Home
Apps

ಫೆರಾರಿ, ರೋಲ್ಸ್‌ರಾಯ್‌ ಕಾರುಗಳನ್ನು ಬಾಡಿಗೆಗೆ ನೀಡುವ 'ಹೈಪ್' ಆಪ್!!

ದುಬಾರಿ ಬೆಲೆಯ ಕಾರ್‌ಗಳನ್ನು ಖರೀದಿಸುವ ಸಾಮರ್ಥ್ಯ ಇಲ್ಲದವರಿಗೂ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಇಂತಹ ಕಾರ್‌ಗಳಲ್ಲಿ ಪ್ರಯಾಣಿಸುವ ಕನಸು ಹೊಂದಿದ್ದೀರಾ?. ಹಾಗಾದರೆ ನಿಮಗೆ 'ಹೈಪ್' ಆಪ್ ಸಹಾಯ ಮಾಡಲಿದೆ. ಏಕೆಂದರೆ, ವಿಲಾಸಿ ಕಾರ್‌ಗಳ ಬಾಡಿಗೆ ನೀಡುವ ಸಂಸ್ಥೆ ಹೈಪ್ (Hype) ಈಗ ಎಲ್ಲರ ಆಸೆಯನ್ನು ಪೂರೈಸುವ ಕೆಲಸಕ್ಕೆ ಕೈ ಹಾಕಿ ಗಮನಸೆಳೆದಿದೆ.

ಹೌದು, ಬೆಂಗಳೂರಿನಲ್ಲಷ್ಟೇ ಅಲ್ಲದೆ, ದೇಶದ 42 ನಗರಗಳಲ್ಲೂ ಆಪ್‌ ನೆರವಿನಿಂದಲೇ ದುಬಾರಿ ಕಾರ್‌ ಬುಕಿಂಗ್ ಮಾಡಬಹುದಾದ ಆಯ್ಕೆಯನ್ನು ಹೈಪ್ ಸಂಸ್ಥೆ ಮಾಡಿದೆ. ಐಷಾರಾಮಿ ಕಾರ್‌ಗಳಲ್ಲಿ ಪಯಣಿಸುವ ಆಸೆ ಇರುವವರಿಗೆ ಈ ಕಾರುಗಳು ಸ್ವಯಂ ಚಾಲನೆ ಮತ್ತು ಚಾಲಕನ ಸೇವೆ - ಹೀಗೆ ಎರಡು ಬಗೆಯಲ್ಲಿ ದೊರೆಯಲಿವೆ. ಸ್ವಯಂ ಚಾಲನೆ ದರ ಅಗ್ಗವಾಗಿರಲಿದೆ.

ಫೆರಾರಿ, ರೋಲ್ಸ್‌ರಾಯ್‌ ಕಾರುಗಳನ್ನು ಬಾಡಿಗೆಗೆ ನೀಡುವ 'ಹೈಪ್' ಆಪ್!!

ವಿಲಾಸಿ ಕಾರ್‌ಗಳ ಬಾಡಿಗೆ ವಿಷಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ನವೋದ್ಯಮ ಸ್ಥಾಪನೆಯಾಗಿ ಕಾರ್‌ಗಳನ್ನು ಬಾಡಿಗೆ ನೀಡುವ ಸಂಸ್ಥೆಗಳಿಗೆಮಧ್ಯವರ್ತಿ ಸಂಸ್ಥೆಯಾಗಿ 'ಹೈಪ್' ಕಾರ್ಯನಿರ್ವಹಿಸುತ್ತಿದೆ. ಹಾಗಾದರೆ, ಹೈಪ್‌ನಲ್ಲಿ ಯಾವ ಯಾವ ಕಾರುಗಳು ಲಭ್ಯ? ಕಾರ್ ಬುಕ್ ಮಾಡುವುದು ಹೇಗೆ? ಬೆಲೆಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಯಾವುದಿದು ಹೈಪ್ ಸಂಸ್ಥೆ!

ಯಾವುದಿದು ಹೈಪ್ ಸಂಸ್ಥೆ!

ಓಲಾ, ಉಬರ್ ಮತ್ತಿತರ ಟ್ಯಾಕ್ಸಿಗಳು ಸುಲಭವಾಗಿ ಬಾಡಿಗೆಗೆ ದೊರೆಯುವಾಗ ವಿಲಾಸಿ ಕಾರ್‌ಗಳಿಗೆ ಮೀಸಲಾದ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಇದಾಗಗಿದೆ. ಕೃತಕ ಬುದ್ಧಿಮತ್ತೆ ಆಧರಿಸಿದ ವಿಮೆ ವಹಿವಾಟಿಗೆ ಸ್ವಿಟ್ಜರ್ಲೆಂಡ್‌ನಲ್ಲಿ ಚಾಲನೆ ನೀಡಿದ ಮೊದಲ ಭಾರತೀಯ ರಾಘವ್ ಬೆಳವಡಿ ಅವರು ಇಂತಹದೊಂದು ನವೋಧ್ಯಮವನ್ನು ಸ್ಥಾಪಿಸಿದ್ದಾರೆ.

ಯಾವ ಯಾವ ಕಾರುಗಳು ಲಭ್ಯ?

ಯಾವ ಯಾವ ಕಾರುಗಳು ಲಭ್ಯ?

