ಟ್ರಾಕಿಂಗ್ ಸೇವೆಗೆ ಬೆಸ್ಟ್ ಈ ಹೈಪರ್‌ಟ್ರಾಕ್!!..ಏನೆಲ್ಲಾ ವಿಶೇಷ ಹೊಂದಿದೆ?

Written By:

ಒಂದು ವರ್ಷದ ಹಿಂದೆಯಷ್ಟೇ ತನ್ನ ಸೇವೆ ಆರಂಭಿಸಿರುವ ಹೈಪರ್​ಟ್ರಾಕ್ ಎಂಬ ನವೊಧ್ಯಮ ಈಗಾಗಲೆ ಬಾರಿಸದ್ದು ಮಾಡುತ್ತಿದೆ.! ಟ್ರ್ಯಾಕಿಂಗ್ ಸೇವೆಯನ್ನು ಪರಿಚಯಿಸಿರುವ ಮೂಲಕ ಮಾರ್ಕೆಟಿಂಗ್ ಉಧ್ಯಮಗಳು ಮತ್ತು ವಯಕ್ತಿಕ ಅವಶ್ಯಕತೆಗಳೂ ಎರಡನ್ನೂ ಪೂರೈಸುವ ಈ ಹೈಪರ್​ಟ್ರಾಕ್ ಸಾಕಷ್ಟು ಜನರಿಗೆ ಅನುಕೂಲವಾಗಿದೆ.!!

ಉದ್ಯಮಗಳು ತಮ್ಮ ಆಪ್​ನಲ್ಲಿ ಎಲ್ಲಾ ರೀತಿಯ ಲೊಕೇಷನ್ ಪತ್ತೆಮಾಡುವ ಫೀಚರ್ ಹೊಂದಬಹುದಾಗಿದ್ದು, ಅತ್ಯಂತ ಕಡಿಮೆ ಬೆಲೆಗೆ ಅತ್ಯದ್ಬುತ ಸೇವೆಯನ್ನು ಹೈಪರ್​ಟ್ರಾಕ್ ಪರಿಚಯಿಸಿದೆ.!! ಹಾಗಾದರೆ, ಹೈಪರ್‌ಟ್ರಾಕ್ ಹೇಗೆ ಕೆಲಸ ಮಾಡುತ್ತದೆ? ಅದರ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉದ್ಯೋಗಿಗಳ ಮೇಲೆ ನಿಗಾ!!

ಉದ್ಯೋಗಿಗಳ ಮೇಲೆ ನಿಗಾ!!

ಕೆಲಸಗಾರರ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಉದ್ಯೋಗಿಗಳ ಮೇಲೆ ನಿಗಾ, ಮಾರಾಟ ಮತ್ತು ಸೇವಾ ತಂಡಗಳ ವೆಚ್ಚ ನಿರ್ವಹಣೆಗಾಗಿ ಈ ಆಪ್ ಅಭಿವೃಧ್ದಿ ಮಾಡಲಾಗಿದೆ. ಹಾಗಾಗಿ, ಉದ್ಯೋಗಿಗಳ ಕಾರ್ಯನಿರ್ವಹಣೆಯನ್ನು ಈ ಆಪ್‌ ಮೂಲಕ ಚೆಕ್ ಮಾಡಬಹುದಾಗಿದೆ.

ಏನೆನೆಲ್ಲಾ ಸೇವೆ ನೀಡುತ್ತದೆ?!!

ಏನೆನೆಲ್ಲಾ ಸೇವೆ ನೀಡುತ್ತದೆ?!!

ಹೈಪರ್​ಟ್ರಾಕ್ ಮೂಲಕ ಆರ್ಡರ್ ಟ್ರ್ಯಾಕಿಂಗ್, ಸ್ವಯಂಚಾಲಿತ ಮೈಲೇಜ್ ಟ್ರ್ಯಾಕಿಂಗ್, ಡೆಲಿವರಿ ಉದ್ಯೋಗಿಗಳ ಲೊಕೇಷನ್‌ನಂತಹ ಹಲವು ಸೇವೆಗಳು ಲಭ್ಯವಿವೆ. ಕಡಿಮೆ ಬೆಲೆಗೆ ಈ ಸೇವೆಗಳು ಲಭ್ಯವಿದ್ದು, ಸಣ್ಣ ಉದ್ದಿಮೆದಾರರಿಗೆ ಈ ಆಪ್‌ ಬಹಳ ಅನುಕೂಲಕಾರಿ ಎಂದು ಹೇಳಬಹುದು.!!

ಆಪ್‌ ತಂತ್ರಜ್ಞಾನ ಏನು?

ಆಪ್‌ ತಂತ್ರಜ್ಞಾನ ಏನು?

ಹೈಪರ್​ಟ್ರಾಕ್ ಆಪ್ ಪ್ರೋಗ್ರಾಂ ಇಂಟರ್​ಫೇಸ್ (ಎಪಿಐ)ಮೂಲಕ ಕಾರ್ಯನಿರ್ವಹಿಸುತ್ತದೆ.ಇದರಿಂದ, ಉದ್ಯಮಗಳು ತಮ್ಮ ಆಪ್​ನಲ್ಲಿ ಎಲ್ಲಾ ರೀತಿಯ ಲೊಕೇಷನ್ ಪತ್ತೆಮಾಡುವ ಫೀಚರ್ ಹೊಂದಬಹುದಾಗಿದೆ.!! ಲೊಕೇಷನ್ ಶೇರ್ ಕೂಡ ನಿರ್ಧಿಷ್ಟವಾಗಿರುತ್ತದೆ.

ಹತ್ತಿರದವರನ್ನು ಟ್ರಾಕ್ ಮಾಡಿ.!!

ಹತ್ತಿರದವರನ್ನು ಟ್ರಾಕ್ ಮಾಡಿ.!!

ಹೈಪರ್​ಟ್ರಾಕ್ ಮೂಲಕ ಇಷ್ಟೇ ಅಲ್ಲದೇ ತಮ್ಮ ಹತ್ತಿರದವರು ಸಂಚರಿಸುತ್ತಿರುವ ಸ್ಥಳವನ್ನು ಲೊಕೇಟ್ ಮಾಡಲು ನೆರವಾಗುವ ಆಪ್ ಅನ್ನು ಹೈಪರ್​ಟ್ರಾಕ್ ಪರಿಚಯಿಸಿದೆ. ಹಾಗಾಗಿ, ನಿಮ್ಮ ಸಣ್ಣಪುಟ್ಟ ಕಾರ್ಯಗಳಿಗೂ ಸಹ ಈ ಹೈಪರ್ ಟ್ರಾಕಿಂಗ್ ಸೇವೆ ಬಳಸಿಕೊಳ್ಳಬಹುದು.! ಒಂದೆಡೆಯೇ ಕುಳಿತು ನಿಮ್ಮ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಬಹುದು.!!

ಓದಿರಿ:ಸಿನಿಮಾ ತಯಾರಿಕೆಗೆ ಮುಂದಾದ ಫೇಸ್‌ಬುಕ್!!..ಕೆಲಸಕ್ಕೆ ಆಹ್ವಾನ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
HyperTrack is serial entrepreneur Deorah’s attempt at creating a global tech firm from India.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot