ಅಮೆಜಾನ್‌ನಲ್ಲಿ ಹುವಾಯಿ ಸ್ಮಾರ್ಟ್‌ಪೋನ್ ಡೀಲ್ಸ್ ಇಂದಿಗೆ ಕೊನೆಯಾಗಲಿದೆ!
ಹುವಾಯಿ ಸಂಸ್ಥೆ ಭಾರತದಲ್ಲಿ ಎರಡು ದಿನಗಳ “ಹುವಾಯಿ ಸ್ಮಾರ್ಟ್ ಫೋನ್ ಡೀಲ್ಸ್ ಸೇಲ್”ನ್ನು ಅಮೇಜಾನ್ ಇಂಡಿಯಾ ವೆಬ್ ಸೈಟ್ ನಲ್ಲಿ ಆಯೋಜಿಸಿದೆ. ಈ ಸೇಲ್ ಸೆಪ್ಟೆಂಬರ್ 4 ಮತ್ತು 5 ರಂದು ನಡೆಯಲಿದೆ. ಕಂಪೆನಿಯು ಈ ಸಂದರ್ಬದಲ್ಲಿ ಹುವಾಯಿ ಪಿ20 ಪ್ರೋ, ಪಿ20 ಲೈಟ್, ನೋವಾ 3 ಮತ್ತು ನೋವಾ 3ಐ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಎರಡು ದಿನಗಳ ಸೇಲ್ ನಲ್ಲಿ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಈ ಸೇಲ್ ನಲ್ಲಿ ಇನ್ಸೆಂಟ್ ಡಿಸ್ಕೌಂಟ್, ಕ್ಯಾಷ್ ಬ್ಯಾಕ್, ಇಎಂಐ ಆಯ್ಕೆಗಳು ಇರುತ್ತದೆ. ಎಸ್ ಬಿಐ ಕಾರ್ಡ್ ಬಳಸಿ ಇಎಂಐ ಆಯ್ಕೆಯಲ್ಲಿ ಪರ್ಚೇಸ್ ಮಾಡಿದಲ್ಲಿ 5 ಶೇಕಡಾ ರಿಯಾಯಿತಿ ಲಭ್ಯವಾಗುತ್ತದೆ. ಒಮ್ಮೆ ಸೇಲ್ ಮುಗಿದ ನಂತರ ಬೆಲೆಯು ಪುನಃ ಎಂಆರ್ ಪಿಯಷ್ಟೇ ಆಗಲಿದ್ದು, ಸದ್ಯ ಎರಡು ದಿನದ ಸೇಲ್ ನಲ್ಲಿ ಮಾತ್ರ ಈ ಬದಲಾಯಿಸಿದ ಬೆಲೆಯಲ್ಲಿ ಮಾರಾಟ ನಡೆಯುತ್ತದೆ.

ಹುವಾಯಿ ಪಿ20 ಲೈಟ್
ಹುವಾಯಿ ಪಿ 20 ಲೈಟ್ 17,999 ರುಪಾಯಿಗೆ ಲಭ್ಯವಿದೆ. ಅದರೆ ಇದರ ಒರಿಜಿನಲ್ ಬೆಲೆ 19,999 ಯಲ್ಲಿ 2000 ರುಪಾಯಿ ರಿಯಾಯಿತಿ ಈ ಸೇಲ್ ನಲ್ಲಿ ಲಭ್ಯವಾಗುತ್ತದೆ.ಎಸ್ ಬಿಐ ಕಾರ್ಡ್ ಬಳಸಿ ಗ್ರಾಹಕರು ಇನ್ನೂ 5 ಶೇಕಡಾ ರಿಯಾಯಿತಿ ಗಳಿಸಿಕೊಳ್ಳಲು ಅವಕಾಶವಿದೆ. ಇಎಂಐ ಆಯ್ಕೆಯಲ್ಲಿ ಇದನ್ನು ಗ್ರಾಹಕರು ಖರೀದಿಸಬೇಕಾಗುತ್ತದೆ. ನೋ-ಕಾಸ್ಟ್ ಇಎಂಐ ಆಯ್ಕೆ ಕೂಡ ಗ್ರಾಹಕರಿಗೆ ಲಭ್ಯವಿದ್ದು 9 ತಿಂಗಳ ಕಂತಿನಲ್ಲಿ ಖರೀದಿಸಬಹುದು.
