ಆದಾಯ ತೆರಿಗೆಯನ್ನು ಹೇಗೆ ಲೆಕ್ಕ ಮಾಡೋದು ಗೊತ್ತಾಗುತ್ತಿಲ್ಲವಾ..? ಇಲ್ಲಿವೆ ಬೆಸ್ಟ್‌ ಆಪ್‌ಗಳು!

By Gizbot Bureau
|

ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಹೊಸ ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಪರಿಚಯಿಸಲಾಗಿದ್ದು, ಏಪ್ರಿಲ್ 1, 2020 ರಿಂದ ಜಾರಿಗೆ ಬರಲಿದೆ. ಹೊಸ ಸ್ಲ್ಯಾಬ್‌ ಪ್ರಕಾರ ವಾರ್ಷಿಕ 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಜನರು ಯಾವುದೇ ಆದಾಯ ತೆರಿಗೆ ಪಾವತಿಸುವಂತಿಲ್ಲ. 5 ಲಕ್ಷದಿಂದ 7.5 ಲಕ್ಷ ರೂ.ಗಳವರೆಗೆ ಗಳಿಸುವವರು ಶೇ.10ರಷ್ಟು ತೆರಿಗೆ ಪಾವತಿಸಿದರೆ, 7.5 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ಶೇ.15ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇನ್ನು, 10 ರಿಂದ 12.5 ಲಕ್ಷ ರೂ. ಆದಾಯ ಇದ್ದವರಿಗೆ ಶೇ.20ರಷ್ಟು ತೆರಿಗೆ, 12.5 ಲಕ್ಷದಿಂದ 15 ಲಕ್ಷ ರೂ.ವರೆಗಿನ ಆದಾಯ ಹೊಂದಿರೋ ಶೇ.25 ರಷ್ಟು ತಿಗೆ. ಮತ್ತೊಂದೆಡೆ 15 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರೋ ಜನರು ಶೇ.30ರಷ್ಟು ತೆರಿಗೆಯನ್ನು ಪಾವತಿಸಬೇಕಾಗಿದೆ.

ಹೊಸ ತೆರಿಗೆ

ಆದಾಗ್ಯೂ, ಹೊಸ ತೆರಿಗೆ ದರ ಆಯ್ದುಕೊಳ್ಳುವ ಜನರು ವಿನಾಯಿತಿಗಳು ಮತ್ತು ಕಡಿತಗಳನ್ನು ಬಿಡಬೇಕಾಗುತ್ತದೆ. ಆದರೆ, ಹೊಸ ದರಗಳು ನಿಮ್ಮನ್ನು ತಲೆತಿರುಗಿಸುತ್ತಿದ್ದರೆ. ಮತ್ತು ತೆರಿಗೆಯನ್ನು ಲೆಕ್ಕ ಮಾಡುವಾಗ ನೀವು ಒದ್ದಾಡುತ್ತಿದ್ದರೆ ಚಿಂತಿಸಬೇಡಿ. ಹೌದು, ನಿಮ್ಮ ಚಿಂತೆಯನ್ನು ಶಮನಗೊಳಿಸಿ ಆದಾಯ ತೆರಿಗೆಯನ್ನು ಲೆಕ್ಕಹಾಕಲು ಸಹಾಯ ಮಾಡೋ 5 ಮೊಬೈಲ್ ಅಪ್ಲಿಕೇಶನ್‌ಗಳನ್ನು ಇಲ್ಲಿ ನೀಡಿದ್ದೇವೆ..

