!

Best Mobiles in India

Read more about:
English summary
Finally, the Lenovo K8 Note has been announced officially. It is true! Lenovo has skipped the K7 Note and jumped to the K8 Note to make it a killer device with double the performance than the K6 Note.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X