ಈ ಫೋನಿನ ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡುವುದಾದರೆ, ಹುವಾಯಿ 5.84-ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದ್ದು ಅದರ ರೆಸಲ್ಯೂಷನ್ 1080 * 2280 ಪಿಕ್ಸಲ್ ಆಗಿದೆ. ಆಕ್ಟಾ-ಕೋರ್ ಪ್ರೊಸೆಸರ್ ನ್ನು ಹೊಂದಿದ್ದು 4GB RAM ನ್ನು ಒಳಗೊಂಡಿದೆ. ಇದರಲ್ಲಿ 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ. ಕ್ಯಾಮರಾವನ್ನು ನೋಡುವುದಾದರೆ ಹುವಾಯಿ ಪಿ20 ಲೈಟ್ ನಲ್ಲಿ 16ಎಂಪಿ ಪ್ರೈಮರಿ ಕ್ಯಾಮರಾ ಹಿಂಭಾಗದಲ್ಲಿದ್ದು 24 ಎಂಪಿ ಸೆಲ್ಫೀ ಕ್ಯಾಮರಾ ಲಭ್ಯವಿದೆ.ಇದರ ಬ್ಯಾಟರಿ ಸಾಮರ್ಥ್ಯ 3000mAh ಆಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, GPS,ಬ್ಲೂಟೂತ್, NFC, FM, 3G ಮತ್ತು 4Gಗೆ ಬೆಂಬಲ ನೀಡುತ್ತದೆ.
ಹುವಾಯಿ ಪಿ20 ಪ್ರೋ
ಪಿ20 ಪ್ರೋ ಮೇಲೆ ಹುವಾಯಿ 5000 ರುಪಾಯಿ ರಿಯಾಯಿತಿ ನೀಡುತ್ತಿದೆ. ಖರೀದಿದಾರರು 59,999 ರುಪಾಯಿಗೆ ಖರೀದಿಸಲು ಈ ಸೇಲ್ ನಲ್ಲಿ ಅವಕಾಶವಿದೆ. ಇದರ ಒರಿಜಿನಲ್ ಎಂಆರ್ ಪಿ ಬೆಲೆ 64,999 ರುಪಾಯಿ ಆಗಿದೆ.
ಹುವಾಯಿ ಪಿ20 ಪ್ರೋ 6.1-ಇಂಚಿನ ಡಿಸ್ಪ್ಲೇ ಹೊಂದಿದ್ದು ಅದರ ಸ್ಕ್ರೀನ್ ರೆಸಲ್ಯೂಷನ್ 1080 x 2240p ಆಗಿದೆ.ಇದು ಆಂಡ್ರಾಯ್ಡ್ 8.1 ನಿಂದ ರನ್ ಆಗುತ್ತದೆ. ಆಕ್ಟಾ ಕೋರ್ ಪ್ರೊಸೆಸರ್ ನ್ನು ಹೊಂದಿದ್ದು ಮೆಮೊರಿ ಸಾಮರ್ಥ್ಯ 6 ಜಿಬಿ ಆಗಿದೆ. ಇದರಲ್ಲಿ 4000 mAh ಬ್ಯಾಟರಿ ಇದೆ.ಇದರಲ್ಲಿ ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಇದ್ದು ಹಿಂಭಾಗದಲ್ಲಿ 40MP+20MP+ 8MP ಮತ್ತು 24MP ಸೆಲ್ಫೀ ಕ್ಯಾಮರಾವಿದೆ.
ಹುವಾಯಿ ನೋವಾ 3ಐ
ಹುವಾಯಿ ನೋವಾ 3ಐ ನಿಮಗೆ 500 ರುಪಾಯಿ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. ಡಿವೈಸ್ ನ ನಿಜವಾದ ಬೆಲೆ 20,990 ರುಪಾಯಿ ಆಗಿದ್ದು ಈಗ 20,490 ರುಪಾಯಿಗೆ ಲಭ್ಯವಾಗುತ್ತದೆ. ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿ, ನೋ ಕಾಸ್ಟ್ ಐಎಂಐ ಆಯ್ಕೆಯಲ್ಲಿ 9 ತಿಂಗಳ ಕಂತಿನಲ್ಲಿ ಖರೀದಿ ಮಾಡಬಹುದು ಮತ್ತು ರಿಯಲನ್ಸ್ ಜಿಯೋ ಹೆಚ್ಚುವರಿ ಕ್ಯಾಷ್ ಬ್ಯಾಕ್ ನೀಡುತ್ತಿದ್ದು 1200 ರುಪಾಯಿಯ ರಿಯಾಯಿತಿಯೊಂದಿಗೆ ಪಾರ್ಟರ್ ವೋಚರ್ 3,330 ರುಪಾಯಿಯೊಂದಿಗೆ ಲಭ್ಯವಾಗುತ್ತದೆ.
