ಸರಿಯಾದ ಕಾಲ್ಪನಿಕ ಸಹಾಯಕ ಹುಡುಕಾಟ: ಎಷ್ಟು ದೂರ ಇದ್ದೇವೆ ?

ಇತ್ತೀಚಿನ ದಿನಮಾನಗಳಲ್ಲಿ ಸ್ಮಾರ್ಟ್‍ಫೋನಿನಲ್ಲಿ ಖಾಸಗಿ ಕಾಲ್ಪನಿಕ ಸಹಾಯಕರನ್ನು ನೀಡುವ ಪ್ರಯತ್ನ ಉತ್ಪಾದಕರು ಮಾಡುತ್ತಿದ್ದಾರೆ.

By Prateeksha
|

ಸಿರಿ, ಕೊರ್ಟಾನಾ, ಗೂಗಲ್ ಮತ್ತು ಈಗ ಬಿಕ್ಸ್‍ಬಿ ಎಲ್ಲವೂ ಸಾಲಲ್ಲಿ ನಿಂತಿದೆ ಎಲ್ಲಕ್ಕಿಂತ ಉತ್ತಮ ಧ್ವನಿ ಆಧಾರಿತ ನಿರ್ದೇಶನ ಸೌಲಭ್ಯ ಬಳಕೆದಾರರಿಗೆ ನೀಡಲು. ಆದರೂ, ನಿಜವಾದ ಕಾಲ್ಪನಿಕ ಸಹಾಯಕ ತಂತ್ರಜ್ಞಾನ ನಾವಿನ್ನೂ ಕಾಣಬೇಕಾಗಿದೆ. ಸ್ಮಾರ್ಟ್‍ಫೋನ್ ನೊಡನೆ ಆಗಿದ್ದಾಂಗ ಮಾತನಾಡುವುದು ಚೆನ್ನಾಗಿರುತ್ತದೆ. ನಾವೀಗ ಈ ವಿಷಯದಲ್ಲಿ ಎಷ್ಟು ಬೆಳೆದಿದ್ದೇವೆ.

ಸರಿಯಾದ ಕಾಲ್ಪನಿಕ ಸಹಾಯಕ ಹುಡುಕಾಟ:  ಎಷ್ಟು ದೂರ ಇದ್ದೇವೆ ?

ಈ ಪ್ರಶ್ನೆ ಎಲ್ಲರ ಮನಸಲ್ಲೂ ಇದ್ದೇ ಇದೆ. ಹೊಸ ತಂತ್ರಜ್ಞಾನ ಏನೇನು ಬರಬಹುದು ಎನ್ನುವ ಕುತೂಹಲದ ಜೊತೆಗೆ ಈಗಿನ ಪೀಳಿಗೆ ಬಂದಂತಹ ಹೊಸ ಸುಧಾರಿತ ಸ್ವಯಂಚಾಲನೆಗಳನ್ನು ತೆರೆದ ಮನಸಿನಿಂದ ಸ್ವೀಕರಿಸುತ್ತಿದ್ದಾರೆ, ಇದರಿಂದ ಇದರ ಬೇಡಿಕೆ ಹಾಗೂ ಅದರ ಮೇಲಿನ ನಿರೀಕ್ಷೆ ಇನ್ನೂ ಹೆಚ್ಚುತ್ತಿದೆ.

ಬೇಡಿಕೆ ಮತ್ತು ನಿರೀಕ್ಷೆಗಳು ನಮಗೆ ನಮ್ಮ ದಿನನಿತ್ಯದ ಕೆಲಸ ಮತ್ತು ನಿದ್ದೆಗಾಗಿ ಉಪಯೋಗಿಸುವ ಎಷ್ಟೊ ಸಮಯವನ್ನು ಉಪಯೋಗಿಸುತ್ತಿದೆ. ಈ ಕಾಲ್ಪನಿಕ ಸಹಾಯಕ ಕೇವಲ ಒಂದು ಭವಿಷ್ಯದ ಇಣುಕು ನೋಟವಷ್ಟೆ. ಎಲ್ಲಾ ಸ್ಪರ್ಧಾಳುಗಳಲ್ಲಿ ಆಪಲ್ ಮೊದಲ ಕಂಪನಿ ಆಗಿತ್ತು 2011 ರಲ್ಲಿ ಸಿರಿ ಯೊಂದಿಗೆ ಬಂದದ್ದು. ಇದು ಮೆಚ್ಚುವಂತಹ ಬುದ್ದಿವಂತ ಸಹಾಯಕನನ್ನು ನೀಡಿತು ಸ್ಮಾರ್ಟ್‍ಫೋನಿನಲ್ಲಿ. ಇದು ನೆನಪಿನಲ್ಲಿ ಇಡಿಸುವುದು, ಅಲಾರಾಮ್ ಇಡುವುದು, ಅಂತರ್ಜಾಲ ಶೋಧಿಸುವುದು, ಕೈಗಳ ಸಹಾಯವಿಲ್ಲದೆ ಸಂದೇಶ, ಸಂಗೀತ ನುಡಿಸುವುದು ಇತ್ಯಾದಿ ಕೈ ಯಿಂದ ಫೋನು ಮುಟ್ಟದೆ ಮಾಡಬಹುದು.

