ಜಿಯೋ ನಂತರದ ದಿನದಲ್ಲಿ ಭಾರತದಲ್ಲಿ ಬದಲಾಗಿರುವ ವಿಷಯಗಳೇನು..?

ಭಾರತೀಯರು ವಿಶ್ವದಲ್ಲೇ ಅತೀ ಹೆಚ್ಚು ವಿಡಿಯೋ ಕಾಲ್ ಮಾಡುವ ದೇಶ ಎಂಬ ಖ್ಯಾತಿಯನ್ನು ಭಾರತಕ್ಕೆ ತಂದು ಕೊಟ್ಟಿದ್ದಾರೆ.

|

3G ಡೇಟಾಗೂ ಲೆಕ್ಕ ಹಾಕುತ್ತಿದ್ದ ಭಾರತೀಯರಿಗೆ ಉಚಿತ 4G ಸಿಕ್ಕಿದ ಮೇಲೆ ಡೇಟಾ ಬಳಸುವ ರೀತಿಯೇ ಬದಲಾಗಿದ್ದು, ತಂತ್ರಜ್ಞಾನ ಮತ್ತು ಸಿಕ್ಕಿರುವ ಕೊಡುಗೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿರುವ ಭಾರತೀಯರು ವಿಶ್ವದಲ್ಲೇ ಅತೀ ಹೆಚ್ಚು ವಿಡಿಯೋ ಕಾಲ್ ಮಾಡುವ ದೇಶ ಎಂಬ ಖ್ಯಾತಿಯನ್ನು ಭಾರತಕ್ಕೆ ತಂದು ಕೊಟ್ಟಿದ್ದಾರೆ.

ಜಿಯೋ ನಂತರದ ದಿನದಲ್ಲಿ ಭಾರತದಲ್ಲಿ ಬದಲಾಗಿರುವ ವಿಷಯಗಳೇನು..?

ಹೌದು..! ಈ ಹಿಂದೆ ವಾಯ್ಸ್ ಕಾಲ್ ಮಾಡುತ್ತಿದ್ದವರು ಹೆಚ್ಚಿನ ವೇಗದ ಇಂಟರ್‌ನೆಟ್ ಸಿಕ್ಕಿರುವ ಕಾರಣ ಪ್ರತಿ ನಿತ್ಯ 50 ಮಿಲಿಯನ್ ನಿಮಿಷಗಳ ವಿಡಿಯೋ ಕಾಲ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅದುವೇ ವಾಟ್ಸ್ಆಪ್ ಮೂಲಕ ಎನ್ನುವುದು ವಿಶೇಷ.

ವಾಟ್ಸ್ಆಪ್ ಬಳಕೆ ಹೆಚ್ಚು:

ವಾಟ್ಸ್ಆಪ್ ಬಳಕೆ ಹೆಚ್ಚು:

ಸದ್ಯ ಮಾರುಕಟ್ಟೆಯಲ್ಲಿ ವಾಟ್ಸ್ಆಪ್ ಬಿಟ್ಟರು ಇನ್ನು ಹಲವು ಆಪ್‌ಗಳು ವಿಡಿಯೋ ಕಾಲ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿವೆ. ಆದರೂ ಜನರು ಹೆಚ್ಚಾಗಿ ವಾಟ್ಸ್ಆಪ್ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೈಕ್, ಗೂಗಲ್ ಆಲೋ, ವೈಬರ್ ವಿಡಿಯೋ ಕಾಲಿಂಗ್ ಸೇವೆಯನ್ನು ಬಹಳ ಹಿಂದಿನಿಂದ ನೀಡುತ್ತಿದ್ದರು ಜನ ಮಾತ್ರ ವಾಟ್ಸ್‌ಆಪ್ ಅನ್ನೇ ನೆಚ್ಚಿಕೊಂಡಿದ್ದಾರೆ.

 ಮೊದಲ ಸ್ಥಾನದಲ್ಲಿ ವಾಟ್ಸ್ಆಪ್

ಮೊದಲ ಸ್ಥಾನದಲ್ಲಿ ವಾಟ್ಸ್ಆಪ್

ಸದ್ಯ ವಾಟ್ಸ್ಆಪ್ ವಿಡಿಯೋ ಕಾಲಿಂಗ್ ಬೇರೆ ಎಲ್ಲಾ ಆಪ್‌ಗಳನ್ನು ಹಿಂದೆ ಹಾಕಿದ್ದು, ವಿಡಿಯೋ ಕಾಲಿಂಗ್‌ಗಾಗಿಯೇ ಇರುವಂತಹ ಮೈಕ್ರೋಸಾಫ್ಟ್ ಸ್ಕೈಪ್, ಆಪಲ್ ಫೇಸ್ ಟೈಮ್ ಮತ್ತು ಗೂಗಲ್ ಡಿಯೂವನ್ನು ಮೂಲೆ ಸೇರಿಸಿದ್ದು, ಮೇಸೆಜಿಂಗ್, ಸೆಟ್ಟಸ್, ಕಾಲಿಂಗ್ ಎಲ್ಲದರಲ್ಲೂ ಮೊದಲ ಸ್ಥಾನವನ್ನು ಅಕ್ರಮಿಸಿದೆ.

ಜಿಯೋ ಪ್ರಭಾವ

ಜಿಯೋ ಪ್ರಭಾವ

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಈ ಮಟ್ಟದಲ್ಲಿ ಬೆಳವಣಿಗೆಯೂ ಸಾಧ್ಯವಾಗಿದ್ದು, ಜಿಯೋ ನಿಂದ ವಾಟ್ಸ್ಆಪ್ ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ.

 ಒಟ್ಟು 340 ಮಿಲಿಯನ್ ನಿಮಿಷಗಳು

ಒಟ್ಟು 340 ಮಿಲಿಯನ್ ನಿಮಿಷಗಳು

ಪ್ರತಿ ದಿನ ಭಾರತಿಯರು 50 ಮಿಲಿಯನ್ ನಿಮಿಷಗಳ ವಿಡಿಯೋ ಕಾಲ್ ಮಾಡುತ್ತಿದ್ದಾರೆ ಎಂದು ವಾಟ್ಸ್ಆಪ್ ತನ್ನ ವರದಿಯನ್ನು ನೀಡಿದ್ದು, ಇದಲ್ಲದೇ ವಾಯ್ಸ್ ಕಾಲ್ ಎಲ್ಲಾ ಸೇರಿದರೆ ಒಟ್ಟು 340 ಮಿಲಿಯನ್ ನಿಮಿಷಗಳಗಲಿದೆ.

Best Mobiles in India

Read more about:
English summary
Indians make 50 million minutes of video calls daily via WhatsApp, the highest compared to users in any other part of the globe. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X