Subscribe to Gizbot

ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಹುವಾವೆ ನೋವಾ 2 ಲೈಟ್ ಲಾಂಚ್!!

Posted By: Tejaswini P G

ಹುವಾವೆ ಸದ್ದಿಲ್ಲದೆ ತನ್ನ ಬತ್ತಳಿಕೆಯಲ್ಲಿ ಮತ್ತೊಂದು ಸ್ಮಾರ್ಟ್ಫೋನ್ ಅನ್ನು ಸೇರಿಸಿದೆ. ನೋವಾ 2 ಲೈಟ್ ಹೆಸರಿನ ಈ ಸ್ಮಾರ್ಟ್ಫೋನ್ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ಆಗಿದ್ದು, ಅದರ ಬೆಲೆಗೆ ಹೋಲಿಸಿದರೆ ಉತ್ತಮ ಫೀಚರ್ಗಳನ್ನೇ ಹೊಂದಿದೆ. ಈ ಸ್ಮಾರ್ಟ್ಫೋನ್ ಅನ್ನು ಈಗಾಗಲೇ ಫಿಲಿಪೈನ್ಸ್ ನಲ್ಲಿ ಲಾಂಚ್ ಮಾಡಲಾಗಿದ್ದು, ಮಾರ್ಚ್ 23ರಿಂದ ಖರೀದಿಗೆ ಲಭ್ಯವಾಗಲಿದೆ. ಇದರ ಬೆಲೆ PHP 9,990 (ಅಂದಾಜು ರೂ 12,500) ಎಂದು ನಿಗದಿಪಡಿಸಲಾಗಿದೆ. ಈ ಸ್ಮಾರ್ಟ್ಫೋನ್ ನ ಜಾಗತಿಕ ಲಭ್ಯತೆ ಕುರಿತು ಸಧ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಇದರ ಸ್ಪೆಸಿಫೀಕೇಶನ್ ಕುರಿತು ಹೇಳುವುದಾದರೆ ಹುವಾವೆ ನೋವಾ 2 ಲೈಟ್ ನಲ್ಲಿದೆ ಆಂಡ್ರಾಯ್ಡ್ 8.0 ಓರಿಯೋ ಆಧಾರಿತ EMUI 8.0 .ಅಲ್ಲದೆ ಇದರಲ್ಲಿದೆ 18:9 ಅನುಪಾತದ ಡಿಸ್ಪ್ಲೇ ಅತ್ಯಂತ ತೆಳುವಾದ ಅಂಚಿನೊಂದಿಗೆ.ಅಷ್ಟೇ ಅಲ್ಲದೆ ನೋವಾ 2 ಲೈಟ್ ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ.

ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಹುವಾವೆ ನೋವಾ 2 ಲೈಟ್ ಲಾಂಚ್!!

ನೋವಾ 2 ಲೈಟ್ ಸ್ಮಾರ್ಟ್ಫೋನ್ 5.99 ಇಂಚ್ HD+ IPS ಡಿಸ್ಪ್ಲೇ ಹೊಂದಿದ್ದು 18:9 ಆಸ್ಪೆಕ್ಟ್ ಅನುಪಾತ ಮತ್ತು 720X1440 ಪಿಕ್ಸೆಲ್ ರೆಸೊಲ್ಯೂಶನ್ ಹೊಂದಿದೆ. ನೋವಾ 2 ಲೈಟ್ ಒಕ್ಟಾ-ಕೋರ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 430 ಪ್ರಾಸೆಸರ್ ಹೊಂದಿದೆ. ಅಲ್ಲದೆ ನೋವಾ 2 ಲೈಟ್ ನಲ್ಲಿ 3GB RAM ಮತ್ತು 32GB ಆಂತರಿಕ ಸ್ಟೋರೇಜ್ ಇದ್ದು, ಇದರ ಸ್ಟೋರೇಜ್ ಸಾಮರ್ಥ್ಯವನ್ನು ಮೈಕ್ರೋSD ಕಾರ್ಡ್ ಬಳಸಿ 128GB ವರೆಗೆ ವಿಸ್ತರಿಸಬಹುದಾಗಿದೆ.