ಆಯ್‌ಕರ್‌ ಸೇತು

ಆಯ್‌ಕರ್‌ ಸೇತು

ಉಚಿತ ಮೊಬೈಲ್ ಅಪ್ಲಿಕೇಶನ್ ಆಗಿರುವ ಆಯ್‌ಕರ್ ಸೇತು, ಆದಾಯ ತೆರಿಗೆ ಇಲಾಖೆಯ ಒಂದು ಉಪಕ್ರಮವಾಗಿದ್ದು, ಬಳಕೆದಾರರು ತಮ್ಮ ತೆರಿಗೆ ಮೊತ್ತವನ್ನು ಸುಲಭವಾಗಿ ಲೆಕ್ಕ ಮಾಡಲು ಅನುವು ಮಾಡಿಕೊಡುತ್ತದೆ. ಆಸ್ಕ್ ಐಟಿ (ತೆರಿಗೆದಾರರ ಪ್ರಶ್ನೆಗಳಿಗೆ ತ್ವರಿತ ಉತ್ತರ ನೀಡುವ ಚಾಟ್‌ಬೊಟ್), ಟಿಪಿಎಸ್ ವರ್ಟಿಕಲ್ (ಹತ್ತಿರದ ಟಿಪಿಎಸ್ ಕಚೇರಿಗಳನ್ನು ಪತ್ತೆಹಚ್ಚಲು ಬಳಕೆದಾರರಿಗೆ ಸಹಾಯ ಮಾಡುತ್ತದೆ), ತೆರಿಗೆ ಪರಿಕರಗಳು, ಲೈವ್ ಚಾಟ್, ಆನ್‌ಲೈನ್‌ನಲ್ಲಿ ಪ್ಯಾನ್‌ಗೆ ಅರ್ಜಿ, ತೆರಿಗೆ ಗ್ಯಾನ್ ಸೇರಿ ಹಲವು ಫೀಚರ್‌ಗಳನ್ನು ಈ ಆಪ್‌ ಒಳಗೊಂಡಿದೆ.

ಮೊರ್ಆಪ್ಸ್‌ಸ್ಟೋರ್‌ನಿಂದ ಐಟಿ ಕ್ಯಾಲ್ಕುಲೇಟರ್ ಯಾವುದೇ ತೆರಿಗೆ ವ್ಯಾಪ್ತಿಗೆ ಒಳಪಡುವ ಸಂಬಳ ಪಡೆಯುವವರು ಆದಾಯ ತೆರಿಗೆ ಕ್ಯಾಲ್ಕುಲೇಟರ್ ಅಪ್ಲಿಕೇಶನ್‌ನ ಸಹಾಯದಿಂದ ಸರ್ಕಾರಕ್ಕೆ ತೆರಿಗೆಯಾಗಿ ಪಾವತಿಸಬೇಕಾದ ಮೊತ್ತವನ್ನು ಲೆಕ್ಕ ಹಾಕಬಹುದು. ದಾಖಲೆಗಳನ್ನು ರಚಿಸಲು, ನವೀಕರಿಸಲು ಅಥವಾ ಅಳಿಸಲು ಈ ಅಪ್ಲಿಕೇಶನ್ ಬಳಕೆದಾರರನ್ನು ಅನುಮತಿಸುತ್ತದೆ. ಇದು ನಿಮ್ಮ ವಿವರಗಳನ್ನು ಕಳಿಸುವ ಸಾಮರ್ಥ್ಯ (ಇಮೇಲ್‌ಗಳಿಗೆ) ಮತ್ತು ಇತರರಲ್ಲಿ ಅನೇಕ ಬಳಕೆದಾರರ ನಮೂದುಗಳನ್ನು ಸಕ್ರಿಯಗೊಳಿಸುವಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಮೈ ಟ್ಯಾಕ್ಸ್‌ ಇಂಡಿಯಾ

ಮೈ ಟ್ಯಾಕ್ಸ್‌ ಇಂಡಿಯಾ

ತೆರಿಗೆ ವಿಭಜನೆಯನ್ನು ಲೆಕ್ಕಹಾಕಲು ಮತ್ತು ಆದಾಯದ ಮೇಲಿನ ತೆರಿಗೆಯನ್ನು ಉಳಿಸಲು ಎಷ್ಟು ಹೆಚ್ಚು ಹೂಡಿಕೆ ಮಾಡಬೇಕೆಂದು ಈ ಅಪ್ಲಿಕೇಶನ್ ಅನುಮತಿಸುತ್ತದೆ.

