ಮಾರುಕಟ್ಟೆಗೆ ಹುವಾವೆ ಬೆಸ್ಟ್ ಕ್ಯಾಮೆರಾ ಫೋನ್: ಯಾವಾಗ ಮಾರಾಟ..!
ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಕ ಹುವಾವೆ P20 ಪ್ರೋ ಟಾಪ್ ಎಂಡ್ ಆವೃತ್ತಿ ಮತ್ತು P20 ಲೈಟ್ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಈ ಸ್ಮಾರ್ಟ್ ಫೋನ್ ಗಳು ಅಮೆಜಾನ್ ನಲ್ಲಿ ಸದ್ಯ ಖರೀದಿಗೆ ಲಭ್ಯವಿದೆ. P20 ಪ್ರೋ ಮತ್ತು P20 ಲೈಟ್ ಸ್ಮಾರ್ಟ್ ಫೋನ್ ಅನ್ನು ಮೇ 3 ರಂದು ನಡೆಯಲಿರುವ ಸೇಲ್ ನಲ್ಲಿ ಸಾರ್ವಜನಿಕರು ಖರೀದಿಸಬಹುದಾಗಿದೆ.

ಹುವಾವೆ P20 ಪ್ರೋ ಸ್ಮಾರ್ಟ್ ಫೋನ್ ಅನ್ನು ರೂ.64,999ಕ್ಕೆ ಹಾಗೂ P20 ಲೈಟ್ ಸ್ಮಾರ್ಟ್ ಫೋನ್ ಅನ್ನು ರೂ.19,999ಕ್ಕೆ ಮಾರಾಟ ಮಾಡುತ್ತಿದ್ದು, ಬಳಕೆದಾರರಿಗೆ ಅಮೆಜಾನ್ ಹೆಚ್ಚುವರಿ ಆಯ್ಕೆಗಳನ್ನು ನೀಡಲು ಮುಂದಾಗಿದೆ.
ಲಾಂಚ್ ವಿಶೇಷ ಆಫರ್ ನೀಡಿದ್ದು, ಮೇ 7ರ ವರೆಗೆ ಆಕ್ಸಿಸ್ ಬ್ಯಾಂಕ್ ಕಾರ್ಡುದಾರರಿಗೆ ರೂ.5000 ಹೆಚ್ಚುವರಿ ಲಾಭಗಳು ದೊರೆಯಲಿದೆ. P20 ಪ್ರೋ ಖರೀದಿಸುವವರಿಗೆ ರೂ.5000 ಹಾಗೂ P20 ಲೈಟ್ ಸ್ಮಾರ್ಟ್ ಫೋನ್ ಖರೀದಿ ಮೇಲೆ ರೂ.1500 ಕಡಿತವನ್ನು ಘೋಷಣೆ ಮಾಡಲಾಗಿದೆ. ಇದರೊಂದಿಗೆ ವೋಡಾಫೋನ್ ಖರೀದಿದಾರರಿಗೆ 100GB ಡೇಟಾ ದೊರೆಯಲಿದ್ದು, ಈ ಎರಡು ಸ್ಮಾರ್ಟ್ ಫೋನ್ ಖರೀದಿಯ ಮೇಲೆಯೂ ಈ ಆಫರ್ ದೊರೆಯಲಿದೆ.

ಹುವಾವೆ P20 ಪ್ರೋ: ಈ ಸ್ಮಾರ್ಟ್ ಹೆಚ್ಚಿನ ಕ್ಯಾಮೆರಾ ಆದ್ಯತೆಯನ್ನು ಪಡೆದುಕೊಂಡಿದ್ದು, ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿದೆ. 40MP + 20 MP + 8 MP ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕವಾಗಿದೆ. ಈ ಸ್ಮಾರ್ಟ್ ಫೋನಿನಲ್ಲಿ 6.1 ಇಂಚಿನ ಡಿಸ್ ಪ್ಲೆಯನ್ನು ಕಾಣಬಹುದಾಗಿದ್ದು, ಅಮೊಲೈಡ್ ಡಿಸ್ ಪ್ಲೆಯನ್ನು ಹೊಂದಿದೆ. ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಕಿರನ್ ಚಿಪ್ ಸೆಟ್ 970 ಮತ್ತು 6GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.
ಹುವಾವೆ P20 ಲೈಟ್: ಸ್ಮಾರ್ಟ್ ಫೋನಿನಲ್ಲಿ 5.84 ಇಂಚಿನ ಡಿಸ್ ಪ್ಲೇಯನ್ನು ನೀಡಲಾಗಿದ್ದು, 19:9 ಅನುಪಾತದ ಡಿಸ್ ಪ್ಲೇಯಾಗಿದೆ. ಅಲ್ಲದೇ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೋಡಬಹುದಾಗಿದೆ. ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ನೋಡಲು ಐಫೋನ್ X ಮಾದರಿಯಲ್ಲಿ ಕಾಣಿಸಿಕೊಂಡಿದೆ.


Click it and Unblock the Notifications




