Home
Apps

ವಾಟ್ಸ್‌ಆಪ್‌ನಲ್ಲಿ ಈ ಕೆಲಸ ಮಾಡಿದ್ರೆ ನೀವು ಖಂಡಿತ ಜೈಲು ಪಾಲು!

By Gizbot Bureau

ವಾಟ್ಸ್‌ಆಪ್‌ ಭಾರತದಲ್ಲಿ ಅತ್ಯಂತ ಜನಪ್ರಿಯ ಚಾಟಿಂಗ್‌ ಆಪ್‌ ಆಗಿದೆ. ಸೆಲೆಬ್ರಿಟಿ, ರಾಜಕಾರಣಿಗಳಿಂದಿಡಿದು, ಸಾಮಾಜಿಕ ಕಾರ್ಯಕರ್ತರು, ಅಪರಾಧಿಗಳವರೆಗೂ ವಾಟ್ಸ್‌ಆಪ್‌ ಬಳಕೆ ಹಬ್ಬಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ವಾಟ್ಸ್ಆಪ್ ಗುಂಪುಗಳು ಭಾರತದಲ್ಲಿನ ಕಾನೂನು ಜಾರಿ ಸಂಸ್ಥೆಗಳಿಗೆ ಪ್ರಮುಖ ಸಮಸ್ಯೆಯಾಗಿದೆ. ಏಕೆಂದರೆ, ಜನಸಮೂಹವನ್ನು ಪ್ರಚೋದಿಸಲು ಮತ್ತು ದಾಳಿ ಸಜ್ಜುಗೊಳಿಸಲು ವಾಟ್ಸ್‌ಆಪ್‌ ವೇದಿಕೆಯಾಗುತ್ತಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್‌ನಿಂದ ಬಳಕೆದಾರರಿಗೆ ಹೆಚ್ಚು ರಕ್ಷಣೆ ಸಿಗುತ್ತಿರೋದ್ರಿಂದ, ಸಂದೇಶಗಳ ಮೂಲ ಪತ್ತೆಹಚ್ಚೋದು ಪೊಲೀಸರಿಗೆ ಹೆಚ್ಚು ಕಷ್ಟಕರವಾಗುತ್ತದೆ. ಆದಾಗ್ಯೂ, ಈ ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಷನ್‌ ನಿಮ್ಮನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು.

ವಾಟ್ಸ್‌ಆಪ್‌

ವಾಟ್ಸ್‌ಆಪ್‌ ಪ್ರತಿ ಬಳಕೆದಾರರ ಮೇಟಾಡೇಟಾವನ್ನು ಸಂಗ್ರಹಿಸುತ್ತದೆ. ಅಗತ್ಯವಿದ್ದಾಗ ಕಾನೂನು ಸಂಸ್ಥೆಗಳ ಜೊತೆ ಅದನ್ನು ಹಂಚಿಕೊಳ್ಳಬಹುದು. ಸಂದೇಶಗಳನ್ನು ಎನ್‌ಕ್ರಿಪ್ಟ್ ಮಾಡಿದರೂ, ಪೊಲೀಸರು ಬಯಸಿದರೆ ನಿಮ್ಮ ಹೆಸರು, ಐಪಿ ವಿಳಾಸ, ಮೊಬೈಲ್ ಸಂಖ್ಯೆ, ಸ್ಥಳ, ಮೊಬೈಲ್ ನೆಟ್‌ವರ್ಕ್ ಮತ್ತು ನಿಮ್ಮ ಮೊಬೈಲ್ ಹ್ಯಾಂಡ್‌ಸೆಟ್ ಪ್ರಕಾರದ ಬಗ್ಗೆ ಮಾಹಿತಿ ಪಡೆಯಬಹುದು. ನೀವು ಯಾರೊಂದಿಗೆ ಯಾವಾಗ? ಎಷ್ಟು ಸಮಯ ಚಾಟ್ ಮಾಡುತ್ತಿದ್ದೀರಿ ಎಂಬುದನ್ನು ಪೊಲೀಸರು ತಿಳಿದುಕೊಳ್ಳಬಹುದು. ಭಾರತದಲ್ಲಿ ವಾಟ್ಸ್‌ಆಪ್ ಬಳಕೆದಾರರಿಗೆ ಪ್ರತ್ಯೇಕ ಕಾನೂನುಗಳಿಲ್ಲದಿದ್ದರೂ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ಈ ಕೆಳಗಿನ ಯಾವುದೇ ಕೆಲಸ ಮಾಡಿದರೂ ಪೊಲೀಸರು ನಿಮ್ಮನ್ನು ಬಂಧಿಸಬಹುದು.

