Home
Apps

ಸಿಹಿಸುದ್ದಿ! ಬಂತು ಹೊಸ SwaRail ಆಪ್.. ಒಂದೇ ಆಪ್‌ನಲ್ಲಿ ಸಿಗುತ್ತೆ ಎಲ್ಲ ಸೇವೆ.. ಹೀಗೆ ಡೌನ್‌ಲೋಡ್ ಮಾಡಿ

ರೈಲ್ವೆ ಪ್ರಯಾಣಿಕರಿಗೆ ಕೊನೆಗೂ ಸಿಕ್ತು ಸಿಹಿಸುದ್ದಿ. ಇನ್ಮುಂದೆ ಎಲ್ಲಾ ಸೇವೆಗಳೂ ಒಂದೇ ಕಡೆ ಲಭ್ಯ. ಹೌದು, ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಈ ಆಪ್‌ ಅನ್ನು ಸೆಂಟರ್ ಫಾರ್ ರೈಲ್ವೆ ಇನ್ಫರ್ಮೇಷನ್ ಸಿಸ್ಟಮ್ಸ್ (CRIS) ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್ ಭಾರತೀಯ ರೈಲ್ವೆಯ ಎಲ್ಲಾ ಸಾರ್ವಜನಿಕ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಲಭ್ಯಗೊಳಿಸುತ್ತದೆ. ನೀವು ಫುಡ್‌ (ಆಹಾರ) ಸಹ ಆರ್ಡರ್ ಮಾಡಬಹುದು! ಬನ್ನಿ, ಆ ಆಪ್ ಯಾವುದು? ಇದನ್ನು ಬಳಸುವುದು ಹೇಗೆ? ಡೌನ್‌ಲೋಡ್ ಹೇಗೆ ಮಾಡಬೇಕು? ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯೋಣ.

ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ (Indian Railway Department) ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ, ರೈಲ್ವೆ ಇಲಾಖೆ ಬಹುನಿರೀಕ್ಷಿತ ಸೂಪರ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಇನ್ಮುಂದೆ ಪ್ರಯಾಣಿಕರು ಒಂದೊಂದು ಸೇವೆಗೆ ಒಂದೊಂದು ಆಪ್ ಬಳಕೆ ಮಾಡುವಂತಿಲ್ಲ. ಒಂದೇ ಸೂಪರ್ ಅಪ್ಲಿಕೇಶನ್‌ನಲ್ಲಿ ರೈಲ್ವೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ರೈಲ್ವೆ ಇಲಾಖೆಯು ಇದಕ್ಕೆ 'ಸ್ವರೈಲ್ ಸೂಪರ್ ಆಪ್' (Swarail Super App) ಎಂದು ಹೆಸರಿಟ್ಟಿದೆ. ಈ ಆಪ್‌ ಅನ್ನು ಕೇವಲ 1,000 ಮಂದಿ ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಬಂತು ಹೊಸ SwaRail ಆಪ್! ಒಂದೇ ಆಪ್‌ನಲ್ಲಿ ಎಲ್ಲ ಸೇವೆಗಳು.. ಡೌನ್‌ಲೋಡ್ ಹೇಗೆ?

ಡೌನ್‌ಲೋಡ್ ಲಿಮಿಟ್ 10,000ಕ್ಕೆ ಏರಿಕೆ.. ಯಾವಾಗ?

ಪ್ರಸ್ತುತ ಪರೀಕ್ಷೆಗಾಗಿ ಈ ಸ್ವರೈಲ್ ಆಪ್ (Swarail) ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯಗೊಳಿಸಲಾಗಿದೆ. ಪ್ರಾರಂಭದಲ್ಲಿ ಈ ಆಪ್, ಡೌನ್‌ಲೋಡ್‌ ಮಿತಿಯನ್ನು ಹೊಂದಿದೆ. ಮೊದಲೇ ಹೇಳಿದಂತೆ ಕೇವಲ 1,000 ಮಂದಿ ಮಾತ್ರ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಪ್ರಯಾಣಿಕರಿಂದ ಸಿಗುವ ಅಭಿಪ್ರಾಯಗಳ ಬಳಿಕ, ಡೌನ್‌ಲೋಡ್ ಲಿಮಿಟ್‌ 10,000ಕ್ಕೆ ಏರಿಕೆ ಮಾಡಲಾಗುತ್ತದೆ. ಅಗತ್ಯ ಬದಲಾವಣೆ ಬಳಿಕ ಎಲ್ಲರಿಗೂ ಈ ಆಫ್ ಡೌನ್‌ಲೋಡ್ ಮಾಡುವ ಅವಕಾಶ ಕಲ್ಪಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಒಂದೇ ಆಪ್‌ನಲ್ಲಿ ಇಷ್ಟೊಂದು ಸೌಲಭ್ಯಗಳು ಲಭ್ಯ!

ಸ್ವರೈಲ್ ಆಪ್‌ ಒಂದೇ ವೇದಿಕೆಯಲ್ಲಿ ವಿವಿಧ ರೈಲ್ವೆ ಸೇವೆಗಳನ್ನು ಲಭ್ಯಗೊಳಿಸುತ್ತದೆ. ಅಂದರೆ, ನೀವು ಒಂದೇ ಸೈನ್ ಇನ್ ಮೂಲಕ ಹಲವು ಸೇವೆಗಳನ್ನು ಪಡೆಯಬಹುದು. ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಟಿಕೆಟ್ ಬುಕಿಂಗ್, ಪ್ಲಾಟ್‌ಫಾರ್ಮ್ ಟಿಕೆಟ್ ಬುಕಿಂಗ್, ಪಾರ್ಸೆಲ್ ಮತ್ತು ಸರಕು ವಿಚಾರಣೆಗಳು, ರೈಲು ಮತ್ತು ಪಿಎನ್ಆರ್ ಸ್ಥಿತಿ ವಿಚಾರಣೆಗಳು, ರೈಲುಗಳಲ್ಲಿ ಆಹಾರ ಆರ್ಡರ್ ಮಾಡುವುದು ಸೇರಿದಂತೆ ಅನೇಕ ಸೇವೆಗಳಿಗಾಗಿ ಈ ಆಪ್ ಬಳಕೆ ಮಾಡಬಹುದು. ಪ್ರಸ್ತುತ, ನಾವು ರಿಸರ್ವ್ ಹಾಗೂ ಅನ್ ರಿಸರ್ವ್ ಬುಕಿಂಗ್‌ಗೆ ಬೇರೆ ಬೇರೆ ಆಪ್‌ ಬಳಸುತ್ತೇವೆ. ಆದರೆ, ಇನ್ಮುಂದೆ ಸ್ವರೈಲ್ ಆಪ್‌ಗೆ ಸೈನ್ ಇನ್ ಮಾಡಿ, ಎರಡೂ ಕೆಲಸಗಳನ್ನು ಮಾಡಬಹುದು.

ಸ್ವರೈಲ್ ಆಪ್ ಡೌನ್‌ಲೋಡ್ ಮಾಡುವುದು ಹೇಗೆ?

ಪ್ರಸ್ತುತ ಸ್ವರೈಲ್ ಆಪ್ ಬೀಟಾ ವರ್ಷನ್​ಲ್ಲಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಕ್ರಮವಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಬಹುದು. ರೈಲ್ವೆ ಇಲಾಕೆಯು, ಈ ಆಪ್​ನ ಬೀಟಾ ವರ್ಷನ್​ ಬಳಸುವಂತೆ ಹಾಗೂ ಸಲಹೆ ನೀಡುವಂತೆ ಮನವಿ ಮಾಡಿದೆ. ಈ ಆಪ್‌ ಡೌನ್‌ಲೋಡ್ ಮಾಡಲು ಹೀಗೆ ಮಾಡಿ.

ಬಂತು ಹೊಸ SwaRail ಆಪ್! ಒಂದೇ ಆಪ್‌ನಲ್ಲಿ ಎಲ್ಲ ಸೇವೆಗಳು.. ಡೌನ್‌ಲೋಡ್ ಹೇಗೆ?

ನಿಮ್ಮ ಮೊಬೈಲ್​ನಲ್ಲಿ ಆಪ್‌ ಸ್ಟೋರ್‌ಗೆ ಹೋಗಿ SwaRail (ಸ್ವರೈಲ್) ಆಪ್‌ ಸರ್ಚ್ ಮಾಡಬಹುದು. ಸಿಆರ್​ಐಎಸ್ ಶೇರ್ ಅಪ್ಲಿಕೇಶನ್ ಹುಡುಕಿ ಮತ್ತು ಅದನ್ನು ಕೂಡಲೇ ಇನ್‌ಸ್ಟಾಲ್ ಮಾಡಿಕೊಳ್ಳಿ. ಈಗಾಗಲೇ, ಐಆರ್​ಸಿಟಿಸಿ ರೈಲ್ ಕನೆಕ್ಟ್ ಅಥವಾ ಯುಟಿಎಸ್ ಆಪ್ ​ಬಳಸುತ್ತಿರುವವರು ತಮ್ಮ ಲಾಗಿನ್ ಕ್ರೆಡೆನ್ಷಿಯಲ್ಸ್​ ಬಳಸಿ ನೇರವಾಗಿ ಲಾಗ್‌ಇನ್ ಮಾಡಬಹುದು. ಆಸಕ್ತಿ ಇರುವವರು ಈ ಕೆಳಗೆ ನೀಡಿರುವ ಲಿಂಕ್‌ ಬಳಸಿಕೊಂಡು ಆಪ್ ಡೌನ್‌ಲೋಡ್ ಮಾಡಬಹುದು. ಪ್ಲೇ ಸ್ಟೋರ್ https://play.google.com/apps/testing/org.cris.aikyam ಆಪ್ ಸ್ಟೋರ್ https://testflight.apple.com/join/aWFYt6et ಈ ಲಿಂಕ್‌ನಲ್ಲಿ ನಿಮಗೆ ಸ್ವರೈಲ್ ಆಪ್ ಲಭ್ಯವಿದೆ.

ಎಲ್ಲಾ ಸೇವೆಗಳು ಸ್ವರೈಲ್ ಆಪ್‌ನಲ್ಲಿಯೇ ಲಭ್ಯ

ಸ್ವರೈಲ್ ಆಪ್‌ ಆಲ್ ಇನ್ ಒನ್ ಅಪ್ಲಿಕೇಶನ್ ಆಗಿದೆ. ನೀವು ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಬುಕಿಂಗ್‌ಗಾಗಿ ಬೇರೆ ಬೇರೆ ಆಪ್ ಬಳಸಬೇಕಾಗುತ್ತದೆ. ಟ್ರೈನ್ ಚಲನೆ ಮತ್ತು ವೇಳಾಪಟ್ಟಿ ತಿಳಿಯಲು ಮತ್ತೊಂದು ಆಪ್ ಅಗತ್ಯವಿದೆ. ಆದರೆ, ಇನ್ಮುಂದೆ ಈ ಎಲ್ಲಾ ಸೇವೆಗಳು ಸ್ವರೈಲ್ ಆಪ್‌​ನಲ್ಲಿಯೇ ಲಭ್ಯವಾಗಲಿವೆ. ನೀವು ತಮ್ಮ ಅಸ್ತಿತ್ವದಲ್ಲಿರುವ ರೈಲ್ ಕನೆಕ್ಟ್ ಅಥವಾ ಯುಟಿಎಸ್ ಆಪ್‌ ಲಾಗಿನ್ ಮಾಹಿತಿಗಳನ್ನು ಬಳಸಿಕೊಂಡು ಸೂಪರ್ ಆಪ್‌ಗೆ ಸೈನ್ ಅಪ್ ಮಾಡಬಹುದು.

Best Mobiles in India

English summary
Indian Railways Launches SwaRail Superapp: How to Download and Use
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+