ICICI, HDFC, RBL ಕ್ರೆಡಿಟ್ ಕಾರ್ಡ್ ಬಳಕೆದಾರರೇ ತಕ್ಷಣ ನಿಮ್ಮ ಆಪ್‌ ಡಿಲೀಟ್ ಮಾಡಿ...!

|

ಪ್ಲೇ ಸ್ಟೋರಿನಲ್ಲಿ ಲಕ್ಷಾಂತರ ಆಪ್‌ಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಹಲವು ಫೇಕ್ ಆಪ್‌ಗಳಾಗಿದೆ. ಈ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಗೂಗಲ್ ಕೃತಕ ಬುದ್ದಿಮತ್ತೆ ಹಾಗೂ ಯಾಂತ್ರಿಕ ಕಲಿಕೆಯ ಸಹಾಯದಿಂದ ಫೇಕ್ ಆಪ್‌ಗಳನ್ನು ಕಿತ್ತು ಹಾಕುವ ಕಾರ್ಯವನ್ನು ಮಾಡಿತ್ತು. ಈ ಸಂದರ್ಭದಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ಫೇಕ್‌ ಆಪ್‌ಗಳು ಪ್ಲೇ ಸ್ಟೋರಿನಿಂದ ಕಿತ್ತು ಹಾಕಲಾಗಿತ್ತು. ಈಗ ಭಾರತೀಯ ಮಾರುಕಟ್ಟೆಯಲ್ಲಿ ಮೊಬೈಲ್ ಬ್ಯಾಂಕಿಂಗ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ಕಾರಣದಿಂದ ಬ್ಯಾಂಕಿಂಗ್ ಆಪ್‌ಗಳನ್ನು ಫೇಕ್ ಮಾಡಲಾಗುತ್ತಿದೆ. ಇವುಗಳ ಬಳಕೆದಾರರ ಮಾಹಿತಿಯನ್ನು ಖದಿಯುತ್ತಿವೆ.

ICICI, HDFC ಕ್ರೆಡಿಟ್ ಕಾರ್ಡ್ ಬಳಕೆದಾರರೇ ತಕ್ಷಣ ನಿಮ್ಮ ಆಪ್‌ ಡಿಲೀಟ್ ಮಾಡಿ...

ಪ್ಲೇ ಸ್ಟೋರಿನಲ್ಲಿ ಯಾವುದಾರರು ಒಂದು ಆಪ್‌ ಖ್ಯಾತಿಯನ್ನು ಪಡೆದುಕೊಂಡು, ಅದನ್ನು ಹೆಚ್ಚಿನ ಮಂದಿ ಆಪ್‌ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಸಾಕು ಮಾರನೆಯ ದಿನವೇ ಅದೇ ಮಾದರಿಯಲ್ಲಿ ಹಲವು ಆಪ್‌ಗಳು ಬಳಕೆದಾರರನ್ನು ಮರಳು ಮಾಡಲು ಪ್ಲೇ ಸ್ಟೋರಿನಲ್ಲಿ ಕಾಣಿಸಿಕೊಳ್ಳುತ್ತವೆ. ಇದೇ ಮಾದರಿಯಲ್ಲಿ ಪ್ಲೇ ಸ್ಟೋರಿನಲ್ಲಿ ಹಲವು ಬ್ಯಾಂಕಿಂಗ್ ಆಪ್‌ಗಳು ಫೇಕ್ ಆಗಿ ಕಾಣಿಸಿಕೊಂಡಿದ್ದು, ಬಳಕೆದಾರರನ್ನು ವಂಚನೆ ಮಾಡಲು ಮುಂದಾಗಿವೆ ಎನ್ನಲಾಗಿದೆ. ಈ ಕುರಿತು ವರದಿಯೊಂದು ಲೀಕ್ ಆಗಿದೆ.

ICICI, RBL. HDFC ಬ್ಯಾಂಕ್ ಆಪ್:

ICICI, RBL. HDFC ಬ್ಯಾಂಕ್ ಆಪ್:

ಪ್ಲೇ ಸ್ಟೋರಿನಲ್ಲಿ ICICI, RBL. HDFC ಬ್ಯಾಂಕ್ ಗಳ ಆಪ್‌ಗಳು ಪ್ಲೇ ಸ್ಟೋರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ICICI, RBL. HDFC ಬ್ಯಾಂಕ್ ಗಳ ಆಪ್‌ ಅನ್ನು ಹೋಲುವ ಮಾದರಿಯಲ್ಲಿಯೇ ಫೇಕ್‌ ಆಪ್‌ಗಳನ್ನು ನಿರ್ಮಿಸಿ ಪ್ಲೇ ಸ್ಟೋರಿಗೆ ಬಿಡುಗಡೆ ಮಾಡಲಾಗಿದೆ. ಇದು ಬಳಕೆದಾರರ ಮಾಹಿತಿಯನ್ನು ಖದೀಯುತ್ತಿವೆ ಎನ್ನಲಾಗಿದೆ.