ನೋವಾ 2 ಲೈಟ್ ನ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ 13MP ಪ್ರೈಮರಿ ಸೆನ್ಸರ್ ಮತ್ತು 2MP ಸೆಕೆಂಡರಿ ಸೆನ್ಸರ್ ಹೊಂದಿದೆ. ಇದರಲ್ಲಿ 8MP ಸೆಲ್ಫೀ ಕ್ಯಾಮೆರಾ ಇದ್ದು, LED ಫ್ಲ್ಯಾಶ್ ಇಲ್ಲವಾಗಿದೆ. ನೋವಾ 2 ಲೈಟ್ ನಲ್ಲಿ ಫೇಸ್ ಅನ್ಲಾಕ್ ಫೀಚರ್ ಇರುವುದು ಗಮನಾರ್ಹ ವಿಷಯವಾಗಿದೆ. ಅಷ್ಟೇ ಅಲ್ಲದೆ ಇದರಲ್ಲಿದೆ 3000 mAh ಸಾಮರ್ಥ್ಯದ ಬ್ಯಾಟರಿ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಹುವಾವೆ ನೋವಾ 2 ಲೈಟ್ ನ ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಹೇಳುವುದಾದರೆ ಇದರಲ್ಲಿದೆ 4G VoLTE, ವೈಫೈ 802.11 b/g/n, ಬ್ಲೂಟೂತ್, ಜಿಪಿಎಸ್, ಮೈಕ್ರೋ USB ಮೊದಲಾದ ಫೀಚರ್ಗಳು. ಅಲ್ಲದೆ ಆಕ್ಸೆಲರೋಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್, ಫಿಂಗರ್ಪ್ರಿಂಟ್ ಸೆನ್ಸರ್ ಮೊದಲಾದ ಸೆನ್ಸರ್ ಗಳು ಇದರಲ್ಲಿದೆ. ಮೆಟಲ್ ಯುನಿಬಾಡಿ ವಿನ್ಯಾಸವನ್ನು ಹೊಂದಿರುವ ನೋವಾ 2 ಲೈಟ್, ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

ಹುವಾವೆ ತನ್ನ ಫ್ಲ್ಯಾಗ್ಶಿಪ್ P20 ಸರಣಿಯ ಲಾಂಚ್ ಗೆ ತಯಾರಿ ನಡೆಸುತ್ತಿದ್ದು, ಈ ಸರಣಿಯಲ್ಲಿ P20, P20 ಪ್ರೋ ಮತ್ತು P20 ಲೈಟ್ ಸ್ಮಾರ್ಟ್ಫೋನ್ ಗಳು ಇರಲಿದೆ. ಈ ಸ್ಮಾರ್ಟ್ಫೋನ್ಗಳು ಮಾರ್ಚ್ 27ರಂದು ಪ್ಯಾರಿಸ್, ಫ್ರಾನ್ಸ್ ನಲ್ಲಿ ನಡೆಯಲಿರುವ ಸಮಾರಂಭವೊಂದರಲ್ಲಿ ಲಾಂಚ್ ಆಗಲಿದೆ.

ಹಲವು ಸೋರಿಕೆಗಳು ಮತ್ತು ವದಂತಿಗಳ ಮೂಲಕ ಈ ಮೊಬೈಲ್ಗಳ ವಿನ್ಯಾಸ ಮತ್ತು ಫೀಚರ್ಗಳ ಕುರಿತು ಸಾಕಷ್ಟು ಮಾಹಿತಿಗಳು ನಮಗೆಲ್ಲಾ ತಿಳಿದಿದೆ. ಇತ್ತೀಚೆಗೆ ಸೋರಿಕೆಯಾದ ಚಿತ್ರಗಳು P20 ಪ್ರೋ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುವ ಸೂಚನೆ ನೀಡುತ್ತದೆ.

English summary
Nova 2 Lite is a mid-range smartphone which comes with decent specifications considering the price point. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot