Home
Apps

ಮನಿಕಂಟ್ರೋಲ್ ಅಪ್ಲಿಕೇಶನ್ ಇನ್ನು ಆಪಲ್ ಸ್ಮಾರ್ಟ್‌ವಾಚ್‌ನಲ್ಲಿ ಕೂಡ ಲಭ್ಯ

By Shwetha Ps

ಆಪಲ್ ವಾಚ್‌ನಲ್ಲಿ ಸಕ್ರಿಯಗೊಂಡ ಸ್ಟಾಕ್‌ಗಳಿಗಾಗಿ ಧ್ವನಿ ಹುಡುಕಾಟವನ್ನು ಹೊಂದಲು ಮನಿಕಂಟ್ರೋಲ್ ತನ್ನ ಪ್ರಥಮ ಸ್ಮಾರ್ಟ್‌ವಾಚ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದೆ. ಪ್ರಸ್ತುತ ಆಪಲ್ ಐಓಸ್ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಮಾತ್ರ ಸಂಯೋಜನೆ ಮಾಡುತ್ತಿದ್ದು ನಿಮ್ಮ ಆಪಲ್ ವಾಚ್‌ನಲ್ಲಿ ನೀವು ಮನಿಕಂಟ್ರೋಲ್ ಅನ್ನು ತೆರೆಯಬಹುದು, ವಾಯ್ಸ್ ಬಟನ್ ಅನ್ನು ಟ್ಯಾಪ್ ಮಾಡಬಹುದು ಮತ್ತು ನಿಮ್ಮ ಮೆಚ್ಚಿನ ಸ್ಟಾಕ್ ಹೆಸರನ್ನು ಹೇಳಬಹುದು ಇದರಿಂದ ಅತ್ಯಾಧುನಿಕ ಸುದ್ದಿಗಳನ್ನು ನಿಮ್ಮ ವಾಚ್‌ನಲ್ಲಿಯೇ ನೀವು ಪಡೆದುಕೊಳ್ಳಬಹುದಾಗಿದೆ.

ಮನಿಕಂಟ್ರೋಲ್ ಅಪ್ಲಿಕೇಶನ್ ಇನ್ನು ಆಪಲ್ ಸ್ಮಾರ್ಟ್‌ವಾಚ್‌ನಲ್ಲಿ ಕೂಡ ಲಭ್ಯ

ನೆಟ್‌ವರ್ಕ್ 18 ಡಿಜಿಟಲ್ ಸಿಇಒ ಮನೀಶ್ ಮಹೇಶ್ವರಿ ಹೇಳುವಂತೆ ಇಂದು ಮಾರುಕಟ್ಟೆಯು ಕ್ಷಿಪ್ರವಾಗಿ ಮುನ್ನುಗ್ಗುತ್ತಿದ್ದು ಸ್ಮಾರ್ಟ್‌ವಾಚ್‌ ಅಪ್ಲಿಕೇಶನ್‌ಗಳ ಮೂಲಕ ಮನಿಕಂಟ್ರೋಲ್ ಇತ್ತೀಚಿನ ಸುದ್ದಿಯನ್ನು ಅಪ್‌ಡೇಟ್ ಮಾಡಲು ನೆರವಾಗಲಿದೆ.

ನಮ್ಮ ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ನಾವು ಸುದ್ದಿಗಳನ್ನು ಅವರಿಗೆ ಸುಲಭವಾಗಿ ತಲುಪುವಂತೆ ಮಾಡುತ್ತಿದ್ದೇವೆ ಎಂದು ನೆಟ್‌ವರ್ಕ್ 18 ರಜತ್ ನಿಗಮ್ ತಿಳಿಸಿದ್ದಾರೆ.

ಈಗ ಎಮ್‌ಸಿ ಅಪ್ಲಿಕೇಶನ್‌ಗಳು ಲಭ್ಯವಿದ್ದು ಇನ್ನು ಆಂಡ್ರಾಯ್ಡ್‌ನಲ್ಲೂ ಇದನ್ನು ಬಿಡುಗಡೆ ಮಾಡಲಾಗುತ್ತದೆ ಈ ಅಪ್ಲಿಕೇಶನ್‌ ವಾಚ್‌ನಲ್ಲಿರುವ ಅನನ್ಯ ವೈಶಿಷ್ಟ್ಯತೆಗಳೊಂದಿಗೆ ಸಂಯೋಜನೆಗೊಂಡಿದ್ದು ಬಳಕೆದಾರರು ಈ ವಾಚ್‌ ಮೂಲಕ ಮಾತಾಡಿ ಸ್ಟಾಕ್ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಎಂಬುದು ನೆಟ್‌ವರ್ಕ್ 18 ಡಿಜಿಟಲ್ ಸಿಪಿಒ ಅವಿನಾಶ್ ಮುದಲಿಯಾರ್ ಮಾತಾಗಿದೆ.

ನಿಮ್ಮಲ್ಲಿ ಆಪಲ್ ಸ್ಮಾರ್ಟ್‌ವಾಚ್ ಇಲ್ಲ ಎಂದಾದರೆ ಬೇಸರಿಸಬೇಕಾದ ಸಂಗತಿ ಇಲ್ಲ. ಮುಂದಿನ ಕೆಲವೇ ವಾರಗಳಲ್ಲಿ ನಾವು ಆಂಡ್ರಾಯ್ಡ್ ಆವೃತ್ತಿಯಲ್ಲಿ ಈ ಅಪ್ಲಿಕೇಶನ್ ಅನ್ನು ಲಾಂಚ್ ಮಾಡುತ್ತಿದ್ದು ಧ್ವನಿ ಸಕ್ರಿಯಗೊಂಡ ಉತ್ಪನ್ನಗಳ ಮೇಲೂ ನಾವು ಕಾರ್ಯನಿರ್ವಹಿಸುತ್ತಿದ್ದೇವೆ.

ಸರಳ ಟ್ಯಾಪ್‌ನಿಂದ ಬಳಕೆದಾರರು ಮಹತ್ತರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಸಾಧನಗಳಲ್ಲಿಯೇ ವಿಷಯವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದ್ದು ಅವರ ಬೆರಳಿನಿಂದಲೇ ಮಾಹಿತಿಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

Best Mobiles in India

English summary
While the Moneycontrol app is only available on Apple watches, it will soon come to Android platforms as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+