ಇಸೀ ಟ್ಯಾಕ್ಸ್‌ ಕ್ಯಾಲ್ಕುಲೇಟರ್

ಇಸೀ ಟ್ಯಾಕ್ಸ್‌ ಕ್ಯಾಲ್ಕುಲೇಟರ್

ಹೆಸರೇ ಸೂಚಿಸುವಂತೆ, ಇಸೀ ಟ್ಯಾಕ್ಸ್‌ ಕ್ಯಾಲ್ಕುಲೇಟರ್ ಸಂಬಳ ಪಡೆಯುವ ವ್ಯಕ್ತಿಗಳಿಗೆ ಮತ್ತು ಪಿಂಚಣಿದಾರರಿಗೆ ಆದಾಯ ತೆರಿಗೆಯ ಸುಲಭ ಮತ್ತು ತ್ವರಿತ ಲೆಕ್ಕಾಚಾರವನ್ನು ಒದಗಿಸುತ್ತದೆ. ಇದು 2018-2019, 2019-2020, ಮತ್ತು 2020-2021ರ ಆರ್ಥಿಕ ವರ್ಷದ ಆದಾಯ ತೆರಿಗೆ ಸ್ಲ್ಯಾಬ್ ದರವನ್ನು ಸಹ ಒದಗಿಸುತ್ತದೆ. ಐಟಿಆರ್ ಫೈಲಿಂಗ್ ಗೈಡ್ ವಿಭಾಗದಲ್ಲಿ ನಿಮ್ಮ ಆದಾಯ ತೆರಿಗೆ ರಿಟರ್ನ್‌ನ್ನು ಆನ್‌ಲೈನ್‌ನಲ್ಲಿ ಹೇಗೆ ಸಲ್ಲಿಸುವುದು ಎಂಬುದರ ಕುರಿತು ಇಸೀ ಟ್ಯಾಕ್ಸ್‌ ಕ್ಯಾಲ್ಕುಲೇಟರ್ ನಿಮಗೆ ಮಾರ್ಗಸೂಚಿಗಳನ್ನು ನೀಡುತ್ತದೆ. ಐಟಿಆರ್ ಆನ್‌ಲೈನ್ ಸಲ್ಲಿಕೆಗಾಗಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಹೇಗೆ ನೋಂದಾಯಿಸಿಕೊಳ್ಳುವುದು, ಆದಾಯ ತೆರಿಗೆ ಪೋರ್ಟಲ್‌ಗೆ ಹೇಗೆ ಲಾಗಿನ್ ಆಗುವುದು, ಐಟಿಆರ್ ಫಾರ್ಮ್‌ಗಳನ್ನು ಹೇಗೆ ಆಯ್ಕೆ ಮಾಡುವುದು, ನಿಮ್ಮ ಆದಾಯವನ್ನು ಇ-ವೆರಿಫೈಯಿಂಗ್ ಮಾಡುವುದು ಮುಂತಾದ ಇತರ ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ರೇ & ಸನ್ಸ್ ಗ್ರೂಪ್‌ನ ಆದಾಯ ತೆರಿಗೆ ಕ್ಯಾಲ್ಕುಲೇಟರ್

ರೇ & ಸನ್ಸ್ ಗ್ರೂಪ್‌ನ ಆದಾಯ ತೆರಿಗೆ ಕ್ಯಾಲ್ಕುಲೇಟರ್

ಸಾಮಾನ್ಯ ವೈಶಿಷ್ಟ್ಯಗಳನ್ನು ಹೊರತುಪಡಿಸಿ, ಈ ಆದಾಯ ತೆರಿಗೆ ಕ್ಯಾಲ್ಕುಲೇಟರ್ ಅನೇಕ ಹೂಡಿಕೆ ಆಯ್ಕೆಗಳನ್ನು ನೀಡುತ್ತದೆ. ಮ್ಯೂಚುಯಲ್ ಫಂಡ್ ಮತ್ತು ಇತರ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸಲಹೆಗಳನ್ನು ಇದು ಒಳಗೊಂಡಿದೆ. ಈ ತೆರಿಗೆ ಲೆಕ್ಕಾಚಾರದ ಅಪ್ಲಿಕೇಶನ್‌ಗಳನ್ನು ಐಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.

Best Mobiles in India

Read more about:
English summary
Income Tax: These Five Apps Will Help Calculate Your Taxes

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X