ಹುವಾಯಿ ನೋವಾ 3ಐ 6.30-ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿದ್ದು ಅದರ ರೆಸಲ್ಯೂಷನ್ 1080 * 2340 ಪಿಕ್ಸಲ್ ಆಗಿದೆ. ಆಕ್ಟಾ ಕೋರ್ ಪ್ರೊಸೆಸರ್ ನ್ನು ಹೊಂದಿದ್ದು 4GB RAM ನ್ನು ಒಳಗೊಂಡಿದೆ. 128 ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಹೊಂದಿದ್ದು ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಹಿಗ್ಗಿಸಿಕೊಳ್ಳಲು ಗ್ರಾಹಕರಿಗೆ ಅವಕಾಶವಿದೆ. 16ಎಂಪಿ ಪ್ರೈಮರಿ ಕ್ಯಾಮರಾವನ್ನು ಹೊಂದಿದ್ದು, 24ಎಂಪಿಯ ಸೆಲ್ಫೀ ಕ್ಯಾಮರಾವನ್ನು ಇದು ಒಳಗೊಂಡಿದೆ. ಇದರ ಬ್ಯಾಟರಿ ಸಾಮರ್ಥ್ಯ 3340mAh ಆಗಿದೆ.
ಹುವಾಯಿ ನೋವಾ 3
ಹುವಾಯಿ ನೋವಾ3 ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಫೋನ್ ಆಗಿದ್ದು ಯಾವುದೇ ರಿಯಾಯಿತಿ ದರವಿರುವುದಿಲ್ಲ. ಆದರೆ ಎಸ್ ಬಿಐ ಇಎಂಐ ಆಯ್ಕೆಯಯನ್ನು ಆಫರ್ ಮಾಡಿದೆ. ಅಷ್ಟೇ 4000 ರುಪಾಯಿ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.1200 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವಿರುತ್ತದೆ. ಜಿಯೋ ಬಳಕೆದಾರರಿಗೆ ಪಾರ್ಟರ್ ವೋಚರ್ 3,300 ರುಪಾಯಿದು ಇದೆ ಮತ್ತು ಡಾಟಾ ಆಫರ್ ಗಳು ಲಭ್ಯವಿರುತ್ತದೆ.
ಹುವಾಯಿ ನೋವಾ 3 6.30-ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿದ್ದು ಅದರ ಸ್ಕ್ರೀನ್ ರೆಸಲ್ಯೂಷನ್ 1080 * 2340p ಆಗಿದೆ. ಇದು 1.8GHz ನ ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು 6GB RAM ಹೊಂದಿದೆ. 128GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಹೊಂದಿದ್ದು 256GB ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಲು ಅವಕಾಶವಿರುತ್ತದೆ. ಹುವಾಯಿ ನೋವಾ 3 16ಎಂಪಿ ಪ್ರೈಮರಿ ಕ್ಯಾಮರಾವನ್ನು ಹಿಂಭಾಗದಲ್ಲಿ ಹೊಂದಿದ್ದು 24ಎಂಪಿ ಮುಂಭಾಗದ ಕ್ಯಾಮರಾವನ್ನು ಒಳಗೊಂಡಿದೆ. ಆಂಡ್ರಾಯ್ಡ್ 8.1 ರಲ್ಲಿ ಇದು ರನ್ ಆಗುತ್ತದೆ. ಇದರ ಬ್ಯಾಟರಿ ಸಾಮರ್ಥ್ಯ 3750mAh ಆಗಿದ್ದು ನಾನ್ ರಿಮೂವೇಬಲ್ ಆಗಿದೆ.


Click it and Unblock the Notifications