ಎಷ್ಟೇ ಮುಂದುವರಿದ ತಂತ್ರಜ್ಞಾನ ಎನಿಸಿದರೂ ಸಿರಿ ದಿನ ನಿತ್ಯದ ಜೀವನದ ಭಾಗದಲ್ಲಿ ಅದು ಕೇವಲ ಒಂದೆಳೆ ಎನಿಸಿತು. ಅದಕ್ಕೆ ಕಾರಣ ಅದರ ಸೀಮಿತ ಕೆಲಸಗಳು ಮತ್ತು ಕಾರ್ಯಗತಗೊಳಿಸುವಲ್ಲಿ ತೊಂದರೆಗಳು ಮತ್ತು ಧ್ವನಿ ಹಾಗೂ ಶಬ್ದ ಗುರುತಿಸುವಿಕೆಯಲ್ಲಿ ಸಮಸ್ಯೆಯಂತಹ ಕಾರಣಗಳು ಇರಬಹುದು. ಈ ವಿಷಯದಲ್ಲಿ ಆಪಲ್ ಕಾರ್ಯ ನಿರ್ವಹಿಸಿ ಈಗ ಸಿರಿ ಆಪ್ ನಲ್ಲಿಯೂ ಕೆಲಸ ಮಾಡುತ್ತದೆ ಕ್ಯಾಬ್ ಬುಕಿಂಗ್ ಅಥವಾ ವಾಟ್ಸಪ್ ನಂತಹ ತ್ವರಿತ ಸಂದೇಶ ಕಳಿಸುವಂತಹ ಅಪ್ಲಿಕೇಷನ್‍ಗಳಲ್ಲಿ . ಇದು ಆಪ್ಸ್ ತೆರೆಯುತ್ತದೆ ಮತ್ತು ನಿಮಗೆ ಲೆಕ್ಕವಿಲ್ಲದ ಐಕೊನ್ ಗಳನ್ನು ಹುಡುಕುವುದು ಬೇಕಿಲ್ಲಾ.

ಮೂರು ವರ್ಷಗಳ ನಂತರ ಸಿರಿಗೆ ಟಕ್ಕರ್ ಕೊಡಲು ಮೈಕ್ರೊಸಾಫ್ಟ್ ಬಂದಿದೆ. ಹೊಸ ಕ್ರಾಂತಿಯಲ್ಲದಿದ್ದರೂ ಹೆಚ್ಚಿಗೆ ಸುದ್ದಿ ಮಾಡಿತ್ತು ಕೊರ್ಟಾನಾ. ಸುಧಾರಿತ ಧ್ವನಿ ಇದ್ದರೂ ಇದರದೂ ಪರಿಮಿತಿ ಇತ್ತು ಧ್ವನಿಯನ್ನು ಸರಿಯಾಗಿ ಗುರುತಿಸುವ ವಿಷಯದಲ್ಲಿ. ಎಲ್ಲರ ಮುಂದೆ ಕೀ ನೋಟ್ ನೀಡುವ ಸಂದರ್ಭದಲ್ಲಿ ಕೊರ್ಟಾನಾ ಉಪಯೋಗಿಸಲು ಹೋಗಿ ಎಲ್ಲರ ಮುಂದೆ ಸಂಕೋಚಕ್ಕೆ ಗುರಿಯಾದುದು ಇದೆ ಮೈಕ್ರೊಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ.

ಅದೇ ಇನ್ನೊಂದೆಡೆ ಗೂಗಲ್ ಮೆಚ್ಚುವಂತಹ ಮತ್ತು ತೃಪ್ತಿ ಕೊಡುವಂತಹ ಕೆಲಸ ಮಾಡಿತು. 2012 ರಲ್ಲಿ ಈ ಧ್ವನಿ ಸಹಾಯಕವನ್ನು ಜಗತ್ತಿಗೆ ನೀಡಿತು. ಧ್ವನಿ ಗುರುತಿಸುವಿಕೆಯಲ್ಲಿ ಸುಧಾರಣೆಯಿತ್ತು ಮತ್ತು ಶಬ್ದಗಳನ್ನು ಬಹಳಷ್ಟು ಪ್ರಮಾಣದಲ್ಲಿ ಅರ್ಥಮಾಡಿಕೊಳ್ಳುತ್ತಿತ್ತು. ಇದು ಎಲ್ಲೆಡೆ ಉಪಯೋಗಿಸಲಾಗುತ್ತಿದ್ದು ಸಿರಿಯನ್ನು ಹಿಂದಿಕ್ಕಿದೆ. ಆದರೂ, ಗೂಗಲ್ ನೌ ಪಕ್ಕಾ ಖಾಸಗಿ ಸಹಾಯಕ ಅಲ್ಲಾ. ನೀವು ಗೊಂದಲ ಮೂಡಿಸುವ ವಾಕ್ಯ ಹೇಳಿದಾಗ ಅದು ನಿಮಗೆ ಗೂಗಲ್ ಹುಡುಕುವ ಹಾಳೆಗೆ ಕರೆದುಕೊಂಡು ಹೋಗುತ್ತದೆ ಜೊತೆಗೆ ಡಿವೈಜ್ ನಲ್ಲಿರುವ ಆಪ್ಸ್ ಗಳ ಮೇಲೆ ಸಂಪೂರ್ಣ ನಿಯಂತ್ರಣವಿಲ್ಲಾ.