ನೋಡಲು ಅದೇ ಮಾದರಿ:

ನೋಡಲು ಅದೇ ಮಾದರಿ:

ಫೇಕ್ ಆಪ್‌ಗಳು ಹೊಸದಾಗಿ ಡೌನ್‌ಲೋಡ್ ಮಾಡುವವರನ್ನು ಮರಳು ಮಾಡುತ್ತವೆ ಎನ್ನಲಾಗಿದೆ. ನೋಡಲು ಬ್ಯಾಂಕ್ ಆಪ್ ಮಾದರಿಯಲ್ಲಿ ಕಾಣಿಸಿಕೊಳುವ ಫೇಕ್‌ ಆಪ್‌ಗಳು ಒಂದೇ ಮಾದರಿಯ ಬಣ್ಣ ಮತ್ತು ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರರು ಎಚ್ಚರವಾಗಿರಬೇಕು.

ಕ್ರೆಡಿಟ್ ಕಾರ್ಡ್ ಮಾಹಿತಿ:

ಕ್ರೆಡಿಟ್ ಕಾರ್ಡ್ ಮಾಹಿತಿ:

ICICI, RBL. HDFC ಬ್ಯಾಂಕ್‌ಗಳ ಆಪ್‌ ಮಾದರಿಯಲ್ಲಿ ಇರುವ ಫೇಕ್‌ ಆಪ್‌ಗಳು ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಅಪಹರಿಸುತ್ತವೆ ಎನ್ನಲಾಗಿದೆ. ನಿಮಗೆ ತಿಳಿಯದಂತೆ ಮಾಹಿತಿಯನ್ನು ಅಪಹರಿಸಿ,ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ಲಪಟಾಯಿಸುವ ಯೋಜನೆ ಮಾಡಿವೆ. ಈ ಹಿನ್ನಲೆಯಲ್ಲಿ ಆಪ್‌ಗಳನ್ನು ಇನ್ಸ್ಟಾಲ್ ಮಾಡುವ ಸಂದರ್ಭದಲ್ಲಿ ಎಚ್ಚರದಿಂದ ಇರುವುದು ಒಳ್ಳೆಯದು.

ಹೆಚ್ಚಿನ ಮಂದಿಗೆ ನಷ್ಟ:

ಹೆಚ್ಚಿನ ಮಂದಿಗೆ ನಷ್ಟ:

ತಿಳಿಯದೆ ಪ್ಲೇ ಸ್ಟೋರಿನಲ್ಲಿ ಫೇಕ್ ಆಪ್ ಗಳನ್ನು ಡೌನ್‌ಲೋಡ್ ಮಾಡಿಕೊಂಡ ಹಲವು ಮಂದಿ ಈಗಾಗಲೇ ನಷ್ಟಕ್ಕೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಹೆಚ್ಚಾಗಿ ICICI, RBL. HDFC ಬ್ಯಾಂಕ್ ಗಳ ಆಪ್‌ಗಳನ್ನು ಫೇಕ್ ಮಾಡಲಾಗುತ್ತಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಈ ಬ್ಯಾಂಕ್‌ಗಳ ಗ್ರಾಹಕರೆ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.

ಎಚ್ಚರಿಗೆ ಅಗತ್ಯ:

ಎಚ್ಚರಿಗೆ ಅಗತ್ಯ:

ಮುಂದಿನ ಬಾರಿ ನೀವು ಪ್ಲೇ ಸ್ಟೋರಿನಲ್ಲಿ ICICI, RBL. HDFC ಬ್ಯಾಂಕ್ ಆಪ್‌ಗಳನ್ನು ಡೌನ್‌ಲೋಡ್ ಮಾಡುವ ಮುಂಚೆ ಆಪ್‌ ಕುರಿತ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಅಲ್ಲದೇ ಆಪ್ ನಿರ್ಮಾಣ ಮಾಡಿರುವವರು ಯಾರು ಎಂದುದನ್ನು ತಿಳಿದುಕೊಳ್ಳಿ. ಮತ್ತೆ ರಿವ್ಯೂಗಳನ್ನು ಮರಿಯದೆ ಓದಿರಿ. ಇದರಿಂದಾಗಿ ನಿಮಗೆ ಫೇಕ್ ಆಪ್‌ಗಳನ್ನು ಗುರುತಿಸಲು ಸಹಾಯವಾಗಲಿದೆ.

ಈಗಲೇ ಡಿಲೀಟ್ ಮಾಡಿ:

ಈಗಲೇ ಡಿಲೀಟ್ ಮಾಡಿ:

ನೀವು ಈಗಾಗಲೇ ICICI, RBL. HDFC ಬ್ಯಾಂಕ್‌ ಆಪ್‌ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದರೇ ತಕ್ಷಣವೇ ಅದನ್ನು ಡಿಲೀಟ್ ಮಾಡಿ. ಮತ್ತು ಈ ಮೇಲಿನ ಮಾದರಿಯಲ್ಲಿ ಹೊಸದಾಗಿ ನಿಮ್ಮ ಬ್ಯಾಂಕಿನ ಒರ್ಜಿನಲ್ ಆಪ್‌ ಅನ್ನು ಡೌನ್‌ ಲೋಡ್ ಮಾಡಿಕೊಳ್ಳಿ.

Best Mobiles in India

English summary
ICICI, HDFC, RBL Credit Card Holders Duped Through Fake Banking Apps. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X