ಬುಗಾಟಿ ಹೊರತುಪಡಿಸಿ, ಫೆರಾರಿ, ರೋಲ್ಸ್‌ರಾಯ್‌ ಸೇರಿದಂತೆ ವಿಶ್ವದಲ್ಲಿ ಲಭ್ಯ ಇರುವ ಎಲ್ಲ ವಿಲಾಸಿ ಕಾರ್‌ಗಳು ಹೈಪ್‌ನಲ್ಲಿ ಬಾಡಿಗೆಗೆ ಲಭ್ಯ ಇವೆ. ‘ಬಿಲೇನಿಯರ್ ಬಾರ್ಬರ್' ಖ್ಯಾತಿಯ ರಮೇಶ್‌ ಬಾಬು ಅವರ ಬಳಿ ಇರುವ ಎಲ್ಲ ವಿಲಾಸಿ ಕಾರ್‌ಗಳೂ ಇಲ್ಲಿವೆ. ರಮೇಶ್‌ ಅವರು ಈ ‘ಹೈಪ್'ನ ವಹಿವಾಟು ಸಲಹೆಗಾರರೂ ಆಗಿದ್ದಾರೆ ಎಂದು ಹೈಪ್ ಸಂಸ್ಥೆ ತಿಳಿಸಿದೆ.

ಕಾರ್‌ ಬಾಡಿಗೆ ಪಡೆಯುವುದು ಹೇಗೆ?

ಕಾರ್‌ ಬಾಡಿಗೆ ಪಡೆಯುವುದು ಹೇಗೆ?

ನೀವು ಹೈಪ್ ಆಪ್ ಹಾಕಿಕೊಂಡು, (Hype) ಆಪ್‌ ಮೂಲಕವೇ ಕಾರ್‌ ಬಾಡಿಗೆ ಪಡೆಯಬಹುದಾಗಿದೆ. ಯಾವುದೇ ವಿಲಾಸಿ ಕಾರ್‌ಗಳನ್ನು ಬಾಡಿಗೆಗೆ ಪಡೆಯಲು ಕೇವಲ 50 ಸಾವಿರ ಠೇವಣಿ ಇರಿಸುವುದು ಕಡ್ಡಾಯವಾಗಿದ್ದು, ಹಣ ಪಾವತಿ ನಂತರ ಮನೆ ಬಾಗಿಲಿಗೆ ಕಾರ್ ತಲುಪಿಸಲಾಗುತ್ತದೆ. ಸ್ವಯಂ ಚಾಲನೆಗೆ ಕಾರ್‌ಗಳನ್ನು ಬಾಡಿಗೆ ನೀಡುವ ಸೌಲಭ್ಯ ಕೂಡ ಇಲ್ಲಿದೆ.

ಕಾರುಗಳ ಬಾಡಿಗೆ ಎಷ್ಟು?

ಕಾರುಗಳ ಬಾಡಿಗೆ ಎಷ್ಟು?

ಬಿಎಂಡಬ್ಲ್ಯು ಕಾರ್‌ನ ಬಾಡಿಗೆ 8 ಗಂಟೆಗೆ 7 ಸಾವಿರ ಇದ್ದರೆ, ರೋಲ್ಸ್‌ರಾಯ್‌ ಕಾರ್‌ಗೆ 8 ಗಂಟೆ 70 ಸಾವಿರದವರೆಗೆ ಬಾಡಿಗೆ ಇದೆ. ನಗರದಿಂದ ನಗರಕ್ಕೆ ದರ ಬದಲಾಗಲಿದ್ದು, ಗ್ರಾಹಕರನ್ನು ಒದಗಿಸಿಕೊಟ್ಟಿದ್ದಕ್ಕೆ ಕಾರ್‌ ಬಾಡಿಗೆ ಸಂಸ್ಥೆಗಳು ನೀಡುವ ಕಮಿಷನ್‌ ‘ಹೈಪ್‌'ನ ವರಮಾನದ ಮೂಲವಾಗಿದೆ. ವಹಿವಾಟಿನ ಸ್ವರೂಪ ಆಧರಿಸಿ ಶೇ 10 ರಿಂದ 25ರವರೆಗೆ ಕಮಿಷನ್ ಇರಲಿದೆ.

 ಕಾರಿನ ಮೇಲೆ ಸಂಪೂರ್ಣ ನಿಗಾ!

ಕಾರಿನ ಮೇಲೆ ಸಂಪೂರ್ಣ ನಿಗಾ!

ಪ್ರತಿಯೊಂದು ಐಶಾರಾಮಿ ಕಾರಿಗೂ ವಿಶೇಷ ಸಾಫ್ಟ್‌ವೇರ್‌ ಒಳಗೊಂಡ ಜಿಪಿಎಸ್ ಸಾಧನ ಜೋಡಿಸಲಾಗಿರುತ್ತದೆ. ಹೀಗಾಗಿ ಕಾರ್‌ ಓಡುವ ವೇಗ, ಇರುವ ತಾಣ, ವಾಹನದಲ್ಲಿ ಇರುವ ಪ್ರಯಾಣಿಕರ ಸಂಖ್ಯೆ ಎಲ್ಲದರ ಮೇಲೆ ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡೇ ನಿಗಾ ಇರಿಸಬಹುದಾಗಿದ್ದು, ಇದು ಗ್ರಾಹಕರ ಸುರಕ್ಷತೆಗೂ ಕೂಡ ಸಹಾಯವಾಗಲಿದೆ.

Best Mobiles in India

English summary
HYPE is a Bangalore based Tech startup and an online Marketplace for Luxury Car Rentals. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+