ಬಿಕ್ಸ್‍ಬಿ ಇದು ಹೊಸದಾಗಿ ಸ್ಯಾಮ್ಸಂಗ್ ನಿಂದ ಮಾರುಕಟ್ಟೆಗೆ ಬಂದಿರುವಂತಹುದು. ಹೊಸದಾಗಿ ಬಂದ ಗೆಲಾಕ್ಸಿ ಎಸ್8 ಮತ್ತು ಎಸ್8+ ಇರುವಂತಹುದು. ಇದು ತುಂಬಾ ನಿರಾಶಜನಕವಾಗಿದೆ. ಸುಲಭ ಕೆಲಸಗಳಾದಂತಹ ಸಂದೇಶ ರವಾನೆ ಹಾಗೂ ಕರೆ ಮಾಡುವುದು ಕೂಡ ತ್ರಾಸದಾಯಕ. ಬೀಟಾ ವರ್ಷನ್ ಆದರೂ ಸ್ಯಾಮ್ಸಂಗ್ ಮಾತು ಕೊಟ್ಟಂತೆ ನಡೆದುಕೊಂಡಿಲ್ಲಾ, ಹೈ ಬಿಕ್ಸ್‍ಬಿ ಹೇಳಿ ಅಥವಾ ಗಟ್ಟಿಯಾಗಿ ಪಕ್ಕದಲ್ಲಿನ ಗುಂಡಿ ಗಟ್ಟಿಯಾಗಿ ಅಮುಕಿ ಎನ್ನುವ ಲೆಕ್ಕ.

ವರ್ಜ್ ನಿಂದ ಬಂದ ವೀಡಿಯೊ ಪ್ರಕಾರ ಧ್ವನಿ ಗುರುತಿಸುವಿಕೆ ನಿರಾಸೆ ತರುವಂತಹುದು.

ಎಲ್ಲರೂ ಇನ್ನೂ ಕಲಿಯುತ್ತಿದ್ದಾರೆ. ಸ್ಮಾರ್ಟ್‍ಫೋನ್ ಗಳ ಮಾರಾಟಕ್ಕಾಗಿ ತಮ್ಮ ಫೋನಿನ ಉತ್ತಮ ಗುಣಗಳನ್ನು ಮೇಲೆತ್ತಿ ತೋರಿದರೆ ಏನೇನು ಮಾಡುವುದಿಲ್ಲಾ ಎಂದು ಹೇಳುವುದು ನಮ್ಮ ಕೈಯಲ್ಲಿ ಇದೆ. ಖಾಸಗಿ ಸಹಾಯಕನ ಬಗ್ಗೆ ಮಾತಾಡಿದರೆ ಅದು ಬಹಳಷ್ಟು ಕೆಲಸ ಮಾಡಲಾಗದು. ಉದಾಹರಣೆಗೆ ನೀವು ಸಹಾಯಕನಿಗೆ ಸಂಗೀತದ ಧ್ವನಿ ನಿಮಗಾಗಿ ಇಳಿಸೆಂದು ಹೇಳಲಾಗದು.

ಎಷ್ಟು ಮುಂದುವರಿದ್ದೇವೆ ಎಂದು ನೀವು ಕೇಳಿದರೆ ಇದು ತುಂಬಾ ಕಡಿಮೆ, ಇನ್ನೂ ಬಹಳಷ್ಟು ದೂರ ಸಾಗಬೇಕಾಗಿದೆ. ಏನಿಲ್ಲವೆಂದರೂ ಕನಿಷ್ಟ ಹತ್ತು ವರ್ಷ ಬೇಕಾಗಬಹುದು. ಹೀಗಾಗಿ ನಿಮ್ಮ ಸ್ಮಾರ್ಟ್‍ಫೋನ್ ನಿಮ್ಮ ಜೀನಿ ಆಗಲು ಇನ್ನೂ ಸಮಯವಿದೆ.

Best Mobiles in India

Read more about:
English summary
Virtual assistants are trying to fit in to our life styles.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X