WhatsApp ಬಳಕೆದಾರರೇ, ಹುಷಾರ್..! ಈ ತಪ್ಪು ಮಾಡಲೇಬೇಡಿ.. ಕೇಂದ್ರದಿಂದ ಬಂತು ಖಡಕ್ ವಾರ್ನಿಂಗ್
ವಾಟ್ಸಾಪ್ ಬಳಕೆದಾರರೇ ಎಚ್ಚರ.. ಎಚ್ಚರ..! ಕೇಂದ್ರ ಸರ್ಕಾರದಿಂದ ಬಂದಿದೆ ಎಚ್ಚರಿಕೆ ಸಂದೇಶ. ನೀವು ವಾಟ್ಸಾಪ್ ಬಳಸುತ್ತಿದ್ದರೆ, ಈ ವಿಷಯ ತಿಳಿದುಕೊಳ್ಳಲೇಬೇಕು! ಹೌದು, ಪ್ರಸ್ತುತ, ವಾಟ್ಸಾಪ್ ಬಳಕೆದಾರರ (WhatsApp Users) ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಜನಪ್ರಿಯ ಸಂದೇಶ ವಿನಿಮಯ ಆಪ್ ಆಗಿದೆ. ಬಹುತೇಕರು ತಮ್ಮ ಡೆಸ್ಕ್ಟಾಪ್ನಲ್ಲಿಯೂ (Computer) ವಾಟ್ಸಾಪ್ ಬಳಕೆ ಮಾಡುತ್ತಾರೆ. ಕೇಂದ್ರ ಸರ್ಕಾರ, ವಿಂಡೋಸ್ ಪಿಸಿ ಬಳಕೆದಾರರಿಗೆ ಭದ್ರತಾ ಎಚ್ಚರಿಕೆ (WhatsApp Security Warning) ನೀಡಿದೆ. ವಾಟ್ಸಾಪ್ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ದೊಡ್ಡ ಸಮಸ್ಯೆಯಿದೆ ಎಂದು ಬಹಿರಂಗಪಡಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಇತ್ತೀಚೆಗೆ ಭದ್ರತಾ ಎಚ್ಚರಿಕೆಯನ್ನು ಪ್ರಕಟಿಸಿದೆ. ವಾಟ್ಸಾಪ್ ಅನ್ನು ಡೆಸ್ಕ್ಟಾಪ್ನಲ್ಲಿ ಬಳಸುತ್ತಿರುವ ಬಳಕೆದಾರರು ಪ್ರಮುಖ ಭದ್ರತಾ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದೆ. ಇದು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಈ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‌ಟಿ-ಇನ್) ತಮ್ಮ ಪಿಸಿಗಳಲ್ಲಿ ವಾಟ್ಸಾಪ್‌ನ ಡೆಸ್ಕ್‌ಟಾಪ್ ಆಪ್ ಇನ್ಸ್ಟಾಲ್ ಮಾಡಿರುವ ಬಳಕೆದಾರರಿಗೆ ಹೆಚ್ಚು ಅಪಾಯದ ಎಚ್ಚರಿಕೆಯನ್ನು ನೀಡಿದೆ.

400 ಮಿಲಿಯನ್ ಸಕ್ರಿಯ ಬಳಕೆದಾರರು
ಮೆಟಾ ಒಡೆತನದ ವಾಟ್ಸಾಪ್ ಭಾರತದಲ್ಲಿಯೇ 400 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹೀಗಾಗಿ, ವಾಟ್ಸಾಪ್ ನಂಬರ್ ಒನ್ ಮೆಸೇಜಿಂಗ್ ಆಪ್ ಆಗಿ ಹೊರಹೊಮ್ಮಿದೆ. ಪ್ರಸ್ತುತ, ಈ ಅಪ್ಲಿಕೇಶನ್ ಮೇಲೆ ವಂಚಕರ ಕಣ್ಣುಬಿದ್ದಿದೆ. ಸೈಬರ್ ಕಳ್ಳರು (ಹ್ಯಾಕರ್‌ಗಳು) ಪಿಸಿಯ ದುರ್ಬಲತೆಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರೆ, ವಾಟ್ಸಾಪ್ ಬಳಕೆದಾರರು ದೊಡ್ಡ ವಂಚನೆಗೆ ಗುರಿಯಾಗುತ್ತಾರೆ. ಇವರು ವಾಟ್ಸಾಪ್ ಪ್ರವೇಶಿಸಿ ಅನಿಯಂತ್ರಿತ ಕೋಡ್ ಕಾರ್ಯಗತಗೊಳಿಸುತ್ತಾರೆ. ಈ ಮೂಲಕ ವಂಚೆನೆ ಮಾಡುತ್ತಾರೆ ಎಂದು ಭದ್ರತಾ ಎಚ್ಚರಿಕೆಯ ಬಗ್ಗೆ ಕೇಂದ್ರ ಸರ್ಕಾರ ತಿಳಿಸಿದೆ.