ಕಾನೂನು ವಿರೋಧಿ ಚಟುವಟಿಕೆಗಳು

ಕಾನೂನು ವಿರೋಧಿ ಚಟುವಟಿಕೆಗಳು

ವಾಟ್ಸ್‌ಆಪ್‌ ಗ್ರೂಪ್‌ಗಳ ಅಡ್ಮಿನ್‌ನ್ನು ಟ್ರಾಕ್‌ ಮಾಡಬಹುದಾಗಿದ್ದು. ಅವರ ಗ್ರೂಪ್‌ನಲ್ಲಿ ಕಾನೂನು ವಿರೋಧಿ ಚಟುವಟಿಕೆಗಳನ್ನು ಯಾರಾದರೂ ಪ್ರಚಾರ ಮಾಡಿದರೆ ಗ್ರೂಪ್‌ ಅಡ್ಮಿನ್‌ನ್ನು ಬಂಧಿಸಬಹುದು. ಏಕೆಂದರೆ, ಇಡೀ ಗ್ರೂಪ್‌ಗೆ ಅಡ್ಮಿನ್‌ ಜವಾಬ್ದಾರನಾಗಿರುತ್ತಾನೆ.

ಅಶ್ಲೀಲ ದೃಶ್ಯಗಳ ಹಂಚಿಕೆ

ಅಶ್ಲೀಲ ದೃಶ್ಯಗಳ ಹಂಚಿಕೆ

ವಾಟ್ಸ್‌ಆಪ್‌ನಲ್ಲಿ ಪೋರ್ನ್‌ ವಿಡಿಯೋಗಳ ಹಂಚಿಕೆ, ಅದರಲ್ಲೂ ಮಕ್ಕಳ ಪೋರ್ನ್‌, ಚಿತ್ರಗಳು ಅಶ್ಲೀಲ ಕಂಟೆಂಟ್‌ನ್ನು ಹಂಚಿಕೊಂಡರೆ ನೀವು ಪೊಲೀಸರ ಅತಿಥಿಯಾಗೋದ್ರಲ್ಲಿ ಎರಡು ಮಾತಿಲ್ಲ.

ಸೆಲೆಬ್ರಿಟಿಗಳ ತೇಜೋವಧೆ

ಸೆಲೆಬ್ರಿಟಿಗಳ ತೇಜೋವಧೆ

ವಾಟ್ಸ್‌ಆಪ್‌ನಲ್ಲಿ ಪ್ರಮುಖ ವ್ಯಕ್ತಿಗಳ ಬದಲಾಯಿಸಿದ ಫೋಟೋಗಳು, ವಿಡಿಯೋಗಳನ್ನು ಹಂಚಿಕೊಂಡರೆ ಪೊಲೀಸರು ನಿಮ್ಮನ್ನು ಬಂಧಿಸಬಹುದು.

ಮಹಿಳೆಯರಿಗೆ ಕಿರುಕುಳ

ಮಹಿಳೆಯರಿಗೆ ಕಿರುಕುಳ

ವಾಟ್ಸ್‌ಆಪ್‌ನಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ದೂರು ನೀಡಿದರೆ ಪೊಲೀಸರು ನಿಮ್ಮನ್ನು ಬಂಧಿಸುತ್ತಾರೆ.

ನಕಲಿ ಅಕೌಂಟ್‌

ನಕಲಿ ಅಕೌಂಟ್‌

ಬೇರೆಯವರ ಹೆಸರು, ಮೊಬೈಲ್‌ ಸಂಖ್ಯೆಯಲ್ಲಿ ನಕಲಿ ವಾಟ್ಸ್‌ಆಪ್‌ ಸೃಷ್ಟಿಸೋದು ಕಾನೂನು ಪ್ರಕಾರ ತಪ್ಪು.

ಕೋಮು ಸಂಘರ್ಷಕ್ಕೆ ಪ್ರಚೋದನೆ

ಕೋಮು ಸಂಘರ್ಷಕ್ಕೆ ಪ್ರಚೋದನೆ

ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಲು ಸುಳ್ಳು ಅಥವಾ ಅನ್ಯ ಧರ್ಮ ನಿಂದಿಸುವ ಸಂದೇಶಗಳನ್ನು ಕಳುಹಿಸಿದರೆ ನೀವು ಖಂಡಿತ ಪೊಲೀಸ್‌ ಅತಿಥಿ.

ಸುಳ್ಳು ಸುದ್ದಿ

ಸುಳ್ಳು ಸುದ್ದಿ

ಸುಳ್ಳು ಸುದ್ದಿ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವುದು ಹಾಗೂ ಸೂಕ್ಷ್ಮ ವಿಷಯಗಳ ಬಗ್ಗೆ ರೂಮರ್ಸ್‌ಗಳನ್ನು ವಾಟ್ಸ್‌ಆಪ್‌ನಲ್ಲಿ ಹಂಚಿಕೊಳ್ಳಬೇಡಿ

ಡ್ರಗ್ಸ್ ಮಾರಾಟ

ಡ್ರಗ್ಸ್ ಮಾರಾಟ

ವಾಟ್ಸ್‌ಆಪ್‌ನಲ್ಲಿ ಮಾದಕ ದ್ರವ್ಯಗಳ ಮಾರಾಟವನ್ನು ನಿಷೇಧಿಸಲಾಗಿದೆ. ಇದರ ಮೇಲೂ ಇಂತಹ ಚಟುವಟಿಕೆಗಳನ್ನು ನಡೆಸಿದ್ರೆ ಪೊಲೀಸರು ಖಂಡಿತವಾಗಿಯೂ ನಿಮ್ಮನ್ನು ವಶಕ್ಕೆ ಪಡೆಯಬಹುದು.

Best Mobiles in India

English summary
If you Do These Things On WhatsApp, You May Land In Jail
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+