ತಕ್ಷಣವೇ ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿ
ವಿಂಡೋಸ್ ಪಿಸಿಗಳಲ್ಲಿ ಕಾರ್ಯನಿರ್ವಹಿಸುವ ವಾಟ್ಸಾಪ್ ಡೆಸ್ಕ್‌ಟಾಪ್ ಆಪ್‌ಗಳಿಗೆ ಈ ಭದ್ರತಾ ಅಪಾಯವು ಹೆಚ್ಚಾಗಿ ಸಂಬಂಧಿಸುತ್ತದೆ. 2.2450.6 ಕ್ಕಿಂತ ಹಿಂದಿನ ವಿಂಡೋಸ್ ಆವೃತ್ತಿಗಳಿಗಾಗಿ ಡೆಸ್ಕ್‌ಟಾಪ್‌ಗಳು ಈ ವಂಚನೆ ದಾಳಿಗೆ ಗುರಿಯಾಗುತ್ತವೆ. ಹೀಗಾಗಿ, ವಾಟ್ಸಾಪ್ ಸಾರ್ವಜನಿಕರಿಗೆ ಕೆಲವು ಭದ್ರತಾ ಸಲಹೆ ನೀಡಿದೆ. ವಾಟ್ಸಾಪ್ ಡೆಸ್ಕ್‌ಟಾಪ್ ಆಪ್ ಬಳಕೆದಾರರು ತಕ್ಷಣವೇ ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಆಗುವಂತೆ ಸಲಹೆ ನೀಡಿದೆ. ನೀವು ಈ ಕೆಳಗಿನ ಸುಲಭ ಹಂತಗಳನ್ನು ಅನುಸರಿಸಬಹುದು.
* ಮೈಕ್ರೋಸಾಫ್ಟ್ ಸ್ಟೋರ್‌ನಿಂದ ವಾಟ್ಸಾಪ್ ಅಪ್ಡೇಟ್ (ನವೀಕರಿಸಬಹುದು) ಮಾಡಬಹುದು.
* ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ವಾಟ್ಸಾಪ್ ಮೆಸೆಂಜರ್ ಸರ್ಚ್ ಮಾಡಿ.
* ಇದಾದ ಬಳಿಕ, ಅಪ್ಡೇಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಭದ್ರತೆಗಾಗಿ ತಕ್ಷಣ ಈ ಕ್ರಮಗಳನ್ನು ಅನುಸರಿಸಿ
ಈ ಭದ್ರತಾ ತೊಂದರೆ ಸಂಬಂಧಿಸಿದಂತೆ ವಾಟ್ಸಾಪ್ ತನ್ನ ವೆಬ್‌ಸೈಟ್‌ನಲ್ಲಿ ತಾಂತ್ರಿಕ ವಿವರಗಳೊಂದಿಗೆ ಪರಿಹಾರಗಳನ್ನು ಸೂಚಿಸಿದೆ. ಅಪ್ಡೇಟ್ ಪ್ರಕ್ರಿಯೆಯು ಸುಲಭವಾಗಿದೆ. ವಾಟ್ಸಾಪ್ ಬಳಕೆದಾರರು ಕೂಡಲೇ ಇತ್ತೀಚಿನ ಆವೃತ್ತಿಗೆ ಅಪ್ಲಿಕೇಶನ್ ನವೀಕರಣ ಮಾಡಿಕೊಳ್ಳಬೇಕು.
* ಮೊದಲಿಗೆ ವಾಟ್ಸಾಪ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕು.
* ಯಾವುದೇ ಕಾರಣಕ್ಕೂ ಅನುಮಾನದ ಲಿಂಕ್‌ಗಳನ್ನು ಓಪನ್ ಮಾಡಬೇಡಿ.
* ಅಪರಿಚಿತ ಅಟ್ಯಾಚ್ಮೆಂಟ್ (ಲಗತ್ತು) ಡೌನ್‌ಲೋಡ್ ಮಾಡಬೇಡಿ.
* ಇತ್ತೀಚಿನ ಆಂಟಿವೈರಸ್ ಬಳಸಿ ಪಿಸಿ ಸ್ಕ್ಯಾನ್ ಮಾಡಬೇಕು.
* ಇತ್ತೀಚಿನ ಆವೃತ್ತಿಗೆ ಅಪ್ಲಿಕೇಶನ್ ಅಪ್‌ಡೇಟ್ ಮಾಡಬೇಕು.
ಆಪಲ್ ಸಾಧನಗಳಲ್ಲಿಯೂ ಅಪಾಯಕಾರಿ ಭದ್ರತಾ ದೋಷ
ಆಪಲ್ ಸಾಧನಗಳಲ್ಲಿ ಅನೇಕ ಅಪಾಯಕಾರಿ ಭದ್ರತಾ ದೋಷಗಳು ಕಂಡುಬಂದಿವೆ ಎಂದು CERT-In ಬಹಿರಂಗಪಡಿಸಿದೆ. ಹ್ಯಾಕರ್‌ಗಳು ಇದರ ಲಾಭವನ್ನು ಪಡೆದುಕೊಂಡು ಬಳಕೆದಾರರ ಸಾಧನವನ್ನು ಪ್ರವೇಶಿಸುತ್ತಾರೆ. ಸುಲಭವಾಗಿ ನಿಮ್ಮ ಡೇಟಾವನ್ನು ಕಳ್ಳತನ ಮಾಡುತ್ತಾರೆ. ಇದಲ್ಲದೆ, ಹ್ಯಾಕರ್‌ಗಳು ನಿಮ್ಮ ಸಾಧನದ ಮೇಲೆ ಸಂಪೂರ್ಣ ನಿಯಂತ್ರಣ ಪಡೆಯುತ್ತಾರೆ. CIVN-2025-0071 ಎಂಬ ಸಲಹಾ ಸಂಸ್ಥೆಯಲ್ಲಿ ಈ ಎಚ್ಚರಿಕೆ ನೀಡಲಾಗಿದ್ದು, ಈ ನ್ಯೂನತೆಗಳು iOS, macOS, iPadOS, Safari ಬ್ರೌಸರ್ ಮತ್ತು ಇತರ ಆಪಲ್ ಸಾಫ್ಟ್‌ವೇರ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.


Click it and Unblock the Notifications








